ಮಿಸ್ಸಿಂಗ್..

ಕನ್ನಡ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ವಾಹಿನಿಗಳು  ಯಾವುದು ಅಂತ ಈಗ ಕೇಳಿದ್ರೆ ಎಲ್ಲವೂ ಅನ್ನೋ ಉತ್ರ ಸಿಗುತ್ತೆ. ಯಾಕೆ ಅಂದ್ರೆ ಎಲ್ಲರೂ ಎಲ್ಲವನ್ನೂ  ವೀಕ್ಷಿಸುತ್ತಾರೆ.
ಆದರೆ ಹೆಣ್ಣುಮಕ್ಕಳು ತಪ್ಪದೆ ವೀಕ್ಷಿಸುವ ವಾಹಿನಿಗಳು ಎಲ್ಲವೂ ಆದರೂ ಸಹ ಅವರ  ಮೆಚ್ಚಿನ ಧಾರಾವಾಹಿಗಳು ಪ್ರಸಾರ ಆಗೋದು ಉದಯ, ಈ ಟೀವಿ ಕನ್ನಡ, ಸುವರ್ಣ, ಜೀ ಕನ್ನಡ, ಕಸ್ತೂರಿ,ಚಂದನ ವಾಹಿನಿಗಳಲ್ಲಿ .

ಉದಯ ವಾಹಿನಿಯು  ಏಕಾಂಗಿಯಾಗಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಅದಕ್ಕೆ ಎದುರಾಳಿ ಆಗಿ ಬಂದ  ವಾಹಿನಿ ಈ ಟೀವಿ ಕನ್ನಡ.ಅದನ್ನು  ಬಲಶಾಲಿ ಮಾಡಿದ್ದು ಅದರಲ್ಲಿ ಪ್ರಸಾರ ಆಗುತ್ತಿದ್ದ ಕಾರ್ಯಕ್ರಮಗಳು.ಅಂತಹ ಕಾರ್ಯಕ್ರಮಗಳನ್ನು ವೀಕ್ಷಕರ ಮನಸ್ಸಿಗೆ ತಲಪುವಂತೆ ಮಾಡಿದ್ದು ಅನೇಕ ಮಂದಿ.
 ಈ ಟೀವಿ -ಮುಖ್ಯವಾಗಿ ಎಸ್ .ಪಿ. ಬಾಲ ಸುಬ್ರಮಣ್ಯಮ್ ,ಟಿ.ಎನ್ . ಸೀತಾರಾಮ್, ಬಾಲ ಕೃಷ್ಣ ಕಾಕತ್ಕರ್, ಸಿಹಿಕಹಿ ಚಂದ್ರು,ರವಿ ಬೆಳಗೆರೆ...!ಮತ್ತೆ ಆ ಕಂಪನಿಯಲ್ಲಿ ಇದ್ದ ಅನೇಕಾನೇಕ ಮಂದಿ.
ಹಾಡಿನ ರಿಯಾಲಿಟಿ ಷೋಗೆ ಹೊಸ ಆಯಾಮ ದೊರಕಿಸಿ ಕೊಟ್ಟ ಎಸ್ಪಿಬಿ  ಈ ಕಾರ್ಯಕ್ರಮದಲ್ಲಿ ತಾವು ಭಾಗಿ ಆಗ ಬೇಕು ಎಂದು ನಾನು ಕಂಡಂತೆ ಅನೇಕಾನೇಕ ಉದಯೋನ್ಮುಖ  ಕಲಾವಿದರು ಕಾಯುತ್ತಿದ್ದರು .ಚಂದನ ವಾಹಿನಿಯ ಥಟ್ ಅಂತ ಹೇಳಿ ಮತ್ತು, ಮಧುರ ಮಧುರ ವೀ.. ಕಾರ್ಯಕ್ರಮದ ರೀತಿ ಎಸ್  ಪಿ ಬಿ ಅವರ ಎದೆ ತುಂಬಿ ಹಾಡಿದೆನು ಹೆಚ್ಚು ಕಾಲ ಉಳಿದ,ಜನರ ಮೆಚ್ಚಿನ ಕಾರ್ಯಕ್ರಮ. ಆದ್ರೆ ಈಗ ಅದು ಮಿಸ್ಸಿಂಗ್..

ಕ್ರೈಮ್  ಡೈರಿ ಕಾಕತ್ಕರ್ ಉದಯಕ್ಕೆ ಹೊರಟ  ಬಳಿಕ  ಮಾತಿನ ಮೂಲಕ ಮೋಡಿ  ಮಾಡಿದ ರವಿ ಬೆಳಗೆರೆ ಹತ್ತುಗಂಟೆಗಾಗಿ ವೀಕ್ಷಕರು ಕಾಯುವಂತೆ  ಮಾಡಿದ ಸಾಹಸಿ!ಅವರ ಹಾಡಿನ ಷೋ ಸಹ ಅಷ್ಟೇ ಖುಷಿ ಕೊಟ್ಟ ಕಾರ್ಯಕ್ರಮ 
ಅದೇ ರೀತಿ ಸಿಹಿ ಕಹಿ ಚಂದ್ರು ಗ್ರೂಪ್ ಸಹ ಹಾಸ್ಯದ ಸವಿ ರುಚಿ ನೀಡಿದ್ದು  ಹಳೆಯ ಕಥೆ. 
ಟಿ.ಎನ್ .ಸೀತಾರಾಮ್ ಹೆಣ್ಣುಮಕ್ಕಳ ನಾಡಿಮಿಡಿತ ಬಲ್ಲ ನಿರ್ದೇಶಕ. ಯಾವುದೇ ಧಾರವಾಹಿ  ಆರಂಭಿಸಲಿ ಅದು ವೀಕ್ಷಕರಿಗೆ ತಲಪುವಂತೆ ಸಿದ್ಧ ಮಾಡಿರುತ್ತಾರೆ. ಒಂದರ್ಥದಲ್ಲಿ ಹೇಳುವುದಾದರೆ ಟಿ .ಎನ್ .ಎಸ್  ಧಾರವಾಹಿ ನೋಡೋದೇ  ಪ್ರತಿಷ್ಠೆಯ ಸಂಖೇತ ಅನ್ನುವಷ್ಟರ ಮಟ್ಟಿಗೆ ಜನರನ್ನು ತಲುಪಿರುವ ಸೀತಾರಾಮ್ ಅವರ ಬಾಂಧವ್ಯ  ಈ ಟೀವಿ ಜೊತೆ ಹೀಗೆ ಮುಂದುವರೆಯುತ್ತಾ..? ಕಾಯೋಣ.. ಸಧ್ಯಕ್ಕೆ ಅದರ ಫಲಿತಾಂಶ ದೊರಕಲಿದೆ.

ಹಿಂದಿ ಧಾರವಾಹಿಗಳನ್ನು ರೀಮೇಕ್ ಮಾಡುವ ಕೆಲಸ ಈಗ ಈಟೀವಿಯಲ್ಲಿ  ಆರಂಭ ಆಗಿದೆ. ಫೈನ್ ..ಆದರೆ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಇದ್ಯಾ ... !!! 

1 comment:

Badarinath Palavalli said...

ವಾಹಿನಿಗಳ ಬಗೆಗಿನ update ಇಷ್ಟವಾಯ್ತು.