ರಾಮಾಯಣ

courtesy: Prakash Hegde 


ಪ್ರಕಾಶ್ ಹೆಗ್ಡೆ ನನ್ನ ಎಫ್ ಬಿ ಮಿತ್ರರು, ಯಾವಾಗಲಾದರೊಮ್ಮೆ ನಾನು ಹೋದಂತಹ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಭೇಟಿಯಾಗುವ ಅಕ್ಷರಪ್ರೇಮಿ ಪ್ರಕಾಶ್ ಹೆಗ್ಡೆ ಅವರ ಟ್ಯಾಲೆಂಟ್ ಸಿಕ್ಕಾಪಟ್ಟೆ ಇದೆ. ಅವರ ಆಸಕ್ತಿಗಳಲ್ಲಿ ಫೋಟೋಗ್ರಫಿ ಸಹ ಒಂದಾಗಿದೆ. ಈ ತಿಂಗಳ ಪೂರ್ತಿ  ನಾನು ದೀಪವನ್ನು ನನ್ನ ಬ್ಲಾಗ್ ನಲ್ಲಿ ಬೆಳಗ ಬೇಕು ಎನ್ನುವ ಆಶಯ ಹೊಂದಿರುವ ಬಗ್ಗೆ ನಿಮಗೆ ಮೊದಲೇ ಹೇಳಿದ್ದೆ. ನನ್ನ ಆಶಯ ಪೂರ್ಣವಾಗುತ್ತಿದೆ  . . ಪ್ರಕಾಶ್ ಎಫ್ ಬಿಯ ಗೋಡೆಯ ಮೇಲೆ  ಅವರ ಮನೆಯ  ದೀಪದ ಫೋಟೋಗಳನ್ನು ಹಚ್ಚಿಟ್ಟಿದ್ದರು.  ಪ್ರಕಾಶ್ ಹೆಗ್ಡೆ ಅವರ ಬಳಿ ಕೇಳಿದ ನಾನು ನನ್ನ ಬ್ಲಾಗ್ ನಲ್ಲಿ ನಿಮ್ಮ ಹಣತೆಯನ್ನು ಬೆಳಗಲೆ ಎಂದು .. ಒಂದು ಕಂಡೀಶನ್ ಮೇಲೆ ಸಮ್ಮತಿಸಿದರು. ಅವರ ಕಂಡಿಶನ್  ಗೆ  ಒಪ್ಪಿಗೆ ಇತ್ತು ನಾನು ದೀಪ ಹಚ್ಚಿದ್ದೇನೆ.. ಧನ್ಯವಾದಗಳು ಸರ್ಜಿ 
Image result for blue flowers images

@ ಪೌರಾಣಿಕ ಕಥೆಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ  ತಮ್ಮ ಕಲ್ಪನೆಯ ಹಂದರದ ಮೂಲಕ ಹೊರ ಹಾಕುತ್ತಾರೆ. ಎಲ್ಲವೂ ಇಷ್ಟ ಆಗುವಂತಿರುತ್ತದೆ. ಅದೇರೀತಿ ಇಷ್ಟ ಆಗುವಂತಹ ಧಾರವಾಹಿ ಸಿಯ ಕೆ  ರಾಮ್ ಅದು ರಾಮಾಯಣದ ಕಥೆ. ಸೆಟ್ಟಿಂಗ್ಸ್, ಆ ಕಲ್ಪನೆ, ಬಳಸಿರುವ ಒಡವೆಗಳ ಪರಿಕಲ್ಪನೆ ತುಂಬಾ ಚಂದ ಇದೆ. ನಾನು ರಾತ್ರಿ 10 : 30 ಯಲ್ಲಿ ವೀಕ್ಷಿಸಿದೆ. ನಿನ್ನೆಯಿಂದ ಆರಂಭವಾಗಿದೆ ಆ ಧಾರವಾಹಿ. ಪುರಾಣ ಪ್ರಿಯರು ಆನಂದವಾಗಿ ವೀಕ್ಷಿಸ ಬಹುದು. ಏಕೆಂದರೆ ರಾಮಾಯಣದಲ್ಲಿ ಹೀರೋ ವಿಲನ್  ಗಳ ಬಗ್ಗೆ ನಮಗೆ ಗೊತ್ತೇ ಇದೆ.. ಆದರೆ ಒಬ್ಬ ನಿರ್ದೇಶಕ ಅದನ್ನು ಯಾವ ರೂಪದಲ್ಲಿ ನೋಡಿದ್ದಾರೆ ಎನ್ನುವುದು ಇಂತಹ ಧಾರಾವಾಹಿಗಳಿಂದ ತಿಳಿಯುತ್ತದೆ .



@ ಸುವರ್ಣ ನ್ಯೂಸ್ ನಲ್ಲಿ ಇಂದು ಪಕ್ಷಿಪ್ರೇಮಿ ಒಬ್ಬಾತನ ವಿಷಯ ಪ್ರಸಾರಿಸುತ್ತಿದ್ದರು. ಪಕ್ಷಿಗಳನ್ನು ಎಲ್ಲರೂ ಪ್ರೇಮಿಸುತ್ತಾರೆ, ಆದರೆ ಅದರ  ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಮಾತ್ರ ಬಹಳ ಕದೀಮೆ. ಆ ನಿಟ್ಟಿನಲ್ಲಿ  ನೋಡುವುದಾದರೆ ಸಣ್ಣ ಉದ್ಯೋಗ ಮಾಡುತ್ತಿರುವ ಆ ವ್ಯಕ್ತಿಯ  ಮನಸ್ಸು ಬಹಳ ದೊಡ್ಡದು. ಆತ ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಭಾಗ ಗಿಣಿಗಳ ಊಟಕ್ಕೆ ಮೀಸಲಿಟ್ಟಿದ್ದಾರೆ. ಸುಮಾರು ಐದು ಸಾವಿರ ಗಿಣಿಗಳಿಗೆ ಅನ್ನ ಉಣಬಡಿಸುತ್ತಾರಂತೆ . ಅದನ್ನು ಟೀವಿಯಲ್ಲಿ ಪ್ರಸಾರಿಸಿದರು. ಪ್ರಾಯಶಃ ಮತ್ತೊಮ್ಮೆ ಪ್ರಸಾರ ಮಾಡಬಹುದು. ನೋಡಿ ಚೆನ್ನಾಗಿದೆ. ಇರುವುದರಲ್ಲಿ ಹಂಚಿ ತಿನ್ನುವುದು ಎಂತಹ ವಿಶೇಷ ವ್ಯಕ್ತಿತ್ವ ಅಲ್ವೇ.. 

1 comment:

Ittigecement said...

ನಾನು ತೆಗೆದ ಫೋಟೊಗಳನ್ನು ತಮ್ಮ ಬ್ಲಾಗಿನಲ್ಲಿ ಬಳಸಿಕೊಂಡಿದ್ದಕ್ಕಾಗಿ ...
ಬಳಸಿಕೊಳ್ಳುವ ಮೊದಲು ನನ್ನ ಬಳಿ ಕೇಳಿಕೊಂಡಿದ್ದಕ್ಕಾಗಿ...
ಪ್ರೀತಿಯನಮನಗಳು...