ಒಂಥರಾ ಥರಾ

Image result for orange color flowers images

  ಕಲರ್  ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ದಿವಾಕರ್ ಮತ್ತು ನಿವೇದಿತಾ ಗೌಡ ಅವರನ್ನು ಯಾವ ಕಾರಣಗಳಿಗಾಗಿ ಉಳಿಸಿಕೊಳ್ಳುತ್ತಿದ್ದಾರೋ ಗೊತ್ತೇ ಆಗ್ತಾ ಇಲ್ಲ. 
ಎವಿಕ್ಟ್ ಆದ ಬಳಿಕ ದಿವಾಕರ್ ಗೆ ಮನೆಗೆ ಹೋಗುವಂತೆ ಮಾಡದೇ ಇದ್ದುದು ಆಶ್ಚರ್ಯಕರ ಸಂಗತಿ. ಯಾವುದೇ ಸ್ಫರ್ಧೆ ಇರಲಿ ಆತ ಹೆಚ್ಚು ಇನ್ವಾಲ್ವ್ ಆಗದೆ ಮೇಲ್ಮೇಲೆ  ಮನೋರಂಜನೆಯ ಹೆಸರಲ್ಲಿ  ಜಾಣ ಮಾತುಗಳನ್ನು ಆಡುತ್ತಾ ಬಚಾವಾಗುತ್ತಾ ಬಂದಿದ್ದರು. ನನಗೆ ಅನ್ನಿಸಿದ ಪ್ರಕಾರ ಅಂತಿಮ ಸುತ್ತಿಗೆ ಇರಬೇಕಾದ ಅರ್ಹ ಸ್ಫರ್ಧಿ ಖಂಡಿತಾ ಅಲ್ಲವೇ ಅಲ್ಲ.
ಕೂಗೋ-ಕಿರುಚಿಯೋ ಒಟ್ಟಾರೆ ತಮ್ಮ ಇರುವಿಕೆ ಮತ್ತು ಭಾಗವಹಿಸುವಿಕೆಯ ವಿಷಯದಲ್ಲಿ ಸದಾ ಮುಂದಿರುವ ಸಮೀರ್ ಗಿಂತ ಈತ ಹೆಚ್ಚು ಬೇಕಾಗಿದ್ದು ಕೆಲವು ಸ್ಫರ್ಧಿಗಳಿಗೆ. ಪ್ರಾಯಶಃ ಸಮೀರನ ಮೇಲಿನ ಅಸಹನೆಯನ್ನು ದಿವಾಕರ್ ನ್ನು ಹೊಗಳುವುದರ ಮೂಲಕ ಹೊರ ಹಾಕ್ತಾ ಇದ್ರೂ ಅಂತ ಅನ್ನಿಸುತ್ತೆ. 
ದಿವಾಕರ್- ನಿವೇದಿತಾರನ್ನು ಇಷ್ಟುಕಾಲ ಬಿಬಾ ಮನೆಯಲ್ಲಿ ಇರಗೊಡುವುದಕ್ಕಿಂತ ಆರಂಭದಲ್ಲಿ ಹೊರಹೋದ ಮೇಘಾ ಮತ್ತು ಸುಮಾ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದಿದ್ದಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು ಅಲ್ವೇ?

@@ ಯಾಕೋ ಈ ಬಾರಿ ಬಿಬಾ ಮನೆಯ ವಾಸ್ತು ಸರಿಯಾಗಿರಲಿಲ್ಲ ಅಂತ ಕಾಣುತ್ತದೆ. ವೈಲ್ಡ್ ಕಾರ್ಡ್ ಎಂಟ್ರಿಯಾದ ಮೂರು ಹೆಣ್ಣುಮಕ್ಕಳು ಪಾಪ ಬೇರೆ ಬೇರೆ ಕಾರಣಗಳಿಂದ ಹೊರಹೋಗುವಂತಾಯಿತು. 
Image result for red flower images
@ಕಿಚ್ಚಾ  ಸುದೀಪಾ ಆಲೂಗಡ್ಡೆಯನ್ನು  ತರಕಾರಿಗಳ ಚಕ್ರವರ್ತಿ ಅಂತ ಕರೀತಾರೆ ಉತ್ತರಭಾರತೀಯರು ಗೊತ್ತಾ ?
ಯಾಕೇಂದ್ರೆ ಎಲ್ಲಾ ಕಾಲದಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಸಹಿತ ಹೊಂದುವ ತರಕಾರಿ ಇದು.ನನಗೂ ಆಲೂಗಡ್ಡೆಯ ಅಡುಗೆಗಳು ಮಾಡೋಕೆ ಗೊತ್ತು :-)
ಕಿಚ್ಚಾ ನಿಮ್ಮ ಕಿಚನ್ ಟೈಮ್ ನಲ್ಲಿ ಬರುವ ಅತಿಥಿಗಳು, ಅವರ ಮಾತುಗಳು, ಅನುಭವಗಳು ಎಲ್ಲವೂ ಚಂದಚಂದ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆಯ ಕಿಚನ್ ಟೈಮ್, ಸಮಯಕ್ಕೆ ತಕ್ಕ ಹಾಡುಗಳು ಎಲ್ಲವೂ ಇಷ್ಟವಾಗಿತ್ತು-ಆಯ್ತು..ಹೇಗೇಂದ್ರೆ ಆಹಾ ಒಂಥರಾ ಥರಾ.... :-)

No comments: