ಹಾರೈಕೆ

Image result for red and blue color flowers
ಕಲರ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಕೆಲವು ಧಾರವಾಹಿಗಳನ್ನು ವೀಕ್ಷಿಸುತ್ತಿದ್ದೆ-ಆ ಪರಂಪರೆ ಹಾಗೆ ನಡೆದು ಬಂದಿದೆ. ಕೆಲವು ಧಾರವಾಹಿಗಳು ಆರಂಭದಲ್ಲಿ ಆಸಕ್ತಿ ಉಳಿಸಿದರೂ ಕ್ರಮೇಣ ಅವುಗಳು ತಮ್ಮ ಸ್ವಾದ ಕಳೆದುಕೊಂಡಿದ್ದಲ್ಲದೇ ನೋಡುವ ಆಸಕ್ತಿ ದೂರ ಮಾಡಿದೆ. ನಾನು ನೋಡುತ್ತಿದ್ದ ಧಾರವಾಹಿಗಳಲ್ಲಿ ಒಂದಷ್ಟು ಮುಗಿದೇ ಹೋಗಿದೆ.ಕೆಲವು ಧಾರವಾಹಿಗಳು ಅನೇಕ ವರ್ಷಗಳಿಂದ ಪ್ರಸಾರವಾಗುತ್ತಲೇ ಬಂದಿದೆ. ಅವುಗಳ ಮುಖ್ಯಪಾತ್ರಧಾರಿಗಳು ಬದಲಾದರೂ ಸಹಿತ ಅವುಗಳ ಪ್ರಸಾರದ ಸಂಭ್ರಮ ಮುಂದುವರಿದಿದೆ.   ಸಸುರಾಲ್ ಸಿಮರ್ ಕ ಧಾರವಾಹಿ ಈ ಲಿಸ್ಟ್ ನಲ್ಲಿ ಸೇರ್ಪಡೆಯಾಗಿದೆ.
ನಾನು ಈ ಧಾರವಾಹಿಯನ್ನು ಅದರ ಆರಂಭಕಾಲದಲ್ಲಿ ವೀಕ್ಷಿಸಿದ್ದೆ. ಪ್ರಾಯಶಃ 2011ರಲ್ಲಿ ಆರಂಭವಾದ ಈ ಧಾರವಾಹಿ ಪ್ರಸಾರ ಹಾಗೆ ಇದೆ.. ಇಂತಹ ಧಾರವಾಹಿಗಳು ಅನೇಕ ಕಥೆಗಳನ್ನು ತನ್ನಲ್ಲಿ ಹೀರಿಕೊಂಡು ಬಿಡುತ್ತದೆ. ಟೀಆರ್ಪಿಯು ಮೂಲಕಥೆಯ ಸ್ವಾದವನ್ನೇ ಬದಲಾಯಿಸಿಬಿಡುವಂತೆ ಮಾಡಿಬಿಡುತ್ತದೆ. ಏನೇ ಹೇಳಿ ಈ ರೀತಿಯ ದೀರ್ಘಾವಧಿಯಿಂದ ಕಲಾವಿದರು, ತಂತ್ರಜ್ಞರಿಗೆ ಹೆಚ್ಚು ಉಪಯೋಗ.. 

Image result for red and blue color flowers

@@ ಒಂದು ವಾರ ಹೆಚ್ಚಿಸಿ ಹ್ಯಾಪಿ ಬರ್ತಡೇ ಸಲ್ಮಾನ್ BOY :-)
ಹಿಂದಿ ಬಿಗ್ ಬಾಸ್ ವೀಕ್ಷಣೆಗೆ ಮುಖ್ಯ ಕಾರಣ 1.ಸಲ್ಮಾನ್,2. ವಿಭಿನ್ನ ಟಾಸ್ಕ್ ಗಳು ಮತ್ತು 3.ಸ್ಫರ್ಧಿ ಶಿಲ್ಪ ಶಿಂಧೆ.
ನನಗೆ ಸಲ್ಮಾನ್ BOY  ನಿರೂಪಣೆ ಎಷ್ಟು ಇಷ್ಟವೋ ಅದೇರೀತಿ ಭಿನ್ನ ಟಾಸ್ಕ್ ಗಳು ಸಹಿತ ಇಷ್ಟ. ಕೆಲವು ಬಾರಿ ಕೆಲವು ಸ್ಫರ್ಧಿಗಳು ಇಷ್ಟವಾಗ್ತಾರೆ.ಈ ಬಾರಿ ಶಿಲ್ಪ. 
ಸಾಮಾನ್ಯವಾಗಿ ಆಕೆಯನ್ನು ನಾಮಿನೇಟ್ ಮಾಡಿದ ಮಂದಿಯೇ ಹೆಚ್ಚು. ನೀವ್ ಬಿಡಿ ಜಾಸ್ತಿ ಫ್ಯಾನ್ ಗಳನ್ನು ಹೊಂದಿದ್ದೀರಿ ಎನ್ನುವ ಪ್ರತಿಸ್ಫರ್ಧಿಗಳ ಸಣ್ಣ ಕಹಿಮಾತುಗಳು,.................. ! ಇಂತಹ ಅನೇಕ ಬೇಸರಗಳನ್ನು ಯಶಸ್ವಿಯಾಗಿ ಎದುರಿಸಿ -ಎಲ್ಲವನ್ನೂ ಸಹಿಸಿಕೊಂಡು ಬಿಬಾ ಮನೆಯಲ್ಲಿ ಇರುವ ಹೆಣ್ಣುಮಗಳು.
ತಾನು ಸುಲಭವಾಗಿ ಗೆಲ್ಲಬಹುದಾದ ಕ್ಯಾಪ್ಟನ್ ಶಿಪ್ ನ್ನು ಹೀನಾಗೆ ಬಿಟ್ಟುಕೊಡುವುದು, ಆರ್ಸಿಯಂತಹ ಲೂಸ್ ಟಾಕ್ ಹೆಣ್ಣುಮಗಳಿಂದ ತೆಗಳಿಕೆ.... ಇವೆಲ್ಲದರ ನಡುವೆ ಮಾಸ್ಟರ್ ಮೈಂಡ್ ವಿಕಾಸ್ ಗುಪ್ತ ಎನ್ನುವ ಅಲೆಯನ್ನು ಯಶಸ್ವಿಯಾಗಿ ಎದುರಿಸುತ್ತಿರುವ ದಿಟ್ಟ ಹೆಣ್ಣುಮಗಳು ಅಂತಿಮವಾಗಿ ಗೆಲುವು ಸಾಧಿಸಬೇಕು ಎಂಬ ಹಾರೈಕೆ ನನ್ನ ಕಡೆಯಿಂದ... 

ಒಂಥರಾ ಥರಾ

Image result for orange color flowers images

  ಕಲರ್  ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ದಿವಾಕರ್ ಮತ್ತು ನಿವೇದಿತಾ ಗೌಡ ಅವರನ್ನು ಯಾವ ಕಾರಣಗಳಿಗಾಗಿ ಉಳಿಸಿಕೊಳ್ಳುತ್ತಿದ್ದಾರೋ ಗೊತ್ತೇ ಆಗ್ತಾ ಇಲ್ಲ. 
ಎವಿಕ್ಟ್ ಆದ ಬಳಿಕ ದಿವಾಕರ್ ಗೆ ಮನೆಗೆ ಹೋಗುವಂತೆ ಮಾಡದೇ ಇದ್ದುದು ಆಶ್ಚರ್ಯಕರ ಸಂಗತಿ. ಯಾವುದೇ ಸ್ಫರ್ಧೆ ಇರಲಿ ಆತ ಹೆಚ್ಚು ಇನ್ವಾಲ್ವ್ ಆಗದೆ ಮೇಲ್ಮೇಲೆ  ಮನೋರಂಜನೆಯ ಹೆಸರಲ್ಲಿ  ಜಾಣ ಮಾತುಗಳನ್ನು ಆಡುತ್ತಾ ಬಚಾವಾಗುತ್ತಾ ಬಂದಿದ್ದರು. ನನಗೆ ಅನ್ನಿಸಿದ ಪ್ರಕಾರ ಅಂತಿಮ ಸುತ್ತಿಗೆ ಇರಬೇಕಾದ ಅರ್ಹ ಸ್ಫರ್ಧಿ ಖಂಡಿತಾ ಅಲ್ಲವೇ ಅಲ್ಲ.
ಕೂಗೋ-ಕಿರುಚಿಯೋ ಒಟ್ಟಾರೆ ತಮ್ಮ ಇರುವಿಕೆ ಮತ್ತು ಭಾಗವಹಿಸುವಿಕೆಯ ವಿಷಯದಲ್ಲಿ ಸದಾ ಮುಂದಿರುವ ಸಮೀರ್ ಗಿಂತ ಈತ ಹೆಚ್ಚು ಬೇಕಾಗಿದ್ದು ಕೆಲವು ಸ್ಫರ್ಧಿಗಳಿಗೆ. ಪ್ರಾಯಶಃ ಸಮೀರನ ಮೇಲಿನ ಅಸಹನೆಯನ್ನು ದಿವಾಕರ್ ನ್ನು ಹೊಗಳುವುದರ ಮೂಲಕ ಹೊರ ಹಾಕ್ತಾ ಇದ್ರೂ ಅಂತ ಅನ್ನಿಸುತ್ತೆ. 
ದಿವಾಕರ್- ನಿವೇದಿತಾರನ್ನು ಇಷ್ಟುಕಾಲ ಬಿಬಾ ಮನೆಯಲ್ಲಿ ಇರಗೊಡುವುದಕ್ಕಿಂತ ಆರಂಭದಲ್ಲಿ ಹೊರಹೋದ ಮೇಘಾ ಮತ್ತು ಸುಮಾ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದಿದ್ದಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು ಅಲ್ವೇ?

@@ ಯಾಕೋ ಈ ಬಾರಿ ಬಿಬಾ ಮನೆಯ ವಾಸ್ತು ಸರಿಯಾಗಿರಲಿಲ್ಲ ಅಂತ ಕಾಣುತ್ತದೆ. ವೈಲ್ಡ್ ಕಾರ್ಡ್ ಎಂಟ್ರಿಯಾದ ಮೂರು ಹೆಣ್ಣುಮಕ್ಕಳು ಪಾಪ ಬೇರೆ ಬೇರೆ ಕಾರಣಗಳಿಂದ ಹೊರಹೋಗುವಂತಾಯಿತು. 
Image result for red flower images
@ಕಿಚ್ಚಾ  ಸುದೀಪಾ ಆಲೂಗಡ್ಡೆಯನ್ನು  ತರಕಾರಿಗಳ ಚಕ್ರವರ್ತಿ ಅಂತ ಕರೀತಾರೆ ಉತ್ತರಭಾರತೀಯರು ಗೊತ್ತಾ ?
ಯಾಕೇಂದ್ರೆ ಎಲ್ಲಾ ಕಾಲದಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಸಹಿತ ಹೊಂದುವ ತರಕಾರಿ ಇದು.ನನಗೂ ಆಲೂಗಡ್ಡೆಯ ಅಡುಗೆಗಳು ಮಾಡೋಕೆ ಗೊತ್ತು :-)
ಕಿಚ್ಚಾ ನಿಮ್ಮ ಕಿಚನ್ ಟೈಮ್ ನಲ್ಲಿ ಬರುವ ಅತಿಥಿಗಳು, ಅವರ ಮಾತುಗಳು, ಅನುಭವಗಳು ಎಲ್ಲವೂ ಚಂದಚಂದ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆಯ ಕಿಚನ್ ಟೈಮ್, ಸಮಯಕ್ಕೆ ತಕ್ಕ ಹಾಡುಗಳು ಎಲ್ಲವೂ ಇಷ್ಟವಾಗಿತ್ತು-ಆಯ್ತು..ಹೇಗೇಂದ್ರೆ ಆಹಾ ಒಂಥರಾ ಥರಾ.... :-)

ನೆನಪಿಗೆ ಬರಲಿಲ್ಲ?

Image result for orange color flowers images
ಬಿಗ್ ಬಾಸ್  ಬಂದ ಕನ್ನಡದ ಪ್ರಸಿದ್ಧ ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್ ಅವರ  ಸಂದರ್ಶನ- ನೇರ ಫೋನ್ ಇನ್  ಕಾರ್ಯಕ್ರಮ  ಪಬ್ಲಿಕ್  ವಾಹಿನಿಯಲ್ಲಿ  ಪ್ರಸಾರವಾಯ್ತು . ಅರವಿಂದ್  ಅವರು ಗುರೂಜಿಯವರನ್ನು ಸಂದರ್ಶಿಸಿದ್ದು. ಒಳ್ಳೆಯ ಮಾತುಗಾರರು ಜಯಶ್ರಿಯಿನಿವಾಸನ್ . ಒಟ್ಟಾರೆ ನನಗೆ ಆ ಸಂದರ್ಶನ ನೋಡಿದ ಬಳಿಕ ಗುರೂಜಿಗೆ ಒಂದೆರಡು  ಮಾತು ಹೇಳಬೇಕು ಅಂತ ಅನ್ನಿಸಿದೆ.

 ನ್ಯೂಮರಾಲಜಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ನಿಮಗೆ ನಿಮ್ಮ ಪ್ರತಿಭೆಯೇ ಸಾಟಿ ವಿನಃ ಮತ್ಯಾವುದೂ ಅಲ್ಲ, ಆದರೂ ಸಹಿತ ನೀವು ಬಿಗ್ ಬಾಸ್ ಮನೆಯಲ್ಲಿ  ನಿಮಗೇ ಅರಿಯದಂತೆ ಕೀಳಿರಿಮೆ, ಹೋಲಿಕೆಯ ವಿಷವರ್ತುಲಕ್ಕೆ ಸಿಕ್ಕಿ ಹಾಕಿಕೊಂಡ್ರಿ. ಆ ಮೂಲಕ ನಿಮ್ಮ ಸಂಖ್ಯೆಗಳು ನಿಮಗೆ ಕೈಕೊಡ್ತು. ದಿವಾಕರ್ ರಂತಹ ಅತಿ ಸಾಧಾರಣ ವ್ಯಕ್ತಿತ್ವದವರಿಗೆ  ತಾವೇನು ಮಾತನಾಡುತ್ತಿದ್ದೇವೆ ಎನ್ನುವುದರ ಅರಿವು ಇರುವುದಿಲ್ಲ. ಮಾತು ಮುಗಿಸಿದ ಬಳಿಕ ಅಮಾಯಾಕತ್ವದ ಮುಖವಾಡ ಹಾಕಿಕೊಂಡು ತಮಗೆ ಗೊತ್ತೇ ಆಗಲಿಲ್ಲ, ತಾವು ಬೇಕೂಂತ ಹೀಗೆ ಹೇಳಲಿಲ್ಲ ಅಂತ ತಿಪ್ಪೆ ಸಾರಿಸಿದ ಕೆಲಸ ಮಾಡಿಬಿಡ್ತಾರೆ. ಆದರೆ ಇಷ್ಟೆಲ್ಲಾ ಅನುಭವ, ನಿಮ್ಮ ಪಾಂಡಿತ್ಯ  ಈ ಅಂಶದ ಅರಿವು ಮಾಡಲಿಲ್ಲವೇಕೆ?ಅದಕ್ಕೆ ಕಾರಣ ನಿಮ್ಮ ದ್ವಂದ್ವ ಗುಣ ಅಷ್ಟೇ. ಗುರೂಜಿ ಒಂದು ಸಂಗತಿ ತಿಳಿದುಕೊಳ್ಳಿ ನಿಮ್ಮನ್ನು ಹೆಚ್ಚು ಇಷ್ಟ ಪಡುವ ಮಂದಿ  ಎಂದಿಗೂ  ನಿಮ್ಮ  ಗೌರವ ಹೊಂದೇ ಇರ್ತಾರೆ. ನಿಮಗ್ಯಾಕೆ ಆ ಅಂಶ ಬಿಬಾಮನೆಯಲ್ಲಿ ನೆನಪಿಗೆ ಬರಲಿಲ್ಲ? 
ಗುರೂಜಿ ನಿಮ್ಮ ಹೆಸರು ಬದಲಾವಣೆ ಮಾಡಿದರ್ಯಾರಿಗೂ ನಿಮ್ಮ ವ್ಯಕ್ತಿತ್ವ- ಪಾಂಡಿತ್ಯ ಬದಲಾಯಿಸೋಕೆ ಸಾಧ್ಯವಿಲ್ಲವಲ್ಲ..ತಾನೆ ?! 
 ನಿಮಗಾಗಿ ಅಪಾರ ಸಂಖ್ಯೆಯ ಜನರು ಕಾದಿದ್ದಾರೆ. ಅದೇ ಅಲ್ವೇ ನಿಮ್ಮ ಬದುಕಿನ ಸಂತೋಷ :-)


ಅರ್ಥವಾಗಬೇಕು

Image result for blue color flowers images

ಇತ್ತೀಚೆಗೆ ನ್ಯೂಸ್  18 ನಲ್ಲಿ ಶಿರಡಿ ಸಾಯಿ ಬಾಬಾ ಅವರ ಬಗ್ಗೆ ಒಂದು ಕಾರ್ಯಕ್ರಮ ವೀಕ್ಷಿಸಿದೆ. ವಿಶ್ವದ ಅಪಾರವಾದ ಭಕ್ತವೃಂದದಲ್ಲಿ ನಾನೂ ಸಹ ಒಬ್ಬಳು. ಬಾಬಾ ಅವರ ಜನ್ಮ, ಪವಾಡ, ಅವರ ಸಹವರ್ತಿಗಳ ಬಗೆಗಿನ ಮಾಹಿತಿ ಎಲ್ಲವೂ ಸಹ ಸರಳವಾಗಿ ಕಡಿಮೆ ಸಮಯದಲ್ಲಿ ಮನಮುಟ್ಟುವಂತೆ ಉತ್ತಮ ಭಾಷೆಯ ಮೂಲಕ ಆ ಕಾರ್ಯಕ್ರಮದ ನಿರೂಪಕಿ ತಿಳಿಸುತ್ತಿದ್ದರು.ಇದರ ಹಿನ್ನೆಲೆ ಧ್ವನಿಯ ನಿರೂಪಕಿ ಸಹ ಅತ್ಯುತ್ತಮ ರೀತಿಯಲ್ಲಿ ವಿವರಣೆ  ನೀಡುತ್ತಿದ್ದರು.  ಈ ವಾಹಿನಿಯಲ್ಲಿ ನನ್ನನ್ನು ಸೆಳೆದ ಅಂಶ ಇದಾಗಿದೆ. ವಾರ್ತೆ ಓದುವುದಿರಲಿ  ಅಥವಾ ಬೇರಿನ್ಯಾವುದೇ ಕಾರ್ಯಕ್ರಮವಾಗಿರಲಿ  ತಿಳಿಸುವ- ಪ್ರಸ್ತುತ ಪಡಿಸುವ  ಸಂಗತಿಗಳು ಅರ್ಥವಾಗಬೇಕು, ಮನ ಸೆಳೆಯಬೇಕು. ಬಹಳಷ್ಟು ವಾಹಿನಿಗಳು ಈ ಪ್ರಮುಖ ಅಂಶವನ್ನೇ ಮರೆತು ಬಿಡುತ್ತದೆ. 
Image result for blue color flowers images
ನಿನ್ನೆ ಇದೇ  ವಾಹಿನಿಯಲ್ಲಿ ವಾರ್ತೆಗಳನ್ನು ವೀಕ್ಷಿಸುವಾಗ ಒಂದು ಸುದ್ದಿ ಗಮನ ಸೆಳೆಯಿತು. ಮಂಗಳೂರಿನಲ್ಲಿ ಸಮಾಜಸೇವರೊಬ್ಬರು ಅಂಗಡಿಯವರು- ಮನೆಯವರುಗಳು ರಸ್ತೆಯಲ್ಲಿ ಕಸ ಬಿಸಾಡಿದರೆ ಅವರ ಕಸವನ್ನು ಅವರ ಮನೆ- ಸುರಿಯುವ ಅಭಿಯಾನದಲ್ಲಿ ಇದ್ದಾರಂತೆ. ಒಳ್ಳೆ ಸಂಗತಿ . ಬಡಿಗೆ ಪೆಟ್ಟು ಬೀಳುವ ತನಕ ಬದಲಾಗಲ್ಲ ಎನ್ನುವ ಮನಸ್ಥಿತಿಯವರನ್ನು ದಾರಿಗೆ ತರಲು ಇದು  ಸರಿಯಾದ ಮಾರ್ಗವಾಗಿದೆ. 

ಶುಭೋದಯ ಕರ್ನಾಟಕ

Image result for blue color flowers images

ಚಂದದ ವಾಹಿನಿ ಚಂದನ ವಾಹಿನಿ ಅಂತ ಹೇಳ ಬಹುದು. ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾದ ಏಕೈಕ ವಾಹಿನಿ ಇದು.ಯಾಕೇಂದ್ರೆ  ಯಾವುದೇ ವಾಹಿನಿಗಳಾಗಿರಲಿ ಅದರಲ್ಲಿ ಒಂದಲ್ಲ ಒಂದು ರೀತಿಯ ಮನಕ್ಕೆ ಆಹ್ಲಾದ ನೀಡದ ಕಾರ್ಯಕ್ರಮ ಇದ್ದೇ ಇರುತ್ತದೆ. ಮನೆಮಂದಿ ಎಲ್ಲರೂ   ಕುಳಿತು ನೋಡಲು ಸಾಧ್ಯವಾಗದೆ ಇರುವಂತಹ  ಪ್ರೋಗ್ರಾಮ್ಗಳಿರುತ್ತವೆ. ಆದರೆ ಚಂದನ ವಾಹಿನಿ ಈ ಎಲ್ಲ ಅಂಶಗಳಿಂದ ಭಯಮುಕ್ತವಾಗಿದೆ. ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳನ್ನು  ನೀಡುತ್ತಾ ಬಂದಿದೆ.ಅವುಗಳಲ್ಲಿ ಶುಭೋದಯ ಕರ್ನಾಟಕ ಸಹಿತ ಒಂದಾಗಿದೆ.

 ಮುಂಜಾನೆ ಸುಮಾರು ಎಂಟರಿಂದ ಒಂಬತ್ತು ಗಂಟೆಗೆ ಸರಿಯಾಗಿ ಪ್ರಸಾರವಾಗುವ ಸಾಧಕರ ಸಂದರ್ಶನದ ಕಾರ್ಯಕ್ರಮ ಇದಾಗಿದೆ. ನಾನು ಇತ್ತೀಚೆಗೆ ನಟಿ ಅನುಪ್ರಭಾಕರ್ ಅವರ ಸಂದರ್ಶನ ನೋಡಿದೆ.. ಚಂದವಿತ್ತು. ಶುಭೋದಯ ಕರ್ನಾಟಕದಲ್ಲಿ  ಸಂದರ್ಶನ ಮಾಡುವವರ  ಭಾಷೆ, ನಿರೂಪಣೆ, ಮಾತಿನ ಶೈಲಿ ಎಲ್ಲವೂ ಚಂದ.  

 ಬೆಳಿಗ್ಗೆ ಪ್ರಸಾರವಾಗುವ ಕಾರ್ಯಕ್ರಮವಾದ ಕಾರಣ ಮಧ್ಯಾಹ್ನ ರೀ ಟೆಲಿಕಾಸ್ಟ್ ಮಾಡ್ತಾರಾ ಎನ್ನುವ ಬಗ್ಗೆ ಗೊಂದಲವಿದೆ. ಆದರೆ ಅದರಲ್ಲಿ ಬರುವ -ಬಂದಿರುವ ಸಂದರ್ಶಕರ   ಅನುಭವದ ಮಾತುಗಳನ್ನು ಕೇಳುವಾಗ ಇದು ಪುನರ್  ಪ್ರಸಾರವಾದರೆ ಒಳ್ಳೆಯದು . ಸಾಕಷ್ಟು ವೀಕ್ಷಕರಿಗೆ ಮುಂಜಾನೆಯು  ಅತ್ಯಂತ ಗಡಿಬಿಡಿಯ ಸಮಯವಾಗಿರುತ್ತದೆ.. 

Image result for blue color flowers images
@@ ಈ ವಾಹಿನಿಯ ಮತ್ತೊಂದು ಆಕರ್ಷಣೆ ಅಂದ್ರೆ ಮಧುರಮಧುರವೀ ಮಂಜುಳಗಾನ. ಹಳೆಯ ಚಿತ್ರಗೀತೆಗಳ, ದೇಶಭಕ್ತಿ,ಭಾವ ಗೀತೆ,ದೇವರನಾಮಗಳು ಹೀಗೆ ಸಿನಿಮಾಗಳ ಜನಪ್ರಿಯ ಗೀತೆಗಳ  ಅಪರೂಪದ ಸಂಗಮ, ಸಿನಿಸಂಗೀತ ಪ್ರಿಯರಿಗೆ  ಸಂತಸದ ಕ್ಷಣ. ಈ ಕಾರ್ಯಕ್ರಮದಲ್ಲಿ ದೂರದರ್ಶನದ ಹೆಡ್ಡು  ಮಹೇಶ್ ಜೋಶಿ ಅವರ ಗಾನ ಸುಧೆ ಇರಲೇ ಬೇಕು. ಈ ಬಗ್ಗೆ  ವೀಕ್ಷಕರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಏನು ಅಂತ ನಾನು ಹೇಳಲ್ಲ ಸರ್ ..ನಿಮ್ಮ ಉತ್ಸಾಹಕ್ಕೆ ನಮ್ಮ ನಮೋ ನಮಃ