Posts

Showing posts from October 28, 2012

ತೀರ್ಪು

Image
ತೀರ್ಪು ನೀಡುವ ಕೆಲಸ ಹೇಳುವಷ್ಟು ಸುಲಭ ಅಲ್ಲವೇ ಅಲ್ಲ, ಅದರಲ್ಲೂ ಕಾರ್ಯಕ್ರಮಗಳಲ್ಲಿ ನೀಡುವ ತೀರ್ಪಿನ ಬಗ್ಗೆ ಶಾನೆ ಹುಷಾರಾಗಿ ಇರ ಬೇಕು. ಸ್ವಲ್ಪ ಎಡವಟ್ಟಾ ದರೂ ಫಲಿತಾಂಶ ಉಫ್ !
ನಿಜ ಆದರೆ ಕೆಲವು ತೀರ್ಪುಅಗಳು ವೀಕ್ಷಕರ ಮನ ಮುಟ್ಟುವಂತೆ ಇರುತ್ತದೆ. ಕಲರ್ ವಾಹಿನಿಯಲ್ಲಿ ಇಂಡಿಯಾ ಗಾಟ್ ಟ್ಯಾಲೆಂಟ್  ಅನ್ನುವ ಟ್ಯಾಲೆಂಟ್ ಹಂಟ್ ರಿಯಾಲಿಟಿ ಷೋ ನಲ್ಲಿ ದೇಶದ ಭಿನ್ನ ರೀತಿಯ ಕೌಶಲ್ಯ ಇರುವ ಪ್ರತಿಭೆಗಳು ಭಾಗವಹಿಸಿದ್ದಾರೆ. ಆರಂಭಿಕ ಹಂತದಲ್ಲಿ ಮಲೈಕ  ಅರೋರ ಖಾನ್ , ಕಿರಣ್  ಖೇರ್ ಮತ್ತು  ಕರಣ್ ಜೋಹರ್ ಇದ್ರೂ.ಈಗ ಕಿರಣ್ -ಕರಣ್ ಜೊತೆ ಮಲೈಕ  ಬದಲು ಫರ ಖಾನ್  ತೀರ್ಪುಗಾರಾಗಿದ್ದರೆ.  ಇತ್ತಿಚೆಗೆ  ನಡೆದ ಸೆಮಿ ಫೈನಲ್ ನಲ್ಲಿ ದೊಂಬರ ಮಗುವುವೊಂದು ಭಾಗವಹಿಸಿತ್ತು.ತುಂಬಾ ಚೆನ್ನಾಗಿ ಹಗ್ಗದ ಮೇಲೆ ನಡೆದಿತ್ತು, ಆದರೆ ತೀರ್ಪುಗಾರರು ಆ ಮಗುವನ್ನು ಓಡಿಸುವಂತೆ ಸಜೆಸ್ಟ್ ಮಾಡಿ ಇಂತಹ ಕೆಲಸಗಳಿಗೆ ಮಗುವನ್ನು ದೂಡದೆ ಇರುವಂತೆ ತಂದೆಗೆ ಬುದ್ಧಿ ಹೇಳಿದರು. ಎಷ್ಟು ಚಿಕ್ಕ ಕೂಸು ಗೊತ್ತ ಅದು.. ಅಂತಹ ಮಕ್ಕಳನ್ನು ಮುಂದೆ ಇತ್ತು ಕಾಸು ಸಂಪಾದಿಸುವ ತಾಯಿ ತಂದೆಗಳು, ಮಗುವನ್ನು ಮುಂದೆ ಮಾಡಿ ಭಿಕ್ಷಾಟನೆ  ಮಾಡುವವರು, ರಿಯಾಲಿಟಿ ಶೋಗಳಲ್ಲಿ ಗೆಲ್ಲಲೇ ಬೇಕು ಎಂದು  ಒತ್ತಡ ಹೇರುವ  ತಾಯಿತಂದೆಯರು, ಮಗುವಿನ ಅಸಲಿ ಪ್ರತಿಭೆಯನ್ನು ಬಿಟ್ಟು ತಮಗೆ ಬೇಕಾದಂತೆ  ನಡೆಯುವ ಪೋಷಕರು.. ಇಂತಹ ವರನ್ನು ಕಂಡ್ರೆ  ಸಿಟ್ಟು ಬರುತ್ತದೆ ಕಣ್ರೀ..
ನನಗೆ ಒಂದು ಕಥೆ ಜ್ಞಾಪಕಕ್ಕೆಬರ…

ಸೈಡ್ ಎಫೆಕ್ಟಾ ?

Image
ಅಡುಗೆ ಕಾರ್ಯಕ್ರಮ ಅಂದ್ರೆ ಅದು ಎಂದಿಗೂ ವೀಕ್ಷಿಸುವಂತಹ  ಕಾರ್ಯಕ್ರಮ ಅಲ್ಲವೇ ಅಲ್ಲ ಅನ್ನುವವರಿಗೂ ಮನೆಯಲ್ಲಿ ರುಚಿಯಾದ ಅಡುಗೆ ಇರ ಬೇಕು.. ಅವರ ನೋಟದ ರುಚಿ ಬೇರೆ ಅಲ್ವೇ ! ಆದರೆ ನಾನು ಕಂಡಂಗೆ  ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಅಡುಗೆ ಕಾರ್ಯಕ್ರಮ ಸಹ ಒಂದು. ಇಲ್ಲಿ ಹೇಳುವ ಟಿಪ್ಸ್ ಸಹ ಹೆಚ್ಚು ಪ್ರಾಮುಖ್ಯತೆ ಪಡೆದು ಕೊಳ್ಳುತ್ತದೆ.  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ  ಒಗ್ಗರಣೆ ಡಬ್ಬಿಯ ಫ್ಯಾನ್ ಕ್ಲಬ್ ಜೋರಾಗಿದೆ ನಾನು ಕಂದಂಗೆ.. ಅದೇ ರೀತಿ ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ಸ್ಟಾರ್ಗಳ ಅಡುಗೆ ಕಾರ್ಯಕ್ರಮವು ಸ್ಟಾರ್ ಗಳ ಮೇಲಿನ ಪ್ರೀತಿಯಿಂದ ವೀಕ್ಷಿಸುತ್ತಾರೆ ವೀಕ್ಷಕರು. ಲೋಕೊಭಿನ್ನ ರುಚಿ:
ಒಗ್ಗರಣೆ ಡಬ್ಬಿ ಮಹತ್ವ ಏನು ಅಂದ್ರೆ ಒಂದು ಗಂಟೆಯಲ್ಲಿ ಅನೇಕ ಅಡುಗೆಗಳನ್ನು ಮಾಡಿ ಬಡಿಸಿ ಬಿಡುವುದು. ನವ್ಯ ಆಂಕರಿಂಗ್ ನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ.ಆಕೆಯ ಮಾತು, ನಗುವಿನಷ್ಟೇ ಆಕೆಯ ಉಡುಪುಗಳು ಆಕರ್ಷಕ. ಊಟ -ನೋಟ ಎರಡೂ  ಎರಡರ ಮನದಾನಂದ ಸಿಗುತ್ತದೆ.ಇದನ್ನು ಕೀಟಲೆಯಿಂದ ಹೇಳ್ತಾ ಇಲ್ಲ ಕಣ್ರೀ ಸಚ್ಚಿ !ನಾನು ರೇಗಿ  ಬರೆದಿದ್ದ  ಮಾತ್ರಕ್ಕೆ ಆ ಕಾರ್ಯಕ್ರಮ ಸುಮಾರಾಗಿದೆ ಅಂತ ಅಲ್ಲ ಚಂದದ ಕಾರ್ಯಕ್ರಮ ಮತ್ತಷ್ಟು ಚಂದವಾಗಿ ಬೆಳೆಯಲಿ ಅಂತ ಅಷ್ಟೇ. ಒಗ್ಗರಣೆ ಡಬ್ಬಿ ಫ್ಯಾನ್ ಗಳು ಕಳಿಸಿದ  ಅಡುಗೆಯನ್ನು ಬಂದ ಅತಿಥಿ ಮಾಡ್ತಾರೆ . ದಸರಾ ಹಬ್ಬದ ವಿಶೇಷ ಸೆಲಬಿ ಅಡುಗೆ ಕಾರ್ಯಕ್ರಮದಲ್ಲಿ ನನಗೆ ಅನುರಾಧ ಭಟ್ ಅವರ ಅಡುಗೆ ;-) ಗ…

ನಮ್ಮ ಮನೆ ಹುಡ್ಗ

Image
ಸುವರ್ಣ ವಾಹಿನಿಯಲ್ಲಿ ಸುಮಾರು ಇಪ್ಪತ್ತೈದು ದಿನಗಳ ಹಿಂದೆ ಕಾರ್ಯಕ್ರಮ ಒಂದು ಪ್ರಸಾರ ಆಗ್ತಾ ಇತ್ತು. ಕಾರ್ಯಕ್ರಮದಲ್ಲಿ ಅನೇಕ ಹಾಡುಗಾರರು ಭಾಗವಹಿಸಿದ್ದರು. ಕನ್ನಡಿಗರ ಆಕರ್ಷಣೆ ವಿಜಯ ಪ್ರಕಾಶ್. ಆ ಕಾರ್ಯಕ್ರಮದಲ್ಲಿ ಒಂದು ರಾಗವನ್ನು ಬೇರೆ ಬೇರೆ ಭಾಷೆಯ ಸಿನಿಮಾಗಳು ಬಳಸಿ ಸಿದ್ಧ ಮಾಡಿದ ಹಾಡುಗಳು..! ಸಖತ್ತಾಗಿತ್ತು.ವಿಜಯ ಪ್ರಕಾಶ್ ಕಂಠ, ಆ ಸ್ವರ ಲಹರಿ ಅದ್ಭುತ. ನಾದಮಯ ಈ ಲೋಕವೆಲ್ಲ..ದಿಂದ ಹಿಡಿದು.. ಅನೇಕ ಕನ್ನಡ ಹಾಡುಗಳು ಸೂಪರ್ಬ್, ಅದೇ ಕಾರ್ಯಕ್ರಮದಲ್ಲಿ ತಮಿಳು, ತೆಲುಗು, ಮಲೆಯಾಳಂ ಹಾಡುಗಳ ಖುಷಿಯನ್ನು ಇತರ ಕಲಾವಿದರು ಹಂಚಿದ್ದರು. ಮೋಸ್ಟ್ಲಿ ಅದೊಂದು ಅವಾರ್ಡ್ ಕಾರ್ಯಕ್ರಮ ಇರ ಬೇಕು, ಯಾಕೆಂದ್ರೆ ನಾನು ಆಗ ಜಮ್ಮು ಗೆ ಹೋಗುವ ಬ್ಯುಸಿಯಲ್ಲಿ ಇದ್ದೆ.ಎಷ್ಟೇ ಬ್ಯುಸಿ ಇದ್ರೂ ವಿಜಯ್ ಅವರ ಧ್ವನಿ ಎಲ್ಲ ಕೆಲಸಗಳನ್ನು ಪಕ್ಕಕ್ಕೆ ಇತ್ತು ಹಾಡುಗಳನ್ನು ಆಲಿಸುವಂತೆ ಮಾಡಿತ್ತು. ವಾಹಿನಿ ಮತ್ತೊಮ್ಮೆ ಪ್ರಸಾರ ಮಾಡಿದ್ರೆ ವೀಕ್ಷಿಸಿ ಒನ್ ಅಮಾಂಗ್ ದ ಬೆಸ್ಟ್ ನಂಬರ್ ಗೊತ್ತ..!
ಜೀ ಕನ್ನಡ ವಾಹಿನಿಯಲ್ಲಿ ವಿಜಯ್ ಪ್ರಕಾಶ್ ಜಡ್ಜ್ ಮೆಂಟ್ ಸಾರೆಗ ಮ ಪ ಲಿಲ್ ಚಾಂಪ್ ನಲ್ಲಿ ಹೊರಹೊಮ್ಮುತ್ತಾ ಇದೆ .. ಇಂತಹ ಅದ್ಭುತ ಕಲಾವಿದ ನಮ್ಮ  ಮನೆ ಹುಡ್ಗ ಎನ್ನುವ ಸಂಗತಿ ಸಮಸ್ತ ಕನ್ನಡಿಗರಿಗೂ ಖುಷಿ ಹಾಗೂ  ಹೆಮ್ಮೆ ಕೊಡುವ ಸಂಗತಿ. 
ಕಲರ್ ವಾಹಿನಿಯಲ್ಲಿ ಸುರ್ ಕ್ಷೇತ್ರ ಅನ್ನುವ ಹಾಡಿನ ರಿಯಾಲಿಟಿ ಷೋ ಹಿಂದುಸ್ಥಾನ ಮತ್ತು ಪಾಕಿಸ್ತಾನ್ ಕಲಾವಿದರ ನಡೆಯುತ್ತಿರ…

ತಿರುಪತಿ

Image
ತಿರುಪತಿ ಬೆಟ್ಟ ಗೂಗಲ್  ಅರ್ಥ್  ನಲ್ಲಿ ನಮಗೆ ವಿಭಿನ್ನ ರೂಪದಲ್ಲಿ ಕಾಣುತ್ತದೆ ಅನ್ನುವ ವಿಷಯ ತೆಗೆದುಕೊಂಡು ಚರ್ಚೆ ಮಾಡುತ್ತಿದ್ದರು ಶಿವಪ್ರಸಾದ್ ಟೀವಿ ನೈನ್  ವಾಹಿನಿಯಲ್ಲಿ. ವಿಷಯ ತುಂಬಾ ಆಸಕ್ತಿಕರ.ಹಿಂದೂ ದೇವತೆಗಳಲ್ಲಿ ಬಾಲಾಜಿಗೆ ಇರುವ ಸ್ಥಾನ ವಿಶೇಷ. ಯಾಕೆಂದ್ರೆ ದಕ್ಷಿಣ ಭಾರತಕ್ಕೆ ಬರುವ ಉತ್ತರ ಭಾರತೀಯರು ಮುಖ್ಯವಾಗಿ ಪುಟ್ಟಪರ್ತಿ ಸಾಯಿ ಮತ್ತು ಬೆಟ್ಟದ ಸ್ವಾಮಿ ಬಾಲಾಜಿಯನ್ನು ದರ್ಶಿಸದೆ ಹೋಗರು . ಬಾಲಾಜಿ  ಬಗ್ಗೆ ವಿಶೇಷ ಅಭಿಮಾನ ಪ್ರೀತಿಯನ್ನು ಹೊಂದಿರುವ ಭಕ್ತರಿಗೆ ಈ ರೂಪಗಳು ಕಂಡಿರ ಬಹುದು. 

ಇನ್ನೊಂದು ಸಂಗತಿ ಅಲ್ಲಿ ಇರುವುದು ಬೆಟ್ಟಗಳು. ಆ ಬೆಟ್ಟಗಳನ್ನು ದಾಟಿ ನಾವು ದೇವನ ಸ್ಥಳ ತಲುಪ ಬೇಕಾದರೆ ಸಾಕಷ್ಟು ಸಮಯ ಇರುತ್ತದೆ. ಅಲ್ಲಿಗೆ ಹೋಗಲು ಹೆಲಿಕಾಪ್ಟರ್ , ಇಲ್ಲವೇ ರೋಪ್ ವೆ ವ್ಯವಸ್ಥೆ ಇಲ್ಲ, ಯಾಕೆಂದ್ರೆ ಸ್ವಾಮಿಯ ಏಕಾಂತಕ್ಕೆ ಭಂಗ ಆಗುತ್ತದೆ ಎನ್ನುವ ನಂಬಿಕೆ ಭಕ್ತರದು.  ವಿಷಯ ತುಂಬಾ  ಆಸಕ್ತಿಕರವಾಗಿತ್ತು. ಸಾಮಾನ್ಯವಾಗಿ ತಿರುಪತಿ ದೇವರ ಬಗ್ಗೆ ಹೇಳುವಾಗ ಟೀವಿ ನೈನ್ ವಾಹಿನಿಯಲ್ಲಿ ಅಲ್ಲಿನ ಸಂಪತ್ತು ಇಲ್ಲವೇ ಅಲ್ಲಿ ಬಿದ್ದು ಹೋದ ಶಿಖರದ  ಬಗ್ಗೆ ಹೇಳುತ್ತಾ ಜೀವ ಹಿಂಡುತ್ತಾರೆ.ದೇವಾಲಯಗಳು ಅಂದ್ರೆ ಸಂಪತ್ತಿನ ಆಗರ. ಮೊದಲೇ ಭಯೋತ್ಪಾದಕರಿಗೆ ನಮ್ಮ ದೇವಸ್ಥಾನಗಳ ಮೇಲೆ ಕಣ್ಣು ಹೀಗ್ಯಾಕೆ ಹೇಳ್ತಾರೆ ಅನ್ನುವ ಭಕ್ತರು ಇದ್ದಾರೆ ಮಾರಾರ್ರೆ.
ತಿರುಪತಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನನ್ನ ಬಂಧು ಒಬ್ಬರ ಬಳಿ  ಈ ವಿಷ…