ಲಾಸ್ಟ್ ರೆಸಿಪೀಸ್

 


ಎಪಿಕ್ ಚಾನಲ್ ನಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಲಾಸ್ಟ್ ರೆಸಿಪೀಸ್  ಅಂತ ಅದರ ಹೆಸರು.ಆದಿತ್ಯಬಲ್ ಅದರ ನಿರೂಪಕ. ಈ ಕಾರ್ಯಕ್ರಮದ ವಿಶೇಷ ಅಂದ್ರೆ ಮರೆಯುತ್ತಿರುವ, ಅಥವಾ ಬಹಳ ಹಿಂದೆ ಬಳಸುತ್ತಿದ್ದ ಪಾಕ ವಿಧಾನ. ನಾನು ಆ ಚಾನಲ್ ವೀಕ್ಷಣೆ ಮಾಡುವಾಗ  ನಮ್ ಕರ್ನಾಟಕದ ಹೆಮ್ಮೆಯ ಮಹಾರಾಜ ರಾಜಾಧಿರಾಜ ಶ್ರೀ ಕೃಷ್ಣದೇವ ರಾಯರ ವಂಶಕ್ಕೆ ಸೇರಿದ ರಾಜಮಾತೆ ಮತ್ತು ಅವರ ಸೊಸೆ 500 ವರ್ಷದಷ್ಟು ಹಳೆಯ ರೆಸಿಪಿ ಮಾಡಿ ತೋರಿಸಿದರು. ರಾಜಮಾತೆ ಹೆಸರು ಚಂದ್ರಕಾಂತ ದೇವಿ.  ಮೊಟ್ಟೆ ಯಿಂದ ಮಾಡಿದ  ಒಂದು ಸರಳವಾದ ತಿನಿಸನ್ನು ತೋರಿಸಿಕೊಟ್ಟರು. ನಮ್ಮಲ್ಲಿ ಬಳಸುವ ಮರಾಠಿ ಮೊಗ್ಗು, ಕಲ್ಲುಹೂವನ್ನು ಉಪಯೋಗಿಸಿ ಮಾಡಿದ ಆಹಾರವನ್ನು ಆಂಕರ್ ಚಪ್ಪರಿಸಿಕೊಂಡು ತಿಂದದ್ದು ಬೇರೆ ವಿಷ್ಯ. 

ನಾನು ಸಾಮಾನ್ಯವಾಗಿ   ವೆಜ್ ಅಥವಾ ನಾನ್ವೆಜ್ ಅಡುಗೆ ನೋಡುತ್ತೇನೆ.. ನಾನು ಶಾಕಾಹಾರಿ ಆಗಿದ್ದರು ಸಹ .. ಯಾಕೆಂದ್ರೆ ಯಾವುದೇ ದೇಶ, ಸಂಸ್ಕೃತಿಯವರು ಅಡುಗೆ ಮಾಡುವ ವಿಧಾನ,ಅವರು ಬಳಸುವ ಸಾಂಬಾರ ಪದಾರ್ಥಗಳು ..ನನಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ಅದಕ್ಕಷ್ಟೇ..!