Posts

Showing posts from December 20, 2015

ಹಗ್ ಡೇ

Image

ಪ್ರಶ್ನೆ ಪ್ರಶ್ನೆ

Image
ನಿರ್ಭಯ ಕೇಸ್ ನ ಒಬ್ಬ ಅಪರಾಧಿ ಹೊರ ಬರುತ್ತಿರುವ ಸಂಗತಿ ಸಾಕಷ್ಟು ದುಃಖ ನೀಡಿದೆ. 20  ವರ್ಷದ ಅತ್ಯಾಚಾರಿ, ಅಮಾಯಕ ಹೆಣ್ಣು ಮಗಳ  ಸಾವಿಗೆ ಕಾರಣವಾದವ, ಒಂದು ಕುಟುಂಬವನ್ನು ಶಾಶ್ವತವಾಗಿ ದುಃಖಕ್ಕೆ ಈಡು ಮಾಡಿದವರ ಗುಂಪಿಗೆ ಸೇರಿದವ ಈಗ ಆರಾಮವಾಗಿ ಹೊರ ಬರುತ್ತಿದ್ದಾನೆ..!! ಅತ್ಯಂತ ನೋವಿನ ಸಂಗತಿ..ಆ ತಾಯಿಯ ಕಣ್ಣೀರಿಗೆ ಬೆಲೆ ಇಲ್ಲ ..ಛೇ !
ನನ್ನ ಈ ಬ್ಲಾಗ್ ಸಂಪೂರ್ಣವಾಗಿ ಟೀವಿ ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟಿದುದಾಗಿದೆ. ಅದರಲ್ಲಿ ನಾನು ನೋಡಿದ ಕಾರ್ಯಕ್ರಮಗಳ ಬಗ್ಗೆ ಬರೀತೀನಿ, ಜೊತೆಗೆ ಒಂದಷ್ಟು ಪೂರಕ ಅಂಶಗಳನ್ನು ಬರೆಯುವ ಒಂದು ಅಭ್ಯಾಸ. ಯಾವುದೇ ಕಾರ್ಯಕ್ರಮ ನೋಡಿದ ಬಳಿಕ ಇಷ್ಟ ಆಗ ಬಹುದು, ಆಗದೆ ಇರ ಬಹುದು, ಆದರೆ  ನೋಡಿದ್ದನ್ನು  ಬರೆಯುವ ಅಭ್ಯಾಸ ಇದೆ. ಏನ್ ಮಾಡೋಕು ಆಗಲ್ಲ  :)
ಇತ್ತೀಚಿಗೆ ನಾನು ಸುವರ್ಣ ನ್ಯೂಸ್ ನಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರು ಅರವತ್ತರ ದಶಕದ ತನಕ ಬದುಕಿದ್ದರು ಎನ್ನುವ  ಅಂಶ  ಅನ್ವಯ ಆಗುವಂತೆ ಕಾರ್ಯಕ್ರಮ ಪ್ರಸಾರವಾಗಿತ್ತು. ಅದನ್ನು ವೀಕ್ಷಿಸಿದ ಬಳಿಕ ಆ ರೀತಿಯ ಅಂಶಗಳನ್ನು ಹೋಲುವಂತಹ ಒಂದು ಲೇಖನವನ್ನು ಓದಿದ್ದರ ಬಗ್ಗೆ ಲಿಂಕ್ ಕೊಟ್ಟು ಹೇಳಿದ್ದೆ. ಸಾಕಷ್ಟು ಓದುಗರಿಗೆ ಈ ಪೋಸ್ಟ್  ಇಷ್ಟ ಆಗಿಲ್ಲ. ಅದು ಸಹಜ. ಕೆಲವು ಅಂಶಗಳ ಬಗ್ಗೆ ಒಪ್ಪಲಾಗದು. ಆ ಸಮಯದಲ್ಲಿ   ಆ ಕಾರ್ಯಕ್ರಮ ಹೀಗಿತ್ತು, ಆ ಲೇಖನ ಈ ರೀತಿ ಬರೆದಿತ್ತು ಅಂತ ಹೇಳಿದ್ದೆ..ಹೀಗೆಲ್ಲ ಉಂಟೆ ಎಂಬ ನೋವು ಬೇಸರ ಅಂತಹ ಸಮಯದಲ್ಲಿ ಆಗ…