ಚುಚ್ಚುತ್ತಾರೆ !



 ಸಲ್ಮಾನ್ ಖಾನ್ ಹುಟ್ಟು ಹಬ್ಬ ಇಂದು . ಆತನ ವೈಯುಕ್ತಿಕ  ಬದುಕಿನ   ಬಗ್ಗೆ ನನಗೆ ಆಸಕ್ತಿ ಲ್ಲ, ಆದರೆ ನಟನಾಗಿ ಬೆಳೆದ ರೀತಿ, ಸಾಕಷ್ಟು ಅಭಿಮಾನಿಗಳು ಅಭಿಮಾನಿಸುವಷ್ಟು ಅಲ್ಲದೆ ಇದ್ದರು ನನಗೆ ಸಲ್ಮಾನ್ ನಟನೆ ಅಂದ್ರೆ ತುಂಬಾ ಲೈಕ್ ನನಗೆ. ಒಂದಷ್ಟು ವಯಸ್ಸಿಗೆ ವಯಸ್ಸಾಯಿತು ಅನ್ನುವ ಹಣೆಪಟ್ಟಿ ಕಟ್ಟಿ ಬಿಡುವ ನಮ್ಮ ಸಮಾಜದಲ್ಲಿ ಸಲ್ಮಾನ್ ರಂತಹವರು ಮಾದರಿ ಆಗುತ್ತಾರೆ. ದೇಹಕ್ಕೆ ಒಂದಷ್ಟು ಕಸರತ್ತು ಮುಖಕ್ಕೆ ಒಂದಷ್ಟು ವರ್ಕು, ತಲೆಗೆ ಒಂದು ಸ್ವಲ್ಪ  ಕೆಲಸ  ಕೊಡಿ ಎಲ್ಲವು ಸರಿಯಾಗುತ್ತದೆ  ಎನ್ನುವ  ಸಂದೇಶ ನೀಡುವ ಜೀವನೋತ್ಸಾಹಿ, ಅವರು ಬಿಗ್ ಬಾಸ್ ಗೆ ಬಂದಾಗ ನಾನು ಆ ಎಲ್ಲ ಸಂಗತಿಗಳನ್ನು ಗಮನ ನೀಡಿ ನೋಡುವುದು. ನನ್ನ ಅತಿ ಹೆಚ್ಚಿನ ಪ್ರಿಯವಾದ ಸ್ಪರ್ಧಿಗಳಲ್ಲಿ ಸಂಗ್ರಾಮ್ ಸಿಂಗ್ ಗೆ ಮೊದಲ ವೋಟ್ .  ಮುಖ್ಯವಾಗಿ ಆಟ ಭಾರತೀಯ ಕ್ರೀಡಾಪಟು . ಇಂತಹವರಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಗುತ್ತದೆ. ಗೌಹರ್ ಗಿಂತ ನನಗೆ ತನಿಷ ಸಹನೆ ಹೆಚ್ಚು ಇಂಪ್ರೆಸ್ ಮಾಡಿ ದೆ.. ಆದ್ರೆ ಬಿಗ್ ಬಾಸ್ ಮಂದಿ ನೋಡುವ ಅನೇಕ ಅಂಶಗಳು ಸಾಮಾನ್ಯರು ನೋಡುವಂತೆ ಇರಲ್ಲ ಅದೇ ದೊಡ್ಡ ಪ್ರಾಬ್ಲಮ್ ಅದರಲ್ಲಿ .



ಜಿ ಎಸ್  ಎಸ್  ಅವರ ಅಂತಿಮ ಸಂಸ್ಕಾರದ ವೇಳೆಯಲ್ಲಿ ಉದಯ ನ್ಯೂಸ್ ವಾಹಿನಿಯಲ್ಲಿ ಅದರ ವಿವರಣೆ ನೀಡುತ್ತಿದ್ದ ವಾರ್ತಾವಾಚಕಿ ಯ ಆಂಗಿಕ ಭಾವ ಮತ್ತು ಮಾತಿನಲ್ಲಿ, ನಿರೂಪಣೆಯಲ್ಲಿನ ಏರಿಳಿತ ತುಂಬಾ ಪ್ಲೆಸೆಂಟ್ ಆಗಿತ್ತು. ಇಂತಹ ಸಮಯಗಳಲ್ಲಿ ಮಾತ್ರವಲ್ಲ ಎಲ್ಲ ಸಂದರ್ಭಗಳಲ್ಲೂ  ಸಹ ಈ ರೀತಿಯ ಪ್ರಸೆಂಟೇಷನ್  ತುಂಬಾ  ಇಷ್ಟವಾಗುತ್ತದೆ . ಸುವರ್ಣ ನ್ಯೂಸ್ ಭಾವನ, ಟೀವಿ ನೈನ್  ರಾಧಿಕ, ಸಮಿನಾ ಈ ಲಿಸ್ಟ್ ಗೆ ಸೆರುತ್ತಾರೆ. ಕೆಲವರು ಕಿವಿಗೆ ಅದೆಂಗೆ ಚುಚ್ಚುತ್ತಾರೆ ಅಂದ್ರೆ ಯಪ್ಪಾ !



ವಾವ್ ವಾವ್ !



ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಇನ್ನಿಲ್ಲ.. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ದೊರಕಲಿ !



ಸುವರ್ಣ ವಾಹಿನಿಯಲ್ಲಿ ಸಂಪಾದಕೀಯ ಅನ್ನುವ ಪದ ಕಾಣ ಸಿಗ್ತಾ ಇತ್ತು ಕಳೆದ ವಾರ. ತುಸು ಕುತೂಹಲದಿಂದ ನಾನು ಕಾದೆ ಏನಿರ ಬಹುದು ನೋಡುವ ಅಂತ. ಅದರಲ್ಲಿ ಅನಂತ್ ಚಿನಿವಾರ್ ಸಂಪಾದಕೀಯದ ಬಗ್ಗೆ ವಿವರಣೆ ನೀಡುತ್ತ, ವಿಷಯ ವಿಶ್ಲೇಷಿಸಿದರು. ನನಗೆ ಅದರ ಬಗ್ಗೆ ಸ್ವಲ್ಪ ಗೆಸ್ ಇತ್ತು, ಆದರೆ ಆ ಕಾರ್ಯಕ್ರಮ ನೋಡುವವರೆಗೂ ಸುಮ್ಮನಿರುವ ಅಂತ ಕಾದೆ. ನಿಜಕ್ಕೂ ಖುಷಿ  ಕೊಡ್ತು. ಒಂಬತ್ತು ಗಂಟೆಯ ಕಾರ್ಯಕ್ರಮ ಕಾದು ನೋಡುವಂತೆ ಮಾಡಿದವರು ಶಶಿಧರ್ ಭಟ್. ಅವರ ಕಾರ್ಯಕ್ರಮ, ಅದರಲ್ಲೂ ನ್ಯೂಸ್ -ವ್ಯೂಸ್ ಹೆಚ್ಚು ಆಸಕ್ತಿ ಬೆಳೆಸಿತು ಸಾಮಾನ್ಯರಲ್ಲಿ. ಈಗಲೂ ಸುವರ್ಣ ನ್ಯೂಸ್ ಲ್ಲಿ ಒಳ್ಳೆಯ  ಕಾರ್ಯಕ್ರಮ ನೀಡಿದವರ ಪಟ್ಟಿಯಲ್ಲಿ ಶಶಿ ಸರ್ ಸಹ ಸೇರ್ಪಡೆಯಾಗಿದ್ದಾರೆ. ಅನಂತ್ ಅವರೀ ಕಾರ್ಯಕ್ರಮದಲ್ಲಿ ಭಿನ್ನತೆ ಇದೆ ಅನ್ನಿಸಿತು. ಒಂದು ಸಂಗತಿ ಸರ..! ನೀವು ಸಿನಿಮಾದವರ ಕಡೆಗೆ ಹೋಗ ಬೇಡಿ. ಒಮ್ಮೆ ನೀವು ಜನಶ್ರೀ ವಾಹಿನಿಯಲ್ಲಿ  ದರ್ಶನ್ ಅವರನ್ನು ಸಂದರ್ಶಿಸುವಾಗ ಸಾಕಷ್ಟು ಸಿನಿ ಜರ್ನೊಗಳು ಸಿಟ್ಟಾಗಿದ್ದರು. ಛೆ ಇವರಿಗೆ ನೆಟ್ಟಗೆ  ಸಂದರ್ಶನ ಮಾಡೋಕೂ ಬರಲ್ಲ ಅಂತ.. ನೋಡಿ ಹೇಗಿದೆ ಸುದ್ದಿಮನೆಗಳಲ್ಲಿ ಇರುವವರ ಕತೆ .ನಿಮಗೇನು ಇದು ಹೊಸದಲ್ಲ ಬಿಡಿ ಸರಾ... ನೀವು ಅದರ ಭಾಗ ತಾನೆ ;-)

@ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ಎಫ್ ಐ ಆರ್ ನಿರೂಪಕ ಅಜಿತ್  ಬಗ್ಗೆ ಸಾಕಷ್ಟು ಮಂದಿಗೆ ಇಷ್ಟ ಅನ್ನುವ ಸಂಗತಿಗೆ ಗೊತ್ತಾಗಿದೆ. ಯಾಕಿಷ್ಟ ಅಂದ್ರೆ ಅವರ ಮಾತಿನ ಶೈಲಿ .. ಪದಗಳು ಬಳಸುವ ರೀತಿ.. ಒಂದೆರಡು ದಿನ ಅಜಿತ್ ಕಾಣಲಿಲ್ಲ ಆತ ಬೇರೆ ಕಡೆಗೆ ಹೊರಟರಾ ಅನ್ನುವ ಆತಂಕ ಆಗಿತ್ತು ವೀಕ್ಷಕರಿಗೆ.. ನಿರೂಪಕರಿಗೆ ಇದಕ್ಕಿಂತ ಒಳ್ಳೆಯ ಕಾಣಿಕೆ ಇನ್ನೇನಿದೆ ಅಲ್ವೇ?


ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುವ ನಚ್ ಬಳಿಯೇ ತೀರ್ಪುಗಾರರು ಮೂರು ಜನ ಇಷ್ಟ ಆಗ್ತಾರೆ. ಶಿಲ್ಪ ಶೆಟ್ಟಿ ಕುಂದ್ರ , ಸಾಜಿದ್ ಮತ್ತು ಟೆರೆನ್ಸ್ . ಸಾಜಿದ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಶೈಲಿ ನನ್ನನ್ನು ತುಂಬಾ ಆಕರ್ಷಿಸಿದೆ. ತುಸು ಜಾಸ್ತಿನೇ ಹಾಸ್ಯ ಬೆರೆಸುವ ಸಾಜಿದ್ ಬಗ್ಗೆ, ಮುದ್ದಾದ ಕನ್ನಡದ ತುಳು ಚೆಲುವೆ ;-) ಶಿಲ್ಪ,ತಮ್ಮ ಯೂನಿಕ್ ಸ್ಟೈಲ್ ಗಳಿಂದ ಗಮನ ಸೆಳೆಯುವ ಟೆರೆನ್ಸ್ ... ಹೆಚ್ಚು ಹೇಳಲ್ಲ..! ಜಾಸ್ತಿ ಬರೆಯೋದಿದೆ!

* ಜೀಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮ ಅದ್ಭುತ. ನಿನ್ನೆ ಎಪಿಸೋಡ್ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಅದರಲ್ಲೂ ಸರ್ಕಸ್ ನ ಜೋಕರ್ ಜೋಡಿ ಮತ್ತು ಕಸರತ್ತು ಆಡಿದ ಮತ್ತೊಂದು ಜೋಡಿ ಸಕತ್ . ಪ್ರಸಾರ ಆಗುವ ಪ್ರತಿಬಾರಿಯೂ ನೋಡಲು ಇಷ್ಟ ಆಗುವಂತಹ ಎಪಿಸೋಡ್ ನಿನ್ನೆಯದು.ಸ್ಪರ್ಧಿಗಳು ಯಶಸ್ವಿಗಾಗಿ ಮಾಡುವ ಪ್ರಯತ್ನ ಅನನ್ಯ. ಈ ಕಾರ್ಯಕ್ರಮ ವಾವ್ ವಾವ್ !