ಸಾಕ್ಷಿ..ಸಾಕ್ಷಿ!






ಕೆಲವು ಕಾರ್ಯಕ್ರಮಗಳು ಎಷ್ಟು ಖುಷಿ ಕೊಡುತ್ತದೆಯೋ ಅಷ್ಟೇ ಖುಷಿ ನೀಡುತ್ತಾರೆ ಅವುಗಳ ನಿರೂಪಕರು. ನನ್ನನ್ನು ಅನೇಕ ನಿರೂಪಕರು ಆಕರ್ಷಿಸಿದ್ದಾರೆ, ಅದರಲ್ಲಿ ಅಮಿತಾಬ್ ಬಚ್ಚನ್, ಎಸ್ ಪಿ ಬಾಲ ಸುಬ್ರಮಣ್ಯಂ , ಸಲ್ಮಾನ್ ಖಾನ್, ಖುಷ್ ಬೂ ಹೀಗೆ ಪಟ್ಟಿ ದೊಡ್ಡದಿದೆ.







ಅಮಿತಾಬ್ ಬಚ್ಚನ್ ಅವರು ನೆನಪಿಗೆ ಬಂದಾಗ ನನಗೆ ಹೆಚ್ಚು ರೋಮಾಂಚಿತ ಮತ್ತು  ಭಾವುಕತೆ ಉಂಟಾಗುವುದು ಅವರ ಪಾ ಚಿತ್ರದ ನಟನೆಯ ಬಗ್ಗೆ. ಆ ಚಿತ್ರ ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ. ಒಬ್ಬ ಕಲಾವಿದ ಪ್ರೇಕ್ಷಕರ ಮನದಲ್ಲಿ ಹೇಗೆ ಜೀವಂತ ಆಗಿರುತ್ತಾರೆ ಎನ್ನುವುದಕ್ಕೆ ಇಂತಹ ಪಾತ್ರಗಳೇ ಸಾಕ್ಷಿ.
ಸೋನಿ ಟೀವಿಯಲ್ಲಿ ಪ್ರಸಾರ ಆಗುವ ಅದೇ ರೀತಿ ಅವರ   ರಿಯಾಲಿಟಿ ಶೋ ಕೌನ್ ಬನೇಗಾ ಸಹ ಅಷ್ಟೇ ಆಪ್ಯಾಯ ಅನ್ನಿಸೋದು ಅವರ ಮಾತಿನ ಶೈಲಿ ಮತ್ತು ಎಂಜಾಯ್ ಮಾಡುವ ರೀತಿಯಿಂದ. ಕಲಿಯುವವರಿಗೆ ಸದಾ ಪಾಠಶಾಲೆಯಾಗಿ ಇರ್ತಾರೆ ಇಂತಹ ವ್ಯಕ್ತಿತ್ವಗಳು.
 





ಸಲ್ಮಾನ್ ಖಾನ್ ನಿರೂಪಣೆ ಸಹ ನನಗೆ ಸಕತ್ ಇಷ್ಟ. ಸಲ್ಮಾನ್  ವಿರುದ್ಧ ಯಾರಾದರೂ ಮಾತನಾಡಿದರೆ ಜಗಳ ಆಡುವಷ್ಟು ಜೋರಾಗಿದೆ ಹೆಣ್ಣು ಮಕ್ಕಳ ಟೀಂ. ಅಂತಹ ಟೀಮ್ ಒಂದರಲ್ಲಿ ನಾನೂ ಸಹ ಮೆಂಬರ್ .
 
ಕಲರ್ ವಾಹಿನಿಯ ಬಿಗ್ ಬಾಸ್  ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಖುಷಿ ಕೊಡುವುದು ಮಿ.ಸಲ್ಮಾನ್  boy.  ಇತ್ತೀಚಿನ ದಿನಗಳಲ್ಲಿ ಕಾಜೊಲ್ ತಂಗಿ ತನೀಶ ಮತ್ತು ಅಪೂರ್ವ ತುಂಬಾ ಇಷ್ಟ ಆದರು. ಇವರಿಬ್ಬರೂ  ಎಷ್ಟು ಡಿಗ್ನಿಫೈಡ್  ಅನ್ನುವುದು ಅವರ ವರ್ತನೆಗಳಿಂದ ತಿಳಿದು ಬರ್ತಾ ಇತ್ತು. ಕೆಲವು ಸಂಗತಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಅಂಶಗಳು ಆಕೆಯನ್ನು ಇಷ್ಟಪಡುವಂತೆ ಮಾಡುತ್ತದೆ. ಏನೇ ಆದರೂ ಕೆಲವು ಸನ್ನಿವೇಶಗಳು ಮನುಷ್ಯನ ಅಸಲೀಯತ್ತು ಹೊರಗೆ ಹಾಕುತ್ತದೆ.

ಕಾಲರ್ ಮಹಿಮೆ !




ಕೆಲಸ ಮಾಡಲೇ ಬಾರದು ಅಂತ ನಾನು ಯಾವತ್ತೂ ಅಂದುಕೊಳ್ಳಲ್ಲ ಆದರೇ ಹಾಗಂತ ಡಾಂಕಿ ವರ್ಕ್ ಮಾಡೋದು ಅಂದ್ರೇನು? ಛೆ ! ಇತ್ತೀಚೆಗೆ ನನ್ನ ಬಗ್ಗೆ ನನಗೇ ಅಯ್ಯೋ ಅನ್ನುವಂತೆ ಆಗಿದೆ. ಯಾಕೆ ಪ್ರಲಾಪ ಅಂದ್ರೆ ನನಗೆ ಬ್ಲಾಗಿಂಗ್ ಮಾಡೋದು ತುಂಬಾ ಖುಷಿ ಕೊಡುವ ಕೆಲಸ. ಆದರೆ ಅದೆಷ್ಟು ಕೆಲಸ ಅಂದ್ರೆ ಆಸೆಗಳಿಗೆ ಎಳ್ಳು ನೀರು ಬಿಡೋ ಹಾಗೆ ಆಗಿದೆ.

ಇತ್ತೀಚೆಗೆ ನಾನು ವೀಕ್ಷಿಸಿದ ಕಾರ್ಯಕ್ರಮಗಳಲ್ಲಿ ಅದೂ ತುಂಬಾ ಮನಸೆಳೆದ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಹಿಂದೂಸ್ಥಾನಿ ಸಂಗೀತ ರಿಯಾಲಿಟಿ ಶೋ. ಕಾರ್ನಾಟಿಕ್ ರುಚಿಯನ್ನು ಮಾತ್ರ ಕಂಡಿರುವ ನನ್ನಂತಹವರಿಗೆ ಈ ಶೋ ತುಂಬಾ ಭಿನ್ನ ಅನ್ನಿಸುತ್ತೆ.

  ಹಿಂದೆ ಪೇಪರ್ ನಲ್ಲಿ ರಿವ್ಯೂ ಬರೀತಾ ಇದ್ರಲ್ಲ ಮನೆಮಂದಿ ಎಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರ ಅನ್ನುವಂತೆ ಒಟ್ಟಿಗೆ ಮನೆಮಂದಿ ಎಲ್ಲಾ ನೋಡುವಂತಹ ಕಾರ್ಯಕ್ರಮ ಇದು ಎನ್ನ ಬಹುದು. ತೀರಾ ಕಷ್ಟ ಅರ್ಥ ಆಗೋಕೆ ತೀರಾ ಕಷ್ಟ ಅನ್ನಿಸಿದರೂ, ಸಂಗೀತ ಆಗಿದ್ದಕ್ಕೆ ಆ ಆಲಾಪ್ ಗಳು ಮನಕ್ಕೆ ಖುಷಿ ಅನ್ನಿಸುತ್ತೆ. ಗ್ಲಾಮರಸ್ ಹುಡುಗಿಗಿಂತ ಸಾಮಾನ್ಯ ಹೆಣ್ಣುಮಗಳಂತೆ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ ಈ ಕಾರ್ಯಕ್ರಮ.

ಸೋನಿವಾಹಿನಿಯಲ್ಲಿ ಕ್ರೈಮ್ ಪೆಟ್ರೋಲ್ ಧಾರವಾಹಿ ಸಕತ್ ಆಸಕ್ತಿದಾಯಕ. ಇದು ನೈಜ ಘಟನೆಗಳ ಆಧಾರಿತವಾಗಿದೆ. ಒಂದೊಂದು ಎಪಿಸೋಡ್ ವಿನೂತನ. ತುಂಬಾ ಆಸಕ್ತಿಯಿಂದ ಪ್ರತಿದಿನ ನೋಡದೇ ಇದ್ರೂ ವೀಕ್ಷಿಸಿದ  ಎಪಿಸೋಡ್ ಗಳನ್ನು ಆಸಕ್ತಿಯಿಂದ ನೋಡಿದ್ದೇನೆ.
 ತೆಲುಗು ವಾಹಿನಿ ಜೆಮಿನಿಯಲ್ಲಿ ಸೂಪರ್ ಕುಟುಂಬಂ ಅನ್ನುವ ಡ್ಯಾನ್ಸ್ ರಿಯಾಲಿಟಿ ಶೋ ಪ್ರಸಾರ ಆಗುತ್ತದೆ. ತುಂಬಾ ಚೆನ್ನಾಗಿರುತ್ತೆ. ಅದರಲ್ಲಿದ್ದ ತೀರ್ಪುಗಾರರಲ್ಲಿ ಒಬ್ಬರು ತುಂಬಾ ವಿಶೇಷ ಅನ್ನಿಸುತ್ತಾರೆ . ಯಾಕೆ ಗೊತ್ತಾ ಅವರು ತೀರ್ಪು ಹೇಳುವಾಗ ಕಾಲರ್ ಸರಿ ಮಾಡಿಕೊಳ್ತಾ ಇರ್ತಾರೆ. ಅಂದ್ರೆ ಅವರು ತಮ್ಮ ಶರ್ಟ್ ಕಾಲರ್  ಎತ್ತಿ ತೀರ್ಪು ಹೇಳ್ತಾರೆ ಅದನ್ನು ನೋಡುವಾಗ ಸಕತ್ ಮಜ ಕೊಡುತ್ತೆ.   ನಿಜ  ಇದು ರೀ ಟೆಲಿ ಕಾಸ್ಟ್ ಆಗುತ್ತಲ್ಲ ಆಗ ನಿಮಗೆ ಗೊತ್ತಾಗುತ್ತೆ ಕಾಲರ್ ಮಹಿಮೆ !