ಅವ್ .. ಸೋ ಮೆನಿ!



ಬಿಗ್ ಬಾಸ್ ಮತ್ತೆ ಆರಂಭ ಆಗಿದೆ. ಸಾಮಾನ್ಯವಾಗಿ ಯಾವುದೇ ಬಗೆಯ ರಿಯಾಲಿಟಿ ಷೋ ಇರಲಿ ಅದನ್ನು ಆನಂದಿಸದೇ ಮನಸ್ಸಿನೊಳಕ್ಕೆ ಹಾಗು ಬದುಕಿನೊಳಕ್ಕೆ ಇಳಿಸಿಕೊಳ್ಳಲು ಹೋಗುತ್ತಾರೆ ನಮ್ಮವರು ಅದೇ ತಪ್ಪಗೋದು.. ಏನೇ ಹೇಳಿ ಈ ಬಿಗ್ ಬಾಸ್ ನಿಂದ ಏನ್ ಪ್ರಯೋಜನ, ಅದನ್ನು ಯಾಕೆ ನೋಡ ಬೇಕು, ಏನ್ ಥೀಮ್ ಇದೆ, ಇದರಲ್ಲಿ ಎಂತಹ ಮೆಸೇಜ್ ಇದೆ ?
ಈ ರೀತಿಯ ಪ್ರಶ್ನೆಗಳನ್ನು ಒಳಗೊಂಡ ಲೇಖನಗಳು ಬರ್ತಾ ಇವೆ. ಆದರೆ ಇಂತಹ ರಿಯಾಲಿಟಿ ಶೋಗೆ ಥೀಮ್ , ಮೆಸೇಜ್ ಯಾಕೆ ಬೇಕೋ ಗೊತ್ತಿಲ್ಲ. ಬಿಗ್ ಬಾಸ್  ಸೋತ ಅನೇಕ ಪ್ರತಿಭೆಗಳಿಗೆ ವೇದಿಕೆ. ಕನಿಷ್ಠ ಹಾಗಾದ್ರೂ ಒಂದಷ್ಟು ಕನಸುಗಳು ನನಸಾಗಲು ಮಾಡಲು ಅವಕಾಶ ಇದೆ.



ಕಿಚ್ಚ ಸುದೀಪ್ ಅವರು ಅಗೇನ್ ಇಷ್ಟ ಆಗೋ ರೀತಿಯಲ್ಲಿ ಬಂದಿದ್ದಾರೆ. ಒಬ್ಬ ಹೀರೋ ಅದರಲ್ಲೂ ದಕ್ಷಿಣದ ಹೀರೋಗಳು ಅಂದ್ರೆ ಅಷ್ಟಕಷ್ಟೇ  ಬಾಲಿವುಡ್ ಮಂದಿಗೆ.. ಅವರೆಲ್ಲರೂ ನೋಡುವಂತೆ ಕನ್ನಡ ಕಿಚ್ಚ ಕಿಚ್ಚು ಹತ್ತಿಸೋ ಪ್ರಯತ್ನ ಮಾಡಿದ್ದಾರೆ.. ಜಾಸ್ತಿ ಲೈಕ್ ಆಯ್ತು. ತುಂಬಾ ಕಾಲದಿಂದ ಇಷ್ಟ ಆಗಿರೋ ಕೆಲವು ನಟರಲ್ಲಿ ಕಿಚ್ಚ ಸಹ ಒಬ್ರು.. ನಾನು ಮಾತ್ರ ಅಲ್ಲ ಸಾಕಷ್ಟು ಜನ ಪತ್ರಕರ್ತರಿಗೆ ಇವರ ಬಗ್ಗೆ ಸ್ವಲ್ಪ ಜಾಸ್ತಿನೆ ಪ್ರೀತಿ. ಅವರ ಹೆಸರು ಹೇಳಲ್ಲ ಸಾರಿ ! ಒಬ್ಬ ಕಲಾವಿದನ ಬಗ್ಗೆ ನಾವು ತೋರೋ ಅಭಿಮಾನ ಇನ್ನು ಹೇಗ್ ತಾನೇ ಇರುತ್ತೆ ಹೇಳಿ...ನಮ್ಮ ಮೇಡಂ ಯಾವಾಗ ಕಿಚ್ಚನ ವಿಷ್ಯ ಹೇಳಿದ್ರು ಬರೆಯೇಮ್ಮ ಜನರಿಗೆ ಇಷ್ಟ ಅಂತಾರೆ.. ಕಿಚ್ಚನ ಹೊಸ ಏನೇ ಸುದ್ದಿ ಸಿಕ್ರು ನಾನು ಬರೀತೀನಿ !


@ ಮೊದಲು ಎಲಿಮಿನೆಟ್ ಆದ  ಅನಿತಾ ಭಟ್ ಬಗ್ಗೆ ಆರಂಭಿಕ ಹಂತದಲ್ಲಿ ಅಂದ್ರೆ ಆಕೆ ಸೈಕೋ ಚಿತ್ರದಲ್ಲಿ ನಟಿಸಿದ  ಬಳಿಕ ನಮ್ಮ ಆಫೀಸ್ ಗೆ ಬಂದಿದ್ರು. ನಾನು ಆಕೆಯನ್ನು ಸಂದರ್ಶನ ಮಾಡುವಾಗ ಊರು ಹೀಗೆ ಎಲ್ಲ ಸಂಗತಿ ಕೇಳಿದೆ.. ಹೆಸರು ಆಗ ಅನಿತಾ ಅಂತಾನೆ ಗೊತ್ತಿತ್ತು.. ಭಟ್ ಸೇರಿಸ ಬಹುದಲ್ವ ಇದು ವಿಶೇಷವಾಗಿರುತ್ತೆ ಎಂದು ಹೇಳಿದ್ದೆ ನಾನಾಗ .. ಆಗ ಆರಂಭ ಆಯ್ತು ಭಟ್ಟರ ಪುರಾಣ. ಸಿನಿಮಾ ಬಗ್ಗೆ ಸಾಕಷ್ಟು ಇಷ್ಟ ಇರೋ ಹೆಣ್ಣು ಮಗಳು. ಆದರೆ ಅವಕಾಶಗಳು ಇಲ್ಲ. ಮುಖ್ಯವಾಗಿ ಆರಂಭದಲ್ಲಿ ಆಕೆಯು ನನಗೆ ಎಫ್ಬಿಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು.ನನ್ನ ಲಿಸ್ಟ್ನಲ್ಲಿ ಇದ್ದ ಈ ಹೆಣ್ಣುಮಗಳು ಸ್ವಲ್ಪ ದಿನಗಳಾದ ಮೇಲೆ ನಾಪತ್ತೆ.. ನೋಡಿದ್ರೆ ಲೈಕ್ ಪೇಜ್ ಆಗಿತ್ತು. ಸ್ವಲ್ಪ ಗ್ಲಾಮರ್ ಚಿತ್ರಗಳನ್ನು ಅಪ್ ಲೋಡ್ ಮಾಡ್ತಾ ತನ್ನದೊಂದು ಸಮೂಹ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದರು ಈಕೆ.. ನಿಜ ಹೇಳ್ತೀನಿ ಪಾಪ ಅಂತ ಅನ್ನಿಸಿತ್ತು  ಹಾಗೂ ಅನ್ನಿಸಿದೆ.. ಬೇಗ ಹೊರಗೆ ಹೋಗಿದ್ದು ಸಕತ್ ಒಂಥರಾ ಆಯ್ತು! 



@ ರೋಹಿತ್  ದಿ ರಾಕ್ಸ್ಟಾರ್...ಬಾಳ ಇಷ್ಟಾ ಆಗೋ ಮಾತಿನ ಶಾಲಿ.. ನಿಜ ಹರೆಯದ ಬಡ್ಡಿ ! ಸೊ ಜಾಸ್ತಿ ದಾರಿ ತಪ್ಪಿದೆ ಮಾತುಗಳು ರೆಡಿಯೋದಲ್ಲಿ ಮಾತಾಡುವಾಗ. ಆದರೆ ತುಂಬಾ ಚೆನ್ನಾಗಿ ಹುಡುಗೀರನ್ನು ಸೆಳೆಯುವ ಜಾಣ....ಡಾರ್ಲಿಂಗ್ಸ್ ಅಂತ ಕರೆಯೋದಲ್ಲದೇ  ಮಾತು ಸಹ!!!! ಒಮ್ಮೆ ಹೀಗೆ ಗುರುಕಿರಣ್ ಅವರ ಸಂಗೀತ ನಿರ್ದೇಶನ ಮತ್ತು ಹಾಡಿದ್ದ ಮುತ್ತಿನ ಹಾಡು ಪ್ರಸಾರ ಮಾಡಿದ ಬಳಿಕ ಸೊ ಮೆನಿ ಕಿಸಸ್ ಎನ್ನುವ ಮಾತು ಹೇಳಿದ್ದರು .. ಯಾಕೆ ಈ ಮಾತು ಅಂದ್ರೆ ನಮ್ ಕಿಚ್ಚ ಯಾರಿಗೆ ಮುತ್ತು ತೋರಿಸಿ... ಥ್ರೋ ಮಾಡ್ತಾ ಇದ್ದಾರೆ..ಜಗ್ಗೇಶ್  ಮತ್ತು ಕಿಶೋರ್ ಅವರ ಭಾಷೆಯಲ್ಲಿ ಅವ್ ಕಿಚ್ಚ... ಸೊ ಮೆನಿ ಕಿಸಸ್ ...

3 comments:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

ನನ್ನದೂ ಇದೇ ಪ್ರಶ್ನೆ ಕಣ್ರೀ.......
...
...
http://spn3187.blogspot.in/

Vinod Kumar Bangalore said...

ಧನಾತ್ಮಕ ದೃಷ್ಟಿಯಿಂದ ನೋಡಿದಾಗ , ಇದು ಕೆಲವರಿಗೆ ಪ್ರತಿಭೆ ತೋರೋ ವೇದಿಕೆ ಅಂತಾನೂ ತಿಳಕೊಳ್ಳಬಹುದು . ಈ ರೀತಿಯ ರಿಯಾಲಿಟಿ ಶೋ ಗಳು ಜನಪ್ರಿಯವಾಗಲು ಕಾರಣ , ಹೆಚ್ಚಿನ ವೀಕ್ಷಕರಲ್ಲಿ ಇರುವ ಅತೀ ಕುತೂಹಲ, ಸ್ಪರ್ಧಿಗಳು ಹೇಗೆ ನಡೆದುಕೊಳ್ಳುತ್ತಾರೆ ? ಏನಾದರೂ ವಿವಾದಾತ್ಮಕವಾಗುವಂತದ್ದು ನಡೆಯಬಹುದೇ ? ಇತ್ಯಾದಿ . ಎಷ್ಟಾದರೂ ಬೇರೆಯವರ ಮನೆ ಇಣುಕಿ ನೋಡಿ ಖುಷಿ ಪಡೋದು ಹೆಚ್ಚಿನವರಿಗೆ ಇಷ್ಟ ತಾನೇ ?

Vinod Kumar Bangalore said...

ಧನಾತ್ಮಕ ದೃಷ್ಟಿಯಿಂದ ನೋಡಿದಾಗ , ಇದು ಕೆಲವರಿಗೆ ಪ್ರತಿಭೆ ತೋರೋ ವೇದಿಕೆ ಅಂತಾನೂ ತಿಳಕೊಳ್ಳಬಹುದು . ಈ ರೀತಿಯ ರಿಯಾಲಿಟಿ ಶೋ ಗಳು ಜನಪ್ರಿಯವಾಗಲು ಕಾರಣ , ಹೆಚ್ಚಿನ ವೀಕ್ಷಕರಲ್ಲಿ ಇರುವ ಅತೀ ಕುತೂಹಲ, ಸ್ಪರ್ಧಿಗಳು ಹೇಗೆ ನಡೆದುಕೊಳ್ಳುತ್ತಾರೆ ? ಏನಾದರೂ ವಿವಾದಾತ್ಮಕವಾಗುವಂತದ್ದು ನಡೆಯಬಹುದೇ ? ಇತ್ಯಾದಿ . ಎಷ್ಟಾದರೂ ಬೇರೆಯವರ ಮನೆ ಇಣುಕಿ ನೋಡಿ ಖುಷಿ ಪಡೋದು ಹೆಚ್ಚಿನವರಿಗೆ ಇಷ್ಟ ತಾನೇ ?