Posts

Showing posts from December 4, 2011

ಸಾಧನೆ!

Image
ಗ್ರಹಣಕ್ಕೆ ಹೆದರಿಕೆ ಆಗ ಬೇಕು ಅಷ್ಟೊಂದು ಮಾತುಗಳು ಜ್ಯೋತಿಷಿಗಳಿಂದ ! ಇಂದು ವೃಷಭ ರಾಶಿ ಅವರ ಮೇಲೆ ಗ್ರಹಣದ ಪ್ರಭಾವ ಇದೆ ಎನ್ನುವ ಬಗ್ಗೆ ಕಳೆದ ಕೆಲವು ದಿನಗಳಿಂದ ಪ್ರಸಾರ ಆಗ್ತಾ ಇರುವ ಸುದ್ದಿ. ನಮ್ಮ ಸಂಸ್ಕೃತಿ -ಆಚಾರ ವಿಚಾರದಲ್ಲಿ ಗ್ರಹಣ ಸಹ ಹೆಚ್ಚು ಪ್ರಮುಖ ಪಾತ್ರ ನಿರ್ವಹಿಸಿದೆ. ಗ್ರಹಣ ಆದ ನಂತರ- ಆಗುವ ಗಳಿಗೆಗಳನ್ನು  ಲೆಕ್ಕಾಚಾರದ ಮೂಲಕ ಶಾಂತಿ -ಹೋಮ ಹವನ ಮಾಡಿಸುವ ಪರಿಪಾಟ ಹಿಂದಿನಿಂದಲೋ ಇದೆ. ಆದರೆ ಮಾಧ್ಯಮಗಳ ಪ್ರಭಾವದಿಂದ ಈಗಂತೂ ಅದರ ಪ್ರಭಾವ ಹೆಚ್ಚಾಗಿದೆ. ಹೇಳುವುದಾದರೆ ಅವೆರವರ ಭಾವಕ್ಕೆ ಅವರವರ ಭಕುತಿಗೆ.

ಜ್ಯೋತಿಷಿಗಳು ಒಂದು ಸಂಗತಿ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಹೆಚ್ಚು ಒಳಿತು. ಯಾಕೆ ಅಂದ್ರೆ ಜ್ಯೋತಿಷ್ಯ  ಕಾರ್ಯಕ್ರಮಗಳನ್ನು  ವೀಕ್ಷಿಸುವವರಲ್ಲಿ ಹೆಚ್ಚು ಮಂದಿ ಅಮಾಯಕರು . ಈ ಅಮಾಯಕರಲ್ಲಿ ಹೆಚ್ಚು ಮಂದಿ ವಿದ್ಯೆ ಕಲಿತವರು ಇದ್ದಾರೆ . ಮೊದಲೇ ತಿಳಿಸಿದಂತೆ ನಂಬಿಕೆಯೂ ಮನುಷ್ಯನ ಬದುಕನ್ನು ಚೇತೋಹಾರಿಯಾಗಿ ಮಾಡುತ್ತದೆ.ವೀಕ್ಷರಲ್ಲಿ ಮಹಿಳಾ ವೀಕ್ಷರದ್ದು ಸಿಂಹಪಾಲು. ಎಲ್ಲಿ ಮಹಿಳೆ ಎಂಟ್ರಿ ಕೊಡ್ತಾಲೋ ಅಲ್ಲಿ ಇಡೀ ಮನೆಯವರು ನಾಸ್ತಿಕರು ಆಗಿದ್ರೂ ಯಪ್ಪಾ ಅಂತ ಅನುಭವಿಸಲೇ ಬೇಕು :-) ಸೊ ದಯಮಾಡಿ ನೆಗೆಟೀವ್ ಸಂಗತಿಗಳ ಜೊತೆಗೆ ಪಾಸಿಟಿವ್ ಅಂಶಗಳ ಬಗ್ಗೆ ತಿಳಿಸಿ.

ನಿನ್ನೆ ಪ್ರಸಾರ ಕಾರ್ಯಕ್ರಮಗಳಲ್ಲಿ ಕಸ್ತೂರಿ ನ್ಯೂಸ್ , ಸಮಯ  ನ್ಯೂಸ್ ನಲ್ಲಿ ಜ್ಯೋತಿಷಿ ಬಾಬಗಳು ಒಳ್ಳೆಯದೇ ಹೇಳಿದ್ರು ಆದ್ರೆ ,ಸಮಯ…

ಅಗ್ಗಳಿಕೆ

Image
ವೀಕ್ಷಕರೊಬ್ಬರ  ಅಭಿಪ್ರಾಯ  : ಉದಯ ಕಾಮಿಡಿ ನಲ್ಲಿ ಪ್ರಸಾರ ಮಾಡ್ತಾ ಇರ್ತಾರೆ ಈ ಕಾಮಿಡಿ. ಎಷ್ಟು ಜನ ಕನ್ನಡ ಚಾನೆಲ್ ಗಳು ನೋಡ್ತಿರೋ ಅ ದೇವರೇ ಬಲ್ಲ.. ದೀರೇಂದ್ರ ಗೋಪಾಲ್ ರವರ ಡೈಲಾಗ್..ಚಪ್ಪಲಿ ತಗೊಂಡು ಹೊಡಿ. ಚಪ್ಪಲಿ ನಲ್ಲಿ ಹೊಡೆದರೆ ರಾಜಕಾರಣಿ ಆಗ್ತೀನಿ ಅಂತ ಭವಿಷ್ಯ ನುಡಿದಿರ್ತಾರೆ. ಚಪ್ಪಲಿ ತಗೊಂಡು ಯಾರಾದರು ಹೊಡಿರಪ್ಪೋ ಅಂತ ಹುಡುಕು ವಾಗ., ಬಿಕ್ಷುಕನ ಸಂಭಾ ಷಣೆಗಳು ಕೆಳಗಿನಂತೆ.
ಲೇ ಅ ತೆಲಿಗ್ನವ  ತೆಲೆಗ್ ನಾಗ್ ನಮಸ್ಕಾರ ಮಾಡ್ತಾನೆ. ಅ ತಮಿಳ್ ನವ ತಮಿಳ್ ನಾಗ್ ನಲ್ಲಿ ನಮಸ್ಕಾರ ಮಾಡ್ತಾನೆ.
ಕನ್ನಡದವ ಆಗಿ ಇಂಗ್ಲಿಷ್ ನಾಗ್ ಗುಡ್ ಮಾರ್ನಿಂಗ್ ಅನ್ಥಿಯಲ್ಲ ಲೇ.

ನಿಮ್ ಅವ್ವನಿಗೆ ಕೇಳು ನಿಮ್ ಮನೆ ಪಕ್ಕದಾಗ ಏನರ ಬ್ರಿಟಿಶ್ ನವ ಇದ್ನಂಥ. ಕನ್ನಡಿಗರು ಅಂತ ಗೊತ್ತಿದ್ದೂ, ಇದು ತೋರಿಸುತ್ತೆ ಕನ್ನಡಿಗರ ಹೊಲಸು ವರ್ತನೆಗಳು.. ಒಂದು ಕಾಮಿಡಿ ರೂಪದಲ್ಲಿ ಎಷ್ಟು ಅಚ್ಚು ಕಟ್ಟಾಗಿ ಹೇಳಿದ್ದಾರೆ , ಕನ್ನಡಿಗರು ತಿಳಿದುಕೊಳ್ಳಲಿ ಅಂತ.

ಅನಾವಶ್ಯವಾದ/ಬೇಡವಾದ ಕಡೆ ಇಂಗ್ಲಿಷ್ ಬಳಕೆ ಮಾಡೋರ ನಗೆ ಪಾಟಲು, ಸಿಹಿ ಇದೆ ಅಂತ ಸಿಕ್ಕ ಸಿಕ್ಕಿದು ತಿನ್ನಬೇಡಿ.ಇವತ್ತಿನ ದಿನ ಕನ್ನಡಿಗರು ಮಾಡ್ತಿರೋದೆ ಇದು.. ಸಾಮಾನ್ಯವಾಗಿ ಸಮಯ ಸಿಕ್ಕಾಗ ನಾನು ಫೇಸ್ ಬುಕ್ ಎಲ್ಲ  ಗುಂಪಿನಲ್ಲೂ ಅಡ್ಡಾಡ್ತಾ ಇರ್ತೀನಿ. ಸಾಕಷ್ಟು  ಅಭಿಪ್ರಾಯಗಳು, ಕಿಚ್ಚು - ಕೆಚ್ಚು, ಸಾಂತ್ವಾನ, ಬುದ್ಧಿವಂತಿಕೆ, ಅಸಮಧಾನ ಹೀಗೆ ಹಲವಾರು ರೀತಿಯಲ್ಲಿ ತಮ್ಮ ಅಭಿಪ್ರಾಯಗಳ…

ಪರಿಪೂರ್ಣ

Image
ಈಟೀವಿ ಕನ್ನಡ  ವಾಹಿನಿಯಲ್ಲಿ  ಪರಿಪೂರ್ಣ ಮಹಿಳೆ ಸ್ಪರ್ಧೆ ನಡೆಯುತ್ತಿದೆ. ತುಂಬಾ ವಿಶೇಷವಾದ ಸ್ಪರ್ಧೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಇಷ್ಟ ಆಗೋದು ಇದರ ಸ್ಪರ್ಧಿಗಳು. ಇಲ್ಲಿ ಭಾಗವಹಿಸುವವರು ಯಾರೂ ಸೆಲಬಿಗಳು   ಅಲ್ಲ. ಆದರೆ ಅವರ ಪ್ರತಿಭೆ ಕಂಡು ಸೆಲಬಿಗಳು ದಂಗಾಗಿ ಹೋಗ್ತಾ ಇದ್ದಾರೆ. ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿದ್ದಾರೆ  ಭಾರತಿ ವಿಷ್ಣು ವರ್ಧನ್ ಮತ್ತುಗಾಯಕಿ  ಚೈತ್ರ . ಇತ್ತೀಚೆಗೆ ನಾನು ವೀಕ್ಷಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೆಣ್ಣು ಮಗಳು ಉಲ್ಟಾ ಬರೆಯುವ ಕಲೆಯಲ್ಲಿ ನಿಷ್ಣಾತರಾಗಿದ್ದರು. ಅದನ್ನು ನಾವು ಕನ್ನಡಿ ಮೂಲಕ ಓದಲು ಸಾಧ್ಯ. ಆದರೆ ಅದನ್ನು ಭಾರತಿ ಮ್ಯಾಡಂ ಕನ್ನಡಿಯ ಬಳಕೆ ಇಲ್ಲದೆ ಓದಿದರು. ಅಷ್ಟೆ ಅಲ್ಲದೆ ಆ  ಹೆಣ್ಣುಮಗಳು ಭಾರತಿ ಅವರು ನಟಿಸಿದ ಚಿತ್ರ ಒಂದರ ಹಾಡನ್ನು ಉಲ್ಟಾ ಹಾಡಿದರು. ಗೊತ್ತಲ್ಲ ವಾಕ್ಯಗಳನ್ನು ಉಲ್ಟಾ ಮಾಡುವುದು. ಆದರೆ ಭಾರತಿಯವರು ಆ ಪ್ರಯತ್ನಕ್ಕೆ ಹೋಗದೆ ನೇರವಾಗಿ ಹಾಡಿದರು. ಪ್ರತಿ ಭಾನುವಾರ ಸಂಜೆ ಈ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಹೆಣ್ಣು ಮಕ್ಕಳ ಸ್ಪರ್ಧೆಯನ್ನು ನೋಡುವುದು ಏಕೆ ಎನ್ನುವ ಭಾವ ಬಿಟ್ರೆ ಒಳ್ಳೊಳ್ಳೆ ಪ್ರತಿಭೆಗಳು ಕಾಣ ಸಿಕ್ತಾರೆ. ಮುಂದೆ ನಿಮ್ಮ ವೈಫು...ಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು. ರಚನ ಈ ಕಾರ್ಯಕ್ರಮದ  ನಿರೂಪಕಿ. ಕನ್ನಡ ತಪ್ಪು ಮಾತಾಡ್ತಾರೆ ಎನ್ನುವ ಭಯ ಇಲ್ಲದೆ ಈಕೆಯ ಮಾತು ಕೇಳ ಬಹುದು ಅಷ್ಟು ಸ್ಪಷ್ಟ ಹಾಗೂ ಚಂದದ ಶೈಲಿ.

ಇದ…

ವಾಯ್ಸ್ ...!