ಕನ್ನಡದ ಹುಡುಗ





ನಾನು ಅತಿ ಹೆಚ್ಚಿನ ಆಸ್ಥೆಯಿಂದ ಕೆಲವು ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇನೆ. ಅದರಲ್ಲೂ ಹಾಡು , ಡ್ಯಾನ್ಸ್ ಜೊತೆಗೆ ಅಡುಗೆ ಕಾರ್ಯಕ್ರಮಗಳ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ... ಜೊತೆಗೆ ನಾನು ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯುವ ಕೆಲಸವು ಸಹ ಹೆಚ್ಚು ಆಸಕ್ತಿ ಯಿಂದ ಮಾಡ್ತೇನೆ. ಆದರೆ ಇತ್ತೀಚಿಗೆ ಸಕತ್ ಕೆಲಸ... ಬೆಂಗಳೂರಿನ ಸೆಕೆ ಹಾಗೆ ಸಕತ್ ಯಪ್ಪಾ ಅನ್ನೋಷ್ಟು.

ಇವೆಲ್ಲ ಇದ್ದದ್ದೇ ಆದರು ನಾನು ಅತಿ ಹೆಚ್ಚಿನ ಪ್ರೀತಿಯಿಂದ ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಜೀ ಹಿಂದಿ ವಾಹಿನಿಯ DID ಲಿಟ್ಟಲ್ ಮಾಸ್ಟರ್ಸ್ ಡ್ಯಾನ್ಸ್ ಕಾರ್ಯಕ್ರಮ. ಗೀತ ಮಾ ಬಗ್ಗೆ ಹೇಳೋದೇ ಆದ್ರೆ ತುಂಬಾ ತಾಯಿ ಮಮತೆ ಆಕೆ ಕಣ್ಣಲ್ಲಿ ಇರುತ್ತೆ.. ಅದು ನೋಡುಗರಿಗೂ ತುಂಬಾ ಇಷ್ಟ ಆಗುತ್ತೆ.. ಆಕೆ ಅಳೋದು ನೋಡಿದ್ರೆ  ಅದು ನಾಟಕೀಯ ಅಲ್ಲ ಅನ್ನುವ ಸಂಗತಿ ಸ್ಪಷ್ಟವಾಗಿ ಗೊತ್ತಾಗುತ್ತೆ...
ಇನ್ನು ಅಹಮದ್ ಮತ್ತು ಮುದಸ್ಸರ್ ಅವರ ಬಗ್ಗೆ ಹೇಳೋದೇ ಆದ್ರೆ ಮಕ್ಕಳಿಗೆ ಒಳ್ಳೆ ಗುರುಗಳು ದೊರಕಿದ್ದಾರೆ. ಯಾವ ಜಡ್ಜ್ ಎಂತಹ  ಪ್ರೋತ್ಸಾಹ ನೀಡ್ತಾರೆ ಅನ್ನೋ ವಿಷ್ಯ... ಮುಖ್ಯವಾಗಿ ನಿನ್ನೆ ನನಗೆ ಅತಿ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಮದರ್ಸ್  ಡೇ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡದ ಹುಡುಗ  ತನ್ನ ಅಮ್ಮನಿಗೆ ಕನ್ನಡದಲ್ಲಿ ಅಭಿನಂದಿಸಿದ್ದು...! ಸಾಮಾನ್ಯವಾಗಿ ನಾನು ಕಂಡಂಗೆ ಸಾಕಷ್ಟು ಮಂದಿಗೆ ಅದರಲ್ಲೂ ಸೆಲೆಬ್ರಿಟಿ ಗ್ರೂಪ್ ಗಳಿಗೆ ದಕ್ಷಿಣ ಅಂದ್ರೆ ಸ್ವಲ್ಪ ಬೇಜಾರು. ಇತ್ತೀಚಿಗೆ ಒಂದು ಕಡೆ ಬರೆದಿದ್ದನ್ನು ಓದಿದೆ... ಅದರಲ್ಲಿ ರಜನಿ ಕಾಂತ್ ಅವರನ್ನು ಕಾಮಿಡಿ ಸೂಪರ್ ಸ್ಟಾರ್ ಅಂತ ಬಾಲಿವುಡ್ ಮಂದಿ ಮೊದಲು ಕರೆಯುತ್ತಾ ಇದ್ದರಂತೆ... ಆದರೆ ಈಗ ಅವರಿಗೆ ಆತ ಮಹಾನ್ ನಟನ ವಿಶೇಷತೆ ತಿಳಿದಿದೆಯಂತೆ! ಇಂತಹವುಗಳಿಗೆ ಏನ್ ಹೇಳ್ ಬೇಕು ಹೇಳಿ..

 ಇತ್ತೀಚಿಗೆ ಒಬ್ಬಾಕೆ ಹೇಳಿದಳಲ್ಲ ಕಾಲಿವುಡ್ ನ ಸೂರ್ಯ ಯಾರು ಅಂತ ಗೊತ್ತೇ ಇಲ್ಲ ಅಂತ.. ಅಲ್ಲದೆ ದಕ್ಷಿಣ ಭಾರತದ ಬಗ್ಗೆ ಆಕೆ ಮಾತಾಡಿದ ರೀತಿ ಸಕತ್ ಬೇಜಾರ್ ಅನ್ನಿಸಿತು ನನಗೆ. ಸಾಮಾನ್ಯವಾಗಿ ಆಕೆ ಸಿನಿಮದ ಹಾಡುಗಳು , ಆಕೆಯ ಸ್ಟೈಲ್ಸ್ ಇಷ್ಟ ಆಗ್ತಾ ಇತ್ತು.. ಯಾವಾಗ ದಕ್ಷಿಣದ ಬಗ್ಗೆ ಹಾಗೆ  ಆಕೆ ಮಾತಾಡಿದ್ಲೋ ಅಂದಿನಿಂದ ನಾನು ಆಕೆ ಸಿನಿಮಾದ ಹಾಡು ಕೇಳೋದು ಬಿಟ್ಟು ಬಿಟ್ಟಿದ್ದೀನಿ...ನನಗೆ ದಕ್ಷಿನದವಳು ಅಂತ ಹೇಳಿಕೊಳ್ಳೋಕೆ ಸಕತ್ ಇಷ್ಟ.. ದಕ್ಷಿಣದ ನಾಲ್ಕು ರಾಜ್ಯಗಳು ಅತ್ಯಂತ ವಿಶೇಷತೆಯಿಂದ ಇದೆ... ಬಿಡಿ ಯಾರೋ ಹಾಗೆ ಅಂತಾರೆ ಅಂದ್ರೆ ನಮ್ಮ ಭೂಮಿಯನ್ನು ಪ್ರೀತಿಸದೆ ಇರ್ತೀವಾ ನಾವು...ಸಚಿನ್ ಶಾಯರಿ ಕಳೆದೆರಡು ಎಪಿಸೋಡ್ ಗಳಿಂದ ಮಿಸ್ ಆಗ್ತಾ ಇದೆ... ಗೆಟ್ ವೆಲ್ ಸೂನ್ ಸಚಿನ್ :-)
ಆದರು ಏನೇ ಹೇಳಿ ಕನ್ನಡದಲ್ಲಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮಾತಾಡಿದ್ದು ಮಾತ್ರ ತುಂಬಾ ಖುಷಿ ಅನ್ನಿಸಿತು.
ಅದಕ್ಕೆ ಲಿಟ್ಲ್ ಮಾಸ್ತರ್ ಇಷ್ಟ.. ಎಷ್ಟೇ ಕೆಲಸ ಇದ್ರೂ ನೋಡೇ ತೀರ್ತೀನಿ.


@ಕನ್ನಡ ವಾಹಿನಿಗಳಲ್ಲಿ ಸಿಹಿಕಹಿ ಚಂದ್ರು ಟೀಂ ಯಾವ ಚಾನೆಲ್ ನಲ್ಲಿ ಹಾಸ್ಯ ಧಾರವಾಹಿ ಮಾಡಿದ್ರು ಇಷ್ಟ ಆಗುತ್ತೆ. ಅದು ಅವರ ವಿಶೇಷತೆ. ಅವರ ತೀಮ್ ನಲ್ಲಿ ಸದಸ್ಯತ್ವ ಪಡೆದವರಲ್ಲಿ ತಾವು ಅಲ್ಲಿ ಒಂದು ಎಪಿಸೋಡ್ ನಲ್ಲಿ ಇದ್ದೆವು ಎಂದು ಹೇಳಿಕೊಳ್ಳದೆ ಇದ್ರೂ ಅನೇಕರು ಸೂಪರ್ ಸ್ಟಾರ್ ಗಳು ಸ್ಟಾರಿಣಿಗಳು  ಆಗಿದ್ದಾರೆ.. ಅವರುಗಳ ಹೆಸರುಗಳು ಬೇಡ ಬಿಡಿ! ಅದೇ ರೀತಿ ಕಲರ್ ವಾಹಿನಿಯ ಬಿಟ್ಟು ಶರ್ಮ  ... ಕಪಿಲ್ ಶರ್ಮ ಕಾಮಿಡಿ ನೈಟ್ಸ್  ಸಹ ಅಂತಹದ್ದೇ ತೀಮ್ ಪಡೆದಿದೆ.. ನಾನು ತುಂಬಾ ಇಷ್ಟ ಪಟ್ಟೆ ನೋಡ್ತೀನಿ.. ಪಾಲಕ್, ದಾದಿ, ಭುವ, ಬಿಟ್ಟು, ಅಡುಗೆಯವನು , ಮುಖ್ಯವಾಗಿ ಸಿದ್ದು ಅವರ ಪಗಡಿ .... ! ಏನೇ ಹೇಳಿ ಗುತ್ತಿಯಂತ ಪ್ರತಿಭಾವಂತ ಪಾತ್ರ ಇಲ್ಲಿ ಮಿಸ್ ಆಗ್ತಾ ಇದೆ... ಆದ್ರೆ ಬಿಟ್ಟು ಮನೆಯಲ್ಲಿ ಮಾತ್ರ ಆಕೆಯ ಪ್ರತಿಭೆ ಇಷ್ಟ ಆಗಿದ್ದು... ಬೇರೆ ವಾಹಿನಿಯಲ್ಲಿ ಅಲ್ಲ!

ಸೂಪರ್ ಲೈಕಾ !!


ಸಾಮಾನ್ಯವಾಗಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳು ಇಷ್ಟ ಆಗುವುದಕ್ಕಿಂತ ಹೆಚ್ಚಾಗಿ   ಅದರ ನಿರೂಪಕರು, ಹಿನ್ನಲೆ ಧ್ವನಿ ನೀಡಿದವರು, ಅದನ್ನು ಬರೆದವರು , ಅದರ ಕ್ಯಾಮರಾ  ವರ್ಕ್ ಮಾಡಿದವರು ಒಟ್ಟಾರೆ ಯಾವುದೇ ಒಂದು ಕಾರಣ ಹೆಚ್ಚು ಗಮನ ಸೆಳೆಯ ಬಹುದು. ನನ್ನ ಮಿತ್ರ ಪ್ರಸಿದ್ಧ ಚಾನೆಲ್ ಒಂದರ ಕ್ಯಾಮರ ಮ್ಯಾನ್ . ಅತ್ಯುತ್ತಮ ಬರಹಗಾರ, ಅತಿ ಹೆಚ್ಚಿನ ಭಾವುಕ,ಒಂದು ವಿಷಯ ಬರೆದರೆ ಅತಿ ಸುಂದರವಾಗಿ ಅನಲೈಸ್ ಮಾಡುವಂತಹ ಪ್ರತಿಭಾವಂತ. ಬದುಕನ್ನು ಕ್ಯಾಮರದ ಲೆನ್ಸ್ಗಳ ಜೊತೆ ಕಳೆಯುತ್ತಿರುವ ಗೆಳೆಯ ಒಮ್ಮೊಮ್ಮೆ ಹೇಳೋದಿಷ್ಟೇ.. ಈ ದೃಶ್ಯ ಮಾಧ್ಯಮದಲ್ಲಿ ಅತಿ ಕೆಳಮಟ್ಟದ ಅಂದ್ರೆ ಯಾರ ಗಮನಕ್ಕೂ ಸಿಗದವರು ಅಂದ್ರೆ ಕ್ಯಾಮರ ವರ್ಕ್ ಮಾಡುವ ನಮ್ಮಂತಹವರು. ನಮಗೆ ಈ ಕೆಲಸ ಬಿಟ್ಟು ಬೇರೆ ಆಯ್ಕೆ ಇರಲ್ಲ, ನಿರಂತರವಾಗಿ ನಾವು ವೀಕ್ಷಕರ ಸೇವೆ ಮಾಡುತ್ತಿದ್ದರು ನಾವೆಂದಿಗೂ ಹೈಲೈಟ್ ಆಗುವುದೇ ಇಲ್ಲ.. ಹಾಗಂತ ಅನೇಕ ಬಾರಿ ಭಾವುಕವಾಗಿ ಆತ ನನ್ನ ಮುಂದೆ ಹೇಳಿದ್ದಾರೆ. ನಾನು  ಸಹ ಆ ಗೆಳೆಯನ ಮಾತುಗಳನ್ನು ಕೇಳುವುದಷ್ಟೇ ಮಾಡೋಕೆ ಸಾಧ್ಯ.ಅಂತಹ ತೆರೆ ಮರೆಯ ಎಲ್ಲ ಕ್ಯಾಮರ ಮಂದಿಗೂ ಪ್ರೀತಿಯ  ಹಾಯ್ ಹೇಳ್ತಾ ಇದ್ದೀನಿ.. !



@ ಮೊದಲೇ ತಿಳಿಸಿದಂತೆ ಕೆಲವರು ತುಂಬಾ ಇಷ್ಟ ಆಗ್ತಾರೆ. ಅದರಲ್ಲಿ ನಿರೂಪಕನ ಶೈಲಿ ಇಷ್ಟ ಆದರೆ ಸಾಕು ಮತ್ತೆ ಮತ್ತೆ ನಾವು ಅವರು ನಡೆಸಿಕೊಡುವ ಕಾರ್ಯಕ್ರಮ ವೀಕ್ಷಿಸಲು ಆಶಿಸುತ್ತೇವೆ. ಅಂತಹ ನಿರೂಪಕರಲ್ಲಿ ಸುವರ್ಣ ನ್ಯೂಸ್  ಅಜಿತ್ ಹನುಮಕ್ಕನವರ್  ಅವರ ನಿರೂಪಣೆ ತುಂಬಾ ಚಂದ ಇರುತ್ತೆ. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಮೋದಿ ಅವರ ಬಗ್ಗೆ ಒಂದು ಕಾರ್ಯಕ್ರಮದ ನಿರೂಪಣೆ ಮಾಡ್ತಾ ಇದ್ರೂ ಅದಾಗ ವಾಹಿನಿ ಒಂದರಲ್ಲಿ ಪ್ರಸಾರಿತ ಕಾರ್ಯಕ್ರಮ. ಅದನ್ನು ಕನ್ನಡಿಗರಿಗೆ ಅರ್ಥ ಆಗುವಂತೆ ಹೇಳುತ್ತಿದ್ದರು. ಆ ಶೈಲಿ, ಆ ಮಾತಿನ ಏರಿಳಿತ ಜಾಸ್ತಿ ಇಂಪ್ರೆಸ್ ಮಾಡಿತ್ತು. ಸಕತ್ ಕೆಲಸ ಆದ್ದರಿಂದ ಬ್ಲಾಗ್ ಕಡೆಗೆ ಗಮನ ಕೊಡೋಕೆ ಆಗ್ತಾ ಇಲ್ಲ. ಆದರು ಈ ಕಾರ್ಯಕ್ರಮ ಹೆಚ್ಚು ಇಷ್ಟ ಆಗಿತ್ತು..
ಕೆಲಸದ ನಡುವೆ ಟೀವಿ ನೋಡುವುದು ಸಾಮಾನ್ಯ ಸಂಗತಿ...ಆದರೆ ಈ ವಿಷ್ಯ ಎಷ್ಟೇ ದಿನ ಆದರು ಸರಿಯೇ ಹೇಳಲೇ ಬೇಕು ಅಂತ ಹೇಳಿದ್ದೇನೆ.

@ಇದೆ ವಾಹಿನಿಯ ಭಾವನ ಸಹ ಅತ್ಯಂತ ಇಷ್ಟ ಆಗುವ ನಿರೂಪಕಿ . ಎಲ್ಲೂ ಪದಗಳನ್ನು ನುಂಗಲ್ಲ, ಚ್ಯೂಯಿಂಗ್ ಗಂ ಥರ ಅಗಿದು ಅಗಿದು ಮಾತಾಡಲ್ಲ.. ಸ್ಪಷ್ಟವಾಗಿ ಅದರಲ್ಲೂ ಮುಖ್ಯವಾಗಿ ವೀಕ್ಷಕರಿಗೆ ಅರ್ಥ ಆಗೋ ಹಾಗೆ ಮಾತಾಡ್ತಾರೆ. 


@ ಇನ್ನೊಂದು ವಿಷ್ಯ ಹೇಳೋದಿತ್ತು.. ನಮ್ಮ ಮನೇಲಿ ಈಗ ಪಬ್ಲಿಕ್ ಟೀವಿ ಬರ್ತಾ ಇದೆ.. ರಂಗಣ್ಣ ಅಂಡ್ ಟೀಮ್ ನೋಡದೆ ಬೇಜಾರಾಗಿ ಹೋಗಿತ್ತು ;-) .. ರಂಗಣ್ಣ ಅಂದ್ರೆ ಸುಮ್ಮನೇನಾ.. !! ಅದಿರ್ಲಿ ಮತ್ತೊಂದು ಸಂಗತಿ.. ಎಲೆಕ್ಷನ್ ಸಮಯದಲ್ಲಿ ನಮ್ಮ ಮನೆಗೆ ನನ್ನ ಅತ್ತೆ ಒಬ್ರು ಬಂದಿದ್ರು.. ಆಕೆ ಮಾತಿನ ನಡುವೆ ಒಬ್ಬರು ಮಾತಾಡೋದನ್ನು  ಇಮಿಟೇಟ್ ಮಾಡ್ತಾನೆ ಇದ್ರೂ.. ನಮಗೆ ಆ ಮೇಲೆ  ಗೊತ್ತಾದ ಸಂಗತಿ ಅಂದ್ರೆ ಪಬ್ಲಿಕ್ ಟೀವಿಯ ರಂಗಣ್ಣ ಅಂದ್ರೆ ರವಷ್ಟು ಶಾನೆನೆ ಇಷ್ಟ.. ರಂಗ  ಸರ್ ಅಂದ್ರೆ ಸುಮ್ನೆನಾ ! ಹೇಗೋ ಹೆಣ್ಣು ಮಕ್ಕಳನ್ನು ಅಟ್ರಾಕ್ಟ್  ಮಾಡೋದ್ರಲ್ಲಿ .. ವಾವ್ ರಂಗಣ್ಣ ವಾವ್ ಸೂಪರ್ ಲೈಕಾ !! ನಮ್ಮ ಆಫೀಸಿನ ಹೆಣ್ಣುಮಗಳು ಸಹ ರಂಗಣ್ಣನ ಗುಣಗಾನ ಮಾಡ್ತಾ ಇರ್ತಾಳೆ .. ರಂಗಣ್ಣ ಅಂದ್ರೆ ಸುಮ್ನೆನಾ :-) ?????



ಕೇವಲ ಹೆತ್ತಬ್ಬೆ ಮಾತ್ರ ಅಮ್ಮ ಅಲ್ಲ ನಮ್ಮ ಬದುಕಲ್ಲಿ ಬೆಂಗಾವಲಾಗಿ ಕಾದವರು , ಭಾವುಕ ಕ್ಷಣದಲ್ಲಿ ಜೊತೆಯಾದವರು, ಅಮ್ಮನಂತಹ ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಂಗಿ ತಮ್ಮ ಗೆಳೆಯ ಗೆಳತಿ ಒಟ್ಟಾರೆ ತಾಯಿಯ ಸ್ಥಾನದಲ್ಲಿ ನಿಂತು ಸಲುಹಿದ ಎಲ್ಲರಿಗು ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಕಾಮನೆಗಳು ..