Posts

Showing posts from October 2, 2011

ಮುಖ್ಯ ಆಕರ್ಷಣೆ

Image
ಬಹು ನಿರೀಕ್ಷೆಯನ್ನು ಮೂಡಿಸಿದ್ದ ಸ್ಟಾರ್ ಪ್ಲಸ್ ವಾಹಿನಿಯ  ಜಸ್ಟ್ ಡ್ಯಾನ್ಸ್ ರಿಯಾಲಿಟಿ ಷೋ ಮುಕ್ತಾಯ ಆಯ್ತು. ಆರಂಭದಿಂದಲೂ ಅಂಕನ್ ಸೇನ್ ಅನ್ನುವ ಬಾಲಕ ತನ್ನ ಅದ್ಭುತ ಪ್ರತಿಭೆಯನ್ನು ವಿಶೇಷ ರೀತಿಯಲ್ಲಿ ತೋರುತ್ತಾ.. ತೀರ್ಪುಗಾರರು ಹಾಗೂ ಸಮಸ್ತ ವೀಕ್ಷಕರಿಗೆ ಖುಶಿಕೊಡ್ತಾನೆ ಇದ್ರು. ಅನಂತರದ ಸ್ಥಾನ ಗಳಿಸಿದ ಪ್ರತಿಭೆ ಸುರ್ಜೀತ್ . ಆ ಯುವಕ ಎಲಿಮಿನೆಟ್ ಆಗಿ ಪುನಃ ಅವಕಾಶ ದೊರೆತು , ಮತ್ತೆ ತನ್ನ ಅವಿರತ ಸಾಧನೆಯಿಂದ ಸೋಲು ಅಲ್ಪಕಾಲ ಗೆಲುವು ದೀರ್ಘಕಾಲ ಅನ್ನುವ ಸತ್ಯ ತೆರೆದಿಟ್ಟರು. ಮುಖ್ಯವಾಗಿ ಈ ಕಾರ್ಯಕ್ರಮದ ಮುಖಿ ಆಕರ್ಷಣೆಗಳಲ್ಲಿ ಒಬ್ಬರಾದ ರಿತಿಕ್ ರೋಶನ್ ಅಬ್ಬ ಎಂತಹ ವಿಶೇಷ ವ್ಯಕ್ತಿತ್ವ ಎನ್ನುವಂತೆ ಪದೇಪದೇ ತಮ್ಮ ಒಳ್ಳೆಯತನ ಪ್ರಕಟ ಮಾಡುತ್ತಾ ಬಂದ್ರು. ಸಾಮಾನ್ಯವಾಗಿ ಸಿನಿಮಾದವರ ಬಗ್ಗೆ ಅನೇಕ ಮಂದಿಗೆ ಅನೇಕ ರೀತಿಯಲ್ಲಿ ಬೇಸರ ಇದೆ. ಅದರಲ್ಲೂ ದುಡ್ಡಿನ ವಿಷಯದಲ್ಲಿ ತುಂಬಾ ಜನರ ಬೇಸರ ಕಾರಿದ್ದಾರೆ. ಬಿಡಿ ನಮಗ್ಯಾಕೆ ಬೇರೆಯವರ ಸಂಗತಿ.

ಕೊಡುವ ಬುದ್ಧಿ ಸಹ ಸಾಕಷ್ಟು ಕಲಾವಿದರಲ್ಲಿದೆ. ಆದ್ರೆ ರಿತಿಕ್ ಸಂಗತಿ ತೆಗೆದುಕೊಂಡರೆ ಸ್ವಲ್ಪ ಜಾಸ್ತೀನೆ ಬಿಡಿ! ಎಲಿಮಿನೆಟ್ ಆದ ಸ್ಪರ್ಧಿಗೆ ತಪ್ಪದೆ ಮೂರು ಲಕ್ಷ ಪ್ರೋತ್ಸಾಹಧನ ನೀಡಿ ನಿನ್ನ ಪಯಣ ಇಲ್ಲಿಗೆ ನಿಲ್ಲಬಾರದು ಮತ್ತಷ್ಟು ಬೆಳೆಯ ಬೇಕು ಎನ್ನುವ ಶುಭ ಹಾರೈಕೆ ನೀಡಿ ಬೀಳ್ಕೊಡುವ ಸಂಗತಿ ಮಾದರಿ. ದುಡ್ಡಿದ್ದವರೆಲ್ಲ ಈಪರಿಯ ಪ್ರೋತ್ಸಾಹ..ಇಲ್ಲ ಬಿಡಿ. ಆ ವ್ಯಕ್ತಿತ್ವ …