ಡಿವೈನ್ ಪಾರ್ಕ್



ಶ್ರೀ ಶಂಕರ ವಾಹಿನಿಯಲ್ಲಿ ಪ್ರತಿ ಗುರುವಾರ ರಾತ್ರಿ 9.30 ಕ್ಕೆ ಡಿವೈನ್ ಪಾರ್ಕ್ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಹೆಸರೇ ತಿಳಿಸುವಂತೆ ಅದು ದೇವರು,ಆತನಿಗೆ ಸಂಬಂಧಿತ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಡಾ. ಚಂದ್ರ ಶೇಖರ್ ಉಡುಪ ಅವರು. ಯಾವುದೇ ಪ್ರಶ್ನೆ ಇರಲಿ ನೀಡುವ ಉತ್ತರ ಮನಸ್ಸಿಗೆ ಆಪ್ತ ಅನ್ನಿಸುತ್ತದೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚು ಇಷ್ಟ  ಆಗುವಂತಹ  ಕಾರ್ಯಕ್ರಮ.ಶಂಕರ ವಾಹಿನಿಯಲ್ಲಿ ಪ್ರಸಾರ ಆಗುವಂತೆ ಆಸ್ಥ, ಸಂಸ್ಕಾರ್,ಭಕ್ತಿ ಯಾವುದೇ ಚಾನೆಲ್  ಆಗಿರಲಿ ಒಟ್ಟಾರೆ ಇಷ್ಟ ಆಗುತ್ತದೆ. ಆದರೆ ಶಂಕರದಲ್ಲಿನ ಡಾಕ್ಟರ್ ಕಾರ್ಯಕ್ರಮ ಅದ್ಭುತ !
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅದರಲ್ಲೂ ಪ್ರವಚನಗಳು ಸಹ ಚಂದ ಇರುತ್ತದೆ.
@@ಇದೆ ವಾಹಿನಿಯಲ್ಲಿ ಭಜನ್ ಕಾರ್ಯಕ್ರಮ ಸಹ ಸಕತ್ ಚೆನ್ನಾಗಿದೆ. ಮುಖ್ಯವಾಗಿ ಇದರಲ್ಲಿ ಇರುವಭಿನ್ನತೆ ಸಾಕಷ್ಟು ಗಮನ ಸೆಳೆಯುತ್ತದೆ. ತಮಿಳು ಭಾಷೆ ಬರುವವರಿಗೆ ಸ್ವಲ್ಪ ಹೆಚ್ಚೇ ಇಷ್ಟ ಆಗುತ್ತದೆ.


@ ಸಾಮಾನ್ಯವಾಗಿ ನಾನು ಜೆಮಿನಿ ಕಾಮಿಡಿ ಮತ್ತು ಉದಯ ಕಾಮಿಡಿಯನ್ನು ಆಗಾಗ ನೋಡುತ್ತೇನೆ. ನನಗೆ ತೆಲುಗಿನಲ್ಲಿ  ಬ್ರಹ್ಮಾನಂದಂ ಮತ್ತು ಕನ್ನಡದಲ್ಲಿ ಸಾಧು ಬಾರಿ ಲೈಕ್ ಆಗುತ್ತೆ...
ನಿಜ ಕೆಲವು ಬಾರಿ ಅತಿರೇಕ ಅನ್ನಿಸೋದು ಸಹಜ ಆದರೆ ಇಷ್ಟ ಆಗುತ್ತೆ ಅವರಿಬ್ಬರ ನಟನೆ..
ಇತ್ತೀಚಿಗೆ ಒಂದು ಸಂಗತಿ ಓದಿದೆ ಬ್ರಹ್ಮಾನಂದಂ ಅವರು ಅತ್ಯಂತ ಬ್ಯುಸಿ ಇರುವಕಮೆಡಿಯನ್. ಅವರ ಕಾಲ್ಶೀಟ್ ಸಿಕ್ದೇ ಇದ್ರೆ ಅವರು ಸೂಪರ್ ಹೀರೋಗಳು ಸಹ ನಟಿಸೋಕೆ ಹಿಂದೆಮುಂದೆ ನೋಡ್ತಾರಂತೆ!ಅವರು ಕೇಳಿದಷ್ಟು ಸಂಭಾವನೆ ನೀಡ್ತಾರಂತೆ.ಹಾಗಂತ ಬರೆದಿದ್ರು..

1 comment:

Badarinath Palavalli said...

ಭಾಗ ಒಂದಕ್ಕೆ:
ಕನ್ನಡದ ಯಶಸ್ವೀ ಆಧ್ಯಾತ್ಮಿಕ ವಾಹಿನಿ ಶ್ರೀಶಂಕರ.

ಭಾಗ ಎರಡಕ್ಕೆ :
ಸಾಧು ಅವರ ಸಂಗೀತ ಪ್ರತಿಭೆ ಮತ್ತು ಹಾಸ್ಯ ಕಚಗುಳಿ ಎರಡೂ ಚೂಪರ್ರೂ...
ಬ್ರಹ್ಮನ ಬಾಬಾಯ್ ಆಹಾ ನಾ ಪೆಳ್ಳಂಟದ ನತ್ತಿಯಿಂದ ಈ ಕ್ಷಣದವರೆಗೂ ಸದಾ ಚಾಲ್ತಿಯಲ್ಲಿರುವ ಜಂದ್ಯಾಲ ಅನ್ವೇಷಣೆ.