Posts

Showing posts from October 9, 2011

ಸೈಲಿಶ್ ಶ್ ಶ್ ಶ್ !

Image
ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ವಿಶ್ವದಲ್ಲಿ ವಿಶೇಷ ಸ್ಥಾನ ಪಡೆದ ಕಲಾವಿದ ಅಮಿತಾಬ್ ಬಚ್ಚನ್. ಹಲವಾರು ಕಾರಣಗಳಿಂದ ಅಮಿತಾಬ್ ನನಗೆ ಬಹಳ ಇಷ್ಟ. ನನ್ನಂತಹ ಅನೆಕರಿಗೂ ಅವರೆಂದರೆ ಇಷ್ಟಾ. ಅಂದ್ರೆ ಇಷ್ಟ. ಇತ್ತೀಚೆಗೆ ಬಿಗ್ ಬಿ ಅವರ ಕುರಿತಾಗಿ ಕಾರ್ಯಕ್ರಮವನ್ನು ನಿರೂಪಕ ಜಯಪ್ರಕಾಶ್ ಶೆಟ್ಟಿ ಸುವರ್ಣ ವಾಹಿನಿಯಲ್ಲಿ ನೆರವೇರಿಸಿಕೊಟ್ಟರು.ಕನ್ನಡ ವಾಹಿನಿ ಗಳಲ್ಲಿ ಬರುವ ನಿರೂಪಕರಲ್ಲಿ ಜಯ್ ಸಹ ಉತ್ತಮ ನಿರೂಪಕರು.ಹಮೀದ್ ಪಾಳ್ಯ, ಜಯ್ ,ಅಜಿತ್,ರಂಗನಾಥ್,ಗೌರೀಶ್ ಸುವರ್ಣವಾಹಿನಿಯ ಉತ್ತಮ ನಿರೂಪಕರು. ಹೆಣ್ಣುಮಕ್ಕಳು ಕಡಿಮೆ ಇಲ್ಲ.ಹಮೀದ್ ಕಾರ್ಯಕ್ರಮಗಳು ಹೆಚ್ಚು ಖುಷಿ ಕೊಡುವುದು ಅವರ ಮಾತಿನ ಶೈಲಿ ಹಾಗೂ ಉತ್ತಮ ನಿರೂಪಣೆಯಿಂದ.ಲಂಚ್ ನ್ಯೂಸ್, ಡಾನ್ಗಳ ಕಾರ್ಯಕ್ರಮ ಎಲ್ಲವೂ ಚಂದದ ರೀತಿಯಲ್ಲಿ ನಡೆಸಿಕೊಡ್ತಾರೆ ಡಾನ್ ಹಮೀದ್ :-) .ಇನ್ನು ಜಯ ಪ್ರಕಾಶ್ ಶೆಟ್ಟಿ ವಿಷಯಕ್ಕೆ ಬರುವುದಾದರೆ ,ವಿಶೇಷ ಅಂದ್ರೆ ಇತ್ತೀಚಿನ ದಿನಗಳಲ್ಲಿ ಅಂದ್ರೆ ಮೊದಲಿನ ಜಯಪ್ರಕಾಶ್ ಶೆಟ್ಟಿಗೆ ಕಂಪೇರ್ ಮಾಡಿದರೆ ಈಗಿನ ಜಯ್ ಶಾನೆ ಜಾಸ್ತೀನೆ ಸೈಲಿಶ್ ಆಗ್ತಾ ಇದ್ದಾರೆ. ಅಮಿತಾಬ್ ಕಾರ್ಯಕ್ರಮದಲ್ಲಿ ಹಿಂದಿ ಸಿನಿಮಾ ಹೀರೋ ರೀತಿ ...ಬಾಲಿವು ಡಾನ್ ರೀತಿ ಯಪ್ಪಾ...! :-) ಎನಿವೆಸ್ ಕೀಪ್ ಇಟ್ ಅಪ್ ಅಷ್ಟೆ ನಾನು ಹೇಳೋದು.. ಅಮಿತಾಬ್ ಕಾರ್ಯಕ್ರಮದಲ್ಲಿ ಡೈಲಾಗ್ ಸುರಿಮಳೆ ಮಾಡಿದ್ದೆ ಮಾಡಿದ್ದು :-) ಯಾರನ್ನು ಇಂಪ್ರೆಸ್ ಮಾಡೋಕೆ ಮಾರಾರ್ರೆ !ಇದೆ ವಾಹಿನಿಯಲ್ಲಿ ಪ್ರಸಾರ ಆಗುವ…

ಸೋತ ಪರಿ

Image
ಅಡುಗೆ ಕಾರ್ಯಕ್ರಮಗಳ ವಿಷಯಕ್ಕೆ ಬರುವುದಾದರೆ ಈಗಂತೂ ಹೆಚ್ಚಾಗಿ ಬಳಸುವುದು ಚೀಸ್, ಪನ್ನೀರ್...ಅನ್ನುವ ಬೇಸರದ ಮಾತು ಸಾಕಷ್ಟು ಹೆಣ್ಣುಮಕ್ಕಳು ಹೊಂದಿದ್ದಾರೆ.ಆದರೆ ವಾಹಿನಿಗಳು ತಮ್ಮದೇ ಆದ ರೀತಿಯಲ್ಲಿ ರುಚಿಕಟ್ಟಾದ ಅಡುಗೆಯ ಕಾರ್ಯಕ್ರಮಗಳನ್ನು ವೀಕ್ಷಕರ ಕೈಲಿ ಇಡ್ತಾ ಇದೆ.
ವಾಹಿನಿಗಳಲ್ಲಿ ಭಿನ್ನವಾದ ಚಂದನ ವಾಹಿನಿಯ ಅಡುಗೆ ಕಾರ್ಯಕ್ರಮ ಸಂಪೂರ್ಣ ವಿಭಿನ್ನ ರೀತಿಯಲ್ಲಿದೆ.ಸರಳ ಆಹಾರ  ಮಾಡುವುದು ಮಾತ್ರವಲ್ಲದೆ,ಸಾಂಪ್ರದಾಯಿಕ ಆಹಾರವನ್ನು ಯಾವ ರೀತಿಯಲ್ಲಿ ಅಂದ್ರೆ ಭಿನ್ನ ಅಂಶಗಳ ಬಳಕೆ ಮಾಡಿ ತಯಾರಿಸ ಬಹುದು ಅನ್ನುವ ಸಂಗತಿ ಬಗ್ಗೆ ತಿಳಿಸಿ ಕೊಡ್ತಾರೆ ಆಹಾ ಏನು ರುಚಿ ಕಾರ್ಯಕ್ರಮದಲ್ಲಿ.


ನಿರೂಪಕಿ ಮೇಘ ನಾಡಿಗೀರ್, ಅಡುಗೆ ಕಾರ್ಯಕ್ರಮ ನಿರೂಪಣೆ ಮಾಡಿದ ನಿರೂಪಕಿ,ಅದಾದಬಳಿಕ ಧಾನ್ಯಗಳ ಬಳಕೆ ಅದರಿಂದಾಗುವ ಪ್ರಯೋಜನಗಳ ಬಗ್ಗೆಹೆಳುವ ಕಾರ್ಯಕ್ರಮ ಸಾಮಾನ್ಯವಾಗಿ ಕಂಡು ಬರುತ್ತದೆ ಎಲ್ಲಾ ವಾಹಿನಿಗಳಂತೆ ಚಂದನದ ಈ ಕಾರ್ಯಕ್ರಮದಲ್ಲೂ! ಆದರೆ ಹೆಚ್ಚು ಆಕರ್ಷಿಸಿದ್ದು ನ್ಯೂಟ್ರಿಶಿಯನ್ ಡಾ.ಪ್ರೇಮ ಅವರ ವಿವರಣೆ ಹಾಗೂ ಅವರನ್ನು ಸಂದರ್ಶಿಸಿದ ನಿರೂಪಕಿ ರೂಪ ಅವರ ಮಾತಿನ ಶೈಲಿ.ಎಲ್ಲವೂ ಹದವಾಗಿ  ಪರಿಕಾರಗಳನ್ನು ಬೆರೆಸಿ ತಯಾರಿಸಿದ ಆಹಾರದಂತೆ ರುಚಿಯಾಗಿತ್ತು.
ಒಂದೊಮ್ಮೆ ಚಂದನ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಮಾತ್ರ ಕಾಣುತ್ತಿದ್ದ ವೀಕ್ಷಕರು ಈಗ ಬಗೆ ಬಗೆ,ರುಚಿ ರುಚಿಯಾದ ಕಾರ್ಯಕ್ರಮಗಳ ರುಚಿ ಕಾಣುತ್ತಿದ್ದರೆ.ಡಾ. ಪ್ರೇಮ ಅವರಿಗೆ ನಿರೂಪಕಿ ಕೇ…

ತಿರುಳು ಗಟ್ಟಿಯಾಗಿರಲಿ

Image
ಕನ್ನಡ ಮನೋರಂಜನಾ ವಾಹಿನಿಗಳಲ್ಲಿ ಒಂದಾದ ಕಸ್ತೂರಿವಾಹಿನಿ ತನ್ನದೇ ಆದ ರೀತಿಯಲ್ಲಿ ಜನಾಕರ್ಷಣೆ ಮಾಡ್ತಾ ಬಂದಿದೆ ಕಾರ್ಯಕ್ರಮಗಳಿಂದ.ಯಾವುದೇ ಭಾಷೆಯಾಗಿರಲಿ ಕೆಲವು ಚಾನೆಲ್ಗಳು ಅಬ್ಬರದಿಂದ ಇದ್ರೆ ಒಂದಷ್ಟು ಚಾನೆಲ್ ಗಳು ಮಧ್ಯಮಗತಿಯಲ್ಲಿ ಇರುತ್ತದೆ, ಶಾಂತವಾಗಿ ತಮ್ಮ ಕೆಲಸ ತಾವು ಮಾಡಿಕೊಂಡು ನಡೆಯುತ್ತವೆ ಒಂದಷ್ಟು ಚಾನೆಲ್ಗಳು. ಎಲ್ಲರಿಗೂ ಅವರೇ ಆದ ಒಂದಷ್ಟು ವೀಕ್ಷಕ ಬಳಗ ಇದ್ದೆ ಇರುತ್ತದೆ. ಕನ್ನಡದ ವಿಷಯಕ್ಕೆ ಬರುವುದಾದರೆ ಕಸ್ತೂರಿ ಮೂರನೇ ಅಂಶಕ್ಕೆ ಸೇರ್ಪಡೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡ್ತಾ ಇರುವ ವಾಹಿನಿ ಹಲವಾರುಹೊಸತನ್ನು ನೀಡಿ ವೀಕ್ಷಕರನ್ನು ಸಂತುಷ್ಟಿ ಗೊಳಿಸಿದೆ.ಅದರಲ್ಲಿ ರಾಣಿ ಮಹಾರಾಣಿ ಮಹಿಳಾ ಕಾರ್ಯಕ್ರಮವೂ ಸಹ ಒಂದಾಗಿದೆ.
ಈ ಕಾರ್ಯಕ್ರಮ ಸೆಲಬ್ರಿಟಿ ಷೋ ಅಲ್ಲ. ಗೃಹಿಣಿಯರಿಗಾಗಿ ಇರುವ ಕಾರ್ಯಕ್ರಮ. ಈ ಮೊದಲು ಈ ಕಾರ್ಯಕ್ರಮ ಪ್ರಸಾರ ಆಗಿತ್ತು.ಈಗ ಇದರ ಸೀಸನ್ -2 ಆರಂಭ ಆಗಿದೆ. ನಿರೂಪಕಿ ಅಮೃತ ಮೊದಲಿಗಿಂತ ಹೆಚ್ಚು ಮುದ್ದಾಗಿದ್ದಾರೆ :-). ನಿಜ ಹೇಳ ಬೇಕು ಅಂದ್ರೆಜಾಸ್ತಿನೆ ಚಂದ ಕಾಣ್ತಾ ಇದ್ದಾರೆ ಈ ಕಾರ್ಯಕ್ರಮದಲ್ಲಿ. ಗೃಹಿಣಿಯರು ಆಸಕ್ತಿಯಿಂದ ಭಾಗವಹಿಸಲು ಪ್ರೇರಕ ಈ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಈ ಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಅದೂ ಸಹ ಆಕರ್ಷವಾಗಿದೆ.ಮತ್ತೊಂದು ಸಂತಸದ ಸಂಗತಿ ಅಂದ್ರೆ ಕನ್ನಡ ನಾಡಿನ ವೀಕ್ಷಕರಿಗೆ ಮತ್ತೊಂದು ನ್ಯೂಸ್ ಚಾನಲ್ ಆರಂಭ ಆಗ್ತಾ ಇದೆ. ಕಸ್ತೂರ…

ಬಿಗ್ ಬಾಸ್

Image
ಕಳೆದ ಕೆಲವು ದಿನಗಳಿಂದ ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ. ಟೈಮ್ ಪಾಸ್ ಮಾಡಲು ಇದು ಒಳ್ಳೆಯ ಕಾರ್ಯಕ್ರಮ ಎಂದು ಕೊಂಡರೂ ಸಹ,ಅದಕ್ಕಿಂತಲೂ ಮುಖ್ಯ ಅನ್ನಿಸುವುದು ಅದಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಳ್ಳುವುದು ಮನುಷ್ಯರ ಸ್ವಭಾವಗಳ ಅನಾವರಣ.ಇಬ್ಬರು ಬೇರೆಯ ಪಂಗಡದ, ವಾತಾವರಣ, ಇನ್ನು ಹಲವಾರು ಅ0ಶಗಳ ಭಿನ್ನತೆ ಇರುವವರು ಒಟ್ಟಿಗೆ ಕೆಲವು ಗಂಟೆಗಳು ಇದ್ದಾರೆ ಸಾಕು ಆ ವ್ಯಕ್ತಿತ್ವಗಳು , ಸ್ವಭಾವಗಳು ಮಾತ್ರವಲ್ಲದೆ ಹಲವು ಸಂಗತಿಗಳು ನಿಚ್ಚಳವಾಗಿ ತಿಳಿದು ಬರುತ್ತದೆ..ಅನೇಕ ರೀತಿಯ ವಾತಾವರಣಗಳಿಂದ ಬಂದವರು ಒಂದು ಕಡೆ ಅನಾಮತ್ತು ಮೂರು ತಿಂಗಳುಗಳು ಒಟ್ಟಿಗೆ ಇರುವುದು ಅಂದ್ರೆ... ಇನ್ನೇನು ಬೇಕು. ರಾಖಿ ಸಾವಂತ್ ಯಾವ ರೀತಿ ಬಿಗ್ ಬಾಸ್ ಸೀಸನ್ ಫಸ್ಟ್ ಆಕರ್ಷಿಸಿದಂತೆ ಪೂಜಾ ಮಿಶ್ರ ತನ್ನ ವಿಚಿತ್ರ ಗುಣದಿಂದ ಆಕರ್ಷಿಸ್ತಾನೆ ಇದ್ದಾಳೆ ಮಹಾತಾಯಿ .ನಾವುದೂರ ನಿಂತು ಮಜ ತಗೋತಿವಿ,ಅಲ್ಲಿರುವವರಿಗೆ ಕಷ್ಟ ಅನ್ನ ಬಹುದು, ಆದರೆ ಕಷ್ಟ ಪಡಲೇ ಬೇಕಲ್ಲ ಗೆಲ್ಲ ಬೇಕಾದರೆ. ರಾತ್ರಿ ಹತ್ತೂವರೆಗೆ ಪ್ರಸಾರ ಆಗುವ ಈ ಕಾರ್ಯಕ್ರಮ ಮಾರನೆಯ ದಿನ ಮುಂಜಾನೆ ಒಂಬತ್ತಕ್ಕೆ ಪುನರ್ ಪ್ರಸಾರ ಆಗುತ್ತದೆ. ಬಿಗ್ ಬಾಸ್ ಮೆನ್ ಆಕರ್ಷಣೆ ಸಂಜಯ್ ದತ್.ಈ ಮುನ್ನಾ ಭಾಯ್ ಅಂದ್ರೆತುಂಬಾ ಜನಕ್ಕೆ ಇಷ್ಟ. ಮುನ್ನಾಭಾಯ್ಗೆ ಖಂಡಿತ ಈ ಕಾರ್ಯಕ್ರಮ ಮಸ್ತ್ ಮಜ ನೀಡುತ್ತದೆ.ಕೆಲಸ ಇಲ್ಲದೆ ಇರುವವರು ಮಾತ್ರ ಈ ಕಾರ್ಯಕ್ರಮ ವೀಕ್ಷಿಸೋದು ಅನ್…