ಶಂಕರ


ಕೆಲವು ಚಾನೆಲ್ಗಳು ತುಂಬಾ ಫೈಟಿಂಗ್ mood ್ಲಿ ಇರುತ್ತೆ ಹರೆಯದ ಹುಡುಗರ ರೀತಿ. ಆದರೆ ಒಂದಷ್ಟು ಚಾನೆಲ್ಗಳು ತಮ್ಮ ಪಾಡಿಗೆ ತಾವು ಶಾಂತ ರೀತಿಯಲ್ಲಿ ಕೆಲಸ ಮುಂದು ವರೆಸುತ್ತಾ  ಇರುತ್ತದೆ ಮಧ್ಯಮ ವರ್ಗದ ಗೃಹಿಣಿಯಂತೆ !
ಮಾಡುವ ಕೆಲಸ ಒಪ್ಪವಾಗಿ, ಶಾಂತವಾಗಿ ,ತನ್ನ ಪಾಡಿಗೆ ತಾನು ಯಾರ ಸಹಾಯ ಬಯಸದೆ ... ಲಿಸ್ಟ್ ದೊಡ್ಡದು ಆಕೆಯ  ಕೆಲಸಗಳದ್ದು ...

ಅಂತಹ ಮನೋಭಾವ ಕಾಣೋದು ಸಂಸ್ಕಾರ್  ಮತ್ತು ಶಂಕರ  ವಾಹಿನಿಗಳಲ್ಲಿ.ದೇವರ ಬಗ್ಗೆ ನಂಬಿಕೆ ಇರದವರು ಇಲ್ಲ ನಾನು ಸಂಸ್ಕಾರ್ ಲೈಕ್ ಮಾಡಲ್ಲ ಅನ್ನ ಬಹುದು,ಆದರೆ ಶಂಕರ ಚಾನೆಲ್ ಎಲ್ಲ ಇಂತಹ ವಾಹಿನಿಗಳಿ ಗಿಂತ ಭಿನ್ನ. ಇಲ್ಲಿ ದೇವರು, ಆಚರಣೆ, ಸಂಸ್ಕಾರ, ಭವಿಷ್ಯ ಹೀಗೆ ಎಲ್ಲದರ ಜೊತೆಗೆ ಎಲ್ಲ ವರ್ಗದವರು ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತೆ. ಕನ್ನಡದ ಜೊತೆಗೆ ತಮಿಳು ತಿಳಿದಿದ್ರೆ ಈ ಚಾನೆಲ್ ಇನ್ನು ಹೆಚ್ಚು ಇಷ್ಟ ಆಗುತ್ತೆ 

ಭಾಷೆಗಳ ಬಗ್ಗೆ ಹೇಳುವುದಕ್ಕಿಂತ ವೆರೈಟಿ ಬಗ್ಗೆ ಹೇಳೋದಾದ್ರೆ ತುಂಬಾ ಚೆನ್ನಾಗಿರುತ್ತೆ. ಅಂದ್ರೆ ದೈವ ಭಕ್ತರಿಗೆ ಹೆಚ್ಚು ಖುಷಿ 
ಕೊಡುವ ಪಕ್ಕಾ  ದೇವರ ಚಾನೆಲ್.ಮತ್ತೊಂದು ಸಂಗತಿ ಅಂದ್ರೆ ಇಲ್ಲಿ ಮುದ್ದಾದ ನಿರೂಪಕಿಯರು ಇದ್ದಾರೆ.
ನಿರೂಪಕಿಯರ ಬಗ್ಗೆ ಅಂದ್ರೆ ಮತ್ತಷ್ಟು ಉತ್ತಮ ನಿರೂಪಕಿಯರು ಎಲ್ಲ ವಿಧದಲ್ಲೂ ಪರ್ಫೆಕ್ಟ್ ಆಗಿರುವವರ ಬಗ್ಗೆ ಗಮನ ಕೊಟ್ರೆ .. ಇನ್ನು ಹೆಚ್ಚು ಜನಕ್ಕೆ ಇಷ್ಟ ಆಗುತ್ತೆ. 
ಮುಖ್ಯವಾಗಿ ಇಲ್ಲಿ ದೇವರ ಬಗ್ಗೆ ಭಯ ಹುತ್ತಿಸಲ್ಲ.. ಪ್ರೀತಿ ಉಂಟಾಗುತ್ತೆ.

ಇಲ್ಲಿ ತನಕ ಈ ಚಾನೆಲ್ ವಿಷಯದಲ್ಲಿ ಅಪಾರ ಸಂಖ್ಯೆ ವೀಕ್ಷಕರು ಬಿದ್ದಿದ್ದು ನಾನು ಕಂಡಿಲ್ಲ.. ಸೊ  ಜೈ ಮಾತಾ ದಿ..ಹರಿ ಓಂ..ಶಿವಾಯ ನಮಃ  ಕೇಪ್ ಇಟ್  ಅಪ್ !

No comments: