ಬಿಡಿಸಿ ಹೇಳ ಬೇಕಿಲ್ಲಾ.. ಅಲ್ವ... !



ಬಿಗ್ ಬಾಸ್ ಬಗ್ಗೆ ಜನಕ್ಕೆ ಇದ್ದ ಕೋಪ ತಣ್ಣಗಾಯಿತು.. ಅದನ್ನು ತಣ್ಣಗೆ ಮಾಡಲು ಅವರು ಇಷ್ಟು ದಿನ ತೆಗೆದುಕೊಂಡರು :-) .. ನಿಕಿತಾಳನ್ನು ಉಳಿಸಿಕೊಂಡು ಅಲ್ಲಿ ಕನ್ನಡ ಕಲಿಸ್ಕೊಡುವ ಬಾಲಿಶ ಪ್ರಯತ್ನವನ್ನು   ಸುದೀಪ್ ಸಮರ್ಥಿಸಿಕೊಂಡರು ಅದು ತಪ್ಪು ಎನ್ನುವ ಅಂಶ ಅವರಿಗೆ ಗೊತ್ತಿತ್ತು :-)
ಕನ್ನಡ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ  ಬಿಗ್ ಬಾಸ್ ನ್ನು ಕಿಚ್ಚ ಸುದೀಪ್ ನಡೆಸಿ ಕೊಡುತ್ತಿರುವುದು ಜನಕ್ಕೆ ಇಷ್ಟ ಆಗಿದೆ.. ಕಿಚ್ಚ ವೈಯುಕ್ತಿಕವಾಗಿ ನನಗೆ ತುಂಬಾ ಇಷ್ಟ ಆಗುವ ಕಲಾವಿದ. ಆತನ ಕ್ರಿಯೇಟಿವಿಟಿ, ಪ್ರಯತ್ನ, ಹೊಸತನ ಎಲ್ಲವೂ ಯೂನಿಕ್. ಬಿಗ್ ಬಾಸ್ ಗೆ ಅವರು ನಿರೂಪಕರಾಗಿ ಬಂದಾಗ ಅಪಾರವಾಗಿ   ಖುಷಿ ಪಟ್ಟ ಫ್ಯಾನ್ ಗಳಲ್ಲಿ ನಾನು ಒಬ್ಬಳು.
ಕಿಚ್ಚ ಅವರ ಬಗ್ಗೆ ಹೇಳೋದಾದರೆ ಹೆಚ್ಚಿನ ಮಂದಿ ಎಲ್ಲ ಕ್ಷೇತ್ರದವರು  ತುಂಬಾ ಇಷ್ಟ ಪಡ್ತಾರೆ. ಅದಕ್ಕೆ ಇರ ಬೇಕು ನಿಕಿತ ವಿಷಯದಲ್ಲಿ ಅವರು ಅಷ್ಟೊಂದು ಕೋಪ ಮಾಡಿಕೊಂಡಿದ್ದು.
ಜನತೆಯನ್ನು   ಜನಾರ್ಧನ ಮೆಚ್ಚಿಸೋಕೆ ಆಗಲ್ಲ ಅನ್ನುವ ಮಾತು ಸತ್ಯ, ಆದರೆ ಆಗಲ್ಲ ಅಂತ ಕೂತರೆ ಪಾಕ ಮತ್ತಷ್ಟು ಹದಗೆಡುತ್ತೆ!

ಅತ್ಯಂತ ಸುಂದರವಾದ ಶೈಲಿ ಮತ್ತು ಆಂಗಿಕ ಭಾಷೆಯಿಂದ ಮನ ಸೆಳೆದ ಕಿಚ್ಚ ಅವರನ್ನು ಕಂಡರೆ ಈಗ ಅಪಾರ ಸಂಖ್ಯೆಯಲ್ಲಿ , ವಯಸ್ಸಿನ ಭೇದ ಇಲ್ಲದೆ ಇಷ್ಟ ಪಡುವಷ್ಟಮಟ್ಟಿಗೆ ಬೆಳೆದಿದ್ದಾರೆ. ಬೆಳೆದಿದ್ದಾರೆ ಅನ್ನುವ ಪದ ಈಗ ಯಾಕೆ ಬಳಸ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಬಹಳಷ್ಟು ಹಿರಿಯ ಹೆಣ್ಣುಮಕ್ಕಳು ಸುದೀಪ್ ಅವರನ್ನು ಹೀರೋನಂತೆ ಖಂಡಿಲ್ಲ ಮಗಂತೆ, ತಮ್ಮನಂತೆ, ಕಂಡಿದ್ದಾರೆ. ಅವರ ಭಾವನೆಗಳು ನನ್ನ ಮುಂದೆ ವ್ಯಕ್ತವಾದಾಗ  ಇರುವ ಸಂಗತಿ ನೇರವಾಗಿ  ಹೇಳ ಬೇಕಾಯ್ತು ಕಿಚ್ಚ.. ನಿಮ್ಮ ಮೇಲೆ ಅಸಹನೆಯಿಂದಲ್ಲ !

ನೀವು ಒಳ್ಳೆಯ ಶಾರೀರ ಹೊಂದಿದ್ದೀರಿ ಅಂತ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಹೆಣ್ಣುಮಕ್ಕಳು.. ನನ್ನ ಕಡೆಯಿಂದ ಹೇಳುವುದಾದರೆ ಬಾನದಾರಿಯಲ್ಲಿ ಹಾಡು ಹೇಳಿದ ನಿಮಗೆ   ನನ್ನ ಕಡೆಯಿಂದ ಜಾಸ್ತಿ ಲೈಕ್ಗಳು.  ನನ್ನ ಅತಿ ಮೆಚ್ಚಿನ ಹಾಡುಗಳಲ್ಲಿ ಒಂದು.. ಯಾರೋ ಯಾರೋ ಗೀಚಿ ಹೋದ ಹಾಡು ಸಹ :-)
ಮೊನ್ನೆ ನನ್ನ ಪೋಸ್ಟ್ ಕಟುವಾಗಿತ್ತು ಅಂದ್ರೆ ನಾನೆಷ್ಟು ಬೈಸಿಕೊಂಡಿದ್ದೆ ಅಂತ ನೀವು ತಿಳಿದುಕೊಳ್ಳಬೇಕು.. :-) ಯಾಕೆಂದ್ರೆ ಕಿಚ್ಚನ ಬಗ್ಗೆ ಹೆಚ್ಚು ಆಸ್ಥೆಯಿಂದ ಬರೆಯುವ, ಮಾತಾಡುವ ನಾನು ಕಿಚ್ಚನ ಕ್ಲೋಸ್  ಫ್ರೆಂಡ್  ಅಂತ ತಿಳಿದಿದ್ದಾರೆ ಬಹಳ ಹೆಣ್ಣುಮಕ್ಕಳು :-)
ನನ್ನ ಹತ್ರ ಅವರು ನೋಡು ಹೀಗಾಗಿದೆ ಎಂದು ರೇಗಿದ್ದರು.. ಈಗ ಅವರಿಗೆ ಸಮಾಧಾನ ಆಗಿದೆ.. ಆದಷ್ಟು ಕನ್ನಡ ಅಲ್ಲದೆ ಇರುವ ಅಂಶಕ್ಕೆ ಬೆಲೆ ಕೊಡ ಬೇಡಿ.. .. ಮತ್ತೊಂದು ಸಂಗತಿ ನಿನ್ನೆ  ಅನೇಕ ಹೆಣ್ಣುಮಕ್ಕಳು (ನನ್ನನ್ನು ಬೈದವರು ಸೇರಿದಂತೆ ) ಫೋನಿಸಿದರು ಮತ್ತು ನಿಮಗೂ ಹಾಗೂ ಬಿಗ್ ಬಾಸ್ ಗೂ ಧನ್ಯವಾದ ಅರ್ಪಿಸಿದ್ದಾರೆ  , ಯಾಕೇಂತ ಬಿಡಿಸಿ ಹೇಳ ಬೇಕಿಲ್ಲಾ.. ಅಲ್ವ... !

No comments: