ಎರಡು

ಬಹಳಷ್ಟು  ಜನಕ್ಕೆ ಕೆಲವು  ಸತ್ಯಗಳ ಅರಿವು ಇರೋದೇ ಇಲ್ಲ ಅಂತ ಕಾಣುತ್ತೆ. ಯಾಕೆಂದ್ರೆ ಬೇರೊಬ್ಬರ ಯಶಸ್ಸು ನಮ್ಮಿಂದ ಅನ್ನುವ ಹುಂಬ ನಿರ್ಧಾರಕ್ಕೆ ಬಂದು ಬಿಡ್ತಾರೆ ಅದರಲ್ಲೂ ಟೀವಿ ಪರದೆ ಮೇಲೆ ಕಾಣೋ ಅನೇಕ ಮಂದಿ ತಾವು ವಿಶೇಷ ವ್ಯಕ್ತಿತ್ವ, ತಮ್ಮನ್ನು ಕಂಡ್ರೆ ಜನ ಪ್ರಾಣ ಬಿಡ್ತಾರೆ ಅನ್ನುವ ಒಂದು ಬಗೆಯ ಸುಳ್ಳು ಲೋಕದಲ್ಲಿ ವಿಹರಿಸ್ತಾ ಇರ್ತಾರೆ. ಅಂತಹವರನ್ನು ಕಂಡ್ರೆ ನನಗೆ ಆಗುವ ಆಶ್ಚರ್ಯ ಅಷ್ಟಿಷ್ಟಲ್ಲ.

ನಾನು ಈ ಬ್ಲಾಗ್ ಬರೆಯಲು ಆರಂಭಿಸಿದ ಎರಡೆನೇ ವರ್ಷದಲ್ಲಿ ನನಗೊಂದು ಕಾಮೆಂಟ್ ಬಂದಿತ್ತು. ಅದರಲ್ಲಿ ಇದ್ದಿದ್ದು, ನನ್ನ ಈ ಬ್ಲಾಗ್ ಯಾರೂ ಓದಲ್ಲ ,ಸೊ ಅದನ್ನು ಬೆಳೆಸುವುದಕ್ಕಿಂತ, ಈಗಲೇ ಡಿಲೀಟ್  ಮಾಡಿ ಅಂತ. ಗೊತ್ತಿಲ್ಲ ಯಾರು ಆ ಮಹನೀಯರು ಈ ಮಾತು ಹೇಳಿದ್ದೋ, ಈ ಬ್ಲಾಗ್ ಓದಲ್ಲ ಎಂದು ಹೇಳಿದ ವ್ಯಕ್ತಿಯೇ ಕಾಮೆಂಟ್ ಹಾಕಿದ್ದಾರೆ ಅಂದ್ರೆ ನಿನ್ನ ಬರಹ  ತಪ್ಪದೆ ಓದುತ್ತಾರೆ ಬರಿ ಅಂತ ಹುರುದುಂಬಿಸಿದ್ದು ಅಮ್ಮ-ಅಣ್ಣ ಮತ್ತು ನನ್ನ ಕಲೀಗ್ಸ್ .

ಈ ಬ್ಲಾಗ್ ಕೇವಲ ನನ್ನ ಖುಷಿಗೆ ಬರಿತಾ ಇಲ್ಲ, ಮುಖ್ಯವಾಗಿ ನಾನು ನನ್ನ ವಯುಕ್ತಿಕ ಸಂಗತಿಗಳ ಬಗ್ಗೆ  ನಾನು  ಇಲ್ಲ. ಮಾಧ್ಯಮದ ಕಾರ್ಯಕ್ರಮಗಳ  ನಾನು ವೀಕ್ಷಿಸಿದ್ದು, ನನಗೆ ಇಷ್ಟವಾದ ಸಂಗತಿ ಇವೆಲ್ಲ ಬರೀತಾ ಹೋದಂತೆ ನನಗೆ ನನ್ನದೇ ಆದ ಓದುಗ ಬಳಗ ಬೆಳೆಯಿತು. ವಿಶೇಷ ಅಂದ್ರೆ ಸಾಕಷ್ಟು ಜನ ನಾನು ಬರೆಯಲೇ ಬೇಕೆಂಬ ಒಂದು ಬಗೆ ವಾತಾವರಣ ಕಲ್ಪಿಸಿದರು. ಓದುಗರಿಗಾಗಿ ಬರೆದೆ, ಇಲ್ಲಿ ನಾನು ತಿಳಿಸುವ  ಕಾರ್ಯಕ್ರಮಗಳು , ನಿರೂಪಕರು, ವಾಹಿನಿಗಳನ್ನು ಆಸಕ್ತಿಯಿಂದ ವೀಕ್ಷಿಸುವ ಮಂದಿಯ ಪ್ರಮಾಣ ಬೆಳೆಯಿತು.ಇದಕ್ಕಾಗಿ ನಾನು ಪಟ್ಟ ಶ್ರಮ, ನನ್ನ ವೇಳೆ, ನನ್ನ ಡೆಡಿಕೇಶನ್  ನಮ್ಮ ಮನೆಯವರು ಮತ್ತು ನನ್ನ ಒಂದಷ್ಟು ಆಪ್ತ ಬಳಗಕ್ಕೆ ಮಾತ್ರ ಗೊತ್ತು.

 ಪರಮಾಪ್ತರು ಅನ್ನಿಸಿಕೊಂಡವರು ತಮ್ಮ ಗೆಳೆಯರು ಉದ್ದಾರ ಆದರೆ ಒಳ್ಳೆಯ ಮಾತು ಹೇಳುವುದಿಲ್ಲ, ಆದರೆ ನಾನು ಹೇಳಿದ್ದೀನಿ, ಇದನ್ನು ನಾನು ಅಹಂಕಾರದಿಂದ ನಿಮಗೆ ತಿಳಿಸ್ತಾ ಇಲ್ಲ ವಿನಮ್ರವಾಗಿ ಹೇಳ್ತಾ ಇದ್ದೀನಿ.

ನನ್ನ ಬಳಗ ಅದೆಷ್ಟು ದೊಡ್ಡದಾಗಿದೆ ಅಂದ್ರೆ ಬಿಡಿ..! ಆದರೂ ಅನೇಕರು, ಅದೇ ಬರೆಸಿಕೊಂಡವರು  ನಾನು ಬರದೆ ಇಲ್ಲ, ನಾನು ಗೊತ್ತೇ ಇಲ್ಲ ಅನ್ನುವಂತೆ ಪ್ರಿಟೆಂಡ್  ಮಾಡ್ತಾರೆ, ಅದು ನನಗೆ ಬೇಜಾರು ಉಂಟು ಮಾಡಿಲ್ಲ, ಮನುಷ್ಯ ಬೇರೆಯ ಪ್ರಾಣಿಗಳಿಗಿಂತ ಭಿನ್ನ ಅಲ್ವ..! 

ಯಾಕೆ ಈ ಮಾತು ಹೇಳೋಕೆ ಹೊರಟೆ ಅಂದ್ರೆ  ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್  Boy ವಿಚಿತ್ರ ವ್ಯಕ್ತಿತ್ವದ ಸ್ಪರ್ಧಿ ಇಮಾಂ ಸಿದ್ದಿಕಿ ಅವರಿಗೆ ಹೇಳಿದ ಮಾತು ಸತ್ಯ ನೂರಕ್ಕೆ ಕೋಟಿಯಷ್ಟು.
ನಾನೇ ಶಾರೂಕ್ ಖಾನ್, ಪ್ರ್ರಿತಿ ಜಿಂಟಾ ಗೆ  ಮಾಡಿದ್ದು, ಅಂತ ಹೇಳುವುದರ ಮೂಲಕ ನಾನೇ ಅವರನ್ನು ಉದ್ದಾರ ಮಾಡಿದ್ದು ಎನ್ನುವ ಅರ್ಥ ಬರುವಂತ ಮಾತನಾಡಿದರು  ಇಮಾಂ. ಆತನ  ಮಾತಿಗೆ  ಹಾಗೂ ಸಲ್ಮಾನ್ ಗೆ ಟೈಮ್  ಔಟ್ ಅಂದ ರೀತಿಗೆ ಸಿಟ್ಟಾದ ಸಲ್ಮಾನ್ , ಶಾರೂಕ್ ರನ್ನು ಸೃಷ್ಟಿಸಿದ್ದು ದೇವರು, ಬೆಳೆಸಿದ್ದು ಆತನ ಫ್ಯಾನ್ ಗಳು, ಆತ  ಯಶಸ್ವಿ ಆಗಿದ್ದು ತನ್ನ ಶ್ರಮ ಮತ್ತು ಡೆಡಿಕೇಶನ್  ನಿಂದ ಅಂತ ಹೇಳಿದ್ರು. ನನಗೆ ಆ ಮಾತು ತುಂಬಾ ಇಷ್ಟ ಆಯ್ತು, ಬುಡು ಸಲ್ಮಾನು ನಾನು ಅಂತ ಹೇಳುವ ಮಂದಿ ಹೆಚ್ಚು ಈ ಪರಪಂಚದಾಗೆ ..!

ಫೇಮಸ್  ಕಲಾವಿದರು ಉತ್ತಮ ನಿರೂಪಕರಾಗಿರ್ತಾರೆ ಅಂತ ಹೇಳೋಕೆ ಆಗಲ್ಲ, ಆದರೆ ನಮ್ಮ ಕನ್ನಡದ ಶಿವಣ್ಣ, ಪುನೀತ್, ಜಗ್ಗೇಶ್, ಸುದೀಪು ಎಲ್ರು ವಾವ್  ಅನ್ನುವಂತೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿ ದ್ರು .ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ವಾವ್  ಅನ್ನುವಂತೆ  ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ ಸಲ್ಮಾನ್ ಸಿನಿಮಾಗಳಲ್ಲಿ ಸಲ್ಮಾನ್ Boy  ಮೃದುವಾದ  ಮಾತಿನ ಶೈಲಿ ನನಗೆ ತುಂಬಾ ಇಷ್ಟ.ಆದ್ರೆ ಅಂತಹ ಕೋಪದಿಂದ ಬೆಂಕಿ..! ಏನೇ ಹೇಳಿಸಲ್ Man  ಅವರು ಕೋಪ ನಿಯಂತ್ರಿಸಿದ್ದು ,ಕಾರ್ಯಕ್ರಮ ಕೂಲಾಗಿ ಮುನ್ನಡೆಸಿದ್ದು .... !ಎಲ್ರೂ ಸಾಮಾನ್ಯವಾಗಿ ಒಂದು ಕಣ್ಣನ್ನು ಮಿಟುಕಿಸೋದು ,ಆದರೆ ಸಲ್ಮಾನ್ ಎರಡು ಕಣ್ಣು ಬಳಸ್ತಾರೆ .. ಓಕೆ ಸಲ್  ಹಿಂಗೆ ಆಗುತ್ತಾ 
 ಓಯ್  ಓಯ್  ಸಲ್ಮಾನ್  Boy  ಕ್  ಲೈಕ್  ಇಟ್ 





No comments: