Posts

Showing posts from August 26, 2012

ಕಲ್ಲಿದ್ದಲು-ಕಸಬ್- ಕಾರ್ಟೂನಿಸ್ಟ್

Image
ರಾಜಕೀಯ-ಕಲ್ಲಿದ್ದಲು-ಬರ-ಕಸಬ್.. ನಮ್ಮ  ಕಾರ್ಟೂನಿಸ್ಟ್ ಗಳ ಕೈ ಚಳಕದಲ್ಲಿ... ಸತೀಶ್ ಆಚಾರ್ಯ,ಡಾ.ಸತೀಶ್ ಶೃಂಗೇರಿ, ರಘುಪತಿ ಶೃಂಗೇರಿ, ದಿನೇಶ್ ಕುಕ್ಕುಜಡ್ಕ, ಶ್ರೀಧರ್ ಕೊಮ್ಮರವಲ್ಲಿ , ಕುಶಾಲ್ ಭಟ್ಟಾಚಾರ್ಯ ಅವರ ಗೆರೆ ಸೊಬಗು ...ಎಂಜಾಯ್ ಮಾಡಿ :-) 















ಲೆಟ್ಸ್ ಡಿಸ್ಕಸ್

Image
ನೈಮಿಷಾರಣ್ಯ ಎನ್ನುವ ಪದ ಸಾಮಾನ್ಯವಾಗಿ ನಮಗೆ ಸತ್ಯನಾರಾಯಣ ವ್ರತಕಥೆ , ಮಹಾಭಾರತ ಮತ್ತು ರಾಮಾಯಣದಲ್ಲಿ ಕಾಣ ಸಿಗುವ  ಪದ .ಅಂದ್ರೆ ಹಿಂದೂ ಧಾರ್ಮಿಕ ವ್ರತಗಳಲ್ಲಿ ಕೇಳಿ ಬರುವ ಹೆಸರು. ಇಲ್ಲೇ ಮಹಾಭಾರತ ಕತೆಯನ್ನು ಬರೆದದ್ದು.ಅದೇ ಸ್ಥಳದಲ್ಲಿ ಅನ್ನುವ ಮಾಹಿತಿಗಳಿವೆ. ಅದೇ  ರೀತಿ ದಂಡ ಕಾರಣ್ಯವು  ಗ್ರಂಥರಚನೆಗೆ ಯೋಗ್ಯವಾಗಿತ್ತು..! 
ರಾಮ ಭಾರತ ದೇಶದಲ್ಲಿರುವ ದೇವರುಗಳಲ್ಲಿ ಹೆಚ್ಚು ಪ್ರಖ್ಯಾತನಾದ ಭಗವಂತ. ದೇವ್ರಾಗಿದ್ದಕ್ಕೆ ಏಕವಚನದಲ್ಲಿ ಕರಿಯ ಬಹುದು.. ಸಲುಗೆ ಜಾಸ್ತಿ ನಮಗೆ ಆದರೆ ಗುರುಗಳನ್ನು ಎಂದಿಗೂ ಹಾಗೆಲ್ಲ ಕರೆಯಲ್ಲ .. ಇದು ಮೊದಲಿನಿಂದಲೂ ನಡೆದು ಬಂದ ಪದ್ಧತಿ. ರಾಮ ದೇವರ , ಇಲ್ಲವೆ  ದೇವರ ಅವತಾರವಾ.. ಆತ ಯಾರು, ರಾಮಾಯಣದ ಕಥೆ ಏನು ಎಂಬೋ  ಜಿಜ್ಞಾಸೆ , ಚಿಂತನೆ.. ಬ್ಯಾಡ ಬುಡಿ ಹೇಳೋಕೆ ಆಗದಷ್ಟು ಚಿಂತೆ ಮಾಡಿ ಪರಪರ ಅಂತ ತಲೆ ಕೆರೆದುಕೊಂಡಿದ್ದಾರೆ.ಕಟ್ಟ ಕಡೆಯದಾಗಿ ಅವರೆಲ್ಲರೂ ಪೂಜೆ ಮಾಡೋರು ಮಾಡಿ  .. ಸುಮ್ನೆ ಇರೋರು ಇದ್ದು ಬಿಡಿ ಅಂತ ಒಂದು ನಿರ್ಧಾರಕ್ಕೆ ಬಂದಿದ್ದಾರೆ, ಅದು ಎಲ್ಲಾ ರೀತಿಯಿಂದಲೂ ಒಳ್ಳೆಯದೇ. ಯಾಕೆಂದ್ರೆ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈಗ ಆತನ ಹಣೆಗೆ ಮೂರು ನಾಮ-ಅಥವಾ ಎರಡು ನಾಮ ಯಾವುದು ಇಡೋದು ಅಂತ ಭಕ್ತರಿಗೆ ನಾಮಾ ಹಾಕೋ ಭಗವತ್ ಸೇವಕರಲ್ಲಿ ಜಟಾಪಟಿ ನಡೆದಿದೆ.. ಗೊತ್ತಲ್ಲ ಒಂದು ಜಾತಿಯಲ್ಲಿ ನೂರು ಚೂರು ಚೂರು ಭಾಗ ! ಒಬ್ಬೋರದು ಒಂದೊಂದು ಅಭಿಪ್ರಾಯ.. ಕೊನೆಗೆ ಪಾಪದ ನರಸಿಂಹನ ಕಥೆ ಹಿಂಗೆ !! ಹೆ…

ಹೆಣ್ಣುಮಕ್ಕಳ ಕತೆ

Image
ನಿನ್ನೆ ಜೀಕನ್ನಡ  ವಾಹಿನಿಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕೊಲದೇವಿ ಗ್ರಾಮದಲ್ಲಿ  ಇರುವ ಗರುಡ ದೇವಾಲಯ ದರ್ಶನ ಮಾಡಿಸಿದರು. ಈ ಊರು ನನ್ನ ನೇಟೀವ್   ಸಮೀಪದ್ದು.. ಅವಳಿಜವಳಿ ಮಕ್ಕಳ ರೀತಿ  :-) . ಗರುಡ ದೇವನ ಬಗ್ಗೆ  ಜನಕ್ಕೆ ಗೊತ್ತಾಗುವಂತೆ ಮಾಡಿದ್ದು ಹೀಗೂ ಉಂಟೆ ನಾರಾಯಣ ಸ್ವಾಮಿ. ! ಅವರಿಗೆ ಗರುಡ ದೇವನ ಅಡ್ರಸ್ ಕೊಟ್ಟವರು ಜನಶ್ರೀಯ ಶ್ರೀನಿವಾಸ್ .. ಹೀಗೆ ಎತ್ತಲಿಂದಲೂ    ಬಂದ ವಿಳಾಸ  ಈಗ ಜೀ ತನಕ ತಲುಪಿದೆ.. 
ಕೋಲಾರದಲ್ಲಿ ಅಪಾರ ಸಂಖ್ಯೆ ದೇಗುಲಗಳಿವೆ. ದಂಡಕಾರುಣ್ಯ  ಎಂದು ಓದಿರುವ  ಆ ಜಾಗವೇ ಈ ಜಾಗ ಅನ್ನುವ ನಂಬಿಕೆ..   ಈ ಜಾಗದಲ್ಲಿ ಅಂದ್ರೆ ಕೋಲಾರದ ಆಸುಪಾಸು ರಾಮಾಯಣಕ್ಕೆ ಸಂಬಂಧಿಸಿದಂತೆ ಅನೇಕಾನೇಕ ಸಾಕ್ಷಿಗಳಿವೆ.. ಹೆಚ್ಚಾಗಿ ಲವಕುಶ -ಸೀತೆ ಬಗ್ಗೆ.. ಒಟ್ಟಾರೆ ಅಪರೂಪದ ಸಂಗತಿಗಳು ರಾಮಾಯಣಕ್ಕೆ ಸಂಬಂಧಿಸಿದಂತೆ ಇಲ್ಲಿವೆ.. ಯಾಕ್ ಈ ವಿಷ್ಯ ಹೇಳ್ತಾ ಇದ್ದೀನಿ ಅಂದ್ರೆ ಇವತ್ತು ಸುವರ್ಣ ನ್ಯೂಸ್ ನವರು ನಮ್ಮ ರಾಮ ಗಾಡ್ ಹುಟ್ಟಿದ್ದು ಜನವರಿ ಹತ್ತು ಅನ್ನುವ ಸಂಗತಿ ಹೇಳಿದ್ರು.. ಸೊ ಅದಕ್ಕೆ ನಾನು ಹ್ಯಾಪಿ ಆದೆ.. ರಾಮನ ಡೆಟ್ ಆಫ್ ಬರ್ತ್ ತಿಳಿದು :-)





ಹಿಂದಿ ಜೀ ವಾಹಿನಿಯಲ್ಲಿ ಒಂದು ಸುಂದರ ಧಾರವಾಹಿ ಪ್ರಸಾರ ಆಗ್ತಾ ಇರುವ  ಸಪನೇ ಸುಹಾನೆ.. ಕನ್ನಡಕ್ಕೆ ಅನೇಕ ಹಿಂದಿ ಧಾರಾವಾಹಿಗಳು ರೀಮೇಕ್ ಆಗಿದೆ. ಎಲ್ಲವು ಹೆಚ್ಚಾಗಿ ಮನೆ ಸಂಸಾರ ಅತ್ತೆ-ಸೊಸೆ ಜಗಳ ಇಂತಹವುಗಳನ್ನು ಹೊಂದಿದೆ. ಆದರೆ ಸಪನೇ ಸುಹಾನೆ ಹರೆಯದ ಯು…

ಗೋಪಾಲ ಸ್ವಾಮಿ ...

Image
ಹೆಚ್ಚು ಜನಪ್ರಿಯ ದೇವರುಗಳ ಪಟ್ಟಿಯಲ್ಲಿ ಕೃಷ್ಣ ಸಹ ಸೇರ್ಪಡೆ ಯಾಗಿರೋದು ನಿಮಗೆ ಗೊತ್ತು. ಅದೇ ರೀತಿ ಅತಿ ಹೆಚ್ಚು ಪ್ರೀತಿ ಮಾಡುವ ಪ್ರಾಣಿಗಳಲ್ಲಿ ಗೋವುಗಳ ಸ್ಥಾನ ಮೊದಲನೆಯದ್ದು.
ಕೃಷ್ಣ-ಗೋವು ಈ ಬಾಂಧವ್ಯ  ಅಕ್ಷರಗಳ ಮೂಲಕ ಮಾತ್ರವಲ್ಲದೆ, ಚಿತ್ರಗಳ ಮೂಲಕವೂ ಸಾಕಾರಗೊಂಡಿದೆ. ಅತಿ ಹೆಚ್ಹು ಚಿತ್ರಗಳನ್ನು ಬರೆಸಿಕೊಂಡ ಜೋಡಿ ಇವರು :-)
ಈಗ ಗೋವಿನ ಬಗ್ಗೆ ಮಾತನಾಡುವಾಗ ನಮಗೆ ಒಂದು ಹೆಸರು ಥಟ್ಟನೆ ಜ್ಞಾಪಕ್ಕೆ ಬರುತ್ತದೆ. ಅವರುಶ್ರೀ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ.ಗೋವಿನ ಸಂಖ್ಯೆ ಅಕ್ಷಯವಾಗುವುದಕ್ಕೆ ಹೆಚ್ಚು ಪ್ರಯತ್ನಪಟ್ಟ ಗುರುಗಳು.
ಅವರ ಈ ವಿಶೇಷ ಸಾಧನೆ ಹೆಚ್ಚು ಆಪ್ಯಾಯ.


ಇತ್ತೀಚೆಗೆ ಜನಶ್ರೀ  ವಾಹಿನಿಯಲ್ಲಿ ನಿರೂಪಕ ಚಂದನ್ ಶರ್ಮ, ಶ್ರೀಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ.ಅವರ ಜೊತೆ ಒಂದು ಗಂಟೆಗಳ ಕಾಲ ಮಾತನಾಡಿದರು. ಸ್ವಾಮಿಜಿಗಳ      ಮಾತುಕತೆ, ವಿಷಯ , ಮಾಹಿತಿ ಎಲ್ಲವೂ ಗೋವಿನ ಸುತ್ತಲೇ ಇತ್ತು. ತುಂಬಾ ಅಪ್ಯಾಮಾನವಾದ  ಕಾರ್ಯಕ್ರಮ. ಪುಣ್ಯಕೋಟಿ ನಾಡಿದು ನಮ್ಮದು ,ಕೊಟ್ಟ ಮಾತನ್ನು ತಪ್ಪಲ್ಲ ಅನ್ನುವ ಬಹುಪರಾಕ್ರಮಿಗಳು ಮಾಡದ ಅಪರೂಪದ ಕೆಲಸ ಗೋ ಸಂರಕ್ಷಣೆ. ಕಾಮಧೇನು ಭಾರತೀಯ ಸಂಸ್ಕೃತಿಯಲ್ಲಿ  ಅತ್ಯಂತ ಪೂಜ್ಯನೀಯ. ನೀನಾರಿಗಾದೆಯೋ ಎಲೆ ಮಾನವ ಎನ್ನುವಂತೆ ಎಲ್ಲವೂ ಬಳಕೆಗೆ ಯೋಗ್ಯವಾದವುಗಳು.ಸ್ವಾಮೀಜಿಗಳು ಹೆಚ್ಚು ಹೇಳಿದ್ದು ಗಂಜಲದಲ್ಲಿ ಫಿನಾಯಿಲ್ ಮಾಡ್ತೀವಿ ಅಂತ.. ಅದ್ಯಾಕೆ ಆ ವಸ್ತುವಿನ ಬಗ್ಗೆ ಹೇಳ್ತಾ ಇದ್ದರೋ  ಗೊತ್ತಿಲ…

ಜನಶ್ರೀ ದೀಕ್ಷಿತರ ಬ್ರೇಕ್ !

Image
ನಿನ್ನೆ ಎರಡು ಕಾರ್ಯಕ್ರಮಗಳು ತುಂಬಾ ಗಮನ ಸೆಳೆಯಿತು. ಒಂದು ಜನಶ್ರೀ ವಾಹಿನಿಯಲ್ಲಿ ಪ್ರಸಾರ ಆದ ಕಾಲಗರ್ಭ , ಮತ್ತೊಂದು  ಟೀವಿ ನೈನ್   ವಾಹಿನಿಯಲ್ಲಿ ಪ್ರಸಾರ ಆದ ವೀರಪ್ಪನ್  ಕುರಿತಾದ ಕಾರ್ಯಕ್ರಮ. ನಿರೂಪಕ ಶಿವಪ್ರಸಾದ್  ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಪ್ರಸಾರ ಆಯ್ತು. ಒಟ್ಟಾರೆ ಹೇಳ ಬೇಕೂಂದ್ರೆ ನಿವೃತ್ತ ಪೋಲೀಸ್ ಅಧಿಕಾರಿಗಳಾದ ಅಶೋಕ್ ಕುಮಾರ್ ಹಾಗೂ ಬಾವ ಅವರ ಜೊತೆಗೆ ನಡೆಸಿದ ಮಾತುಕತೆ, ಪ್ರಶ್ನೆಗಳನ್ನೂ ಕೇಳಿದ ಪರಿ ಎಲ್ಲವೂ ಅದ್ಭುತ .
ದಂತಚೋರ ವೀರಪ್ಪನ್ ಬಗ್ಗೆ ಸಾವಿರವಾಗಿ ಹಾಗೂ ಆ ಸಮಯದಲ್ಲಿ ಹತರಾದ ಅಧಿಕಾರಿಗಳಾದ ಶ್ರೀನಿವಾಸ್, ಹರಿಕೃಷ್ಣ ಸೇರಿದಂತೆ ಇನ್ನು ಅನೇಕರ ಬಗ್ಗೆ ಅಲ್ಲದೆ ಯಾವ ರೀತಿ ವೀರಪ್ಪನ್ ಮನಸ್ಥಿತಿ ಹಾಗೂ ವ್ಯಕ್ತಿತ್ವ  ಹೊಂದಿದ್ದ ಎನ್ನುವುದರ ಬಗ್ಗೆ ಕುರಿತಾದ ಮಾಹಿತಿ ಕೇಳುತ್ತಿದ್ದಾಗ.. ಸಾಕಷ್ಟು ಸರ್ತಿ ನನಗೆ ಕಣ್ಣೀರು ಬಂತು ಕಣ್ರೀ , ಆತನ ಕ್ರೌರ್ಯಕ್ಕೆ ಬಲಿಯಾದವರ
ಹಗಲೂ ರಾತ್ರಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಆ ಕಳ್ಳನನ್ನು ಹಿಡಿಯಲು ಒದ್ದಾಡಿದ ಪೊಲೀಸರು, ಅವನಿ0ದ ಹತರಾಗಿ ರು0ಡ  ಬೇರೆಯಾದ ಶವಗಳನು ಕಂಡಾ ಗಿನ ಪರಿಸ್ಥಿತಿ , ವೀರಪ್ಪನ್ ಹೆಂಡ್ತಿ ಮುತ್ತುಲಕ್ಷ್ಮಿ ಶ್ರೀನಿವಾಸ್ ರಂತಹ ನಿಷ್ಟಾವಂತ ಅಧಿಕಾರಿಯ ತಲೆಯನ್ನು ಫುಟ್ಬಾಲ್ ನಂತೆ ಒದ್ದು ... ಅಯ್ಯೋ ಆ ಕಾರ್ಯಕ್ರಮವಿಡಿ ಮಾತೆ ಹೊರಡ ದಷ್ಟು ಮಗ್ನತೆಯನ್ನು ನೀಡಿತ್ತು .
ತಮಗೆ ಕೊಟ್ಟ ಎರಡು ಒಣ ಚಪಾತಿಯನ್ನು ಕೆಟ್ಟ ಕೊಳ್ತ ನೀರಲ್ಲಿ ಅದ್ದಿ  …