Posts

Showing posts from October 14, 2012

ಜಾರಿಕೆ ನೆಲ

Image
ಕಾಳಿ ಸ್ವಾಮಿಯ ಪ್ರಚಾರದ ಹುಚ್ಚನ್ನು ಮಾಧ್ಯಮಗಳು ಮಾತಿನಲ್ಲಿ ಜಡಿದು ಬುದ್ಧಿ ಕಲಿಸಿತು. ಈ ವಿಷಯದ ಬಗ್ಗೆ ಎಲ್ಲ ವಾಹಿನಿಗಳು ನಡೆಸಿದ ಚರ್ಚೆಯಲ್ಲಿ ಜನಶ್ರೀ ವಾಹಿನಿ ನೇತೃತ್ವದಲ್ಲಿ ರಮಾಕಾಂತ್  ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಅವರು ತಿಳಿಸಿದ ಒಂದು ಪ್ರಸಂಗ , ಅದರ ಅಂತಿಮ ಫಲಿತಾಂಶ .. ಅಬ್ಬಾ ಅನ್ನುವಂತೆ ಆಯಿತು. ವೀರಶೈವ ಮಠದ ಸ್ವಾಮಿಯೊಬ್ಬರ ಬಗ್ಗೆ ಬರೆದ ಕಥೆಯಂತೆ ; ಅದಕ್ಕಿಂತಲೂ ವಿಶೇಷವಾದ ವಾತಾವರಣ ಇದ್ದ ಮಠದ ಬಗ್ಗೆ ಹೇಳುತ್ತಾ ಹೋದಾಗ ವೀಕ್ಷಕರು ವಿಸ್ಮಿತರಾದರು. ಸರ್ವಸಂಗ ಪರಿತ್ಯಾಗಿ ಆಗಿದ್ದ ಸ್ವಾಮಿಯ ಸುತ್ತಮುತ್ತಲೂ ಸೇವೆ ಸಲ್ಲಿಸುತ್ತಾ ಇದ್ದ ವರು ಹರೆಯ ಹೆಣ್ಣು ಮಕ್ಕಳಂತೆ! ಆತನ ಮಾತುಗಳು ವಿನೋದಮಯ ಆಗಿತ್ತು ಎನ್ನುವ ಸ್ವಾಮಿಯ ಒಳ್ಳೆಯ ಅಂಶಗಳ ಜೊತೆಗೆ ಮಠದ  ವಾತಾವರಣದ ಹಸಿಬಿಸಿ ವಾಸ್ತವತೆ ಬಗ್ಗೆ ಹೇಳುತ್ತಾ, ಅಂತಿಮವಾಗಿ  ಆ ಸ್ವಾಮಿ ರಥದಲ್ಲಿ ಭಸ್ಮವಾದ ಕಥೆಯನ್ನು ತಿಳಿಸಿದರು.ಆತ ಕುಳಿತಿದ್ದ ರಥ  ತಂತಾನೇ  ಹತ್ತಿ ಉರಿಯಿತಂತೆ..! ಮಾತಿನ ನಡುವೆ ರೇಷ್ಮೆ ಸರ್ ಕಾಳಿಯ ವರ್ತನೆಯ ಬಗ್ಗೆ ಹೇಳುತ್ತಾ ಓರ್ವ ಮಠಾಧಿಪತಿಗೆ ಇರ ಬೇಕಾದ ಲಜ್ಜೆ  ಕಾಲಿಗೆ ಇರಲಿಲ್ಲ ಅಂದ್ರು. ಅದಂತೂ ಸತ್ಯ ಸತ್ಯ..! ಯಾವುದೇ ಧರ್ಮದಲ್ಲಿ ಆಗಿರಲಿ ಧರ್ಮಗುರುಗಳು ಎಂದಿಗೂ ಕಿರುಚಾಡಿ ಮಾತಾಡಿದ ಇತಿಹಾಸವಿಲ್ಲ. ಇಂತಹ ಪ್ರಕ್ರಿಯೆ ಕಂಡು ಬರುವುದು ಸಾಮಾನ್ಯ ಅತಿ ಸಾಮಾನ್ಯರಲ್ಲಿ. ಕಾಳಿಯನ್ನು ಬೆಳೆಸಿದ ಸುವರ್ಣವಾಹಿನಿ ಸ್ಥಿತಿ ಎಂತಹವರಿಗೂ ಅರ್ಥ ಆಗ್ತಾ…

ಕಾಳಿ ಕಾಳಿ !!

Image
ಸಮಸ್ತ ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು..
ತಮಾಷೆ ಅನ್ನಬೇಕೋ ಇಲ್ಲವೇ ವಿಷಾದ ಪಡಬೇಕೋ ತಿಳಿತಾ ಇಲ್ಲ. ವಾಹಿನಿಗಳು ಈಗ ಒಂದು ವಿಷಯದ ಬಗ್ಗೆ ಚರ್ಚೆ ಮಾಡ್ತಾ ಕೂರುತ್ತಿದೆ. ಪ್ರಸ್ತುತ  ಕಾಳಿ ಮಠದ ಋಷಿ ಕುಮಾರ ಸ್ವಾಮಿಜಿ ಬಗ್ಗೆ ..! ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ ಇಂತಹ ಚರ್ಚೆಗಳು ಸಾಮಾನ್ಯ. ವಿಷಯದ ಹಾದಿಯನ್ನು ಬದಲಾಯಿಸುವ ಜಾಣ್ಮೆ ವಾಹಿನಿಗಳಿಗೆ ಇವೆ. ಸತ್ಯ ಏನು ಎನ್ನುವ ಸಂಗತಿ ಸಾಮಾನ್ಯನಿಗೆ ತಿಳಿಯುವೆ ಇಲ್ಲ. ಯಾಕೆಂದ್ರೆ ಒಂದು ಕಡೆ ಸರಿ ಅಂದ್ರೆ ಮತ್ತೊಂದು ಕಡೆ ತಪ್ಪು ಎನ್ನುವ ಕೂಗಾಟ.ಯಾವ ವಾಹಿನಿಗಳಿಗೆ ಸತ್ಯ ಏನು ಅಂತ ಹೇಳೋಕೆ ಇಷ್ಟ ಇರಲ್ಲ ನಿಜ ಗೊತ್ತಿದ್ರೂ. ಛೆ !
ಈ ಕಾಳಿ ಮಠದ ಸ್ವಾಮಿಜಿ ಮಾತಾನಾಡುವುದನ್ನು ನೀವು ಕೇಳ ಬೇಕು ಅಷ್ಟೊಂದು ನಯನಾಜೂಕು. ಕುಣಿದಾಡುತ್ತಾ, ಕಿರುಚಾಡುತ್ತಾ, ಪಣ ತೊಡುತ್ತಾ  ಶತ್ರು ಸಂಹಾರದ ಪೂಜೆ ಮಾಡಿಸುವ ಇಂತಹ ಸ್ವಾಮಿಜಿಗೆ ಶತ್ರುಗಳು ಹುಟ್ಟಿ ಬಿಟ್ಟರಲ್ಲ ಭೋಲೆ ಶಂಕರ !


ಪಬ್ಲಿಕ್ ಟೀವಿಯ ಮಂದಿ ಸಾಕ್ಷಿ ಸಮೇತ ಸೆರೆ ಹಿಡಿದ ಕಾಳಿ ಸ್ವಾಮಿ ಪುರಾಣವನ್ನು ರಾಧ ಹಿರೇ ಗೌಡರ್ ಹೇಳುವಾಗ, ಆ ಕಿರುಚಾಟದ ಸ್ವಾಮಿ ಭಕ್ತ ವೃಂದವೇ ಸರಿಯಾಗಿ ಬುದ್ಧಿ ಕಳಿಸಿದ ಪ್ರಕರಣ ವೀಕ್ಷಿಸಿದಾಗ ನಾನು ಮೇಲಿನ ಸಾಲುಗಳನ್ನು ನನ್ನ ಎಫ್ಬಿ ವಾಲ್ ನಲ್ಲಿ ಹಾಕಿದೆ. ಆಗ ಬಂದ ಪ್ರತಿಕ್ರಿಯೆಗಳು ...! ಕೊನೆಯಲ್ಲಿ ಅವುಗಳನ್ನು ಹಾಕ್ತೀನಿ ....
ಕೋಡಿ ಮಠದ ಸ್ವಾಮಿಗಳ ಬಗ್ಗೆ ಅವಹೇಳನಕಾರಿಯಾಗಿ ಮ…