ಅತ್ಯಂತ ಹೇಯಕರ ಸಂಗತಿ. ನಾಳಿನ ಕನಸು ಕಾಣುತ್ತಾ ವೈದ್ಯಕೀಯ ರಂಗದಲ್ಲಿ ಬೆಳೆಯ ಬೇಕಾಗಿದ್ದ ಬಾಲೆ ಎಂತಹ ಪರಿಸ್ಥಿತಿ ಎದುರಿಸುವಂತಾಗಿದೆ ದುರಲ್ ಕಾಮುಕರಿಂದ.. ತುಂಬಾ ನೋವಾಗಿದೆ ನನಗಂತೂ.. ಆ ಮಗು ಅನುಭವಿಸುತ್ತಿರುವ ಯಾತನೆ, ಆಕೆಯ ಬದುಕಿನಲ್ಲಿ ಆದ ಅನ್ಯಾಕ್ಕಾಗಿ ಹೋರಾಡುತ್ತಿರುವ ಯುವಶಕ್ತಿ , ತಮ್ಮ ಕೈ ಸಿಕ್ಕವರನ್ನು ಕೋಲಿನಿಂದ ಬಡಿದು ಸೇಡು ತೀರಿಸಿಕೊಳ್ಳುತ್ತಿರುವ ಪೊಲೀಸರು..ನಾಗರೀಕ ಸಮಾಜ ಕ್ರೌರ್ಯ ಅಂತಾನೆ ಹೇಳ ಬಹುದು.
ದೆಹಲಿಯಲ್ಲಿ ಆದ ಈ ಕ್ರೂರ ಘಟನೆಯು ಸಾಕಷ್ಟು ಗಲಾಟೆಯನ್ನು ಉಂಟು ಮಾಡುತ್ತಿದೆ ನಿಜ.. ಆದರೆ ಇದರ ಹಿಂದೆ ಇರುವುದು ಸಾರ್ವಜನಿಕರ ಆಕ್ರೋಶ, ಮುಖ್ಯವಾಗಿ ನಮ್ಮ ವ್ಯವಸ್ಥೆಯ ವಿಧಾನದಲ್ಲಿ ಇರುವ ಹೋಗ್ಲಿಬಿಡು ಅಂಶದ ವಿರುದ್ಧ ಅಸಹನೆ.
ಎಲ್ಲವಾಹಿಗಳು ಇದರ ಬಗ್ಗೆ ಪ್ರಸಾರ ಮಾಡ್ತಾನೆ ಇದೆ. ಸುವರ್ಣ ನ್ಯೂಸ್ ವರದಿಗಾರ ಪ್ರಶಾಂತ್ ನಾತೂ ಸ್ಥಳಕ್ಕೆ ಹೋಗಿ ಅಲ್ಲಿ ಇರುವ ವಿದ್ಯಾರ್ಥಿಗಳ ಬಳಿ ಮಾತನಾಡಿಸುತ್ತಿದ್ದರು. ಅಲ್ಲಿನ ಬಿಸಿ ಇಲ್ಲಿನವರಿಗೂ ಮುಟ್ಟಿಸಲು ಪ್ರಯತ್ನಿಸಿ ಯಶಸ್ವಿ ಆದರು.. ಆ ಪ್ರತಿಭಟನೆ ನಾಳಿನ ದಿನಗಳಲ್ಲಿ ಸರ್ಕಾರ ಯಾವುದೇ ಬಗೆಯಲ್ಲೂ ತೋರಿಕೆಯ ನ್ಯಾಯ ಕೊಡ ಬಾರದು ಎನ್ನುವುದನ್ನು ಪ್ರತಿಪಾದಿಸುತ್ತಿತ್ತು.
 |
ಕೃಪೆ :ಸತೀಶ್ ಆಚಾರ್ಯ |
CNN IBN ವಾಹಿನಿಯ ಎಡಿಟರ್ ಇನ್ ಚೀಫ್ ರಾಜ್ ದೀಪ್ ಸರ್ ದೇಸಾಯಿ ಅವರು ಸಹ ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯ ವರದಿಗಾರಂತೆ ಮೈಕ್ ಹಿಡಿದು ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಾ ಇದ್ದುದು ಮಾತ್ರ ನನಗೆ ತುಂಬಾ ವಿಶೇಷ ಅನ್ನಿಸಿತು, ಜೊತೆ ಆ ಪತ್ರಕರ್ತರ ಸ್ಪಂದನೆ ಇಷ್ಟ ಆಯ್ತು.
ಅತ್ಯುನ್ನತ ಹುದ್ದೆಯ ವ್ಯಕ್ತಿ ಹೀಗೆ ... ವಾವ್!ಇಂದು ರಾಜ್ ದೀಪ್ ನಮ್ಮ ಹೋಂ ಮಿಸ್ಟರ್ ಅವರ ಜೊತೆಯಲ್ಲಿ ಇಂದು ನೇರ ಸಂದರ್ಶನ ಮಾಡಿದರು ಈ ಸಂಗತಿ ಬಗ್ಗೆ.. ಯಾವ ರೀತಿ ಸಮಸ್ಯೆಗೆ ಪರಿಹಾರ ಒದಗಿಸುತ್ತೀರಿ , ವಿಶೇಷ ಸೆಶನ್ ಏರ್ಪಡಿಸುತ್ತಿರ..ಪೊಲೀಸರ ವರ್ತನೆ, ಎಲ್ಲದರ ಬಗ್ಗೆ ಕೇಳಿದರು.ಮಾತಿನ ಮಧ್ಯೆ ಮಿಸ್ಟರ್ ಶಿಂಧೆ ಅನ್ನುತ್ತ ಕೇಳಿದ ಪ್ರಶ್ನೆಗಳು ಸಖತ್ತಾಗಿತ್ತು.ಅಂತಿಮವಾಗಿ ಅವರು ಈ ಸಂಗತಿಯ ಬಗ್ಗೆ ಹೇಳುತ್ತಾ ಒಬಾಮ ಅವರು ಮಕ್ಕಳ ಮಾರಣ ಹೋಮ ಆದ ನಂತರ ಇಡಿ ದೇಶ ಕುರಿತು ಮಾತನಾಡಿದ್ದನ್ನು ನೆನಪಿಸುತ್ತಾ..ನಮ್ಮ ಪ್ರಧಾನಿ ಯಾಕೆ ಹಾಗೆ ಮಾಡಲಿಲ್ಲ ಎನ್ನುವ ಪ್ರಶ್ನೆ ಎಸೆದರು.. ಇಲ್ಲ ಅವರು ಆಗ ಮೀಟಿಂಗ್ ನಲ್ಲಿ ಇದ್ದರು ಎನ್ನುವ ಉತ್ತರ ಬಂದಿದ್ದು ಶಿಂಧೆ ಅವರಿಂದ..!
ಮುಖ್ಯವಾಗಿ ಒಂದು ಸಂಗತಿ ಎಲ್ಲರಿಗೂ ಆತಂಕ ತರುವ೦ತದ್ದಾಗಿದೆ , ನಾಳೆ ಸಾಕ್ಷಿ ಆಧಾರ ಇಲ್ಲ ಆದ್ದರಿಂದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದರೆ... ? ಅದನ್ನು ನೆನಪಿಸಿ ಕೊಳ್ಳುವುದಕ್ಕೆ ಸಾಧ್ಯವಿಲ್ಲ..ಏನು ಬೇಕಾದ್ರೂ ಸಾಧ್ಯ..!