ಆ ಅಹಂಕಾರ!



ಜನಶ್ರೀ ವಾಹಿನಿಯಲ್ಲಿ ಕಥೆಗಾರ ಅನ್ನುವ ಧಾರವಾಹಿ ಪ್ರಸಾರ  ಆಗ್ತಾ ಇದೆ ಬಹಳ ದಿನಗಳಿಂದ . ಕನ್ನಡ ವಾಹಿನಿಗಳಲ್ಲಿ ಕಾಣ ಸಿಗುವ ಸದಭಿರುಚಿಯ ಸುಂದರ ಕಾರ್ಯಕ್ರಮಗಳನ್ನು ನೀಡುವ ವಿಷಯದಲ್ಲಿ ಜನಶ್ರಿ ಒಂದು ಕೈ ಮುಂದೆ . ಮನೆಯವರೆಲ್ಲಒಟ್ಟಿಗೆ ನೋಡುವಂತಹ ಕಾರ್ಯಕ್ರಮಗಳನ್ನು ಇದು ಪ್ರಸಾರ ಮಾದೊದು. ಸ್ವಲ್ಪ ಜಾಸ್ತಿನೆ ಇಷ್ಟ ಪಟ್ಟು ನೋಡ್ತೀನಿ ಈ ವಾಹಿನಿ. ಕಥೆಗಾರ ಸಣ್ಣ ಕಥೆಗಳನ್ನು ದೃಶ್ಯೀಕರಿಸಿ  ವೀಕ್ಷಕರ ಮನಸ್ಸು ತಣಿಸುವಂತೆ ಮಾಡಿರುವ ಸುಂದರ ಪ್ರಯತ್ನ. 
 ನಿನ್ನೆ ಬೀಚಿ ಅವರ ತಿ೦ಮ್ಮ  ಪ್ರಸಾರ ಆಯ್ತು. ಬೀಚಿ ಬರಹದಷ್ಟು ಖುಷಿ ಕೊಡಲಿಲ್ಲ ಅದು, ಆದರೂ ಬೋರ್ ಹೊಡಿಸಲಿಲ್ಲ. 




ದೊಡ್ಡ ದೊಡ್ಡ ಕಲಾವಿದರೂ, ಅದೂ ಸಿಕ್ಕಾಪಟ್ಟೆ ಕೊಡಗೈ ದಾನಿಗಳು ಅನ್ನಿಸಿಕೊಂಡವರು ಸರ್ಕಾರ ನೀಡುವ ಜಾಮೀನಿಗಾಗಿ ಬಡಿದಾಡುತ್ತಾರೆ. ಆದರೆ ನಿಜಕ್ಕೂ ಸಿಗ ಬೇಕಾದವರಿಗೆ ಮಾತ್ರ ಸಿಗೋದೆ ಇಲ್ಲ .. ಹಳ್ಳದ ಕಡೆಗೆ ನೀರು ಹರಿಯೋದು ಅನ್ನುವಂತೆ . ಉದಯ ನ್ಯೂಸ್ ನಲ್ಲಿ ಹಿರಿಯ ಕಲಾವಿದರು ರಸ್ತೆ ಬದಿಯಲ್ಲಿ ಬದುಕ್ತಾ ಇರೋ ನ್ಯೂಸ್ ಪ್ರಸಾರ ಅಯ್ತು. ಬಿ.ಸರೊಜಾ ದೇವಿ ಇವರ ಸಿನಿಮಾದಲ್ಲಿ ಮೊದಲು ನಟಿಸಿದ್ದಂತೆ , ಹೀಗೆ ಅನೇಕ ಸಂಗತಿಗಳು ದಿನಪತ್ರಿಕೆಯಲ್ಲಿ ಪ್ರಕಟ ಆಗಿತ್ತು . ಆ ಸುದ್ದಿ ಓದಿದಾಗ ಕಸಿವಿಸಿ ಆಗಿತ್ತು, ಆದರೆ ದೃಶ್ಯ ಮೂಲಕ ಕಂಡಾಗ ಮತ್ತಷ್ಟು ಬೇಸರ ಆಯ್ತು. ಹಿರಿಯ ಕಲಾವಿದರೂ ಸಣ್ಣ-ಪುಟ್ಟ ಸೌಲಭ್ಯವಿಲ್ಲದೆ  ಬದುಕಿನ ಕೊನೆದಿನಗಳನ್ನು ಕಳೆಯುವ ಸಂಗತಿ ವೀಕ್ಷಿಸುವಾಗ ಮನಸ್ಸು ಕಹಿಕಹಿ ಆಗುತ್ತೆ..! 





ಒಮ್ಮೆ ಹೀಗೆ  ಹಿಂದಿ ವಾಹಿನಿಯಲ್ಲಿ ಪ್ರಸಾರ  ಆಗುವ ಬಿಗ್ ಬಾಸ್ ಬಗ್ಗೆ ಬರೆದಿದ್ದೆ. ಆಗ ನನ್ನ ಬ್ಲಾಗ್ ತಪ್ಪದೆ ಓದುವವರೊಬ್ಬರು ಛೆ ನಮ್ಮ ಕನ್ನಡದಲ್ಲಿ ಇಂತಹ ಕಾರ್ಯಕ್ರಮ ಪ್ರಸಾರ ಆಗ್ಬಾರದಿತ್ತೆ ಅಂತ ಹೇಳಿದ್ರು. ಅವರ ಆಸೆ ಈಗ ನೆರವೆರಿದೆ. ಇದರಲ್ಲಿ ಏನು ಇಲ್ಲ ಆದರೆ ಎಲ್ಲರನ್ನು ಆಕರ್ಷಿಸುವ ಕಾರ್ಯಕ್ರಮ ಈ ಬಿಗ್ ಬಾಸ್ . ಸುದೀಪ್ ನಿರೂಪಣೆ ಖುಷಿ ಕೊಡ್ತು . 
ಅನೇಕಾನೇಕರು ಸುದೀಪ್ ಅವರ ನಟನೆ , ಒಟ್ಟಾರೆ ಸುದೀಪ್ ಅವರನ್ನು ಕಂಡ್ರೆ ಸಕತ್ ಲೈಕ್ . ನಾನು ಆ ಲಿಸ್ಟ್ ನಲ್ಲಿ ಇದ್ದೀನಿ . ಆದರೆ ಸಾಧಕರು ಅನ್ನುವ ಲಿಸ್ಟ್ ನಲ್ಲಿ ಇರುವವರು ಎಲ್ರು ಸಾಧಕರ? ಅಯ್ಯೋ ಅನ್ನುವಂತಾಯಿತು ಅವರೆಲ್ಲರನ್ನು ಕಂಡು :-)
ಆದರೆ ಹೆಚ್ಚು ಬೇಸರ ಅನ್ನಿಸಿದ್ದು ಅನುಶ್ರಿ ಮತ್ತು ಕಿಸ್ಸಿಂಗ್ ಲೇಡಿ ಮಾತುಕತೆ. ಹಿರಿಯ ಕಲಾವಿದೆ , ಕರ್ನಾಟಕದ  ರತ್ನ, ಮಿನುಗುತಾರೆ ಕಲ್ಪನಾ ಬಗ್ಗೆ ಲೇವಡಿ ಮಾಡಿದ್ದು ಮಾತ್ರ ಅಕ್ಷಮ್ಯ. ಆಕೆ ಮುಂದೆ ಏನೇನೇನು ಅಲ್ಲದ ಈ  ಇಬ್ಬರ ಮಾತು.. ಆ ಅಹಂಕಾರದ ನಡುವಳಿಕೆ .. !!
ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಬ್ರಹ್ಮಾಂಡ ಸ್ವಾಮಿಽವರ ಮಾತುಗಳು ಮಜಾ ಕೊಡ್ತಾ ಇದೆ. 
ಈ ರಿಯಾಲಿಟಿ ಷೋ ಈ ಟೀವಿ ಕನ್ನಡದ ಮೇಲೆ  ಯಾವ ರೀತಿ ಪ್ರಭಾವ ಬೀರುತ್ತೆ ಅನ್ನುವ ಸಂಗತಿ ಕಾದು ನೋಡಬೇಕು .   

comments :



Dear Umesh Desai : ಕಿಸ್ಸಿಂಗ್  ಲೇಡಿ ನರ್ಸ್  ಜಯಲಕ್ಷ್ಮಿ ಯಂಗ್ ಗರ್ಲ್ ಅಲ್ಲ ಆಕೆ ಈ ರೀತಿ ಹೇಳಿದ್ದು ತಪ್ಪು ಕಲ್ಪನಾ ಬಗ್ಗೆ.  ಇನ್ನು ಅನುಶ್ರೀ ಯಾವ ರೀತಿಯಿಂದಲೂ ಇನ್ನು ಬೆಳೆದಿಲ್ಲ. ಆಕೆ ಸಣ್ಣ ಆಂಕರ್ ಆದರೆ ಆಕೆ ನಿರೂಪಣೆ ಅದೆಷ್ಟು ಕೆಟ್ಟದಾಗಿರುತ್ತೆ ಅಂದ್ರೆ .. ಮುಖ್ಯವಾಗಿ ಅತಿಯಾಗಿ ಕಿರಿಚುತ್ತಾ ಮಾತಾಡೋ ರೀತಿ ಕಿರಿಕಿರಿ ಆಗುತ್ತೆ ವಿನಃ ಖುಷಿ ಕೊಟ್ಟಿಲ್ಲ ಎಂದಿಗೂ . ಮಿನುಗುತಾರೆ ಕಲ್ಪನಾ ಡ್ರಸ್  ಸೆನ್ಸ್ ಆಕೆ ಬಳಸುತ್ತಿದ್ದ- ಧರಿಸುತ್ತಿದ್ದ ಒಡವೆ, ಸೀರೆ, ಆ ವಿನ್ಯಾಸ ಇಂದಿಗೂ ಜನಪ್ರಿಯತೆ ಕಳೆದು ಕೊಂಡಿಲ್ಲ . ಮೇಲೋ ಡ್ರಾಮದ ಹಿಂದೆ ಆಕೆಯ ಬದುಕಿನ ದುರಂತ ಅಡಗಿತ್ತು ಅಂತ ನಾನು ನಿಮಗೆ ಹೇಳುವ ಅಗತ್ಯವಿಲ್ಲ ಯಾಕೆಂದ್ರೆ ನಿಮಗೆ ಅದು ಗೊತ್ತೇ ಇದೆ. 

3 comments:

Badarinath Palavalli said...

ಒಳ್ಳೆಯ ವಿಶ್ಲೇಷಣಾತ್ಮಕ ಬರಹ.

umesh desai said...

kalpana was always melodramatic the scene which anushree imitated of sharapanjara..that scene was awful really..!!

Anonymous said...

ಪ್ರಖ್ಯಾತರನ್ನು ಹಳಿದು ತಮ್ಮ ಅಸ್ತಿತ್ವದ ಸೂಚನೆ ನೀಡುವ ಕೆಟ್ಟ ಚಾಳಿ ಬಹಳಷ್ಟು ಜನರಿಗಿದೆ.
ಆಕೆ ಸುಮ್ಮನೆ ಮಿನುಗುತಾರೆ ಅನಿಸಿಕೊಂಡಿಲ್ಲ.
ಆ ನಂತರ ಇನ್ನಾರೂ ಅನಿಸಿಕೊಂಡಿಲ್ಲ.