ಭಜನೆ

Image result for yellow and red roses

ಸಂಪೂರ್ಣವಾಗಿ ಆಧ್ಯಾತ್ಮ ಅಂಶಗಳಿಗೆ  ಆದ್ಯತೆ ನೀಡಿರುವ ಚಾನೆಲ್ ಗಳಲ್ಲಿ ಶ್ರೀ ಶಂಕರ ವಾಹಿನಿ ಸಹ ಒಂದು.  ಅತಿ ಹೆಚ್ಚಿನ ಕನ್ನಡ ಹಾಗೂ ತಮಿಳು ವೀಕ್ಷಕರನ್ನು ಹೊಂದಿರುವ ಈ ವಾಹಿನಿಯಲ್ಲಿ ಅನೇಕ ವಿಶೇಷವಾದ ದೇಗುಲಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಪ್ರಸಾರಿಸುತ್ತಿರುತ್ತಾರೆ. ಈ ವಾಹಿನಿಯಲ್ಲಿ ಸದಾ ಇಷ್ಟ ಆಗುವ ಕಾರ್ಯಕ್ರಮ ಅಂದ್ರೆ ಭಜನ್ ಸಾಮ್ರಾಟ್. ಈಗ ಇದು ನಾಲ್ಕನೆಯ  ಸರಣಿಯ ಮೂಲಕ ಮತ್ತೊಮ್ಮೆ ವೀಕ್ಷಕರ ಮುಂದೆ ಬಂದಿದೆ. ಭಜನೆ ಅತ್ಯಂತ ಇಷ್ಟವಾದ ಸಂಗೀತ ಪ್ರಕಾರ. ಗ್ರಾಮೀಣ ಜನತೆಗೆ ಮಾತ್ರವಲ್ಲ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರೂ ಸಹಿತ  ಇಷ್ಟ ಪಡುತ್ತಾರೆ. ಈ ಕಾರ್ಯಕ್ರಮದಲ್ಲಿ ತಮಿಳು ಸ್ಪರ್ಧಿಗಳು ಹಾಗೂ ಕನ್ನಡ ಸ್ಪರ್ಧಿಗಳು ಜೊತೆಗೆ ತಮಿಳು -ಕನ್ನಡ ತೀರ್ಪುಗಾರರು  ಸಹ ಇದರ ಮೈನ್ ಹೈ ಲೈಟ್. ನನಗೆ ತುಂಬಾ ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಇದು ಒಂದು.

Image result for yellow and red roses
@ ಥಟ್ ಅಂತ ಹೇಳಿ.... ಅಂತ  ಡಾ. ನಾ ಸೋಮೇಶ್ವರ್ ಅವರು ಪ್ರತಿದಿನ ಹೇಳ್ತಾ ಇರ್ತಾರೆ ಚಂದನ ವಾಹಿನಿಯಲ್ಲಿ, ಆದರೆ ಬಹಳಷ್ಟು ಸ್ಪರ್ಧಿಗಳು   ಥಟ್ ಅಂತ ತಪ್ಪು ಉತ್ತರಗಳನ್ನು ನೀಡ್ತಾ ಇರುತ್ತಾರೆ ಅವರು ಕೇಳುವ ಪ್ರಶ್ನೆಗಳಿಗೆ. ಏನೇ ಹೇಳಿ ಅತ್ಯಂತ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಮೇಷ್ಟ್ರ ಈ ಥಟ್ ಅಂತ ಹೇಳಿ ಸಹ ಒಂದು.  ಕನ್ನಡ ರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಗಳು ಕಾಣಸಿಗಲಿಲ್ಲ. ಯಾಕ್ ಸರ್ ?.. ಒಟ್ಟಾರೆ  ಬಹಳಷ್ಟು, ಇನ್ನಷ್ಟು, ಬೇಕಾದಷ್ಟು ಎಪಿಸೋಡ್ ಗಳಾಗಿದ್ದರೂ ಬೇಸರ ಇಲ್ಲದೆ ಪ್ರತಿದಿನ ನೋಡಲು ಇಷ್ಟ ಆಗುವ ಕಾರ್ಯಕ್ರಮ ಇದು.

ಸದ್ದುಗದ್ದಲ

Image result for red and green flowers
ಯಾವುದೇ ರೀತಿಯ ಸದ್ದುಗದ್ದಲ ಇಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ನಿರ್ವಹಿಸುತ್ತಾ ಸಾಗುತ್ತಾರೆ ಕೆಲವರು. ಅದೇರೀತಿ ಸದ್ದುಗದ್ದಲ ಇಲ್ಲದೆ ತನ್ನ ಪಾಡಿಗೆ ತಾನು ಇರುವ ಆದರೆ ಬಹಳಷ್ಟು ಮಂದಿಯ ಆಸಕ್ತಿ ಹೆಚ್ಚಿಸಿ ವೀಕ್ಷಿಸುವಂತೆ ಮಾಡುತ್ತಿರುವ ಕಾರ್ಯಕ್ರಮಗಳಲ್ಲಿ ಮಾಸ್ಟರ್ ಶೆಫ್ ಸಹ ಒಂದು. ಸ್ಟಾರ್ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲೂ ಮನುಷ್ಯರ ಬಣ್ಣಗಳ ಬದಲಾವಣೆ ಗೊಡವೆ  ಕಾಣಲ್ಲ. ಕಂಡು ಬರುವುದು ಕೇವಲ ಅಡುಗೆಯ ಬಣ್ಣಗಳು. ಅದಕ್ಕಾಗಿ ಬಳಸುವ ಸಾಂಬಾರ ಪದಾರ್ಥಗಳ ಬಣ್ಣಗಳು, ತರಕಾರಿ ಬಣ್ಣಗಳು..
ಶೆಫ್ ಈಗ ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಒಂದು. ಸ್ಟಾರ್ ಹೋಟೆಲ್ ಗಳಿರಲಿ, ಚಿತ್ರಾನ್ನದ ಹೋಟೆಲ್ ಆಗಿರಲಿ, ಮನೆಯಲ್ಲಿ ಶ್ರದ್ಧೆಯಿಂದ ಮನೆಯಲ್ಲಿ  ಇರುವ  ಅಡುಗೆ ಸಾಮಾನು ಬಳಸಿ ಮಾಡುವ ಗೃಹಿಣಿ, ಅಡುಗೆಯಾಸಕ್ತರುಗಳಾಗಲಿ  ಒಟ್ಟಾರೆ ಎಲ್ಲರೂ ಮಾಸ್ಟರ್ ಶೆಫ್ ಗಳೆ.
ಮಾಸ್ಟರ್ ಶೆಫ್ ಅನೇಕ ಸೀಸನ್ ಗಳನ್ನು   ಕಂಡಿವೆ. ಈ ಬಾರಿ ಸರಣಿಯಲ್ಲೂ ಅನೇಕ ಸ್ಪರ್ಧಿಗಳು ದೇಶ ವಿದೇಶದಿಂದ ಬಂದಿದ್ದಾರೆ. ಅಡುಗೆಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೊಸ ಹೊಸ ಅಡುಗೆ, ಚಾಲೆಂಜ್ ಗಳು  ಎಲ್ಲವನ್ನು ಎದುರಿಸುತ್ತಾ ಅಡುಗೆಯ ಕಾರ್ಯಕ್ರಮವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ವಿಕಾಸ್  ಖನ್ನಾ , ಕುನಾಲ್ ಕಪೂರ್  ಮತ್ತು ಝೋರಾವಾರ್  ಕಾರ್ಲ  ಈ ಬಾರಿ ನೇತೃತ್ವ ಹೊಂದಿರುವ ಮಾಸ್ಟರ್ ಗಳು .
Image result for red and green flowers
@ ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ ಸೂಪರ್ ಡ್ಯಾನ್ಸರ್ಸ್ ಕಾರ್ಯಕ್ರಮದ ಬಗ್ಗೆ ಹೇಳಲೇ ಬೇಕು. ಶಿಲ್ಪ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ಅವರ ಮಾಸ್ಟರ್ ಗಿರಿಯಲ್ಲಿ ಪ್ರಸಾರ ಆಗ್ತಾ ಇರುವ ಈ ಕಾರ್ಯಕ್ರಮ ಅತ್ಯಂತ ಲವಲವಿಕೆಯಿಂದ ಕೂಡಿದೆ. ಈ ಕಾರ್ಯಕ್ರಮದ ಸ್ಪರ್ಧಿಗಳ ಜೊತೆಗೆ ಅದರ ಜಡ್ಜ್ಗಳು   ಸಹ ತುಂಬಾ ಲವಲವಿಕೆಯಿಂದ ಇರೋದರಿಂದ ವೀಕ್ಷಕರಿಗೆ ತುಂಬಾ ಆಪ್ತ ಅನ್ನಿಸುತ್ತೆ. 

ತೇರೆ-ನಾಮ

Image result for orange flower
ಅಂಡ್ ಟಿವಿಯಲ್ಲಿ   ತೇರೆ ಬಿನ್  ಎನ್ನುವ ಹೆಸರಿನ ಧಾರವಾಹಿ ಪ್ರಸಾರ ಆಗ್ತಾ ಇದೆ . ಅದರಲ್ಲಿ ನಾಯಕ ಒಬ್ಬ ಇಬ್ಬರು ನಾಯಕಿಯರು. ಸರಳ ಸಂಭಾಷಣೆಯ ಮನಮುಟ್ಟುವ ಕಥಾ ಹಂದರ ಹೊಂದಿರುವ ಧಾರವಾಹಿ ಅದು. ಅಂಡ್ ಟಿವಿಯಲ್ಲಿ ಪ್ರತಿದಿನ ರಾತ್ರಿ ಎಂಟು ಗಂಟೆಗೆ ಪ್ರಸಾರ ಆಗುತ್ತದೆ. ವಿಜಯ, ಅಕ್ಷಯ್ ಹಾಗೂ ನಂದಿನಿ ಈ ಮೂರು ವ್ಯಕ್ತಿಗಳ ನಡುವೆ ನಡೆಯುವ ಕಥೆ. ಅವರ ಜೊತೆ ವಿಜಯಳ ಮಗಳು , ಆಕೆಯ ತಾಯಿ ,ತಂಗಿ, ತಂಗಿಯ ಗಂಡ, ನಂದಿನಿಯನ್ನು  ಪ್ರೀತಿಸುತ್ತಿರುವ ಮಾನಸಿಕ ತಜ್ಞ ಇಮ್ರಾನ್, ಆತನ ತಂಗಿ...
ಮುಂದೇನು ಆಗುತ್ತದೆ ಎನ್ನುವ ಸಣ್ಣ ಮಟ್ಟದ ಕುತೂಹಲ ಉಂಟು ಮಾಡಿರುವ ಕಥೆಯಲ್ಲಿ ವಿಜಯ,ನಂದಿನಿ,ಅಕ್ಷಯ್ ನೋಡೋಕೂ ಸಖತ್ತಾಗಿದ್ದಾರೆ..ಇಮ್ರಾನ್ ಪಾತ್ರಧಾರಿ ಸಹ. ಯಾವ್ ಟೆನ್ಷನ್ ಇಲ್ಲದೆ ನೋಡುವ ಕೆಲವು ಧಾರಾವಾಹಿಗಳಲ್ಲಿ ಇದು ಒಂದು.
Image result for orange flower
@ ಸ್ಟಾರ್ ಹಿಂದಿ ವಾಹಿನಿಯಲ್ಲಿ ನೋಡಲೇ ಬೇಕಾದ ಧಾರವಾಹಿ ಒಂದಿದೆ. ಅದರ ಹೆಸರು ನಾಮಕರಣ್. ತುಂಬಾ ಚೆನ್ನಾಗಿದೆ ಕಣ್ರೀ ಧಾರವಾಹಿ. ಮಹೇಶ್ ಭಟ್ ನಿರ್ದೇಶನ ಮಾಡಿರುವ ಈ ಧಾರಾವಾಹಿಯಲ್ಲಿ ಅವನಿ ಪಾತ್ರ ಮಾಡಿರುವ ಪುಟ್ಟ ಹುಡುಗಿ ಹಿರಿಯ ಕಲಾವಿದೆ ರೀಮಾ ಲಾಗೂ ಅವರಿಗೆ  ಸರಿಯಾದ ಎದುರಾಳಿ ಅನ್ನ ಬಹುದು. ಅದ್ಭುತ ನಟನೆ ಇಬ್ಬರದ್ದು. ಅದೇ ರೀತಿ ಅವನಿಯ ತಾಯಿ ಆಶಾ, ಆಕೆಯ ಫ್ರೆಂಡ್ ಅಲಿ, ಅವಳ ತಂದೆ ಆಶಿಶ್ ಸೇರಿದಂತೆ ಎಲ್ಲರೂ ಸಕತ್ ಇಷ್ಟ ಆಗುವಂತೆ ನಟಿಸಿದ್ದಾರೆ. ತಪ್ಪದೆ ನೋಡ ಬಹುದಾದ  ಸುಂದರ ಧಾರವಾಹಿ. ಸಾಮಾನ್ಯವಾಗಿ ಬಾಲಿವುಡ್  ಖಾನ್ ಗಳ  ತಾಯಿಯಾಗಿ ಲಿಮಿಟೆಡ್ ಅಭಿನಯದಲ್ಲಿ ವೀಕ್ಷಕರ ಮುಂದೆ ಬಂದಿದ್ದ ರೀಮಾ ಮೇಡಂ ಈ ಧಾರಾವಾಹಿಯಲ್ಲಿ ಸುಪರ್ಬ್ ಆಗಿ ತಮ್ಮಲ್ಲಿರುವ ಕಲಾವಿದೆಯನ್ನು ಹೊರ ಹಾಕಿದ್ದಾರೆ.  

ಚೀಕಮ್ಮ

Image result for green and blue flowers
ತುಂಬಾ ಗಂಭೀರವಾದ ಚರ್ಚೆಗಳಿಗಿಂತ ತಲೆ ಬಾಲ ಇಲ್ಲದ ಕಥಾ ಹಂದರಗಳನ್ನು ಹೊಂದಿರುವ  ಧಾರಾವಾಹಿಗಳು, ರಿಯಾಲಿಟಿ ಶೋಗಳು ತುಂಬಾ ಇಷ್ಟವಾಗುತ್ತದೆ. ಯಾಕೇಂದ್ರೆ ಅದರ ವೀಕ್ಷಣೆಯಿಂದ ಮನೋರಂಜನೆ ಸಿಗುತ್ತದೆ, ನಮ್ಮ ಮನಸ್ಸುಗಳು ಯಾವುದೋ ಆತಂಕಕ್ಕೆ ಒಳಗಾಗದೆ ಹಾಯಾಗಿರುತ್ತದೆ.ಯಾಕೆ ಈ ವಿಷಯ ಹೇಳ್ತಾ ಇದ್ದೀನಿ ಅಂದ್ರೆ ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ಧಾರವಾಹಿಗಳು ಅಂದ್ರೆ ಅದರಲ್ಲಿ ಫ್ಯಾ0ಟಿಸಿಗಳು, ಊಹೆಗಳು, ಕಲ್ಪನೆಗಳು ಜಾಸ್ತಿ ಜಾಸ್ತಿ ...
ಉದಯವಾಹಿನಿಯಲ್ಲಿ ಈಗ ಅಂತಹದ್ದೇ ಒಂದು ಧಾರವಾಹಿ ಆರಂಭವಾಗಿ ಕೆಲವು ತಿಂಗಳುಗಳು ಪೂರ್ಣವಾಗಿದೆ.ಆನಂದಭೈರವಿ ಅಂತ ಅದ್ರ ಹೆಸರು. ಅದು ಆರಂಭ ಆದ ದಿನದಿಂದ ವೀಕ್ಷಿಸುತ್ತಾ ಬಂದಿದ್ದೇನೆ. ಅದರ ವಿಶೇಷ ಅಂದ್ರೆ ಹೀಗೆ ಬಾಲ ತಲೆ ಇಲ್ಲದ ಕಥೆ. ಆದರೆ ಮಜಾ ಕೊಡುತ್ತೆ. ಪಾತ್ರಧಾರಿಗಳು ಸಹ ಸಕತ್ತಾಗಿ ಅಭಿನಯಿಸಿದ್ದಾರೆ. ಸ್ವಾತಿ ಅವರನ್ನು ಮೊಟ್ಟಮೊದಲ ಬಾರಿಗೆ ಖಳನಾಯಕಿ ಆಗಿ ನೋಡುವ ಅವಕಾಶ. ಎಂ ಎನ್ ಲಕ್ಷ್ಮೀದೇವಮ್ಮ ಅವರ ಮೊಮ್ಮಗಳು ಸಹ ಸ್ವಾತಿ ಜೊತೆಯಲ್ಲಿ  ಖಳನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.ಅವರುಗಳನ್ನು  ಒಳ್ಳೆಯವರಾಗಿ ನೋಡುತ್ತಿದ್ದ  ನಮಗೆ ಈಗ ಕೆಟ್ಟವರಾಗಿ ನೋಡುವ ಅವಕಾಶ..ಭೂಮಿ, ಅಗ್ನಿ ಪಾತ್ರಧಾರಿಗಳು ಸಹ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಭೂಮಿ ಪಾತ್ರಧಾರಿಯ ಚೀಕಮ್ಮ (ಚಿಕ್ಕಮ್ಮ ) , ಅಗ್ನಿ ಪಾತ್ರಧಾರಿಯ ಭೂಉಉಉಮೀ ಅನ್ನುವ ಪದಗಳು ಕೇಳೋಕೆ ನನಗಂತೂ ಸಕತ್ ಮಜಾ ಕೊಡುತ್ತೆ.

Image result for green and blue flowers
@ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ  ಇದ್ದ ಡ್ರಾಮಾ ಜೂನಿಯರ್ ಅತ್ಯಂತ ಇಷ್ಟದ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಈಗ ಕಾಮಿಡಿ ಕಿಲಾಡಿಗಳು ಪ್ರಸಾರ ಆಗ್ತಾ ಇದೆ. ನನ್ನ ಎನಿಟೈಮ್ ಫೆವರಿಟ್ ಕಲಾವಿದರಾದ ಜಗ್ಗೇಶ್ ಅವರ ಜೊತೆಗೆ ಭಟ್ರು ಮತ್ತು ರಕ್ಷಿತಾ ತೀರ್ಪುಗಾರರಾಗಿದ್ದಾರೆ. ಅದು ನಿಮಗೆ ಗೊತ್ತೇ ಇದೆ. ಹಾಸ್ಯಪ್ರಧಾನ ಕಾರ್ಯಕ್ರಮ ಆದ ಕಾರಣ ಮತ್ತೊಂದಷ್ಟು ಉತ್ತಮ ಕಲಾವಿದರು,  ಹಾಸ್ಯ ಕಲಾವಿದರು ಕನ್ನಡ ಕಲಾರಸಿಕರಿಗೆ ದೊರಕುತ್ತಾರೆ ಅನ್ನೋದು ಸತ್ಯವಾದ ಸಂಗತಿ. ತಮ್ಮ ಅದ್ಭುತ ನಿರೂಪಣೆ, ಸೌಜನ್ಯ, ವಿನಯದ ಮೂಲಕ ಮನಗೆದ್ದಿರುವ ಆನಂದ್ ಇದರ ನಿರೂಪಣೆ ನಿಜಕ್ಕೂ ಅತ್ಯುತ್ತಮ.