ಗಂಡನಾ ?

Image result for purple flowers
ತುಂಬಾ ಪರಿಚಿತರು, ಮನೆಯವರು, ಸ್ನೇಹಿತರು ಹೀಗೆ ಸ್ವಲ್ಪ ಗೊತ್ತಿರುವವರು , ಅವರ ಸಾಧನೆ ಬಗ್ಗೆ, ಅವರನ್ನು ಹುಡುಕಿಕೊಂಡು ಬರುವಂತಹ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ತಿಳಿದಾಗ ಹೆಚ್ಚು ಸಂತೋಷ ಆಗುತ್ತೆ. ಎಫ್ ಬಿ , ಟ್ವಿಟರ್, ವಾಟ್ಸ್ ಅಪ್ , ಹೈಕ್  ಹೀಗೆ ಹಲವಾರು ಸೋಶಿಯಲ್ ನೆಟ್ ವರ್ಕ್ ಮೂಲಕ ಪರಿಚಿತರಾದವರು , ಒಳ್ಳೆಯ ಸ್ನೇಹಿತ ರಾದವರ ಯಶಸ್ಸಿನಿಂದಲೂ  ಖುಷಿ ಆಗುತ್ತೆ ನನಗೆ, ಸೋತವರ ಬಗ್ಗೆ ಸಹ ಗೌರವ , ಪ್ರಯತ್ನ ಮುಖ್ಯ ಬದುಕಲ್ಲಿ. ಅಂತಹುದರಲ್ಲಿ ನಮಗೆ ಸಂಬಂಧಪಟ್ಟವರು ಯಶಸ್ವಿ ಆದಾಗ ಖುಷಿ ಆಗದೆ ಇರುತ್ತಾ ?
ರಂಗಿತರಂಗ ಚಿತ್ರ ಈಗ ಆಸ್ಕರ್ ಬಾಗಿಲು ತಟ್ಟಿದೆ. ಅದು ಕನ್ನಡ ಚಿತ್ರ, ಒಂದೊಳ್ಳೆಯ ಚಿತ್ರ, ವಿಶೇಷವಾದ ಹೆಸರು ಪಡೆದ ಚಿತ್ರ.. ಇವೆಲ್ಲವನ್ನೂ ಮೀರಿದಂತೆ ನನಗೆ ಆ ಚಿತ್ರದ ಜೊತೆ ಒಂದು ಅವಿನಾಭಾವ ಸಂಬಂಧವಿದೆ. ಅದರಲ್ಲಿ ನನ್ನ ಅಕ್ಕನ ಅಳಿಯ ಗೋಕುಲ್ ಅಭಿಷೇಕ್ ಬೇಸಿಕಲಿ ಸೌಂಡ್ ಇಂಜಿನಿಯರ್. ಅವರು ರಂಗಿತರಂಗ ಚಿತ್ರಕ್ಕೆ ಮ್ಯುಸಿಕ್  ಅರೆನ್ಜ್ಮೆಂಟ್ ಮಾಡಿದ್ದಾರೆ. ಆ ಮೂಲಕ ಆಸ್ಕರ್ ಬಾಗಿಲು ತಟ್ಟಿದ ಚಿತ್ರದ ಯಶಸ್ಸಿನ ಹಿಂದೆ ಗೋಕುಲ್  ಪಾತ್ರ ಸಹ ಇದೆ  ಸೊ ನೈಸ್. ಗೋಕುಲ್  ಅನೇಕ ಕನ್ಸರ್ಟ್  ಗಳಲ್ಲಿ  ತಮ್ಮ ಪ್ರತಿಭೆ ತೋರಿದ್ದಾರೆ  .... ನಮ್ಮ ಮನೆಯಲ್ಲಿ ಕಸಿನ್ ಗಳಲ್ಲಿ ಕೊನೆಯ ಕೊನೆಯ ಹೆಣ್ಣುಮಕ್ಕಳಲ್ಲಿ  ನಾನು ಒಬ್ಬಳು, ಅಕ್ಕಂದಿರ ಅಳಿಯಂದಿರು, ಮಕ್ಕಳು ನನಗೆ ತಮ್ಮ, ತಂಗಿ ಆಗುವಷ್ಟೇ ವಯಸ್ಸು, ಸೊ ಈ ಕಾರಣದಿಂದ ಅವರೆಲ್ಲಾ  ನನ್ನನ್ನು ಜಯಕ್ಕ ಅಂತ ಕರೆಯೋದು . ಆ ವಿಷ್ಯ ಬಿಡಿ ಆದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ಟೀಮ್ಗೆ ನನ್ನ ಕಡೆಯಿಂದ ಕಂಗ್ರಾಟ್ಸ್.. ಈಗಾಗಲೇ ವಾಟ್ಸ್ ಅಪ್ ನಲ್ಲಿರುವ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಗ್ರೂಪ್ ನಲ್ಲಿ ಗೋಕುಲ್ ಹಾಗೂ ಅಕ್ಕನ ಮಗಳು ರಂಜನಿಗೆ  ವಿಶ್ ಮಾಡಿ  ಖುಷಿ ಪಟ್ಟೆವು ಎಲ್ಲರು.. ನನ್ನ ಬ್ಲಾಗ್ ಮೂಲಕವೂ ರಂಗಿತರಂಗ  ತಂಡವನ್ನು ಅಭಿನಂದಿಸುತ್ತಾ ... :-)

                                                    ####

Image result for purple flowers
ಬಿಗ್ ಬಾಸ್ ಬಿಗ್ ಬಾಸ್ ಎಸ್ ಬಾಸ್... ಈ ವಾರದಲ್ಲಿ  ಇದ್ದ -ನೀಡಿದ ಟಾಸ್ಕ್ ಗಳು ಖುಷಿಕೊಡ್ತು. ಆದರೆ ಚೇರ್ ಟಾಸ್ಕ್ ಬಿಟ್ಟು. ತುಂಬಾ ಮುಜುಗರ ತರ್ತಾ ಇತ್ತು ನೋಡುವಾಗ.. ಬಿಗ್ ಬಾಸ್ ಕಾರ್ಯಕ್ರಮವನ್ನು ಹಿರಿಯರು, ಕಿರಿಯರು ಅನ್ನದೆ ಎಲ್ಲರೂ ನೋಡುತ್ತಿರುತ್ತಾರೆ. ಈ ರೀತಿಯ ಟಾಸ್ಕ್ ಗಳು ಮಾಡುವಾಗ ಎಲ್ಲ ಅಂಶಗಳ ಬಗ್ಗೆ ಅದ್ಯಾಕೆ ಚಾನೆಲ್ ಮಂದಿ ಗಮನದಲ್ಲಿ ಇಟ್ಟು ಕೊಳ್ತಾ ಇಲ್ಲವೋ ನಾ ಕಾಣೆ.. ಟಾಸ್ಕ್ ನಲ್ಲಿ ಭಾಗವಹಿಸದೆ ಇರುವವರನ್ನು ಡೈರೆಕ್ಟ್ ನಾಮಿನೇಟ್ ಮಾಡ ಬಹುದು ಮತ್ತು ಹೊರಗೆ ಗೌರವಪೂರ್ವಕವಾಗಿ ಕಳುಹಿಸ ಬಹುದು.. ಈ ರೀತಿಯ ಅಂಶಗಳು ಈಗಾಗಲೇ ಹಿಂದಿ  ಬಿಗ್ ಬಾಸ್ ಮಂದಿ ಮಾಡಿದ್ದಾರೆ. ಸುಮ್ಮನೆ ಬಾ, ಕೂರು , ಸಾಧ್ಯವಾದರೆ ಅಲ್ಲಿಂದು ಇಲ್ಲಿಗೆ ಇಲ್ಲಿನದು ಅಲ್ಲಿಗೆ ಹೇಳುವುದರಲ್ಲಿ ಏನಿದೆ ವಿಶೇಷ ? ಕಷ್ಟಪಟ್ಟು ಟಾಸ್ಕ್ ಮಾಡುವವರನ್ನು ಕಳಿಸಿ  ಮಾಡದೇ ಇರುವವರನ್ನು ಇಟ್ಟು ಕೊಳ್ಳುವುದು ಅನ್ಫೇರ್ !

ಆ ವಿಷಯ ಬಿಡಿ, ಆದರೆ ಟಾಸ್ಕ್ ಗಳಲ್ಲಿ ಟೀವಿ ಧಾರವಾಹಿ ಮತ್ತು ಸಿನಿಮಾ ಕಥೆಯ ಟಾಸ್ಕ್ ಗಳಲ್ಲಿ ಮತ್ತೆ ಮೊದಲ ಸ್ಥಾನದಲ್ಲಿ ನಿಂತವರು ಶ್ರುತಿ, ಮಿತ್ರ , ಆನಂದ್, ನಂತರದ ಸ್ಥಾನ ರೆಹಮಾನ್, ಚಂದನ್..ಖುಷಿ ಕೊಟ್ಟ ಕಲಾವಿದರು ಅವರು. ರೆಹಮಾನ್ ಅವರ ಪ್ರತಿಭೆಗೆ ಅಂತೂ ಇಂತೂ ಈಗ ಅವಕಾಶ ಸಿಗ್ತಾ  ಇದೆ. ಅದೇ  ಸಂತೋಷದ ಸಂಗತಿ. ಅತ್ಯುತ್ತಮ ನಿರೂಪಕ ರೆಹಮಾನ್ ಅವರು ಹೊಸ ರೂಪದಲ್ಲಿ ಮನೆಯಿಂದ ಹೊರಗೆ ಬರ್ತಾರೆ ಅನ್ನೋದು  ಸಹ ಅತ್ಯಂತ ಖುಷಿಯ ಸಂಗತಿ.ಆನಂದ್, ಶ್ರುತಿ, ಮಿತ್ರ ಎಷ್ಟು ಅದ್ಭುತವಾದ ಕಲಾವಿದರು.. ವಾಹ್ ವಾಹ್ !
ಅಬ್ಬ ಸುಷ್ಮಾ ! ಏನೇ ಆದರು ಮನೆ ವಾತಾವರಣ  ಸುಷ್ಮಾ ಯಿಂದ ಕೆಡುತ್ತೆ ಬಿಡಿ .. ಇತ್ತೀಚಿಗೆ ಅಯ್ಯಪ್ಪ ಜೊತೆ ಮಾತಾಡುವಾಗ ಆಕೆ ,  ನನಗೇನು ಗಂಡನಾ - ಪಿಂಡನಾ ಅಂತ ಹೇಳ್ತಾ ಶ್ರುತಿ ಬಗ್ಗೆ ಅಸೂಯೆ ತೋರಿಸಿದ್ದು.. ಬೇಸರ ಅನ್ನಿಸಿದರು ಆ ಪಿಂಡದಂತಹ  ಮಾತಿಗೆ ನಗು ಬಂದೇ  ಬಂತು..
ಶ್ರುತಿ ಬಗ್ಗೆ ಸಾಕಷ್ಟು ಜನರಿಗೆ ಸಾಫ್ಟ್ ಕಾರ್ನರ್ ಇದೆ.. ಅದು  ಬಹಳ ಮುಖ್ಯ. ನಮ್ಮ ಭಾವ ಒಬ್ರು ಸದಾ ವಿದೇಶದಲ್ಲಿರುವ ಇಂಜಿನಿಯರ್ ವಿದ್ಯಾರ್ಥಿಗಳಿಗೆ, ಟೀಮ್ ಗಳಿಗೆ ಪಾಠ ಹೇಳೋ ಮೇಷ್ಟ್ರು.. ಅವರಿಗೆ ಬಿಗ್ ಬಾಸ್, ಶ್ರುತಿ, ಕಿಚ್ಚ, ಆನಂದ್ ಜಾಸ್ತಿ ಲೈಕ್..
Image result for purple flowers
ಪ್ರಿಯ ಸುದೀಪ್ ಸಾಮಾನ್ಯವಾಗಿ ನಾನು ನಿಮ್ಮನ್ನು ಕೀಟಲೆ ಮಾಡುವುದು ಅಭಿಮಾನಂದಿಂದ,ಅದರ ಬಗ್ಗೆ ನಿಮಗೆ ಬೇಸರ ಆಗುತ್ತೇನೋ ಎನ್ನುವ ಒಂದು ಗೊಂದಲ ನನ್ನನ್ನು ಕಾಡುತ್ತಿರುತ್ತದೆ. ಆದರೂ ಸಹ ನಾನು ನಿಮ್ಮನ್ನು ರೇಗಿಸುವುದು ಬಿಟ್ಟಿಲ್ಲ..ಪತ್ರಿಕೆಗಳು, ಚಾನೆಲ್ಗಳು ಅದರ ಪ್ರತಿನಿಧಿಗಳು, ಅದರಲ್ಲಿ ಬರೆದವರು, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವರು ಎಲ್ಲರಿಗಿಂತ ನಾನು ಹಾಗೂ ನನ್ನಂತಹ ಅತಿ ಸಾಮಾನ್ಯ ವೀಕ್ಷಕರು ಬಹಳ ಮುಖ್ಯ ಸುದೀಪ್, ಯಾಕೇಂದ್ರೆ ನಾವು ಮೆಚ್ಚುಗೆ ತೋರಲು, ಇಷ್ಟಪಟ್ಟು ಹೇಳಲು, ಮನಕ್ಕೆ ತೋರಿದ ಒಳ್ಳೆಯ ಮಾತನ್ನು ವ್ಯಕ್ತ ಪಡಿಸಲು ಯಾವ  ಪ್ರಭಾವಳಿ, ಅದು ಇದು ಪಡೆದಿರಲ್ಲ.. ನಮಗೆ ಗೊತ್ತಿರುವುದು ಪ್ರಾಮಾಣಿಕವಾಗಿ ಮನಕ್ಕೆ ಅನ್ನಿಸಿದ್ದನ್ನು ಹೇಳೋದಷ್ಟೇ.. ನಿಮ್ಮ ಕಡೆಯಿಂದ ಮರ್ಯಾದೆ ಸಿಗಬೇಕು, ನಮ್ಮನ್ನು ಗುರುತಿಸಿ ಹೊಗಳ ಬೇಕು ಎನ್ನುವ ಯಾವ ಒಂದು ಪೂರ್ವಾಗ್ರಹ ಪೀಡಿತರು ನಾವಲ್ಲ.. ತುಂಬಾ ಸರಳ ಮನದವರು.. ಸಾಮಾನ್ಯರು ಹಾಗಿದ್ದುದರಿಂದಲೇ ಎಲ್ಲವೂ ಚಂದ ಚಂದವಾಗಿರುವುದು..
ಏನೇ ಇದ್ದರು  ಕಳೆದ ಬಾರಿ ನಾನು ನಿಮಗೆ ಮಾಡಿದ ಕೀಟಲೆಗೆ ಸಾಕಷ್ಟು ಅನಂತ್ ಹಾಗೂ  ನಿಮ್ಮ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಕೆಲವು ಹೆಣ್ಣು ಮಕ್ಕಳು ಕೆಂಪು ಕೆಂಪಾಗಿ ನನ್ನ ಬಳಿ ಭಾವನೆ ವ್ಯಕ್ತಪಡಿಸಿದ್ದಾರೆ. ಖುಷಿ ಆಯ್ತು ನನಗೆ ಅವೆಲ್ಲ  ಓದಿ.. :)
ಮತ್ತೊಂದು ಸಂಗತಿ ಹೇಳ್ತೀನಿ ಸಾಮಾನ್ಯವಾಗಿ ನೀವು  ಆರಂಭದಲ್ಲಿ ಪುಟ್ಟ ಪುಟ್ಟ ರಸ್ತೆ, ದೊಡ್ಡ ದೊಡ್ಡ ಮನೆ, ಪುಟ್ಟ ಪುಟ್ಟ ಕಂಗಳು ಎಂದು ಹೇಳ್ತೀರಿ, ಅದರ ಜೊತೆ ಕರ್ನಾಟಕದ ಸಮಸ್ತ ಗ್ರಾಮೀಣ ವೀಕ್ಷಕರನ್ನು ಸಹ ನಿಮ್ಮ ಸ್ವಾಗತದ ಸಾಲಿನಲ್ಲಿ ಸೇರಿಸಿಕೊಳ್ಳಿ.. ಅವರಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ..ಬೆಂಗಳೂರಿನಂತಹ ಮಹಾನಗರಕ್ಕಿಂತ ಪುಟ್ಟ ಹಳ್ಳಿಗಳು, ಎಲ್ಲೋ ಇರುವ ವಿಕ್ಷಕರೇ ನಿಮ್ಮನ್ನು - ನಿಮ್ಮ  ಮಾತನ್ನು  ಹೆಚ್ಚು ಹೆಚ್ಚು ಮೆಚ್ಚಿರೋದು ...

No comments: