ಮಟಕಾ


Image result for orange flower
ಸಾಮಾನ್ಯವಾಗಿ ಬ್ಲಾಗ್ ಬರೆಯುವ ವಿಷಯದಲ್ಲಿ ನನಗೆ ಸ್ವಲ್ಪ ಸೋಮಾರಿತನ ಇದ್ದೆ ಇದೆ. ಟೀವಿ ಬ್ಲಾಗ್ ತಾನೇ ನಾನು ಬರೆದದ್ದು ಓದುವವರು ತುಂಬಾ ಕಡಿಮೆ ಓದಿದರೂ ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷ ಅಂಶಗಳು ಇರುವುದಿಲ್ಲ ಆದಕಾರಣ ಅದಕ್ಕೆ ಹೆಚ್ಚು ಬೇಡಿಕೆ ಇಲ್ಲ ಅಂತ ಸಾಕಷ್ಟು ಕಾಲದಿಂದ ನನಗೆ ನಾನೇ ನಿರ್ಧಾರ ಮಾಡಿಕೊಂಡು ಬಿಟ್ಟಿದ್ದೆ. ಅದಕ್ಕೆ ಪೂರಕವಾಗಿ ಆರಂಭಿಕ ಹಂತದಲ್ಲಿ ನಾನು ಯಾರು ಎನ್ನುವುದನ್ನು ತಿಳಿಸದೇ ಗುಪ್ತವಾಗಿದ್ದುಕೊಂಡೆ  ಇದನ್ನು ಬರೆಯಲು ಆರಂಭ ಮಾಡಿದ್ದೆ. ಆದರೆ ಇಬ್ಬರು ಹೆಣ್ಣುಮಕ್ಕಳ ಚೂಪಾದ ನಾಲಿಗೆಯ ಮುಳ್ಳು ತೀವ್ರವಾದ ಘಾಸಿ ಮಾಡಿದ ಕಾರಣ ನಾನು ನಾನೇ ಎಂದು ಹೇಳುವಂತಾಯಿತು. ಅನಾಮಿಕವಾಗಿ ಬರೆಯುವ ಕ್ರೇಜ್ ಇಲ್ಲದೆ ಇದ್ರೂ, ನನ್ನ ಬರವಣಿಗೆಯನ್ನು ಜನರು ಯಾವರೀತಿ ಇಷ್ಟ ಪಡುತ್ತಾರೆ ಎನ್ನುವ ಕುತೂಹಲ, ಮಾಧ್ಯಮಗಳ ವಿಷಯದಲ್ಲಿ ಬರೆಯುವ ಖುಷಿಯಲ್ಲಿ ಹೊಸದಾಗಿರುವುದೇನೋ ಮಾಡುತ್ತಿರುವ ಉತ್ಸಾಹ ಹೀಗೆ ಹಲವಾರು ಸಂಗತಿಗಳು.
ಆದರೆ ನಾನು ಬರೆಯದೆ ಇದ್ದಾಗ, ಸ್ವಲ್ಪ ದಿನಗಳು ಬರೆಯದೆ ಇದ್ದಾಗ ಮತ್ತೆ ಬರಿತಾ ಇಲ್ಲ ಯಾಕೆ ಎನ್ನುವ ಪ್ರಶ್ನೆ ಓದುಗ ದೇವರಿಂದ ..ಅದರಲ್ಲೂ ಎಫ್ ಬಿಯಲ್ಲಿ ಅನೇಕ ಸ್ನೇಹಿತರು ಮೇಡಂ ಯಾಕೆ ಬರೆಯುತ್ತಿಲ್ಲ, ವಾರಕ್ಕೆ ಎರಡು ಬಾರಿಯಾದರೂ ಬರೆಯಿರಿ ಎನ್ನುವ ಒತ್ತಾಯ..ಇಂತಹವೆಲ್ಲ ನೋಡಿದಾಗ ಯಾವರೀತಿ ಪ್ರತಿಕ್ರಿಯೆ ನೀಡಬೇಕೋ ಗೊತ್ತಾಗಲ್ಲ. ಆದರೂ ಅಂತಹ ಎಲ್ಲರಿಗೂ, ನನ್ನ ಬ್ಲಾಗ್ ಓದುವ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ..
Image result for orange color
@ ಬಿಗ್ ಬಾಸ್ ಹಿಂದಿಯ ಬಗ್ಗೆ ನಾನು ಬ್ಲಾಗ್ ನಲ್ಲಿ ಬರೆಯಲು ಆರಂಭ ಮಾಡಿದ್ದ ದಿನಗಳು. ನಾನು ಬರೆದಿರುವುದನ್ನು  ಎಫ್ ಬಿ ಯಲ್ಲಿ ಶೇರ್ ಮಾಡ್ತಾ ಇದ್ದ ದಿನಗಳು  ಅವು. ಆಗ ನನ್ನ ಬರ ಓದಿದ್ದ ಮಿತ್ರರೊಬ್ಬರು ಕನ್ನಡದಲ್ಲಿ ಇಂತಹ ಕಾರ್ಯಕ್ರಮ ಯಾಕೆ ಪ್ರಸಾರ ಆಗಲ್ಲ ಜಯಕ್ಕ ಅಂತ ಕೇಳಿದ್ದರು. ಆದರೆ ಆಗ ಕಲರ್ ವಾಹಿನಿಯ ಕಾಲವಲ್ಲ .. ನೋಡುವಾ  ತಮ್ಮಯ್ಯ  ಮುಂದೊದು  ದಿನ ಅದು ಸಾಧ್ಯ ಆಗ ಬಹುದು ಎಂದಿದ್ದೆ. ಅದು ಸಾಧ್ಯವಾಗಿ ಈಗ ಮೂರನೇ ಸೀಸನ್.
ಬಿಗ್ ಬಾಸ್ ಹಿಂದಿಯಲ್ಲಿ  ಸಲ್ಮಾನ್ boy  ಬಗ್ಗೆ ಸಕತ್ ಖುಷಿ  ಬರೆಯೋಕೆ. ಮೊದಲಿಂದಲೂ ನಾನು ಆಸ್ಥೆಯಿಂದ ಸಲ್ಮಾನ್ ಕಾರ್ಯಕ್ರಮ ವೀಕ್ಷಿಸುತ್ತಾ ಬಂದಿದ್ದೇನೆ. ಯಾರು ಏನೇ ಹೇಳಿದ್ರೂ ಈ ಬಿಗ್ ಬಾಸ್ ಬಗ್ಗೆ ನನಗೆ ಕುತೂಹಲ, ಆಸಕ್ತಿ ಇದ್ದೆ ಇದೆ.
 ಈ ಬಾರಿ ಅಮನ್ ವರ್ಮ .. ಆತನನ್ನು ಕಂಡಾಗ ಹಳೆಯ ಸಂಗತಿ ನೆನಪಿಗೆ ಬರುತ್ತದೆ. ಆಗ ಖುಲ್ಜಾ ಸಿಮ್ ಸಿಮ್ ನಡೆಸಿಕೊಡುತ್ತಿದ್ದ ಕಾಲ. ಅಮನ್ ವರ್ಮ ಸೆಲೆಬ್ರಿಟಿಗಳ ನ್ನು ಕರೆಸಿ ಖುಲ್ಜಾ ಸಿಮ್ ಸಿಮ್ ಅಂತ ಅಡಿಸೋರು. ಮೂರು ಬಾಗಿಲು ಅದರಲ್ಲಿ ಒಂದರಲ್ಲಿ ಟೌಯ್ ಟೌಯ್ ಫಿಶ್ ಅಂತ ಹೇಳುವ ಮಡಕೆ ಇರ್ತಾ ಇತ್ತು. ಒಮ್ಮೆ ಹೀಗೆ ಓರ್ವ ಸೆಲೆಬ್ರಿಟಿ ಹೆಣ್ಣುಮಗಳು ಬಂದಿದ್ದಳು. ಬಾಗಿಲು ತೆರೆದಾಗ ಅಲ್ಲಿ ಮಡಕೆ ಇತ್ತು. ಪಾಪ ಆಕೆಗೆ ಮಡಕೆಯು  ತನಗೆ ಬಹುಮಾನವಾಗಿ ಬಂದಿದ್ದು ಕಂಡು ಐ  ಲವ್ ಮಟಕಾ ಅಂತ ಕುಣಿದಾಡಿ ಬಿಟ್ಟಿದ್ದಳು.. :-) ಆದರೆ ಅದು ಟೌಯ್ ಟೌಯ್ ಫಿಶ್  ಅನ್ನೋದು ಗೊತ್ತಿರಲಿಲ್ಲ.. ಅಮನ್ ವರ್ಮ ರನ್ನ ಯಾವಾಗ ನೋಡಿದರು ನನಗೆ ಆಕೆಯ ಮಡಕೆ ಕಥೆನೇ ನೆನಪಿಗೆ ಬರುತ್ತೆ..
 ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಿನ ಹೊರ ಬಂದ ಸ್ಪರ್ಧಿಗಳು ತಮಗೆ ಇಷ್ಟ ಬಂದಂಗೆ ಹೇಳಿಕೆ ಕೊಡ್ತಾ ಇದ್ರೂ. ನನ್ನ ಅಮ್ಮ ಹಿಂದಿ ಪೇಪರ್ ನಲ್ಲಿ ಬಂದ ಈ ಸಂಗತಿಗಳನ್ನು ನನಗೆ ಸಾಮಾನ್ಯವಾಗಿ ಹೇಳುತ್ತಿದ್ದರು. ಅದೆಲ್ಲವೂ ಬೇಡ ಅಂತ ಈಗ ಮೀಡಿಯಾದವರನ್ನೇ ಕರೆಸಿರೋದು ಮತ್ತು ಈ ಎಲ್ಲ  ಸ್ಪರ್ಧಿಗಳ ಮನೆಯವರನ್ನು ಕರೆಸಿ ಅವರ ಅಭಿಪ್ರಾಯ ಕೇಳೋದು ತುಂಬಾ ವಿಶೇಷ ಅನ್ನಿಸಿದೆ.. ಆದ್ರೂ ಕನ್ನಡ ಹಾಗೂ ಹಿಂದಿ ಒಟ್ಟೊಟ್ಟಿಗೆ ಪ್ರಸಾರ ಆಗ್ತಾ ಇರೋದು ಮಾತ್ರ ಅಯ್ಯೋ ಅನ್ನುವಂತಾಗಿದೆ..

ಜಂಟಲ್ಮನ್

Image result for blue color flowers wallpaper
ಬಿಗ್ ಬಾಸ್ ಕಲರ್ ವಾಹಿನಿಯಲ್ಲಿ ತನ್ನತ್ತ ವೀಕ್ಷಕರನ್ನು ಆಕರ್ಷಿಸುತ್ತಿರುವ ಕಾರ್ಯಕ್ರಮ. ಒಂದಷ್ಟು ಜನ ಇದೊಂದು ಕಾರ್ಯಕ್ರಮವೇ ಎಂದು ಮೂಗು ಮುರಿದವರು ಅವರಿಗೆ ಬೇಕಾದವರು ಈಗ ಇದ್ದಾರೆ ಅಂತ ಆ ಕಾರ್ಯಕ್ರಮ ನೋಡುತ್ತಿದ್ದಾರೆ. ಕಲರ್ ವಾಹಿನಿಯ ಬಹಳಷ್ಟು ಕಾರ್ಯಕ್ರಮಗಳನ್ನು ಬಿಗ್ ಬಾಸ್ ಕಾರ್ಯಕ್ರಮ ಒಂದೇ ತಿಂದು ಬಿಡುವ ಸಾಧ್ಯತೆಗಳು ನಿಚ್ಚಳವಾಗಿದ್ದರೂ ಕಲರ್  ವಾಹಿನಿಯವರು ಧೈರ್ಯವಾಗಿ ಈ ಒಂದು ಕಾರ್ಯಕ್ರಮ ಪ್ರಸಾರ ಮಾಡ್ತಾ ಇದ್ದಾರೆ .. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಇಂತಹ ರಿಯಾಲಿಟಿ ಶೋಗಳು ಪ್ರಸಾರ ಆಗುವಾಗ ಬೇರೆ ಸುದ್ದಿ ವಾಹಿನಿಗಳು ಸೇರಿದಂತೆ  ಖುದ್ದು ಕಲರ್  ವಾಹಿನಿಯು ಸಹಿತ ಪ್ರಸಾರಿಸಲು ಹೆಚ್ಚಿನ ಆದ್ಯತೆ ನೀಡುತ್ತದೆ. ವೀಕ್ಷಕ ಬೇಡಾ  ನೋಡಲ್ಲ ಅಂತ ಅನ್ನುತ್ತಾ  ವೀಕ್ಷಿಸುವ  ವಾತಾವರಣ  ಬಹಳಷ್ಟಿದೆ.
Image result for blue color flowers wallpaper

.... ಕನ್ನಡದಲ್ಲಿ  ಕಿಚ್ಚ ಸುದೀಪ್ ಬಿಟ್ರೆ ಮತ್ಯಾರಿಗೂ ಬಿಗ್ ಬಾಸ್  ಪ್ರೆಸೆಂಟರ್ ಸ್ಥಾನ ತುಂಬಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಚಂದದ ಹಿಡಿತ ಇದೆ.  ಯಾಕೆಂದ್ರೆ ಕೇವಲ ಮಾತಿನ ಶೈಲಿ ಅಲ್ಲದೆ  ಅವರ ಉಡುಗೆತೊಡುಗೆ, ಬಾಡಿ ಲಾಂಗ್ವೇಜ್ ಏನೇ ಇರಲಿ ಅತ್ಯಂತ ಇಷ್ಟ ಆಗುವಂತೆ ಇದೆ ಅಂಬೋದನ್ನು ಸಾಕಷ್ಟು ಸರ್ತಿ ನಾನು ಬರದೆ ಇದ್ದೀನಿ.ನಮ್ಮ ಅಮ್ಮನಿಗೆ ಕಿಚ್ಚನ ಮಾತಿನಶೈಲಿ, ಹೋಲ್ಡಿಂಗ್ ಕ್ಯಪಾಸಿಟಿ ಬಹಳ ಇಷ್ಟ. ಅವರು ಜಂಟಲ್ಮನ್ ಅಂತ ಹೊಗಳುತ್ತಾರೆ ಪ್ರತಿಬಾರಿ ಕಿಚ್ಚನ ಕಾರ್ಯಕ್ರಮ ವೀಕ್ಷಿಸುವಾಗಲು ಸಹ .. ಆದರೆ ಸುದೀಪ್ ಮಾತ್ರ ಪ್ರತಿ ಬಾರಿಯೂ ಅಂದ್ರೆ ಪ್ರತಿ ಸೀಸನ್ ನಲ್ಲೂ  ನನ್ನನ್ನು ಕಿಚ್ಚ, ಹುಚ್ಚ, ಲುಚ್ಚ  ಅಂದ್ರುನೂ....! ಎನ್ನುವ ಮಾತು ಹೇಳ್ತಾನೆ ಇರ್ತಾರೆ.. ನಾವು ಯಾವುದನ್ನು ಸ್ವೀಕರಿಸಬೇಕೋ  ನಮಗೆ ಗೊತ್ತಾಗ್ತಾ ಇಲ್ಲ  ... :-)
Image result for blue color flowers wallpaper

ಬಿಗ್ ಬಾಸ್ ಮನೆ ಅಂದ್ರ ಅನೇಕ ಕಲಿಕೆಗಳ ಒಂದು ಶಾಲೆ.  ಒಂದು ಆಫೀಸ್, ಒಂದು ಜಾಗ, ಒಂದು ಬಸ್, ಎಲ್ಲೇ ಆಗಿರಲಿ ನಾವು ಸಹ ಕೆಲವರ ಜೊತೆ ಸ್ವಲ್ಪ ಕಾಲವು ಇರಲಾರದಂತಹ ಅಸಹನೆಯನ್ನು ಹೊಂದಿರುತ್ತೇವೆ. ಆದರೆ ಅನಿವಾರ್ಯವಾಗಿ ಬೇರೆ ಬೇರೆ ಬ್ಯಾಕ್ ಗ್ರೌಂಡ್ನಿಂದ ಬಂದಿರುವವರು, ಅವರೆಲ್ಲ ಈಗೋ ಮತ್ತು ಜೀವನ ಶೈಲಿ ಬದಿಗೊತ್ತಿ ಒಟ್ಟಿಗೆ ಬಾಳ್ವೆ ನಡೆಸ ಬೇಕಾದ ರೀತಿ ಇದೆಯಲ್ಲ ಅದು ಮಾತ್ರ ಸುಲಭದ್ದಲ್ಲ.

ಸುನಾಮಿ ಕಿಟ್ಟಿಯಂತಹ ಹುಡುಗರ ಹಿನ್ನೆಲೆ ಬೇರೆಯದ್ದು. ಥಳುಕು,ಬಳುಕಿನ ನಡುವೆ   ತಮ್ಮನ್ನು ತಾವು ಗುರುತಿಸಿಕೊಳ್ಳುವುದಿದೆಯಲ್ಲ ಅದು ಬಹಳ ಮುಖ್ಯ.  ಅಂತಹವರು ಇಂತಹ ಒಂದು ಕಾರ್ಯಕ್ರಮದ ಮೂಲಕ ಮತ್ತೊಂದಷ್ಟು ಕಲಿಯಲು  ಹೆಚ್ಚು ಸಹಾಯಕಾರಿ. ಮುಖ್ಯವಾಗಿ ಹುಚ್ಚ ವೆಂಕಟೇಶ್ ಅವರು ಆರಂಭಿಕ ದಿನಗಳಲ್ಲಿ ತೋರಿದ್ದ ವಿರಾಟ ರೂಪ, ಈಗ ಅವರು ಇರುವ ರೀತಿ ನೋಡಿದ್ರೆ ಅವರ ಯು ಟ್ಯೂಬ್ ಡೌವ್ ಕಚ್ಚೋದಕ್ಕಿಂತ ಇದೇ ವಾಸಿಯಾಗಿದೆ. ಒಂದರ್ಥದಲ್ಲಿ  ವೆಂಕಟ್ ಅವರಿಗೆ ಅತ್ಯುತ್ತಮವಾದ ವೇದಿಕೆಯಾಗಿದೆ ಇದು. ನಿಜ ಹೇಳ ಬೇಕೆಂದರೆ ವೆಂಕಟ್ ಬಗ್ಗೆ ಇದ್ದ ಇಮೇಜ್ ಹಾಗೂ ಅವರ ಮಾತಿನಶೈಲಿ , ಕಿರಿಕಿರಿ ಉಂಟು ಮಾಡಿದ್ರು ಸಹಿತ ಅವರ ಆ ಭಾರವಾದ ಮನಸ್ಸು ಹೆಣ್ಣುಮಕ್ಕಳು ಅದಕ್ಕಿಂತ ಸಹೋದರಿಯರು ಎಂದು ಗೌರವಿಸುವ ಹೆಣ್ಣುಮಕ್ಕಳ ಒಡನಾಟದಿಂದ ತಿಳಿಯಾಗಿದೆ ಎನ್ನುವುದು ಸ್ಪಷ್ಟ. ಒಟ್ಟಾರೆ ವೆಂಕಟ್ ಅವರ ಸಂಕಟ್ ದೂರ ಮಾಡಲು ಬಿಗ್ ಬಾಸ್ ಜಾಸ್ತಿ ಕಷ್ಟದ, ಓಡುವ, ಭಾರ ಎತ್ತುವ ಟಾಸ್ಕ್ ಕೊಟ್ಟರೆ ಚಂದ, ಅವರ ದೇಹ ಮತ್ತು ಮನಸ್ಸಿನ ಆರೋಗ್ಯ ತಿಳಿಯಾಗುತ್ತೆ..
.. ನೇತ್ರ ನಿರ್ಧಾರದ ಬಗ್ಗೆ ಅಯ್ಯಪ್ಪ  ಕೋಪ ಮಾಡಿಕೊಂಡದ್ದು ನಗು ಬರೋಹಂಗೆ ಆಯ್ತು. ಆರಂಭಿಕ ಎಪಿಸೋಡ್ನಲ್ಲಿ ಇದೆ ಅಯ್ಯಪ್ಪ ಸುನಾಮಿ ಕಿಟ್ಟಿ ಬಳಿ ಯಾರನ್ನು ನಂಬಬಾರದು ಇದು ಗೇಂ, ಇವತ್ತು ನಿನ್ನ ಜೊತೆ ನಾನಿದ್ರು ನಾಳೆ ಗೆಲ್ಲುವ ಕಡೆ ಎನ್ನುವ ಅರ್ಥದಲ್ಲಿ ಪಾಪ ಹುಡುಗನ ಬಳಿ ಹೇಳಿದ್ದ ನೆನಪು !. ಅದೇ ತಾನೇ ನೇತ್ರ ಮಾಡಿದ್ದು. ಆಕೆ ಸಹ ಸ್ಪರ್ಧಿಯಾಗಿ ಗೆಲ್ಲುವ ಕಡೆಗೆ ಆದ್ಯತೆ ನೀಡಿದ್ದು ಎಲ್ಲರೀತಿಯಿಂದಲೂ ಸರಿ. ಅಯ್ಯಪ್ಪ ಆ ಜಾಗದಲ್ಲಿ ಇದ್ದಿದ್ದರೂ ಅದೇ ಮಾಡ್ತಾ ಇದ್ದದ್ದು.. ಯಾಕೇಂದ್ರೆ ಬೇಡ ಅಂತ ಅಂದ್ರು ಬಿಗ್ ಬಾಸ್ ಮನೆ ಬೇಕು ಅನ್ನುವಂತೆ ಮಾಡುತ್ತದೆ ಸ್ಪರ್ಧಿಗಳಿಗೆ.. ಬಿಗ್ ಬಾಸ್ ಅಂದ್ರೆ ಸುಮ್ನೆ ಅಲ್ಲ ... ಹೌದು ಸ್ವಾಮಿ  

ಆಹಾ ಸವಿಗನ್ನಡ...

Image result for white and red rose flowers images
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಲಿಲ್ ಚಾಂಪ್ಸ್ ನಲ್ಲಿ ಸ್ಪರ್ಧಿಗಳ ಕನ್ನಡಮ್ಮನ ಗುಣಗಾನ ಮಾಡುವ ಹಾಡುಗಳು ಬಹಳ ಚಂದ ಇತ್ತು.ಪ್ರತಿಯೊಂದು ಪ್ರತಿಭೆಯು ಆಹಾ ! ಎನ್ನುವಂತೆ ಹಾಡಿದ್ದು ಉತ್ಪ್ರೇಕ್ಷೆಯಲ್ಲ.  ಕನ್ನಡ ರಾಜ್ಯೋತ್ಸವದ ಮೆರಗು ಹೆಚ್ಚಿಸಿದ್ದ  ಕಾರ್ಯಕ್ರಮ ಅದು. ಅದರಲ್ಲಿ ತೀರ್ಪುಗಾರರಾದ ರಾಜೇಶ್, ವಿಜಯ್  ಪ್ರಕಾಶ್, ಅರ್ಜುನ್ ಬಗ್ಗೆ ಹೇಳುವಷ್ಟಿಲ್ಲ, ಮುಖ್ಯವಾಗಿ ವಿಜಯ್ ಪ್ರಕಾಶ್ ಕನ್ನಡ ಮಾತನಾಡುವ ಪ್ರಯತ್ನ ಅಮೋಘ ಹಾಗೂ ಶ್ಲಾಘನೀಯ..
ವಿಜಯ್ ಪ್ರಕಾಶ್ ಅವರೇ  ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತನಾಡಿದ ನಿಮ್ಮ ಪ್ರಯತ್ನ ಅನನ್ಯ. ಅದಕ್ಕೆ ಕಾರಣವಿದೆ ನೆರೆಯ ರಾಜ್ಯವಾದ ಮಹಾರಾಷ್ಟ್ರದ ರಾಜಧಾನಿಯಾದ ಮುಂಬೈ ನಗರದಲ್ಲಿ ತಾವು ನೆಲೆ ಕಂಡದ್ದು. ಅಲ್ಲಿ ಕನ್ನಡ ಬಿಡಿ ಮೂಲ ಭಾಷೆ ಮರಾಠಿಯನ್ನು ಮಾತನಾಡದ ಪರಿಸ್ಥಿತಿ. ಆದರೆ ಚಲನಚಿತ್ರರಂಗದ ದೊಡ್ಡಮ್ಮನ ಸ್ಥಾನ ಗಳಿಸಿರುವ ಆ ಸ್ಥಳದಲ್ಲಿ ನೀವು ನೀವಾಗಿ ಗೆದ್ದು ಬಂದ ಪ್ರತಿಭೆ. ಆಂಗ್ಲ -ಹಿಂದಿ ಭಾಷೆಯ ರಾತ್ರಿ ರಾಣಿಯ ಘಮದಲ್ಲಿ ನೀವು ಮೈಸೂರು ಮಲ್ಲಿಗೆಯ ಸುವಾಸನೆಯನ್ನು ಹರಡಿದ್ದು, ನಮ್ಮಂತಹ ಅಪಾರ ಕನ್ನಡಿಗರಿಗೆ ಸದಾ ಸರ್ವದಾ ಹೆಮ್ಮೆ ನೀಡುವ ಸಂಗತಿಯಾಗಿದೆ. ಹಿಂದಿಯನ್ನು ಒಪ್ಪಿ ಕನ್ನಡವನ್ನು ಅಪ್ಪಿ ಬೇರೆ ಭಾಷೆಗಳನ್ನು ಸ್ವೀಕರಿಸಿ ಗೆದ್ದ ನಿಮ್ಮ ಬಗ್ಗೆ  ನಾವು ಇನ್ನೇನು ಹೇಳುವುದಿದೆ.. ಕನ್ನಡ ಕನ್ನಡ .. ಆಹಾ ಸವಿಗನ್ನಡ...
:-) ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು.. ಹೆಚ್ಚು ಖುಷಿ ಕೊಡ್ತು  ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ಇಲ್ಲ ವಿಜಯ್ ಪ್ರಕಾಶ್.
Image result for white and red rose flowers images
@ ಕನ್ನಡ ರಾಜ್ಯೋತ್ಸವದ ದಿನದಂದು ಕಸ್ತೂರಿ ವಾಹಿನಿಯಲ್ಲಿ ಸಂಪೂರ್ಣವಾಗಿ ಕನ್ನಡ ಗಾನಸುಧೆ ಇತ್ತು. ಕಾರ್ಯಕ್ರಮವೊಂದರ ಮುದ್ರಿತ ಕಾರ್ಯಕ್ರಮ. ಕಸ್ತೂರಿ ವಾಹಿನಿ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕನ್ನಡಿಗರಿಗೆ ನಿರಾಶೆ ಮಾಡಿದ ವಾಹಿನಿ ಅದು. ಅದರಲ್ಲಿ ಪ್ರಸಾರವಾದ ಅನೇಕ ಕಾರ್ಯಕ್ರಮಗಳನ್ನು  ಆಸ್ಥೆಯಿಂದ ನೋಡಿವ ಅನೇಕ ವೀಕ್ಷಕರಲ್ಲಿ ನಾನು ಒಬ್ಬಾಕಿ. ಆದರೆ  ಕನ್ನಡತಿ ಆರಂಭಿಸಿದ ಆ ಚಾನೆಲ್ ನಿರೀಕ್ಷಿಸಿದ ಮಟ್ಟ ತಲುಪದೇ ಇರುವುದು ಅತ್ಯಂತ ಬೇಸರದ ಸಂಗತಿ.
ಉತ್ತಮ ಹಾಸ್ಯ ಕಾರ್ಯಕ್ರಮಗಳು, ಹೆಣ್ಣುಮಕ್ಕಳು ಇಷ್ಟ ಪಡುವ ಧಾರಾವಾಹಿಗಳು, ತಲೆಗೆ ಹೆಚ್ಚು ಬುದ್ಧಿ ಕೊಡದೆ ಸುಮ್ಮನೆ ನೋಡುವಂತೆ ಮಾಡುವ ರಿಯಾಲಿಟಿ ಶೋಗಳು ಎಲ್ಲವು ನೀಡಿ ಕೊನೆಗೆ ಈ ಚಾನೆಲ್ ಒಂದಿದೆ ಎನ್ನುವುದನ್ನು ಜನರ ಮನಃಪಟಲದಿಂದ ಮರೆಯುವಂತೆ ಮಾಡಿದ ಚಾನೆಲ್ . ಯಾಕೋ ಕಸ್ತೂರಿ ಕನ್ನಡ ನೋಡಿದಾಗ ಇವೆಲ್ಲಾ ಅನ್ನಿಸಿತು.

ಟೈಮಿಂಗ್

Image result for orange and blue
ಅತ್ಯಂತ ಭಿನ್ನ ಸಂಗತಿ ಅಲ್ಲದೆ ಇದ್ದರು ಈಗಿನ ಬಹುಚರ್ಚಿತ ಸಂಗತಿ ಅವಾರ್ಡ್ ಹಿಂತಿರಿಗಿಸೋದು. ಕೊಡೋದು, ಇಸ್ಕೊಳ್ಳುವುದರ  ಜೊತೆಗೆ  ಅದನ್ನು ವಾಪಸಾತಿ ಮಾಡುವ ಈ ಕೂಗಾಟದ ಸಂಗತಿಯ ಜೊತೆಗೆ ಬಹಳ ಕಾಲದ  ಅತ್ಯಂತ ಖೇದಕರ ಸಂಗತಿ ಕಾಶ್ಮೀರ್ ಪಂಡಿತರ ಮಾರಣಹೋಮ ಮುಂತಾದ ಸಂಗತಿಗಳನ್ನು ಒಳಗೊಂಡ ಚರ್ಚೆಯನ್ನು  ಜೀ ಹಿಂದಿ ನ್ಯೂಸ್ ನಲ್ಲಿ  ಮಾಡಿದ್ದರು ಪತ್ರಕರ್ತ-ನಿರೂಪಕ. ಅವಾರ್ಡ್ ಹಿಂತಿರುಗಿಸುತ್ತಿರುವವರ ಬಳಿ ನಿರೂಪಕ ಕಾಶ್ಮೀರ್  ಪಂಡಿತರ ಸಮಸ್ಯೆ, ಅವರು ಅವ್ರ ನೆಲದಲ್ಲೇ ಇರಲಾಗದಂತಹ ಖೇದಕರ ಸಂಗತಿ, ಅವರು ಮಾರಣಹೋಮ ಹೀಗೆ ಸಂಪೂರ್ಣವಾಗಿ ಅ ಅಂಶಗಳ ಅಡಿಯಲ್ಲಿ ಚರ್ಚೆ ನಡೆಸುತ್ತಾ  ಅಂತಹ  ದುರಂತದ ಬಗ್ಗೆ  ಏನು ಅನ್ನಿಸದ ಪ್ರಶಸ್ತಿ ಪಡೆದವರಿಗೆ ಈಗ ಏಕಾಏಕಿ ಸಿಟ್ಟು ಬಂದು, ಬೇಸರ ಆಗಿ ದುಃಖಕ್ಕೆ ಈಡಾಗಿ ವಾಪಸಾತಿಗೆ ನಿಂತಿರುವ ಬಗ್ಗೆ ತುಂಬಾ ಚಂದದ ರೀತಿಯಲ್ಲಿ ಕಾಲೆಳೆಯುತ್ತಾ, ವಸ್ತುಸ್ಥಿತಿಯಲ್ಲಿನ ದ್ವಿಮುಖ ಪದ್ಧತಿಯ ವರ್ತನೆಯ ಬಗ್ಗೆ ಜರ್ನಲಿಸ್ಟ್ ಜಗತ್ತಿನ ಮುಂದೆ ಅನಾವರಣ ಮಾಡುತ್ತಿದ್ದರು. ವಾರ್ತಾವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮಗಳು ಬಹಳಮುಖ್ಯ. ಅವಾರ್ಡ್ ಕೊಡಿಸುವ ತರಾತುರಿ, ಹಿಂತಿರುಗಿಸುವ ಒದ್ದಾಟ ಇವೆಲ್ಲಕ್ಕಿಂತ ತಮ್ಮ ಮನೆಯಲ್ಲಿಯಲ್ಲಿ ಇರಲಾಗದ ಆ ತಲ್ಲಣ , ಅದರ ಬಗ್ಗೆ ನೋವು ಎದುರಿಸುತ್ತಿರುವವರ ಬಗ್ಗೆ ಒಂದು ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಸುಖಾಸುಮ್ಮನೆ ವ್ಯರ್ಥವಾಗಿ ಚರ್ಚೆಗೆ ಇಳಿಯುವ, ಇಲ್ಲವೇ ಕೊಡುವ ಗಲಾಟೆಯ ಮೂಲಕ ಮಾಧ್ಯಮಗಳ ಮುಂದೆ ಸುದ್ದಿ ಆಗುತ್ತಿರಲಿಲ್ಲ.
ಜೀ ಹಿಂದಿ ನ್ಯೂಸ್ ನಲ್ಲಿ ಈ ಕಾರ್ಯಕ್ರಮನ್ನು ನಿರೂಪಕ ಅತ್ಯಂತ ಎಚ್ಚರವಾಗಿ , ಸುಂದರವಾಗಿ  ಮುನ್ನಡೆಸಿಕೊಂಡು ಹೋದರು. ರೀ ಟೆಲಿಕಾಸ್ಟ್ ಮಾಡಿದ್ರೆ ನೋಡಿ. ಪ್ರಾಯಶಃ ಶನಿವಾರ ಸಂಜೆ ನಾನು ನೋಡಿದ್ದು.
Image result for orange and blue
 @ ಪಬ್ಲಿಕ್  ಟೀವಿಯಲ್ಲಿ ರಂಗಣ್ಣನ ಬೆಳಕು ಕಾರ್ಯಕ್ರಮ, ಸಮಾಜಮುಖಿ ಕಾರ್ಯಕ್ರಮ. ಆದರೆ ಅಂತಹ ಕಾರ್ಯಕ್ರಮಗಳ ಬಗ್ಗೆ ವೀಕ್ಷಕರಿಗೆ ಹೆಚ್ಚು ಆಸಕ್ತಿ ಇರಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ , ಪರೋಪಕಾರ ಮಾಡುವುದಕ್ಕೆ ಜನರಿಗೆ ಇಷ್ಟ  ಇದ್ದರೂ  ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡೋಕೆ ಹೆದರುತ್ತಾರೆ, ಸುಮ್ಮನೆ ಕೋಡಂಗಿಗಳಾಗಿ ಬಿಡ್ತೀವಿ ಅಂತ. ಒಂದು ಒಳ್ಳೆಯ ಕಾರ್ಯಕ್ರಮ, ಅದರಲ್ಲಿ  ಕಲಾವಿದ ಅರುಣ್ ಸಾಗರ್ ಬಂದಿದ್ದರು ನಾನು ನೋಡಿದ ಎಪಿಸೋಡ್ ನಲ್ಲಿ.
@ ಅರುಣ್ ಸಾಗರ್ ಅವರ ಮತ್ತೊಂದು ಕಾರ್ಯಕ್ರಮ ಅಂದೇ  ನಾನು ಸುವರ್ಣವಾಹಿನಿಯಲ್ಲಿ ವೀಕ್ಷಿಸಿದ್ದೆ. ರಚಿತ ರಾಮ್ ಅವರು ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಅರುಣ್ ಸಾಗರ್ ಥೇಟ್ ಅಣ್ಣಾವರ ರೀತಿ ಸಿದ್ಧವಾಗಿದ್ದರು, ನಿರ್ಮಾಪಕನ ಪಾತ್ರಧಾರಿ ಆಗಿದ್ದರು. ತುಂಬಾ ಸುಂದರ ಕಾರ್ಯಕ್ರಮ ಅದಾಗಿತ್ತು. ಎಂತಹ ಅದ್ಭುತವಾದ ಪ್ರತಿಭೆ ಅರುಣ್ ಸಾಗರ್ ಅನ್ನುವುದು ಪ್ರತಿಯೊಂದು ಕಾರ್ಯಕ್ರಮದ ಮೂಲಕವೂ ಸ್ಪಷ್ಟಪಡಿಸುತ್ತದೆ. ಟೈಮಿಂಗ್, ಬಾಡಿ ಲಾಂಗ್ವೇಜ್ ಎಲ್ಲವೂ ಅದ್ಭುತ. ಯಾರೇ ಆಗಲಿ ಒಮ್ಮೆ ಬಣ್ಣ ಹಚ್ಚಿದರೆ ಹಿಂಗೆ ರೆಡಿ ಆಗಿ ಬರಬೇಕು . ಅದ್ಭುತ ...