Posts

Showing posts from January 8, 2012

ಬೆಂಗಳೂರು

Image
ಅಖಂಡ ಭಾರತಕ್ಕೆ ಮಾತ್ರವಲ್ಲ ಮನುಕುಲಕ್ಕೆ ಮಾದರಿ ಆಗಿರುವ ಅತ್ಯಮೋಘ ವ್ಯಕ್ತಿತ್ವ , ನಿಸ್ಸಾಹಯಕ ಮನದ ಸಂಜೀವಿನಿ ಆಗಿರುವ ಜೀವಸೆಲೆ ಸ್ವಾಮಿ ವಿವೇಕಾನಂದ ಅವರ 150 ನೇ ಜನ್ಮದಿನ ಇಂದು. ಜನ್ಮದಿನದ ಹಾರ್ದಿಕ ಶುಭಾಶಯಗಳು ಗುರುಜೀ .. ವಿ ಲವ್ ಯು  ಎವರ್ ಅಂಡ್ ಫಾರೆವರ್ ... :-)

Manju Vhp
ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿ…

ತರಲೆ...!

Image
ಭಾರತದ ಸಾಂಪ್ರದಾಯಿಕ  -ಗ್ರಾಮೀಣ ಆಟಗಳು ಅನೇಕ. ಚನ್ನೆ ಮಣೆ , ಚೌಕ ಬಾರಾ, ಹಗ್ಗದಾಟ, ... ಹೀಗೆ ಹಲವಾರು ಇದೆ. ಅದೇ ರೀತಿ ಕೆಲವು ಆಟಗಳು ,ಅಥವಾ ಹವ್ಯಾಸಗಳು ಸಹ  ಎಲ್ಲರ ಮೆಚ್ಚಿನದ್ದಾಗಿರುತ್ತೆ. ಅದರಲ್ಲಿ ಪದಬಂಧ ಬಿಡಿಸೋದು ಸಹ ಒಂದು. ಪದಬಂಧದ ವಿಷಯ ಕ್ಕೆ ಬರುವುದಾದರೆ ಇದನ್ನು ರಚಿಸುವ ಅನೇಕ ಖ್ಯಾತನಾಮರಲ್ಲಿ ಎ.ಎನ್.ಪ್ರಹಲ್ಲಾದ್  ಸಹ ಒಬ್ರು. ನನ್ನ ಕಸಿನ್ ಅವರು. ಪದಬಂಧದ ಪಿತಾಮಹ ಎನ್ನುವ ಅವಾರ್ಡ್ ಹೊಂದಿರುವ ವರು. ಸರ್ಕಾರಿ ಅಧಿಕಾರಿ.
ಪದಬಂಧದ  ಜೊತೆಗೆ  ಡಾ  ರಾಜ್   ಕುಮಾರ್  ಅವರ  ಬಗ್ಗೆ  ಹಾಗೂ  ಚಿತ್ರರಂಗಕ್ಕೆ  ಸಂಬಂಧಿಸಿದಂತೆ  ಪುಸ್ತಕಗಳನ್ನು  ಬರೆದಿರುವ  ಪ್ರಹ್ಲಾದ್ ... ಅವರನ್ನು ನಾವೆಲ್ಲಾ ಅ.ನಾ. ಪ್ರ. ,ಇಲ್ಲವೇ ಎ.ಎನ್.ಪಿ ಎಂದೇ ಕರೆಯೋದು. ಸ್ವಲ್ಪ ಹೆಚ್ಚೇ ನನ್ನಿ0ದ ತಲೆ ತಿನ್ನಿಸಿಕೊಳ್ಳುವ ಅಣ್ಣ ಅವರು.

ಕಳೆದ ಕೆಲವು ತಿಂಗಳಿನಿಂದ ನನ್ನ ಬದುಕಲ್ಲಿ ಆದ-ಆಗುತ್ತಿರುವ ಏರುಪೇರಿನ ಬಗ್ಗೆ  ಇತ್ತೀಚೆಗೆ ಮೊಟ್ಟಮೊದಲ ಬಾರಿ ಹೇಳುವಾಗ ತುಂಬಾ ಅಳು ಬಂದಿತ್ತು. ಹಾಗೆಲ್ಲ ಅಳುವ ಪೈಕಿ ನಾನಲ್ಲ...:-) ಆದರೂ !

ಪದಬಂಧ ಯಾವ ರೀತಿ ಎಲ್ಲರ ಗಮನ ಸೆಳೆದ  ಆತ.. ಚಟುವಟಿಕೆಯೂ ಅದೇ ರೀತಿ ಕೆಲವು ಆಟಗಳು ಸದಾ ಕಾಲವು ಹಸಿರಾದ, ಆಹ್ಲಾದಕರವಾದ ಭಾವನೆಯನ್ನು ಮೂಡಿಸುವಂತಹುದ್ದಾಗಿದೆ. ಅಂತಹ ವಿನೂತನ ಪ್ರಯತ್ನವನ್ನು ಜೀಟೀವಿ ಕನ್ನಡ ವಾಹಿನಿ ಮಾಡಿದೆ.

ಜೀ ಟೀವಿ ಕನ್ನಡ ವಾಹಿನಿಯಲ್ಲಿ ಸ್ವಲ್ಪ ಹೆಚ್ಚೇ ಆಸಕ್ತಿ ಮೂಡಿಸುವ ಕಾರ…