Posts

Showing posts from March 25, 2012

ಚಿಂಟೂ ಟೀವಿ

Image
ಕಾರ್ಟೂನ್  ಪ್ರಪಂಚ ಅತ್ಯಂತ ಸುಂದರವಾದದ್ದು. ವ್ಯಂಗ್ಯ ಚಿತ್ರದಲ್ಲಿ ನುರಿತವರ ಕೈಚಳಕ ಇಡೀ ವಿಷಯವನ್ನು ಸರಳವಾಗಿ ಅನಾವರಣ ಮಾಡಿಸಿ ಬಿಡುತ್ತದೆ. ಮೊದಲಿನಿಂದಲೂ ನನಗೆ ಕಾರ್ಟೂನ್ಗಳೆಂದರೆ ಪರಮಾಪ್ತ. ಎಲ್ಲ ಚಾನೆಲ್ಗಳ ರೀತಿ ಕಾರ್ಟೂನ್ ನೆಟ್ ವರ್ಕ್  ಸೇರಿದಂತೆ ಹಲವು ಕಾರ್ಟೂನ್ ಚಾನೆಲ್ಗಳನ್ನು ವೀಕ್ಷಿಸ್ತಾ ಇರ್ತೀನಿ.
ಎಫ್ಬಿ ಯಲ್ಲೂ ಕಾರ್ಟೂನ್ ಪ್ರಪಂಚ ತುಂಬಾ ಚೆನ್ನಾಗಿ ಅನಾವರಣಗೊಂಡಿದೆ. ಅಲ್ಲಿ ನುರಿತ ಕಾರ್ಟೂನ್ ತಜ್ಞರು ಅಪ್ಲೋಡ್  ಮಾಡುವ ವ್ಯಂಗ್ಯ ಚಿತ್ರಗಳು ಮನವನ್ನು ಉಲ್ಲಸಿತ ಮಾಡುತ್ತದೆ.
ಎಫ್ಬಿಯ ಮೂಲಕ ಹೆಚ್ಚು ಪರಿಚಿತರಾದ 'ಮಿಸ್ಟರ್ ಕಾರ್ಟೂನ್ಗಳು'ಸತೀಶ್ ಆಚಾರ್ಯ, ಜೀವನ್ ಶೆಟ್ಟಿ ಮತ್ತು ರಘುಪತಿ ಶೃಂಗೇರಿ . ಅವರ ಗೆರೆಗಳು ಅದ್ಭುತ ! ಅವರು ಗೆರೆ ಎಳೆದು ಸಮಾಜದ ಓರೆಕೋರೆ ಸರಿ ಮಾಡುವತ್ತ ಗಮನ ಹರಿಸಿ ಓದುಗರ -ಕಲಾಸಕ್ತರ ಮನಕ್ಕೆ ಆನಂದ ನೀಡ್ತಾರೆ. ನಾನು ಸತೀಶ್ , ಜೀವನ್ , ರಘುಪತಿ ಯನ್ನು  ತಪ್ಪದೆ ಪ್ರತಿದಿನ ಕೀಟಲೆ  ಮಾಡ್ತಾನೆ ಇರ್ತೀನಿ .  ನನ್ನ ಪ್ರತಿ ಮುಂಜಾನೆ ಇವರುಗಳ ಹಾಸ್ಯ ಗೆರೆಗಳಿಂದ ಆರಂಭ ಆಗುತ್ತದೆ.
ಸತೀಶ್, ಜೀವನ್ ಮತ್ತು ರಘು ಅದೆಷ್ಟು ಬೈಕೊಳ್ತಾರೋ  ನನ್ನ ಕೀಟಲೆಗೆ ಎನ್ನುವ ಭಯ ಕಾಡುತ್ತೆ ;-) .ಆದ್ರೆ ಏನು ಮಾಡೋಕೆ ಆಗಲ್ಲ ಬಿಡಿ :-) 
ಕಾರ್ಟೂನ್ ವಿಷಯಕ್ಕೆ ಬಂದಾಗ ಕನ್ನಡ ದೃಶ್ಯ ಮಾಧ್ಯಮದಲ್ಲಿ ಅಂದ್ರೆ ನಮ್ ಕನ್ನಡ ಚಾನೆಲ್ ಗಳು ಕನ್ನಡ ಕಾರ್ಟೂನ್ಗಳ ಪ್ರಪಂಚವನ್ನು ವೀಕ್ಷಕರ ಕೈಗೆ ಇಟ್ಟಿವೆ . ಮೊಟ್…

ಪಡ್ಡೆಗಳು

Image
ಮೀಡಿಯ ಬಗ್ಗೆ  ಸಮಾಜಕ್ಕೆ ವಿಶೇಷವಾದ ಆಸಕ್ತಿ-ಅಭಿಮಾನ ಹೇವರಿಕೆ, ಭಯ ಎಲ್ಲವೂ ಇದೆ ಸಮಾಜದಲ್ಲಿ. ಮೀಡಿಯ ಮಂದಿಯನ್ನು ಬೈದರೂ ಬಳಿಕ ಅವರ ಜೊತೆ ತಾವಿರಲು ಇಷ್ಟಪಡುವ ಮಂದಿಯೂ ಹೇರಳವಾಗಿದ್ದಾರೆ. ಅದರಲ್ಲೂ ದೃಶ್ಯ ಮಾಧ್ಯಮದ ಕತೆ ಬೇರೆ. ಅದು ಸಿನಿಮಾ ಆಗಿರ ಬಹುದು ಇಲ್ಲವೇ ಟೀವಿ ಆಗಿರ ಬಹುದು. ಅಲ್ಲಿರುವ ಮಂದಿಯನ್ನು ಜನರು ನೋಡುವ ಬಗೆಯೇ ಬೇರೆ. ಐದು ಸಾಮಾನ್ಯವಾಗಿ ಕಂಡು ಬರುವ ಸಂಗತಿ.ಆದರೆ ಟೀಆರ್ಪಿ ವಿಷಯಕ್ಕೆ ಬರುವುದಾದರೆ ಅನೇಕ  ರೀತಿಯ ರಿಸ್ಕ್ಗಳನ್ನು ಟೀವಿ ಮಂದಿ ಎದುರಿಸ್ತಾ ಇರ್ತಾರೆ. ಅದು ದೃಶ್ಯ ಮಾಧ್ಯಮಿಗಳ ಅತಿ ದೊಡ್ಡ ತಲೆನೋವು.  ಒಳ್ಳೆಯ ಮ್ಯಾನೆಜ್ ಮೆಂಟ್  ಇದ್ರೂ ಟೀಆರ್ಪಿ  ಕಡಿಮೆ ಆಯ್ತು ಎಂದು ಇತ್ತೀಚಿನ ತಿಂಗಳ ಹಿಂದೆ ಮುಖ್ಯಸ್ಥರುಗಳನ್ನು ದೂರ ಮಾಡಿದ ಸಂಸ್ಥೆಗಳು, ಈಗ ಅಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರತ್ತ ಕಣ್ಣು ಹಾಕಿದೆ ಎನ್ನುವ ಸುದ್ದಿ. ಇನ್ನು ಧಾರವಾಹಿ - ರಿಯಾಲಿಟಿ ಶೋಗಳ ಕತೆಯೂ ಅಷ್ಟೇ.  ಟೀವಿ ಪ್ರಪಂಚ ಎಷ್ಟೇ ಕಲರ್ ಫುಲ್ಲಾಗಿದ್ದರೂ ಅಲ್ಲಿ ಕೆಲಸ ಮಾಡುವವರ ಬದುಕು ಕತ್ತಲು, ಅತಂತ್ರ. ಇದು ಬಿಚ್ಚಿಟ್ಟ ಸತ್ಯ ! ಇತ್ತೀಚೆಗೆ ಹೀಗೆ ಒಬ್ರು  ಟೀವಿ ಮುಖ್ಯಸ್ಥರೊಬ್ಬರ ಆಕಸ್ಮಿಕ ಭೇಟಿ ಆಯ್ತು. ಮಾತಿನ ನಡುವೆ ಕಲಾವಿದೆಯೊಬ್ಬರವಿಷಯ ಬಂತು, ನಾನು ಆ ಕಲಾವಿದೆಯ ಪ್ರತಿಭೆ ಬಗ್ಗೆ ಮಾತಾಡಿದ್ರೆ ಆತ ಮಾತಾಡಿದ್ದು ಆಕೆಯ ವೈಯುಕ್ತಿಕ ಬದುಕಿನ ಬಗ್ಗೆ! ವಿಶೇಷ ಅಂದ್ರೆ ಆತ ತನ್ನ  ಚಾನೆಲ್ ಟೀಆರ್ಪಿ ಹೆಚ್ಚಿಸುವ ವಿಷಯದ ಬಗ್ಗೆ ಚರ್ಚಿಸ…

ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ

Image
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ ನೋಡು ಎಂಥ  ಚಂದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,  ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.
ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.

ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.
ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ   ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ  ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ   ಡೈಲಾಗ್ ಹೇಳುವ ಶಿವಣ್ಣನಿಗಿಂತ  ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ        ಗೆದ್ದಿದ್ದರು.


ಪುನೀತ್ ರಾಜ್ ಕುಮಾರ್ ಅವರು ಬಾಲ ನಟರ…