ಭಾವನೆ...ಭಾವನೆ...!


ದೇವರು, ಯತಿಗಳು, ಸಂತರು ಹೀಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸ್ವಲ್ಪ ಹೆಚ್ಚಿನ ಜಾಗರೂಕತೆ ಇರಬೇಕು ಯಾರೇ ಮಾತನಾಡಲಿ. ಆದರೆ ಇಂತಹ ವಿಷಯ ಅದರಲ್ಲೂ ಹಿಂದೂ ಧಾರ್ಮಿಕ ಭಾವನೆಗಳ ಬಗ್ಗೆ ಸ್ವಲ್ಪ ಜಾಸ್ತಿನೆ ಹಗುರವಾಗಿ ಮಾತಾಡೋ ಮಂದಿ ಇತರ ಧರ್ಮಗಳ ಬಗ್ಗೆ ಅದಿನ್ಯಾವ ಮಟ್ಟದ್ದು ವಿಶ್ವಾಸವು ಇರದು. ನಿಜ ಯಾವುದು ಅತಿ ಆಗ ಬಾರದು . ಯಾಕೆಂದ್ರೆ ಧರ್ಮ-ಜಾತಿಯು ಹೆಚ್ಚು   ಮನುಷ್ಯ ಮನುಷ್ಯರ ನಡುವೆ ಅತಿ ದೊಡ್ಡ ಕಂದರ ಏರ್ಪಡಿಸಿ ಬಿಡುತ್ತದೆ. 

ನಾನು ಎಲ್ಲ ಧರ್ಮಗಳ ಗುರುಗಳನ್ನು ಹೆಚ್ಚು ಗೌರವಿಸುತ್ತೇನೆ. ಸಾಮಾನ್ಯವಾಗಿ ಅನೇಕ ಧರ್ಮಗಳ ಸಂತರ ರಚನೆ ಓದಿದ್ದೇನೆ. ನಮ್ಮ ತಾಯಿಯನ್ನು ಅತಿ ಹೆಚ್ಚು ಆಕರ್ಷಿಸಿರುವುದು ಕಬೀರ್ ದೋಹ..!  .. ಗೌರವ ಬೇರೆ ಬೇರೆ... ಭಾರತದಂತಹ ದೇಶದಲ್ಲಿ ಎಲ್ಲ ಧರ್ಮದ ಜೊತೆಜೊತೆಯಲ್ಲಿ ಬೆಳೆಯುವುದು ಸಾಮಾನ್ಯ ಸಂಗತಿ. 

ಈಗ ಅತಿ ಹೆಚ್ಚು ಮಾತಿಗೆ ಸಿಕ್ಕಿರುವುದು ಶಿರಡಿ ಸಾಯಿ ಬಾಬ ಅವರ ಸಂಗತಿ. ಅವರು ಏನೇ ಆಗಿರಲಿ, ಹೇಗೆ ಇರಲಿ ಅಪಾರ ಸಂಖ್ಯೆಯ ಭಕ್ತರ ಆಪ್ತ ಬಂಧು. ನಮ್ಮ ಮನೆಯಲ್ಲಿ ನಮ್ಮ ತಾನಿಂದ ಈಗಿನವರೆಗೂ ಅತೀ ಹೆಚ್ಚು ನಂಬಿರುವ ಗುರುಗಳು. ಕ್ಷಣ ಕ್ಷಣ   ಜಪಿಸುವುದು ಮನ ಸಾಯಿ ಸಾಯಿ ಅಂತ. ನಮ್ಮಂತಹ ಪಾರ ಭಕ್ತರು ಇದ್ದಾರೆ ಈ ದುನಿಯಾದಲ್ಲಿ.
ಅದೇ ರೀತಿ ನಮ್ಮ ರಾಘವೇಂದ್ರ ರಾಯರು ಸಹ ಭಕ್ತರ ಕಾಮಧೇನು. ಅವರ ನೆನೆಯದ ದಿನವಿಲ್ಲ,.. ರಾಯರು ಅಪರೋಕ್ಷ ಜ್ಞಾನಿಗಳು..ಇವೆಲ್ಲ ನಮ್ಮಂತಹ  ಭಕ್ತರ ನಂಬಿಕೆ..ಆದರೆ ಕೆಲವು ಸಂಗತಿಗಳು ಮನಸ್ಸಿಗೆ ಬೇಸರ ಆಗುತ್ತದೆ, ಗುರು ಪೀಠದಲ್ಲಿ ಕುಳಿತವರ ರೀತಿಯಿಂದ..


@@ ಮುಖ್ಯವಾಗಿ ರಾಯರು ಯತಿಗಳು ಆದರೆ ಸಂತರಲ್ಲ ಅನ್ನುವ ಬಗ್ಗೆ ಇಂದು ಪಬ್ಲಿಕ್ ಟೀವಿಯಲ್ಲಿ ತುಂಬಾ ಚಂದ  ವಿವರಿಸಿದರು ವಿದ್ವಾಂಸರು. ತುಂಬಾ ಆಸಕ್ತಿಕರ ಆಗಿತ್ತು. ಹರೀಶ್ ಅವರ ನಿರೂಪಣೆಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ನಡೆಸಿದ ಕಾರ್ಯಕ್ರಮ  ಆಸಕ್ತಿಯಿಂದ ಇತ್ತು.. ಪೇಜಾವರಶ್ರೀ ಅವರು ಹೇಳಿದಂತೆ ರಾಯರು ಯತಿಗಳು ದೇವರಲ್ಲ, ಆದರೆ ನಮ್ಮ ಪಾಲಿಗೆ ಅವರೇ ದೇವರು.. ಅವರು ಹೇಳುವ ಮಾತಿಗೂ ಮತ್ತು ನಮ್ಮ  ಭಾವನೆಗಳಿಗೂ  ಎರಡಕ್ಕೂ ಗೌರವ ಕೊಡ್ತೀನಿ. ಅದೇರೀತಿ ಸಾಯಿ ಬಾಬ ಅವರು ಸಂತರು ಯಾಕೆ ಅಂದ್ರೆ ಅವರು ಬ್ರಹ್ಮಚಾರಿಗಳು ಅಂತ ವಿದ್ವಾಂಸರೊಬ್ಬರು ಹೇಳಿದರು. ಅದು ಸರಿಯೇ.. ಸೂಫಿ ಸಂತರ ಸಮಕಾಲೀನರು ಬಾಬ ಅವರು ಅವರು ಸಂತರಾಗಿದ್ದರು ನಮಗೆ ಭಗವಾನ್ ಸೊ ನೋ ಮೋರ್ ಇಂತಹ ವಿಷಯಕ್ಕೆ ಸಂಬಂಧಪಟ್ಟಂತೆ. ಅಪಾರ ಸಂಖ್ಯೆ ಜನರ ನಂಬಿಕೆ ಮೇಲೆ ಸದಾ ದಾಳಿ ಮಾಡ ಬೇಡಿ ...!


@@ ಮಾ ವಾಹಿನಿಯಲ್ಲಿ ತೆಲುಗು ಮನ್ಮಥ , ಗ್ರೀಕು ವೀರ ನಾಗಾರ್ಜುನ ಟಾಲಿವುಡ್ ವಿಶೇಷ ಅದರಲ್ಲೂ ಸುಂದರ ಹಾಗೆ ಅನ್ನೋಕ್ಕಿಂತ ಸಕತ್ ಸ್ಟೈಲಿಶ್ ನಟ. ಇತ್ತೀಚಿಗೆ ಓದಿದ ನೆನಪು ಟಾಲಿವುಡ್ ನಲ್ಲಿ ಅತಿ ಹೆಚ್ಚಿನ ಸ್ಟೈಲೀಶ್   ನಟರ ಸಾಲಿಗೆ ನಾಗ್ ಸಹ ಸೇರ್ಪಡೆ ಆಗಿದ್ದಾರೆ. ಅಕ್ಕಿನೇನಿ ಕುಟುಂಬದ ನಾಗಾರ್ಜುನ ಮಾ ಟೀವಿಯಲ್ಲಿ ಕೋಟಿಶ್ವುರುಡು ( ಕರೋಡ್ ಪತಿ  ತೆಲುಗು ) ಕಾರ್ಯಕ್ರಮದ  ನಿರೂಪಕರಾಗಿದ್ದಾರೆ. ದಕ್ಷಿಣ ಭಾರತದಲ್ಲಿ   ಅದರಲ್ಲೂ ಮಾ ಟೀವಿಯಲ್ಲಿ ಬರಿ  ಡಬ್ಬಿಂಗ್ ಡಬ್ಬಿಂಗ್ .. ಆದರೆ ಅವಲ್ಲದರ ಕಿರಿಕಿರಿಯನ್ನು ದೂರ ಮಾಡುತ್ತದೆ ನಾಗ್ ಅವರ ಕಾರ್ಯಕ್ರಮದ ಶೈಲಿ ... ಅದ್ಭುತ...! 




ಜವಾನಿ  ಜಾನ್ -ಎ -ಮನ್  ಹಸೀನ್  ದಿಲ್ರುಬ
ಮಿಲೇ  ದೋ  ದಿಲ್  ಜವಾನ್  ನಿಸಾರ್  ಹೊ  ಗಯಾ
ಜವಾನಿ  ಜಾನ್ -ಎ -ಮನ್  ಹಸೀನ್  ದಿಲ್ರುಬ 
ಮಿಲೇ   ದೋ  ದಿಲ್  ಜವಾನ್  ನಿಸಾರ್  ಹೊ  ಗಯಾ 
ಶಿಕಾರ್  ಖುದ್   ಯಹಾ  ಶಿಕಾರ್  ಹೊ  ಗಯಾ 
ಎಹ್  ಕ್ಯಾ  ಸಿತಮ್  ಹುವಾ  
ಎಹ್  ಕ್ಯಾ  ಗುಲಾಮ್  ಹುವಾ 


ಈ ಹಾಡು ಸೂಕ್ತ ಆಗಿತ್ತು ಇವತ್ತು ನಿರೂಪಕಿ ಉಷಾಗೆ! ಅವರನ್ನು ಟೀವಿ ನೈನ್ ನಲ್ಲಿ ಇಂದು ಅವರು ಸಂಜೆ  ಕ್ರೈಂ ಕಾರ್ಯಕ್ರಮ ನಿರೂಪಣೆ ಮಾಡುವಾಗ ಮಾಡಿಕೊಂಡಿದ್ದ ಹೇರ್ ಸ್ಟೈಲ್ ಕಂಡಾಗ ನೆನಪಾಯಿತು  ! ಉಷಾ ವಾಟ್ ಈಸ್  thissss ಯಾ ;-)

1 comment:

Badarinath Palavalli said...

ಸಂತನಾದರೂ ದೇವನಾದರೂ ಮನೋ ನೆಮ್ಮದಿ ಕೊಡಬಲ್ಲವನೇ ನಮ್ಮವನು.

ನಾಗಾರ್ಜುನ ಒಳ್ಳೆಯ ನಿರೂಪಕ.

ಉಷಾ ಅವರ ವಿಚಾರದಲ್ಲಿ ನಿಮ್ಮ ಮಾತು ನಿಜ.