ಪ್ರಾಪರ್ಟಿ



ಅತ್ಯಂತ ಖೇದ ಅನ್ನಿಸುವ ಸುದ್ದಿ ಮಕ್ಕಳ ಮೇಲೆ ಮಾಡುವ ಅತ್ಯಾಚಾರ. ಅದರಲ್ಲೂ ರೆಪ್ಯು ಟೆಡ್ ಶಾಲೆಗಳಲ್ಲಿ ಆ ರೀತಿಯ ವಾತಾವರಣ ಇದ್ದಾರೆ ಕೆಳಸ್ತರದ ಮಕ್ಕಳು ಯಾವರೀತಿ ಬದುಕಲು ಸಾಧ್ಯ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ  . ಮುಖ್ಯವಾಗಿ ಇಂತಹ ಪ್ರಕರಣಗಳನ್ನು ಆ ಗಳಿಗೆ ತೋರಿ ಸುಮ್ಮನಾಗುವ ಮಾಧ್ಯಮಗಳು ಆನಂತರ ಮತ್ತೊಂದು ಪ್ರಕರಣ ಆಗುವ ತನಕ ಇಂತಹ ಸಮಸ್ಯೆಗಳು ನಮ್ಮ ಸಮಾಜದಲ್ಲಿ ಕಳೆಯಂತೆ  ಬೇರೂರಿದೆ ಕಿತ್ತು ಬಿಸಾಡ ಬೇಕು ಎನ್ನುವ ಅಂಶದ ಕಡೆಗೆ ಗಮನ ನೀಡ ಬೇಕು.ಪೂರಕ ವಾತಾವರಣದ ಸೃಷ್ಟಿ ಆಗ ಬೇಕು. ಆದರೆ ಮಾಧ್ಯಮವನ್ನು ನಡೆಸುವವರು ಮನುಷ್ಯರೆ ಅಲ್ವೆ ? ಅವರು ತಮ್ಮ ಲಿಮಿಟ್ ನಲ್ಲಿ ಏನಾಗುತ್ತದೆಯೋ ಅದನ್ನು ಮಾಡುತ್ತಾರೆ.


@ ಸಾಮಾನ್ಯವಾಗಿ ಟೀವಿ ಟಾಕ್  ಷೋ ಗಳನ್ನೂ ಪ್ರಸಿದ್ಧರು ಮಾಡುತ್ತಾರೆ. ಆಗ ಎಲ್ಲರು ಅವರೆಷ್ಟೇ ತಪ್ಪು ಮಾಡಲಿ ಒಪ್ಪಿಕೊಂಡು ಬಿಡ್ತಾರೆ. ಅದು ಸಾಮಾನ್ಯ ಸಂಗತಿ. ಆದರೆ ಪ್ರಸಿದ್ಧರ ಮಕ್ಕಳು ಇಂತಹ ಸಾಹಸಕ್ಕೆ ಕೈ ಹಾಕಿದಾಗ ಜನರು ಅವರ ಬಗ್ಗೆ ಅಭಿಪ್ರಾಯ ಹೇಳೋಕೆ ಹಿಂದೇಟು ಹಾಕ್ತಾರೆ. ಅದು ಅವರ ಬೆಳವಣಿಗೆಗೆ ಅಡ್ಡಗಾಲು ಅಂತ ನಾನು ನಂಬುತ್ತೀನಿ. ಭಾವನ ಬೆಳಗೆರೆ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಆಕೆಯ ಪ್ರತಿಭೆ ಹೊರ ಬರಲು ಇನ್ನು ಪ್ರಯತ್ನ ಮಾಡ ಬೇಕು. ಯಾಕೇಂದ್ರೆ ಸೋಫಾ ಇದ್ದ ಕಡೆ ಹೋಗಿ ಮಾತಾಡಿ ಬರುವ ಪರಿಪಾಠ ಹೊಂದಿದ್ದಾರೆ ಅದೇ ದೊಡ್ಡ ಸಮಸ್ಯೆ. ನಿರೂಪಣೆಗೆ ಪ್ರಾಪರ್ಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತದೆ.. ಉತ್ತಮ ನಿರೂಪಕರಿಗೆ  ಕ್ರೇಜಿ ಸ್ಟಾರ್ ರವಿಚಂದ್ರನ್  ಮನಸ್ಥಿತಿ ಇರಬೇಕು. ಹಾಗೆ ಆದಾಗ ಮಾತ್ರ ಎಲ್ಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳ ಬಹುದು. ರವಿಮಾಮ ಅವರ ಹೊಸ ಸಿನಿಮಾದಲ್ಲಿ ಲಿಫ್ಟ್ ಮುಖ್ಯ ಪಾತ್ರಧಾರಿಯಂತೆ.. ನನಗೆ ಆ ಸಂಗತಿ ತಿಳಿದೇ ರೋಮಾಂಚನ ಆಗಿ ಹೋಯ್ತು. ಅವರು ಸಂದರ್ಶನ ಒಂದರಲ್ಲಿ ತನ್ನ ಕಣ್ಣಿಗೆ ಯಾವ ವಸ್ತು ಕಂಡರು ಅದನ್ನು ಹೇಗೆ ಬಳಸಿಕೊಳ್ಳ ಬೇಕು ಎನ್ನುವ ಯೋಚನೆ ಬಂದು ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಥಿತಿ ಉಂಟಾಗುತ್ತದೆಯಂತೆ. .ಈ ಸಂಗತಿಯನ್ನು ಭಾವನಾಗೆ ಹೇಳ್ತಾ ಇರೋದು ಯಾಕೆ ಅಂದ್ರೆ ಆಕೆಯ ಖಾಸಬಾತ್ ವಿತ್ ಭಾವನ ಬೆಳಗೆರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ..ಅಂದಂಗೆ ಈ ಕಾರ್ಯಕ್ರಮ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ಭಾವನ ಅಕ್ಕ ಚೇತನ ನನ್ನ ಎಫ್ಬಿ ಗೆಳತಿ..ಆಗಾಗ ತನ್ನ ಮನದ ಭಾವನೆಗಳನ್ನು ಬರೀತಾ ಇರ್ತಾರೆ ಸಕತ್ ಇಷ್ಟ ಆಗುತ್ತೆ ಓದೋಕೆ  ನನಗೆ.ಮತ್ತೊಂದು ವಿಷ್ಯ ಭಾವನ ಇದು ನನ್ನ ಅಭಿಪ್ರಾಯ ಮಾತ್ರವಲ್ಲ ಬಹುತೇಕರದ್ದು! ಮತ್ತೊಂದು ಸಂಗತಿ ದೊಡ್ಡಣ್ಣನಂತಹ   ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಮಾತಾಡೋದು ಕಂಡಾಗ ಯಾರಿಗೂ ಆಪ್ತ ಆಗಲ್ಲ !!   

1 comment:

Badarinath Palavalli said...

ಇತ್ತೀಚೆಗೆ ನಿಜವಾಗಲೂ ಮಾದ್ಯಮಗಳು ಸಾಮಾಜಿಕ ಕಳಕಳಿಯುಕ್ತವಾಗಿ ವ್ವವಹರಿಸುತ್ತಿವೆ. ಶೋಷಣೆಯ ವಿರುದ್ಧ ಒಂದು ಅಭಿಯಾನದಂತೆ ಕೆಲಸ ಮಾಡುತ್ತಿವೆ. ಜಾಗೃತಿ ಮೂಡಿಸಿತ್ತಿವೆ.

ಸದರಿ ವಾಹಿನಿಯ ಸದರಿ ಕಾರ್ಯಕ್ರಮ ನನ್ನ ಗಮನಕೆ ಬಂದಿಲ್ಲ! ;) no comments...

ಕ್ರೇಜೀಸ್ಟಾರ್ ಅವರ ಮೇಕಿಂಗ್ ಒಂದು ಸಿನಿಮಾ ಪಾಠಸಾಲೆ.
ನಿರೂಪಕರ ಪ್ರತಿಭೆಯ ಮೇಲೆಯೇ ಯಾವುದೇ ಕಾರ್ಯಕ್ರಮದ ಉಳಿಗಾಲ! ಜನ ಮಾನಸದಲ್ಲಿ.
ಉದಾ: ಹಿಂದಿ ಕರೋಡ್ ಪತಿ. ನಟ ಪರೂಕ್ ಶೆಕ್ ಅವರ ಷೋ, ರವಿ ಬೆಳಗೆರೆಯವರ ಎಂದೂ ಮರೆಯದ ಹಾಡು, ಪಾಡುತಾ ತೀಯಗಾ - ಎದೆ ತುಂಬಿ ಹಾಡುವೆನು, ಕಥೆಯಲ್ಲ ಜೀವನ, ವೀಕೆಂಡ್ ವಿತ್ ರಮೇಶ್ - ಪರಿಚಯ - ಪ್ರೀತಿಯಿಂದ ರಮೇಶ್, ಸತ್ಯಮೇವ ಜಯತೇ...