ಸೂಪರ್ ಲೈಕಾ !!


ಸಾಮಾನ್ಯವಾಗಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳು ಇಷ್ಟ ಆಗುವುದಕ್ಕಿಂತ ಹೆಚ್ಚಾಗಿ   ಅದರ ನಿರೂಪಕರು, ಹಿನ್ನಲೆ ಧ್ವನಿ ನೀಡಿದವರು, ಅದನ್ನು ಬರೆದವರು , ಅದರ ಕ್ಯಾಮರಾ  ವರ್ಕ್ ಮಾಡಿದವರು ಒಟ್ಟಾರೆ ಯಾವುದೇ ಒಂದು ಕಾರಣ ಹೆಚ್ಚು ಗಮನ ಸೆಳೆಯ ಬಹುದು. ನನ್ನ ಮಿತ್ರ ಪ್ರಸಿದ್ಧ ಚಾನೆಲ್ ಒಂದರ ಕ್ಯಾಮರ ಮ್ಯಾನ್ . ಅತ್ಯುತ್ತಮ ಬರಹಗಾರ, ಅತಿ ಹೆಚ್ಚಿನ ಭಾವುಕ,ಒಂದು ವಿಷಯ ಬರೆದರೆ ಅತಿ ಸುಂದರವಾಗಿ ಅನಲೈಸ್ ಮಾಡುವಂತಹ ಪ್ರತಿಭಾವಂತ. ಬದುಕನ್ನು ಕ್ಯಾಮರದ ಲೆನ್ಸ್ಗಳ ಜೊತೆ ಕಳೆಯುತ್ತಿರುವ ಗೆಳೆಯ ಒಮ್ಮೊಮ್ಮೆ ಹೇಳೋದಿಷ್ಟೇ.. ಈ ದೃಶ್ಯ ಮಾಧ್ಯಮದಲ್ಲಿ ಅತಿ ಕೆಳಮಟ್ಟದ ಅಂದ್ರೆ ಯಾರ ಗಮನಕ್ಕೂ ಸಿಗದವರು ಅಂದ್ರೆ ಕ್ಯಾಮರ ವರ್ಕ್ ಮಾಡುವ ನಮ್ಮಂತಹವರು. ನಮಗೆ ಈ ಕೆಲಸ ಬಿಟ್ಟು ಬೇರೆ ಆಯ್ಕೆ ಇರಲ್ಲ, ನಿರಂತರವಾಗಿ ನಾವು ವೀಕ್ಷಕರ ಸೇವೆ ಮಾಡುತ್ತಿದ್ದರು ನಾವೆಂದಿಗೂ ಹೈಲೈಟ್ ಆಗುವುದೇ ಇಲ್ಲ.. ಹಾಗಂತ ಅನೇಕ ಬಾರಿ ಭಾವುಕವಾಗಿ ಆತ ನನ್ನ ಮುಂದೆ ಹೇಳಿದ್ದಾರೆ. ನಾನು  ಸಹ ಆ ಗೆಳೆಯನ ಮಾತುಗಳನ್ನು ಕೇಳುವುದಷ್ಟೇ ಮಾಡೋಕೆ ಸಾಧ್ಯ.ಅಂತಹ ತೆರೆ ಮರೆಯ ಎಲ್ಲ ಕ್ಯಾಮರ ಮಂದಿಗೂ ಪ್ರೀತಿಯ  ಹಾಯ್ ಹೇಳ್ತಾ ಇದ್ದೀನಿ.. !



@ ಮೊದಲೇ ತಿಳಿಸಿದಂತೆ ಕೆಲವರು ತುಂಬಾ ಇಷ್ಟ ಆಗ್ತಾರೆ. ಅದರಲ್ಲಿ ನಿರೂಪಕನ ಶೈಲಿ ಇಷ್ಟ ಆದರೆ ಸಾಕು ಮತ್ತೆ ಮತ್ತೆ ನಾವು ಅವರು ನಡೆಸಿಕೊಡುವ ಕಾರ್ಯಕ್ರಮ ವೀಕ್ಷಿಸಲು ಆಶಿಸುತ್ತೇವೆ. ಅಂತಹ ನಿರೂಪಕರಲ್ಲಿ ಸುವರ್ಣ ನ್ಯೂಸ್  ಅಜಿತ್ ಹನುಮಕ್ಕನವರ್  ಅವರ ನಿರೂಪಣೆ ತುಂಬಾ ಚಂದ ಇರುತ್ತೆ. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಮೋದಿ ಅವರ ಬಗ್ಗೆ ಒಂದು ಕಾರ್ಯಕ್ರಮದ ನಿರೂಪಣೆ ಮಾಡ್ತಾ ಇದ್ರೂ ಅದಾಗ ವಾಹಿನಿ ಒಂದರಲ್ಲಿ ಪ್ರಸಾರಿತ ಕಾರ್ಯಕ್ರಮ. ಅದನ್ನು ಕನ್ನಡಿಗರಿಗೆ ಅರ್ಥ ಆಗುವಂತೆ ಹೇಳುತ್ತಿದ್ದರು. ಆ ಶೈಲಿ, ಆ ಮಾತಿನ ಏರಿಳಿತ ಜಾಸ್ತಿ ಇಂಪ್ರೆಸ್ ಮಾಡಿತ್ತು. ಸಕತ್ ಕೆಲಸ ಆದ್ದರಿಂದ ಬ್ಲಾಗ್ ಕಡೆಗೆ ಗಮನ ಕೊಡೋಕೆ ಆಗ್ತಾ ಇಲ್ಲ. ಆದರು ಈ ಕಾರ್ಯಕ್ರಮ ಹೆಚ್ಚು ಇಷ್ಟ ಆಗಿತ್ತು..
ಕೆಲಸದ ನಡುವೆ ಟೀವಿ ನೋಡುವುದು ಸಾಮಾನ್ಯ ಸಂಗತಿ...ಆದರೆ ಈ ವಿಷ್ಯ ಎಷ್ಟೇ ದಿನ ಆದರು ಸರಿಯೇ ಹೇಳಲೇ ಬೇಕು ಅಂತ ಹೇಳಿದ್ದೇನೆ.

@ಇದೆ ವಾಹಿನಿಯ ಭಾವನ ಸಹ ಅತ್ಯಂತ ಇಷ್ಟ ಆಗುವ ನಿರೂಪಕಿ . ಎಲ್ಲೂ ಪದಗಳನ್ನು ನುಂಗಲ್ಲ, ಚ್ಯೂಯಿಂಗ್ ಗಂ ಥರ ಅಗಿದು ಅಗಿದು ಮಾತಾಡಲ್ಲ.. ಸ್ಪಷ್ಟವಾಗಿ ಅದರಲ್ಲೂ ಮುಖ್ಯವಾಗಿ ವೀಕ್ಷಕರಿಗೆ ಅರ್ಥ ಆಗೋ ಹಾಗೆ ಮಾತಾಡ್ತಾರೆ. 


@ ಇನ್ನೊಂದು ವಿಷ್ಯ ಹೇಳೋದಿತ್ತು.. ನಮ್ಮ ಮನೇಲಿ ಈಗ ಪಬ್ಲಿಕ್ ಟೀವಿ ಬರ್ತಾ ಇದೆ.. ರಂಗಣ್ಣ ಅಂಡ್ ಟೀಮ್ ನೋಡದೆ ಬೇಜಾರಾಗಿ ಹೋಗಿತ್ತು ;-) .. ರಂಗಣ್ಣ ಅಂದ್ರೆ ಸುಮ್ಮನೇನಾ.. !! ಅದಿರ್ಲಿ ಮತ್ತೊಂದು ಸಂಗತಿ.. ಎಲೆಕ್ಷನ್ ಸಮಯದಲ್ಲಿ ನಮ್ಮ ಮನೆಗೆ ನನ್ನ ಅತ್ತೆ ಒಬ್ರು ಬಂದಿದ್ರು.. ಆಕೆ ಮಾತಿನ ನಡುವೆ ಒಬ್ಬರು ಮಾತಾಡೋದನ್ನು  ಇಮಿಟೇಟ್ ಮಾಡ್ತಾನೆ ಇದ್ರೂ.. ನಮಗೆ ಆ ಮೇಲೆ  ಗೊತ್ತಾದ ಸಂಗತಿ ಅಂದ್ರೆ ಪಬ್ಲಿಕ್ ಟೀವಿಯ ರಂಗಣ್ಣ ಅಂದ್ರೆ ರವಷ್ಟು ಶಾನೆನೆ ಇಷ್ಟ.. ರಂಗ  ಸರ್ ಅಂದ್ರೆ ಸುಮ್ನೆನಾ ! ಹೇಗೋ ಹೆಣ್ಣು ಮಕ್ಕಳನ್ನು ಅಟ್ರಾಕ್ಟ್  ಮಾಡೋದ್ರಲ್ಲಿ .. ವಾವ್ ರಂಗಣ್ಣ ವಾವ್ ಸೂಪರ್ ಲೈಕಾ !! ನಮ್ಮ ಆಫೀಸಿನ ಹೆಣ್ಣುಮಗಳು ಸಹ ರಂಗಣ್ಣನ ಗುಣಗಾನ ಮಾಡ್ತಾ ಇರ್ತಾಳೆ .. ರಂಗಣ್ಣ ಅಂದ್ರೆ ಸುಮ್ನೆನಾ :-) ?????



ಕೇವಲ ಹೆತ್ತಬ್ಬೆ ಮಾತ್ರ ಅಮ್ಮ ಅಲ್ಲ ನಮ್ಮ ಬದುಕಲ್ಲಿ ಬೆಂಗಾವಲಾಗಿ ಕಾದವರು , ಭಾವುಕ ಕ್ಷಣದಲ್ಲಿ ಜೊತೆಯಾದವರು, ಅಮ್ಮನಂತಹ ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಂಗಿ ತಮ್ಮ ಗೆಳೆಯ ಗೆಳತಿ ಒಟ್ಟಾರೆ ತಾಯಿಯ ಸ್ಥಾನದಲ್ಲಿ ನಿಂತು ಸಲುಹಿದ ಎಲ್ಲರಿಗು ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಕಾಮನೆಗಳು ..

1 comment:

Badarinath Palavalli said...

ತಮಗೂ ಅಮ್ಮನ ದಿನಾಚರಣೆಯ ಶುಭಾಶಯಗಳು.

ಅಪರಾಧ, ರಾಜಕೀಯ ಅಥವಾ ಪ್ರಚಲಿತ ಹೀಗೆ ಯಾವುದೇ ಸಂಗತಿಯನ್ನು ಎತ್ತಿಕೊಂಡರೂ ಅದನ್ನು ಹಂತ ಹಂತವಾಗಿ ವಿಶ್ಲೇಷಿಸಿ, ವಿಚಾರಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದರಲ್ಲಿ ಸುವರ್ಣ ಸುದ್ದಿವಾಹಿನಿಯ ಕ್ರೈಂ ಛೀಫ್ ಶ್ರೀಯುತ. ಅಜಿತ್ ಹನುಮಕ್ಕನವರ್ ಅವರದು ಎತ್ತಿದ ಕೈ.

ಹಾಗೇಯೇ voice cultureನಲ್ಲಿಯೂ, ಸರಳ ನಿರೂಪಣೆಯಲ್ಲಿಯೂ ಹಾಗೂ ಹಿನ್ನಲೆ ದ್ವನಿಯಲ್ಲಿಯೂ ತಮ್ಮದೇ ವಿಭಿನ್ನ ಛಾಪನ್ನು ಮೂಡಿಸಿದವರು ಶ್ರೀಮತಿ ಭಾವನ.

ತಮ್ಮ ಮಾತ ನೂರಕ್ಕೆ ನೂರು ನಿಜ, ಯುದ್ದ ಭುಮಿಯ ಕಡೆಯ ಸೈನಿಕನಂತೆ ವಾಹಿನಿ ಛಾಯಾಗ್ರಾಹಕ. ಸದಾ ಕ್ಯಾಮರ ಹಿಂದೆಯೇ ಬದುಕನ್ನು ಸವಿಮೆಸಿಬಿಡುವ unsung hero ಆತ.
ಆತನನ್ನೂ ಗುರುತಿಸಿದ ತಾವು ಬಹು ಮಾನ್ಯರು.