ಸಣ್ಣ ಸಣ್ಣ ಹಾಸ್ಯ



PC: Prakash Hegde
ಚಂದದ ಕಾರ್ಯಕ್ರಮಗಳನ್ನು ನೀಡುವ ಚಂದನ ವಾಹಿನಿಯ ಅತಿ ಚಂದದ ಕಾರ್ಯಕ್ರಮ ಥಟ್ ಅಂತ ಹೇಳಿ. ಡಾ. ನಾ ಸೋಮೇಶ್ವರ್ ಅವರ ಈ ಯಶಸ್ವಿ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಶುಕ್ರವಾರ ವಿಶೇಷ ಅತಿಥಿಗಳು ಬರುತ್ತಿರುತ್ತಾರೆ. ಆದರೆ ಈ ಬಾರಿ ಆ ಪರಂಪರೆ ಇರಲಿಲ್ಲ ಆ ವಿಷ್ಯ ಬಿಡಿ. ಇತ್ತೀಚಿನ ಶುಕ್ರವಾರ ಒಂದರಲ್ಲಿ ಪ್ರಸಿದ್ಧ ಕವಿ, ಚಿತ್ರ ಸಾಹಿತಿ, ಲೇಖಕ , ಮೇಷ್ಟು  ದೊಡ್ಡ ರಂಗೇ ಗೌಡ್ರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಅದೂ ಸಹ ಒಂದು. ಹಿರಿಯ, ಮಾಗಿದ ಬರಹಗಾರ ತಮ್ಮ ಅನುಭವ ಮನದ ಮಾತನ್ನು ಹೇಳುತ್ತಾ ಅರ್ಧಗಂಟೆ ಸಾಲದು ತನ್ನಂತಹ ಸಮುದ್ರಕ್ಕೆ ಎನ್ನುವ ಅಂಶವನ್ನು ವೀಕ್ಷಕರ ಮುಂದೆ ತಿಳಿಸಿದರು. ಅತ್ಯಂತ ಖುಷಿ ಕೊಡ್ತು ಅವರ ಮಾತಿನ ಶೈಲಿ, ಅಗಾಧವಾದ ವಿಚಾರಧಾರೆ ಎಲ್ಲವು ಸಹ.. ಮಾತಿನ ನಡುವೆ ಹೆಚ್ಚುಬಾರಿ ಇತ್ತೀಚಿನ  ಕವಿಗಳು ಪ್ರಗಾಥ (ಭಾವಗೀತ ಶೈಲಿ )ಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ ಎನ್ನುವ ಅಂಶ  ಹೇಳಿದರು. ಗೌಡ್ರು ಹೇಳಿದಂತೆ ನಮ್ ಈಗಿನ  ಕವಿಗಳು ಅದರತ್ತ ಗಮನ ಹರಿಸಿದೆರೆಷ್ಟು ಚಂದ..

look at the caption! very apt,right?
ಈ ಟೀವಿ ಕನ್ನಡ ಸುದ್ದಿ ವಾಹಿನಿಯಲ್ಲಿ ಎದೆ ತುಂಬಿ ಹಾಡಿದೆನು ಕಾರ್ಯಕ್ರಮ ಆರಂಭವಾಗಿ ಬಹಳ ತಿಂಗಳುಗಳು   ಪೂರ್ಣಗೊಂಡಿದ್ದರು, ಅದನ್ನು ವೀಕ್ಷಿಸಲು ಆರಂಭ ಮಾಡಿದ್ದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ಕಾರಣ ನಮ್ಮಮನೆಗೆ ಇತ್ತೀಚೆಗಷ್ಟೇ ಈ ಟೀವಿ ನ್ಯೂಸ್ ಆರಂಭವಾಗಿದ್ದು. ವಿಶ್ವದ ಮಹಾನ್ ಗಾಯಕರಲ್ಲಿ ಒಬ್ಬರಾದ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠಸಿರಿ, ಅವರ ತೀರ್ಪು, ಮಕ್ಕಳಿಗೆ ತಿಳಿಸಿಕೊಡುವ  ಮಾಹಿತಿ , ಜೊತೆಗೆ ಆ ಕಾರ್ಯಕ್ರಮಕ್ಕೆ ಬರುವ ವಿಶೇಷ ಅತಿಥಿಗಳು ಎಲ್ಲವು ಚಂದ. ಒಂದು ಉತ್ಕೃಷ್ಟ  ಕಾರ್ಯಕ್ರಮಗಳಲ್ಲಿ ಒಂದು ಅದು. ಆ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ  ನಾಯಕ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದ  ಎಪಿಸೋಡ್ ನಲ್ಲಿ  ಡಾ. ಭಾರತಿಯವರು ಸಹಿತ ಬಂದಿದ್ದರು. ಅದೇ ದಿನ ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಸಂಬಂಧ ಪಟ್ಟ ಎಲ್ಲ ಸಮಸ್ಯೆಗಳು ಪರಿಹಾರ ಆದ ಬಗ್ಗೆ ಎಸ್ ಪಿ ಬಿ ಅವರು ಹೇಳುತ್ತಿದ್ದರು. 
ಅದು ಒಳ್ಳೆಯ ಸಂಗತಿ, ಆದರೆ ಅಂದು ಸ್ಪರ್ಧಿಯೊಬ್ಬ ಗರಗರನೆ ಹಾಡನ್ನು ಹಾಡಿದ್ದ. ಹೆಚ್ಚು ಖುಷಿ ಕೊಡ್ತು. ಕಾರಣ ಇಷ್ಟೇ ಅದರ ಮಾಧುರ್ಯ. ಅದರ ಮೂಲ ಗಾಯಕ  ಎಸ್ ಪಿಬಿ ಅವರ ಮುಂದೆ ಈ ಬಾಲಕ ಹಾಡಿದ್ದು, ಅದರಲ್ಲಿನ ಕೆಲವು ಅಂಶಗಳನ್ನು ತಿದ್ದಿ ಹೇಳಿಕೊಟ್ಟ ಸಂಗತಿಗಳು  ಎಲ್ಲವು ಚಂದ ಚಂದ..
..... ನಿನ್ನೆ ಸಹ ಮತ್ತೆ  ಎದೆ ತುಂಬಿ ಹಾಡಿದೆನು ವೀಕ್ಷಣೆ ಮಾಡಿದೆ . ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಹಾಡುಗಾರ್ತಿ ಬಿ ಆರ್ ಛಾಯಾ ಅವರು ಬಂದಿದ್ದರು ವಿಶೇಷ ಅತಿಥಿಯಾಗಿ. ಅವರ ಕಂಠ ಮಾಧುರ್ಯದ ಬಗ್ಗೆ ಹೇಳುವಷ್ಟಿಲ್ಲ. ಯಾವರೀತಿ ಜಾನಪದ ಹಾಡುಗಳನ್ನು ಹಾಡಬೇಕು, ಅದರೊಳಗಿನ ಭಾವ ವ್ಯಕ್ತಪಡಿಸ ಬೇಕು ಎನ್ನುವ ಪ್ರತಿಯೊಂದು ಸಂಗತಿಯನ್ನು ವಿವರಿಸಿದರು ಬಿ ಆರ್ ಛಾಯ ಅಲ್ಲಿ ಬಂದಿದ್ದ ಪುಟಾಣಿಗಳಿಗೆ . ಬಿ ಆರ್ ಆ ಛಾಯ ಅವರು ಮೊಟ್ಟಮೊದಲು ಹಾಡಿದ ತಮಿಳು ಜಾನಪದದ ಹಾಡಿನ ಬಗ್ಗೆ, ಅದರಲ್ಲಿನ ಸ್ಪಷ್ಟತೆ ಬಗೆ ಖುದ್ದು ಬಾಲು ಮಾಸ್ಟರ್  ಖುಷಿ ಪಟ್ಟು ಆ ಹೆಣ್ಣುಮಗಳ ಪ್ರತಿಭೆಯನ್ನು ಮತ್ತೆ ಮತ್ತೆ ಗೌರವಿಸಿದರು. ಇಂತಹ ಮಾಸ್ಟರ್ ಗಳ ಕೈಲಿ ಹೊಗಳಿಸಿಕೊಳ್ಳುವುದು ಅಂದ್ರೆ ಸುಮ್ಮನಲ್ಲ. ಛಾಯ ಅವರ ಪತಿ ಪದ್ಮಪಾಣಿ ಜೋಡಿದಾರ್ ಅವರು ನನ್ನ ಫೇಸ್ ಬುಕ್ ಮಿತ್ರರು. ನಾನು ಅನೇಕ ಕಾರ್ಯಕ್ರಮಗಳಲ್ಲಿ ಅವರನ್ನು  ಭೇಟಿ ಆಗಿದ್ದರು ಅವರಿ ನಾನ್ಯಾರು ಎನ್ನುವುದು ಗೊತ್ತಿಲ್ಲ. ಅದು ಸಹಜವಾದ ಒಂದು ಅಂಶ . 
ಆದರೆ ಎಫ್ ಬಿಯಲ್ಲಿ ಆಗಾಗ ಅವರ ಗೋಡೆಯಲ್ಲಿ ಅಂಟಿಸಿರುವುದನ್ನು ಓದುವ, ನಗು ಬಂದ್ರೆ ನಗುವ ಕೆಲಸ ಮಾಡ್ತಾ   ಇರ್ತೇನೆ. ಮೇಲೆ ಹಾಕಿರುವ ಚಿತ್ರ ಅಂತಹ ಒಂದು ಉಲ್ಲಾಸ ಹೆಚ್ಚಿಸಿದ ಸಂಗತಿ. ನಿನ್ನೆ ಅವರು ಕಾರ್ಯಕ್ರಮ ವೀಕ್ಷಿಸುತ್ತಾ ಈ ಅಂಶವನ್ನು ಎಲ್ಲರ ಗಮನಕ್ಕೆ ತಂದಿದ್ದಾರೆ.  ಸಣ್ಣ  ಸಣ್ಣ ಹಾಸ್ಯಗಳು ಎಷ್ಟೊಂದು ಉಲ್ಲಾಸ ನೀಡುತ್ತದೆ ಅಲ್ವೇ..

No comments: