ಭಟ್ಟಿ ಇಳಿಸು!

Image result for blue color flowers
ಕನ್ನಡ ವಾಹಿನಿಗಳಲ್ಲಿ ಹಾಸ್ಯ ಕಾರ್ಯಕ್ರಮಗಳ ಬಗ್ಗೆ ಹೇಳೋದಾದರೆ   ಉದಯವಾಹಿನಿಯಲ್ಲಿ ಪ್ರಸಾರ ಆಗುವಂತಹ ಫ್ಯಾಮಿಲ್ಲಿ ನಂಬರ್ ಒನ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು.ಇದು ನನ್ನ ಅಭಿಪ್ರಾಯ  . ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ ಅಂದ್ರೆ ಜೀ ಟೀವಿಯಲ್ಲಿ ಪ್ರಸಾರ ಆಗ್ತಾ ಇರುವ ಶ್ರೀಮಾನ್ ಶ್ರೀಮತಿ ಹಾಸ್ಯ ಧಾರವಾಹಿ ಅಂತ ಹೆಸರನ್ನು ಗಳಿಸಿದೆ ಅಷ್ಟೇ, ತಿಳಿ ಹಾಸ್ಯವನ್ನು ಅದರಲ್ಲಿ ಜೋಡಿಸಿರುವುದು ಅಷ್ಟಾಗಿ ಕಂಡು  ಬಂದಿಲ್ಲ. ಅವರವರ ಭಾವಕ್ಕೆ ಅಂತ ತಿಳಿ ಬಹುದು, ಆದರೂ ಪ್ರೇಕ್ಷಕರಿಗೆ   ಖುಷಿ ಕೊಡುವುದಕ್ಕೆ ಅಗತ್ಯ ಇರುವ ಅಂಶಗಳು ಎಲ್ಲಿದ್ದರೆ ಅಲ್ಲಿ ಅವರು  ಗಮನ ನೀಡುತ್ತಾರೆ.
ಫ್ಯಾಮಿಲಿ ನಂಬರ್ ಒನ್ ಧಾರಾವಾಹಿಯಲ್ಲಿ ಪಾತ್ರಧಾರಿಗಳು ಅಪರೂಪದ ಪ್ರತಿಭೆಗಳು. ಟೆನಿಸ್ ಕೃಷ್ಣ, ಸುನೇತ್ರ ,ಪ್ರಕೃತಿ, ಮಂಜುಳಾ ಅಶೋಕ್ ಅಲ್ಲದೆ ಬೇರೆ ಯಾರೇ ಆಗಿರ ಬಹುದು ಪಾತ್ರವನ್ನು ಹಾಯಾಗಿ ಕರೆದುಕೊಂಡು ಹೋಗ್ತಾ ಇದ್ದಾರೆ.
ಹಾಸ್ಯ ಪಾತ್ರಧಾರಿಗಳು ತುಂಬಾ ಸ್ಮಾರ್ಟ್ ಆಗಿ, ವಿಶೇಷವಾಗಿ, ಸ್ಟೈಲೀಶ್ ಆಗಿ ಇರ ಬೇಕೆಂದೇನೂ ಇಲ್ಲ..ಅವರ ದೇಹಸಿರಿ ಹೇಗೆ ಇದ್ರೂ  ಪಾತ್ರಕ್ಕೆ ನೀಡುವ ಜೀವ ಬಹಳ ಮುಖ್ಯ..ನಾನು ಸಮಯ ಸಿಕ್ಕಾಗ ಈ ಧಾರವಾಹಿ ನೋಡಿದ್ದೇನೆ.. ಚಂದ ಇದೆ..

Image result for blue color flowers
@ & ಟೀವಿಯಲ್ಲಿ ಪ್ರಸಾರ ಆಗುವ ಭಾಬಿಜಿ ಘರ್ ಪರ್ ಹೈ ಧಾರಾವಾಹಿಯು ಈಗ ಸ್ವಲ್ಪ ದಾರಿ ತಪ್ಪಿದೆ. ಹಾಸ್ಯ ಧಾರವಾಹಿ ನಿಧಾನವಾಗಿ ಸಾಗುವ ತಿಳಿನೀರಿನಂತೆ ಇರ ಬೇಕು. ಒಟ್ಟಾರೆ ನೋಡುವುದಾದರೆ ಧಾರವಾಹಿ ಓಕೆ ಓಕೆ ಆಗಿದೆ. ಇಲ್ಲಿನ ಪಾತ್ರಧಾರಿಗಳಾದ ಶಿಲ್ಪಿ ಶಿಂಧೆ, ಆಸಿಫ್ ಶೇಖ್, ರೋಹಿತಾಶ್ವ್ ಗೌಡ್, ಸೌಮ್ಯ ಟಂಡನ್   ಅತಿಯಾಗಿ  ನಟಿಸದೆ ಆರಾಮವಾಗಿ ನಟಿಸುತ್ತಿದ್ದಾರೆ.ಆದರೆ ಪ್ರತಿದಿನ ನೀಡುವ ಕಥೆಯ ವಿಷಯದಲ್ಲಿ ಬರಹಗಾರ,ನಿರ್ದೇಶಕ ನಿಂತಲ್ಲೇ ನಿಂತಿದ್ದಾರೆ..
ಕನ್ನಡದಲ್ಲಿ ಇದೇ ಧಾರಾವಾಹಿಯು ಶ್ರೀಮಾನ್ ಶ್ರೀಮತಿ ರೂಪದಲ್ಲಿ ಬರ್ತಾ ಇದೆ. ಕೆಲವು ಅಂಶಗಳು ನೇಟಿವಿಟಿಗೆ   ತಕ್ಕಂತೆ ಬದಲಾಯಿಸಲು ಪ್ರಯತ್ನ ಮಾಡಿದರೂ ಸಹಿತ ಅಷ್ಟೊಂದು ವಿಶೇಷವಾಗಿಲ್ಲ.. ಯಾವುದೇ ಭಾಷೆ ಆಗಿರಲಿ ಮೂಲ ಭಾಷೆಯಲ್ಲಿ ತಯಾರಾದ ಇಂತಹ ಧಾರವಾಹಿ , ಕಥೆಯನ್ನು ಬರೆದವರು  ಕೆಲವು ಅಂಶಗಳನ್ನು ಅಲ್ಲಿನ ವಾತಾವರಣ   ತಲೆಯಲ್ಲಿ ಇಟ್ಟುಕೊಂಡು  ಬರೆದಿರುತ್ತಾರೆ. ಆದರೆ ಅದನ್ನೇ ಸ್ಥಳೀಯವಾಗಿ ಭಟ್ಟಿ ಇಳಿಸಲು ಹೋದರೆ ..... !

ಮಾರಿಬಿಡಿ... ;-)


ಕಳೆದ ಕೆಲವು ದಿನಗಳಿಂದ ನಮ್ಮೂರಲ್ಲಿ ಜಾತ್ರೆ. ಸಕತ್ ಖುಷಿ ಕೊಡ್ತು ನನಗೆ. ಜಾತ್ರೆ ಎಲ್ಲೇ ಆಗಲಿ ಅದರಲ್ಲೂ ಭಾರತದಲ್ಲಿ ಎಲ್ಲೇ ಆಗಲಿ , ಇಡಿ ಭಾರತೀಯರ ಮನಸ್ಥಿಗೆ ಅನುಗುಣವಾಗುವಂತೆ ಅಲ್ಲಿ ಅಂಗಡಿಗಳು ಬಂದಿರುತ್ತದೆ. ಆ ಅಂಗಡಿಗಳು ನಮ್ಮ ಭಾರತೀಯತೆಯನ್ನು ಎತ್ತಿ ತೋರುತ್ತದೆ. ನನಗೆ ಸ್ವಲ್ಪ ರಾಜಸ್ತಾನಿ ಶೈಲಿಯ  ಸರ ಬಳೆಗಳು, ಕಡಗಗಳು ಇಷ್ಟ. ಅಂತಹವು ಇಂತಹ ಜಾತ್ರೆಗಳಲ್ಲಿ ಸಿಗುತ್ತದೆ. ಬೆಂಗಳೂರು ಮಹಾನಗರದಲ್ಲಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿನೂತನವಾದ ಅನುಭವ.

ಬಿಗ್ ಬಾಸ್ ರಿಯಾಲಿಟಿ ಷೋ ಸಾಕಷ್ಟು   ಜನರಿಗೆ ಆಪ್ಯಾಯವಾದ ಕಾರ್ಯಕ್ರಮ. ಸ್ವಲ್ಪ ಜಾಸ್ತಿ ಓದಿದ್ದೀವಿ, ಸಕತ್ ಸಾಹಿತ್ಯ ಕಂಡಿದ್ದೀವಿ ಎನ್ನುವವರಿಗೆ ಅಷ್ಟೊಂದು ಇಷ್ಟವಾಗದ ಕಾರ್ಯಕ್ರಮ. ನನ್ನಂತಹ ಅತಿ ಸಾಧಾರಣ ಬರಹಗಾರರರು, ನನ್ನಂತಹ ಪುಡಿ ಪತ್ರಕರ್ತರಿಗೆ ಇಷ್ಟ ಆಗುವ ಕಾರ್ಯಕ್ರಮಗಳು ಅಂದ್ರೆ ಅಡಿಗೆ, ಫ್ಯಾಶನ್, ಬಿಗ್ ಬಾಸ್ ರಿಯಾಲಿಟಿ ಷೋ, ಮನಕ್ಕೆ ಮುದ ನೀಡುವ ಕಾರ್ಯಕ್ರಮಗಳು, ರಂಗೋಲಿ ಹಾಕುವುದು, ಗಾರ್ಡನಿಂಗ್, ಅಡುಗೆಯನ್ನು ಮಾಡುವುದು, ಸಾಮಾನ್ಯ ಜನತೆಗೆ ಅರ್ಥವಾಗುವ ರೀತಿಯಲ್ಲಿ ಬರೆಯುವುದು.. ಎಲ್ಲವನ್ನು ಅಬ್ಬೋ ಅನ್ನುವಂತೆ ನೋಡದೆ ಆಹಾ ಎಂದು ಆನಂದಿಸುವುದು .. ಹೀಗೆ ಹತ್ತು ಹಲವಾರು.
ಬಿಗ್ ಬಾಸ್ ರಿಯಾಲಿಟಿ ಷೋ ಯಾವ ಭಾಷೆ ಅನ್ನೋದು ಮುಖ್ಯವಲ್ಲ ಅದು ಯಾವ ರೀತಿಯ ಸಂದೇಶಗಳು, ಮನಸ್ಥಿತಿಗಳನ್ನು ಪ್ರಕಟ ಪಡಿಸುತ್ತೆ ಅನ್ನುವ ಅಂಶಕ್ಕೆ ಹೆಚ್ಚು ಬೆಲೆ ಕೊಡ್ತೀನಿ ನಾನು.
ಕಲಿಯೋ ಮನಸ್ಸಿದ್ದರೆ ಎಲ್ಲಾ ಅಂಶಗಳ ಮೂಲಕವೂ ಕಲಿಯ ಬಹುದಲ್ಲವೇ !

 ಬಿಗ್ ಬಾಸ್ ನಲ್ಲಿ ಈ ಬಾರಿ ಟಾಸ್ಕ್ ಮಜಾ ಕೊಡ್ತಾ ಇದೆ. ಆನಂದ್, ಶ್ರುತಿ ಮತ್ತು ಮಿತ್ರ  ಅವರು ಮೊದಲ ಸ್ಥಾನದಲ್ಲಿ ನಿಲ್ತಾರೆ  ಮನೋರಂಜನೆ ನೀಡುವ ವಿಷಯದಲ್ಲಿ. ಚಂದನ್ ಮತ್ತು ರೆಹಮಾನ್ ಸಹ ಇಷ್ಟ ಆಗ್ತಾರೆ ತಮ್ಮ ಇನ್ವಾಲ್ಮೆಂಟ್ ನಿಂದ.. ಪಾಪ ಗೌತಮಿ ಪಾತ್ರವನ್ನು ತುಂಬಾ ಸೀರಿಯಸ್ ಆಗಿ ತಗೊಂಡು ಜೈಲ್ ಭರೋ  ಚಳುವಳಿಯಲ್ಲಿ ಇರೋದ್ ನೋಡಿದ್ರೆ ಇನ್ನು ಮಾಗಬೇಕು ಆ ಹುಡುಗಿ ಅಂತ ಅನ್ನಿಸುತ್ತೆ.. ಸುನಾಮಿ , ಪೂzaa  ಕಥೆ ಬೋರ್ ಹೊಡಿತು ಬಿಡಿ.. ಚಂದನ್ ಆಕೆಯ ಬಗ್ಗೆ ಲೂಸ್ ಟಾಕ್ ಮಾಡಿದರು ಪೂzaa  ನೀಡಿದ ಶಿಕ್ಷೆ ಅತಿ ಅಸಹ್ಯ ಅನ್ನಿಸಿತು..ನಾವು ಕ್ಷಮಿಸಿ ನಮ್ಮ ವಿಶೇಷತೆ ತೋರಬೇಕು..
ಕೃತಿಕ ಮಾತ್ರ  ಅತ್ತೆ ಮೇಲೆ ಸದಾ ಚಾಡಿ ಹೇಳುವ ಸೊಸೆ ಮನಸ್ಥಿತಿ .
 ಎಲ್ಲಾ  ಓಕೆ ಆದರೆ ಒಂದು ಬಾರಿಯೂ ನಾಮಿನೇಟ್ ಆಗದೆ ಇರುವವರು ಬಿಗ್ ಬಾಸ್ ಮನೆಗೆ ಸರಿಯಾದ ಮೆಂಬರ್ ಅಲ್ಲ ಅಂತ ಎಲ್ಲರ   ಅಭಿಪ್ರಾಯ. ಕಾರಣ ಇಷ್ಟೇ ಹೊರ ಪ್ರಪಂಚಕ್ಕೆ ಹೆದರಿ ಅಲ್ಲಿರುವವರು ಪಾಪ ಯಾರೂ ನಿರ್ಧಾರ ತಗೋತಾ ಇಲ್ಲ.. ಆಟ ಅಂದ್ರೆ ಆಟ.. ಇಲ್ಲಿ ಎಲ್ಲರು ಒಂದೇ..
Image result for doubt
ಓಎಲ್ಎಕ್ಸ್ ನಲ್ಲಿ ಮಾರಿಬಿಡಿ ಇದು ಆರಂಭದಿಂದಲೂ ನಮಗೆಲ್ಲ ಮಜಾ ಕೊಡುವ ವಾಕ್ಯ.. ಯಾಕೆ ಅಂದ್ರೆ ಸಿಟ್ಟು ಬಂದಾಗ, ಕಿಂಡಲ್ ಮಾಡುವಾಗ  ಓಎಲ್ಎಕ್ಸ್ ನಲ್ಲಿ  ಮಾರಿಬಿಡಿ ..ಅನ್ನೋದು ಸಾಮಾನ್ಯ .  ಆದರೆ ಕಿಚ್ಚ  ಸುದೀಪ್ ನೀವು ಮತ್ತು ಅನಂತ್ ನಾಗ್ ಸಾರ್ ಅವರು  ನಟಿಸಿರುವ ಓಎಲ್ಎಕ್ಸ್ ಜಾಹೀರಾತಿನಲ್ಲಿ  ಅಷ್ಟು ಹಳೆ ಫೋನ್ ಅಷ್ಟೊಂದು ಫಂಕಿ ಹುಡುಗಿ ತಗೊತಾಳಾ ?.. ಈ ಜಾಹೀರಾತನ್ನು ಓಎಲ್ಎಕ್ಸ್ ನಲ್ಲಿ  ಮಾರಿಬಿಡಿ... ;-)
@ ಪಾಪ ನಮ್ಮ ಶಿವಣ್ಣ ಅಷ್ಟೊಂದು ಡೀಸೆಂಟ್ ಅವರಿಗೆ ಡಬ್ಬು ಡಬ್ಬು ಅಂತ ಹೇಳಿ ದಾರಿ ತಪ್ಪಿಸಿ ಮುದ್ದೆ ಸೋಪ್ಸಾರು  ಪ್ರೇಂಗೆ  ಟೆನ್ ಸನ್ ಮಾಡಿ ಬುಟ್ರೆ ಎಂಗೆ ?
@ ಅನಂತ್ ನಾಗ್ ಅವರ ಸಂದರ್ಶನ ಮಾಡಲು  ಎಷ್ಟೆಲ್ಲಾ  ಕಷ್ಟಪಟ್ರಿ. ಆ ಕಷ್ಟದಲ್ಲಿ ನೀವು ನಿಮ್ಮ ಕೂದಲಿಗೆ ಬ್ಯಾಂಡ್ ಹಾಕೋದನ್ನೇ ಮರೆತೇ ಬಿಟ್ಟಿರಲ್ಲ.. ಆ ರಬ್ಬರ್ ಬ್ಯಾಂಡನ್ನು  ಓಎಲ್ಎಕ್ಸ್ ನಲ್ಲಿ  ಮಾರಿ ಬಿಟ್ರ ;-)
(ಅನಂತ್ ನಾಗ್ ಮತ್ತು ಶಿವಣ್ಣ ನವರ  ಸಂದರ್ಶನಕ್ಕೆ ಥಮ್ಸ್ ಅಪ್  )

ವಿಭಿನ್ನ.



ಮೀಲೋ ಎವರು  ಕೋಟೀಶ್ವರುಡು ಮಾ ಟೀವಿಯಲ್ಲಿ ಮೂರನೇ ಅವತರಣಿಕೆ ಆರಂಭವಾಗಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುವ  ಇದು ಕೌನ್ ಬನೇಗಾ ತೆಲುಗು ಅವತರಣಿಕೆ. ಇದರಲ್ಲಿ ಅತ್ಯಂತ ಆಸಕ್ತಿಕರ ಅಂಶ ಎಂದರೆ ನಮ್ಮಂತಹ ಸ್ಪರ್ಧಿಗಳ ತಪ್ಪು ಉತ್ತರ ಮತ್ತು ಗ್ರೀಕು ವೀರುಡಾ ಎನ್ನುವ ಅಗ್ಗಳಿಕೆ ಮತ್ತು ತೆಲುಗು ಚಿತ್ರರಂಗದ ಮನ್ಮಥ ನಾಗಾರ್ಜುನ. ಕೇವಲ ಅವರ ಮಾರ್ವಲೆಸ್ ಸ್ಟೈಲ್ಸ್ ನಿಂದ ಮಾತ್ರವಲ್ಲ ಅವರ ಬಾಡಿ ಲಾಂಗ್ವೇಜ್, ಅವರ ಮಾತಿನ ಶೈಲಿ ಹಾಗು ಆ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿ ವಿಭಿನ್ನ.
ಇತ್ತೀಚಿಗೆ ಆ ಕಾರ್ಯಕ್ರಮದ ಮೂರನೇ ಅವತರಣಿಕೆ ಆರಂಭವಾಯಿತು. ಅದರಲ್ಲಿ ಕೆಲವು ಪ್ರಶ್ನೆಗಳು   ಸರಳವಾಗಿದ್ದರು ಉತ್ತರಿಸದ  ಸ್ಪರ್ಧಿಗಳ ಬಗ್ಗೆ ಅನುಕಂಪ ತೋರುತ್ತಾ  ಅವರ ಮನವನ್ನು ಆರಾಮ ಮಾಡಿ  ಹೆಚ್ಚು ಹೆಚ್ಚು ಗೆಲ್ಲುವಂತೆ ಮಾಡುವ ಪ್ರಯತ್ನದಲ್ಲಿದ್ದರು ನಾಗ್.
ಮೋಸ್ಟ್ ಸ್ಟೈಲೀಶ್  ಹೀರೋ ನಾಗ್ ಅವರ ಸಂದರ್ಶನ ಒಮ್ಮೆ ಈ ಟೀವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗ್ತಾ ಇತ್ತು. ಅದರಲ್ಲಿ ಅವರು ತಾವು ಚಿತ್ರರಂಗಕ್ಕೆ ಬಂದಾಗಿನ ಅನುಭವಗಳನ್ನು ಹೇಳುತ್ತಿದ್ದರು. ಪ್ರಸಿದ್ಧ ನಿರ್ದೇಶಕ ರಾಘವೇಂದ್ರ ರಾವ್ ಅವರ ನೇತೃತ್ವದ ಸೌಂದರ್ಯ ಲಹರಿ ಕಾರ್ಯಕ್ರಮ ಅದು.
 ನಾಗ್ ಚಿತ್ರರಂಗಕ್ಕೆ  ಬಂದಾಗ ಅಲ್ಲಿ ಅದಾಗಲೇ ಶ್ರೀದೇವಿ ಮತ್ತು ಸುಹಾಸಿನಿ ಅವರು ಹೆಸರು ಮಾಡಿದ   ನಟಿಯರಾಗಿದ್ದರು, ಅವರ ಕಣ್ಣಿಗೆ ನಾಗ್ ಪಾಪದ ಬಾಲಕ. ನಾಗ್ ಜೊತೆ ಮಾತೆ ಆಡದೆ ತಮ್ಮ ಲೆವೆಲ್, ಜಂಬಾ ತೋರಿಸುತ್ತ ಇದ್ದರಂತೆ. ಎಂತಹ ದೊಡ್ಡ ಹೀರೋ ಮಗನಾದರೂ ತಮ್ಮ ಸಾಧನೆಯ ಹಾದಿಯಲ್ಲಿ ಕಿರಿಯರು ಆಗಿದ್ದ ಆಗಿನ ನಾಗ್ ಯಾವರೀತಿ ಅನುಭವ ಹೊಂದಿದ್ದರು ಎನ್ನುವ ಮಾತನ್ನು ಹೇಳಿದ್ದರು ಆ ಕಾರ್ಯಕ್ರಮದಲ್ಲಿ .
ಸಾಮಾನ್ಯವಾಗಿಅಪ್ಪನಂತೆ ಯಶಸ್ವಿ ಆಗುವುದು ಅನೇಕ ಕಲಾವಿದರ ಕೈಲಿ ಸಾಧ್ಯವಾಗಿಲ್ಲ..ಕೆಲವರು ಮಾತ್ರ ಈ ಸಂಗತಿ ಸಾಧ್ಯ ಮಾಡಿಕೊಂಡಿದ್ದಾರೆ ಅದರಲ್ಲಿ ನಾಗ್ ಸಹ ಒಬ್ಬರು.
Image result for orange color  flowers
@ ಈಟೀವಿ ತೆಲುಗು ವಾಹಿನಿಯಲ್ಲಿ ಹಾಸ್ಯ ನಟ ಅಲಿ ಅವರ ಅಲಿ 369  ಗೇಂ ಷೋ ಪ್ರಸಾರವಾಗುತ್ತಿದೆ. ಅದರಲ್ಲಿ ಬರುವವರಿಗಿಂತ ಅಲಿ ಹಾಸ್ಯ, ಅವರ ಅದರಲ್ಲಿ  ಭಾಗವಹಿಸುವಿಕೆ ನೋಡುವ ಸಲುವಾಗಿ ವೀಕ್ಷಕರು ಕೂರ್ತಾರೆನೋ ಟೀವಿ ಸೆಟ್ ಮುಂದೆ.ಒಟ್ಟಾರೆ ಬೇಸರ ಆಗದೆ ನೋಡುವಂತೆ ಮಾಡುವ ಕಾರ್ಯಕ್ರಮ. ಸಾಯಿ ಕುಮಾರ್ ಅವರ ವಾವ್ ರಿಯಾಲಿಟಿ ಷೋ ನಂತರ  ಅಲಿ ಕಾರ್ಯಕ್ರಮ ಹೆಚ್ಚು ಇಷ್ಟವಾಗಿದ್ದು ನನಗೆ. ಸಾಯಿ ಅವರ ಚೆಕ್ ಚೇಸ್ತೆ ಹೇಳುವ ರೀತಿ ಅನನ್ಯವಾಗಿತ್ತು. ಅದೇರೀತಿ ಅಲಿ ಅವರ ಶೈಲಿ ಹಾಗೂ ಭಾಗವಹಿಸುವಿಕೆ ಇಷ್ಟ ಆಗುವ ಅಂಶಗಳು . 

ಸಣ್ಣ ಸಣ್ಣ ಹಾಸ್ಯ



PC: Prakash Hegde
ಚಂದದ ಕಾರ್ಯಕ್ರಮಗಳನ್ನು ನೀಡುವ ಚಂದನ ವಾಹಿನಿಯ ಅತಿ ಚಂದದ ಕಾರ್ಯಕ್ರಮ ಥಟ್ ಅಂತ ಹೇಳಿ. ಡಾ. ನಾ ಸೋಮೇಶ್ವರ್ ಅವರ ಈ ಯಶಸ್ವಿ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಶುಕ್ರವಾರ ವಿಶೇಷ ಅತಿಥಿಗಳು ಬರುತ್ತಿರುತ್ತಾರೆ. ಆದರೆ ಈ ಬಾರಿ ಆ ಪರಂಪರೆ ಇರಲಿಲ್ಲ ಆ ವಿಷ್ಯ ಬಿಡಿ. ಇತ್ತೀಚಿನ ಶುಕ್ರವಾರ ಒಂದರಲ್ಲಿ ಪ್ರಸಿದ್ಧ ಕವಿ, ಚಿತ್ರ ಸಾಹಿತಿ, ಲೇಖಕ , ಮೇಷ್ಟು  ದೊಡ್ಡ ರಂಗೇ ಗೌಡ್ರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಅದೂ ಸಹ ಒಂದು. ಹಿರಿಯ, ಮಾಗಿದ ಬರಹಗಾರ ತಮ್ಮ ಅನುಭವ ಮನದ ಮಾತನ್ನು ಹೇಳುತ್ತಾ ಅರ್ಧಗಂಟೆ ಸಾಲದು ತನ್ನಂತಹ ಸಮುದ್ರಕ್ಕೆ ಎನ್ನುವ ಅಂಶವನ್ನು ವೀಕ್ಷಕರ ಮುಂದೆ ತಿಳಿಸಿದರು. ಅತ್ಯಂತ ಖುಷಿ ಕೊಡ್ತು ಅವರ ಮಾತಿನ ಶೈಲಿ, ಅಗಾಧವಾದ ವಿಚಾರಧಾರೆ ಎಲ್ಲವು ಸಹ.. ಮಾತಿನ ನಡುವೆ ಹೆಚ್ಚುಬಾರಿ ಇತ್ತೀಚಿನ  ಕವಿಗಳು ಪ್ರಗಾಥ (ಭಾವಗೀತ ಶೈಲಿ )ಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ ಎನ್ನುವ ಅಂಶ  ಹೇಳಿದರು. ಗೌಡ್ರು ಹೇಳಿದಂತೆ ನಮ್ ಈಗಿನ  ಕವಿಗಳು ಅದರತ್ತ ಗಮನ ಹರಿಸಿದೆರೆಷ್ಟು ಚಂದ..

look at the caption! very apt,right?
ಈ ಟೀವಿ ಕನ್ನಡ ಸುದ್ದಿ ವಾಹಿನಿಯಲ್ಲಿ ಎದೆ ತುಂಬಿ ಹಾಡಿದೆನು ಕಾರ್ಯಕ್ರಮ ಆರಂಭವಾಗಿ ಬಹಳ ತಿಂಗಳುಗಳು   ಪೂರ್ಣಗೊಂಡಿದ್ದರು, ಅದನ್ನು ವೀಕ್ಷಿಸಲು ಆರಂಭ ಮಾಡಿದ್ದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ಕಾರಣ ನಮ್ಮಮನೆಗೆ ಇತ್ತೀಚೆಗಷ್ಟೇ ಈ ಟೀವಿ ನ್ಯೂಸ್ ಆರಂಭವಾಗಿದ್ದು. ವಿಶ್ವದ ಮಹಾನ್ ಗಾಯಕರಲ್ಲಿ ಒಬ್ಬರಾದ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠಸಿರಿ, ಅವರ ತೀರ್ಪು, ಮಕ್ಕಳಿಗೆ ತಿಳಿಸಿಕೊಡುವ  ಮಾಹಿತಿ , ಜೊತೆಗೆ ಆ ಕಾರ್ಯಕ್ರಮಕ್ಕೆ ಬರುವ ವಿಶೇಷ ಅತಿಥಿಗಳು ಎಲ್ಲವು ಚಂದ. ಒಂದು ಉತ್ಕೃಷ್ಟ  ಕಾರ್ಯಕ್ರಮಗಳಲ್ಲಿ ಒಂದು ಅದು. ಆ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ  ನಾಯಕ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದ  ಎಪಿಸೋಡ್ ನಲ್ಲಿ  ಡಾ. ಭಾರತಿಯವರು ಸಹಿತ ಬಂದಿದ್ದರು. ಅದೇ ದಿನ ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಸಂಬಂಧ ಪಟ್ಟ ಎಲ್ಲ ಸಮಸ್ಯೆಗಳು ಪರಿಹಾರ ಆದ ಬಗ್ಗೆ ಎಸ್ ಪಿ ಬಿ ಅವರು ಹೇಳುತ್ತಿದ್ದರು. 
ಅದು ಒಳ್ಳೆಯ ಸಂಗತಿ, ಆದರೆ ಅಂದು ಸ್ಪರ್ಧಿಯೊಬ್ಬ ಗರಗರನೆ ಹಾಡನ್ನು ಹಾಡಿದ್ದ. ಹೆಚ್ಚು ಖುಷಿ ಕೊಡ್ತು. ಕಾರಣ ಇಷ್ಟೇ ಅದರ ಮಾಧುರ್ಯ. ಅದರ ಮೂಲ ಗಾಯಕ  ಎಸ್ ಪಿಬಿ ಅವರ ಮುಂದೆ ಈ ಬಾಲಕ ಹಾಡಿದ್ದು, ಅದರಲ್ಲಿನ ಕೆಲವು ಅಂಶಗಳನ್ನು ತಿದ್ದಿ ಹೇಳಿಕೊಟ್ಟ ಸಂಗತಿಗಳು  ಎಲ್ಲವು ಚಂದ ಚಂದ..
..... ನಿನ್ನೆ ಸಹ ಮತ್ತೆ  ಎದೆ ತುಂಬಿ ಹಾಡಿದೆನು ವೀಕ್ಷಣೆ ಮಾಡಿದೆ . ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಹಾಡುಗಾರ್ತಿ ಬಿ ಆರ್ ಛಾಯಾ ಅವರು ಬಂದಿದ್ದರು ವಿಶೇಷ ಅತಿಥಿಯಾಗಿ. ಅವರ ಕಂಠ ಮಾಧುರ್ಯದ ಬಗ್ಗೆ ಹೇಳುವಷ್ಟಿಲ್ಲ. ಯಾವರೀತಿ ಜಾನಪದ ಹಾಡುಗಳನ್ನು ಹಾಡಬೇಕು, ಅದರೊಳಗಿನ ಭಾವ ವ್ಯಕ್ತಪಡಿಸ ಬೇಕು ಎನ್ನುವ ಪ್ರತಿಯೊಂದು ಸಂಗತಿಯನ್ನು ವಿವರಿಸಿದರು ಬಿ ಆರ್ ಛಾಯ ಅಲ್ಲಿ ಬಂದಿದ್ದ ಪುಟಾಣಿಗಳಿಗೆ . ಬಿ ಆರ್ ಆ ಛಾಯ ಅವರು ಮೊಟ್ಟಮೊದಲು ಹಾಡಿದ ತಮಿಳು ಜಾನಪದದ ಹಾಡಿನ ಬಗ್ಗೆ, ಅದರಲ್ಲಿನ ಸ್ಪಷ್ಟತೆ ಬಗೆ ಖುದ್ದು ಬಾಲು ಮಾಸ್ಟರ್  ಖುಷಿ ಪಟ್ಟು ಆ ಹೆಣ್ಣುಮಗಳ ಪ್ರತಿಭೆಯನ್ನು ಮತ್ತೆ ಮತ್ತೆ ಗೌರವಿಸಿದರು. ಇಂತಹ ಮಾಸ್ಟರ್ ಗಳ ಕೈಲಿ ಹೊಗಳಿಸಿಕೊಳ್ಳುವುದು ಅಂದ್ರೆ ಸುಮ್ಮನಲ್ಲ. ಛಾಯ ಅವರ ಪತಿ ಪದ್ಮಪಾಣಿ ಜೋಡಿದಾರ್ ಅವರು ನನ್ನ ಫೇಸ್ ಬುಕ್ ಮಿತ್ರರು. ನಾನು ಅನೇಕ ಕಾರ್ಯಕ್ರಮಗಳಲ್ಲಿ ಅವರನ್ನು  ಭೇಟಿ ಆಗಿದ್ದರು ಅವರಿ ನಾನ್ಯಾರು ಎನ್ನುವುದು ಗೊತ್ತಿಲ್ಲ. ಅದು ಸಹಜವಾದ ಒಂದು ಅಂಶ . 
ಆದರೆ ಎಫ್ ಬಿಯಲ್ಲಿ ಆಗಾಗ ಅವರ ಗೋಡೆಯಲ್ಲಿ ಅಂಟಿಸಿರುವುದನ್ನು ಓದುವ, ನಗು ಬಂದ್ರೆ ನಗುವ ಕೆಲಸ ಮಾಡ್ತಾ   ಇರ್ತೇನೆ. ಮೇಲೆ ಹಾಕಿರುವ ಚಿತ್ರ ಅಂತಹ ಒಂದು ಉಲ್ಲಾಸ ಹೆಚ್ಚಿಸಿದ ಸಂಗತಿ. ನಿನ್ನೆ ಅವರು ಕಾರ್ಯಕ್ರಮ ವೀಕ್ಷಿಸುತ್ತಾ ಈ ಅಂಶವನ್ನು ಎಲ್ಲರ ಗಮನಕ್ಕೆ ತಂದಿದ್ದಾರೆ.  ಸಣ್ಣ  ಸಣ್ಣ ಹಾಸ್ಯಗಳು ಎಷ್ಟೊಂದು ಉಲ್ಲಾಸ ನೀಡುತ್ತದೆ ಅಲ್ವೇ..