ಶೆಫ್

ಸೋನಿ ವಾಹಿನಿಯಲ್ಲಿ ಮಾಸ್ಟರ್‌ ಶೆಫ್‌ ಶೋ ಆರಂಭ ವಾಗಿದೆ. ತುಂಬಾ ಇಷ್ಟಪಟ್ಟು ವೀಕ್ಷಣೆ ಮಾಡುವ ರಿಯಾಲಿಟಿ ಶೋಗಳಲ್ಲಿ ಇದೂ ಒಂದು. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಈ ಬಾರಿ ಜಡ್ಜ್‌  ಗಳಾಗಿದ್ದಾರೆ. ಕುನಾಲ್‌ ಕೆಲವು ಸೀಸನ್‌ ಗಳಲ್ಲಿ ಮಿಸ್ಸಿಂಗ್.‌ ಅದರಲ್ಲೂ ಇತ್ತೀಚೆಗೆ ರೀಲ್ಸ್‌ ಅದೂ ಎಂತಹದ್ದು ಅಂದರೆ ಅದನ್ನು ಅವರೇ ಹೇಳಬೇಕು. ನಾನಂತೂ ಅವರ ಈ ರೀಲ್ಸ್‌ ಪ್ರಯೋಗವನ್ನು ಸಿಕ್ಕಾಪಟ್ಟೆ ಎಂಜಾಯ್‌  ಮಾಡಿದ್ದೀನಿ. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಜೋಡಿಯ ಮಾಸ್ಟರ್‌ ಶೆಫ್‌, ಇಡೀ ಭಾರತ ಒಂದಡಿಗೆಯ  ಮನೆಯಲ್ಲಿ ಸೇರಿ  ವಿವಿಧತೆಯಲ್ಲಿ ಏಕತೆ ಎನ್ನುವುದನ್ನುಸಾಬೀತು ಮಾಡುತ್ತದೆ.ಇದರ ಹಿನ್ನಲೆ ಸಂಗಿತ ತುಂಬಾ ಮಧುರವಾಗಿದೆ. ( ಇಂಗ್ಲಿಷ್‌  ಸಿನಿಮಾಗಳಲ್ಲಿ ಇರುವಂತೆ).ಈ ಬಾರಿ ವಿಶಿಷ್ಟವಾಗಿದೆ ಶೆಫ್‌ ಗಳ ಕಲರವ..

 ಕಲರ್ಸ್‌ (ಹಿಂದಿ) Laughter Chefs – Unlimited Entertainment  ಎನ್ನುವ  ಸೆಲೆಬ್ರಿಟಿ ಅಡುಗೆ ಶೋ ಪ್ರಸಾರ ಆಗುತ್ತಿದೆ. ಹಿಂದಿ ಧಾರವಾಹಿ, ಸಿನಿಮಾ ಕಲಾವಿದರು ಇದರ ಮುಖ್ಯ ಆಕರ್ಷಣೆ ವೀಕ್ಷಕರಿಗೆ. ನನಗೆ ಹೆಚ್ಚು ಆಕರ್ಷಿತವಾಗಿರುವ ಅಂಶ ಇದರ ಮಾಸ್ಟರ್‌ ಹರ್ಪಾಲ್‌ ಸಿಂಗ್‌ ಸೊಖಿ ಮತ್ತು ಭಾರತಿ ಸಿಂಗ್.‌ಹರ್ಪಾಲ್‌ ಅವರ ಫ್ಯಾನ್‌ ದೊಡ್ಡ ಗುಂಪೇ ನಮ್ಮ ಮನೆಯಲ್ಲಿದೆ.ಭಾರತಿ ಸಿಂಗ್‌ ಟೈಮಿಂಗ್‌ ವಾಹ್‌ ಎಷ್ಟು ಪ್ರತಿಭಾವಂತೆ !

 

 

ಅಷ್ಟೇ....

 


ಮೊದಲೆಲ್ಲಾ ಯಾವುದೇ ಒಂದು ಕಾರ್ಯಕ್ರಮ ಇರಲಿ ಅದನ್ನು ವೀಕ್ಷಕರು ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿದ್ದರು. ಆಗ ವಾಹಿನಿಗಳ  ಸಂಖ್ಯೆ ಕಡಿಮೆ ಇತ್ತು  ಅಥ್ವಾ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರ ಆಗುತ್ತಿತ್ತು ಎಂದು  ಹೇಳಬಹುದಾದರೂ, ಎಲ್ಲಾ ಭಾಷೆಯ  ಬಹುತೇಕ ವಾಹಿನಿಗಳು ತಮ್ಮ ಕೈಲಾದಷ್ಟು ಉತ್ತಮ ಕಾರ್ಯಕ್ರಮ ನೀಡುವ ವಿಷಯದಲ್ಲಿ  ಸದಾ ಮಗ್ನವಾಗಿರುತ್ತವೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಲಿಟಿ ಶೋ ಗಳು , ಧಾರವಾಹಿಗಳು ಯಾವುದೇ ಇರಲಿ ಭಿನ್ನವಾಗಿರುತ್ತವೆ. ಅದೇರೀತಿ  ಕಲರ್ಸ್ ಕನ್ನಡ ವಾಹಿನಿಯಲ್ಲೂ ಸಹಿತ ( ನಾನು ಹೆಚ್ಚಾಗಿ ವೀಕ್ಷಿಸುವ ಕಾರ್ಯಕ್ರಮಗಳ  ಬಗ್ಗೆ  ಹೇಳುತ್ತಿದ್ದೀನಿ)‌

ಧಾರವಾಹಿಗಳ ವಿಷಯಕ್ಕೆ ಬರುವುದಾದರೆ  ಕೆಲವೊಂದು ಬದಲಾವಣೆಗಳು ಅವುಗಳ ವೀಕ್ಷಣೆ ಹೆಚ್ಚು ಮಾಡುವಂತೆ ಮಾಡಿದೆ. ಭಾಗ್ಯಲಕ್ಷ್ಮಿ (ಕಲರ್ಸ್‌ ) ದಿಲೀಪ್ರಾಜ್ಬಂದ ಮೇಲೆ ಅದರ ಖದರ್ಬೇರೆ  ಆಗಿದೆ..

ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ ಜೀ ಕನ್ನಡ ವಾಹಿನಿ ಲಕ್ಷ್ಮಿ ನಿವಾಸದ ಅಪ್ಪ ಮತ್ತು  ನಂದಗೋಕುಲ (ಕಲರ್ಸ್‌ ) ನಂದ  ಪಾತ್ರ ಅದ್ಭುತ. ಆದರೇ ಸ್ಟಾರ್ಸುವರ್ಣ ದಲ್ಲಿ ವಸುಧೈವ ಕುಟುಂಬ ದಲ್ಲಿ ಅವಿನಾಶ್‌  ಮಾತ್ರ ಫೋಟೊದಲ್ಲಿ ಕೂತಿದ್ದಾರೆ. ಬಹಳ ನಿರೀಕ್ಷೆ ಇತ್ತು

ಇನ್ನು ರಿಯಾಲಿಟಿ ಶೋ ಗಳು ಯಾವುದೇ ಆಗಿರಲಿ ಅದರ ತೀರ್ಪುಗಾರರು ವೀಕ್ಷಕರ ಮನದಲ್ಲಿ ನೆಲೆ ಊರಿರುತ್ತಾರೆ.   ಸ್ಪರ್ಧೆಗಳ ಸೀಜನ್‌ ಗಳಲ್ಲಿ  ಅದೇ ಜಡ್ಜ್ ಗಳು ಬರಬೇಕು ಮತ್ತು ಅವರೆಂದಿಗೂ  ಬೋರ್‌ ಹೊಡಿಸಲ್ಲ. ಒಂದು ಸೀಜನ್‌ ನಲ್ಲಿ ಹೆಚ್ಚು ಜನಪ್ರಿಯ ಆದಂತಹ ಯಾವುದೇ ಸ್ಫರ್ಧಿ ಮತ್ತೊಂದು ಸೀಜನ್‌ ನಲ್ಲಿ ಬಂದರೇ ನೋಡುವ ಉತ್ಸಾಹ ಇರುವುದಿಲ್ಲ.

ಸುದೀಪಾ ಇಲ್ದೆ ಇರುವ ಬಿಗ್‌ ಬಾಸ್‌ ಇಮ್ಯಾಜಿನೇಷನ್‌ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಸಚ್ಚಿ!

ಸುದೀಪಾ ನೀವು ಆರಂಭದಲ್ಲಿ ತೋರುವ ಉತ್ಸಾಹ ಕ್ರಮೇಪಿ ಕಡಿಮೆ ಮಾಡಿಕೊಳ್ಳುತ್ತೀರಿ. ಅದರಲ್ಲು ಸೋಶಿಯಲ್‌ ಮೀಡಿಯಾದ ಮಂದಿ ಕೊಡುವ ಕಮೇಂಟ್‌ ಗಳ ಬಗ್ಗೆ ಹೆಚ್ಚು ಪರ್ಸನಲೈಜ್‌ ಆಗ್ತೀರಿ ಅಂತ ಅನ್ನಿಸಿತು.  ಪ್ರತಿಭಾವಂತ, ಆಂತ್ರಪ್ರಿನಿಯರ್‌, ಕಲಾವಿದ, ಉತ್ತಮ ಪ್ರಜೆಂಟರ್‌ ಆಗಿರುವ ನೀವು ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ. ನಿಮಗಾಗಿ ಟೀವಿ ಮುಂದೆ ಕೂರುವ ಅಸಂಖ್ಯಾತ ಮಂದಿ ಇದ್ದಾರೆ.ಅವರಿಗೆ ನೀವು ನ್ಯಾಯ ಒದಗಿಸಿದರೆ ಸಾಕು ಅಲ್ವಾ?!ಪ್ರತಿವರ್ಷ  ನಿಮಗಾಗಿ ಕಾಯ್ತಾರೆ . ಈ ವರ್ಷ ಇರುವ ಟ್ರೆಂಡ್‌ ಮುಂದಿನ ವರ್ಷ ಅದೇ ಸ್ಫರ್ಧಿಗೆ ಇರಲ್ಲ. ಆದರೇ  ನೀವು, ಶಿವಣ್ಣ, ರಮೇಶ್‌,ಪ್ರೇಮ, ನಿಶ್ವಿಕ, ಅರ್ಜುನ್,ರಚಿತ, ಅನುಶ್ರೀ,ವಿಜಯ,ರಾಜೇಶ್‌,ಜಗ್ಗಣ್ಣ,ತಾರ ಅನುರಾಧ, ಭಟ್ರು,ತರುಣ್‌,ನಿರಂಜನ್…ಹೀಗೆ ನೀವು-ನಿಮ್ಮಂತಹವರು  ಬರುವುದನ್ನೇ ಕಾಯುವ ಅತಿ ದೊಡ್ಡ ಗುಂಪಿದೆ. ಅವರಿಗೆ ನ್ಯಾಯ ಒದಗಿಸುವ ಕಡೆಗಷ್ಟೇ ನಿಮ್ಮ ಆದ್ಯತೆ ಇರಲಿ.

ಹೇಳಬೇಕು ಅಂತ ಅನ್ನಿಸಿತು. .. ಅಷ್ಟೇ