Posts

Showing posts from November 11, 2012

ಜಯ ಹೇ

Image
This video shows children ' singing ' the National Anthem, closely following the lead girl's movements -- she is the girl who comesrunning. These children can't speak nor hear. Yes, they are differently abled ! But then, they eloquently exp
ress valour and patriotism by their fabulous body language.

If you aren't touched by these children's way of bringing forth the glory of our country's greatness.....you are hard-hearted indeed.

Amit Sharma made this video. Let it reach all corners of the WORLD.
http://www.youtube.com/watch?v=WLOaDrD65Z4&feature=share

ಕೂರ್ಗ್ನಲ್ಲಿ ಇರುವ ಆಂಗ್ಲ ಪತ್ರಿಕೆಯ ವರದಿಗಾರ ಇಂದ್ರೇಶ್ ಕಳುಹಿಸಿದ ಮೇಲ್  ಹಂಚಿದ್ದೇನೆ... ಮಕ್ಕಳ ಎನರ್ಜಿ ನೋಡಿ ಹೇಗಿದೆ..
ಬೇರೆ ವಿಷಯ ಬರೆಯುವುದಕ್ಕಿಂತ ಈ ಸಂಗತಿ ನಿಮಗೆ ತಿಳಿಸುವ ಆಸೆಯಿಂದ ಯಾವ ಟೀವಿ ಅಂಶಗಳ ಬಗ್ಗೆ ಬರೆದಿಲ್ಲ ಇಂದು.. 
ಒಳ್ಳೆಯ ಸಂಗತಿ ಹಂಚಿಕೊಂಡ ತೃಪ್ತಿ ಇಂದು ನನಗಿದೆ.. :-)  ಜಯ ಹೇ ಜಯ ಹೇ ಜಯ ಹೇ ಜಯ ಜಯ ಜಯ ಜಯ ಹೇ

ಹೌದ ???!

Image
ಭಾಷೆ-ಅಸ್ತಿತ್ವಕ್ಕಾಗಿ ಬಾಳ ಠಾಕ್ರೆ ಮಹಾರಾಷ್ಟ್ರದಲ್ಲಿ ಸಾಕಷ್ಟು ಹೋರಾಟ ನಡೆಸಿ ಸ್ಥಾನಮಾನ ತಂದರು. ಇಲ್ಲದೆ ಇದ್ರೆ ಹಿಂದಿ ಭಾಷೆ ಬರದ ಅಸಂಖ್ಯಾತ ಮರಾಠಿ ಭಾಷಿಕರು ಅನಿವಾರ್ಯವಾಗಿ ಹಿಂದಿ ಭಾಷೆಯನ್ನೂ ತಮ್ಮದೆಂದು ಒಪ್ಪಿಕೊಳ್ಳುವ ದಾಸ್ಯಕ್ಕೆ ಒಳಗಾಗ ಬೇಕಿತ್ತು..ಬೇರೆ ಸಂಗತಿಗಳು ಏನೇ ಇರಲಿ ಭಾಷೆ-ನಾಡಿನ ಬಗ್ಗೆ ಕರ್ಮಠ ಮನಸ್ಥಿತಿ ಪಡೆದು ಪ್ರೇರಕ ಶಕ್ತಿಯಾದ ಬಾಳ ಆರೋಗ್ಯ ಸುಧಾರಿಸಲಿ..ಅವರು ಶೀಘ್ರವಾಗಿ ಗುಣ ಕಾಣಲಿ ..


ಅಪ್ಪನ ಬಳಿ ಮಾತಾಡೋದು ಆಂಗ್ಲ ಭಾಷೆ ಆದರೆ ಅಮ್ಮನ ಜೊತೆಯಲ್ಲಿ ಹರಟೋದು ಕನ್ನಡದಲ್ಲಿ ..ದೇವರದಯ ನನ್ನ ಜೊತೆ ಮಾತಾಡಿದ್ದು ಕನ್ನಡದಲ್ಲೇ 
 ಪುಟ್ಟಮಗು ಇನ್ನು ಆರನೇ ಕ್ಲಾಸ್ ಪ್ರಾರ್ಥನಾ ಶಾಲೆ ಜಾಣೇ .. ಏನೇ ಪುಟ್ಟಿ ಅಷ್ಟೊಂದು ಬ್ಯುಸಿ ಇರ್ತಿಯ ಕಷ್ಟ ಆಗಲ್ವ ಓದೋಕೆ ಅನ್ನುವ ನನ್ನ ಪ್ರಶ್ನೆಗೆ ಉತ್ತರಿಸಿದ್ದು.. ನೋ ಕಷ್ಟ ಆಗೋದಿಲ್ಲ ಯಾಕೆಂದರೆ  ಎಷ್ಟು ಪೋರ್ಷನ್ ಇರುತ್ತೆ.. ಎರಡರಿಂದ ಮೂರು ಸರ್ತಿ ಓದಿದರೆ ಆಯ್ತು ಆರಾಮವಾಗಿ ಬಂದು ಬಿಡುತ್ತೆ .. ಎಷ್ಟು ಸುಲಭವಾಗಿ ಹೇಳಿಬಿಡ್ತು ಈ ಪುಟಾಣಿ ಅನ್ನಿಸಿತ್ತು.. ನಾವು ಓದೋ ಕಾಲದಲ್ಲಿ ಯಾವತ್ತೂ ಛೆ ಹೀಗಾಗಿರಲಿಲ್ಲ ಅನ್ನುವ ದುಃಖ  ಕಾಡಿತ್ತು 


ಏನೇ ಹೇಳಿ ಈ ಮಗು ಜೊತೆ ಮಾತಿಗೆ ಕುಳಿತರೆ ಸಿಕ್ಕೋದು ಭರಪೂರ ಖುಷಿ .. ಇಂತಹ  ಸಂತಸ ಹರಡುವ ಬಾಲೆ ಹೆಸರು ಪ್ರಕೃತಿ ಪ್ರಸಾದ್ .. ನನ್ನ ಮಿತ್ರ ಎಂ.ಎಸ್ .ಪ್ರಸಾದ್ . ಪ್ರಕೃತಿ ಕನ್ನಡ ಚಿತ್ರ ರಂಗದ ಹೆಸರು ಮಾಡಿರುವ ಬಾಲ ಕಲಾವಿದೆ. ಕಿರು…

ಭೇದಭಾವ

Image
ನಾನು ಯಾವುದೇ ಬಗೆಯ ಭೇದಭಾವ  ತೋರಲ್ಲ ಸ್ಪರ್ಧಿ ಭಾರತದವ ಆಗಿರಲಿ ಇಲ್ಲವೇ ಪಾಕಿಸ್ತಾನ್ ಗೆ ಸೇರಿದವ ಆಗಿರಲಿ, ಎಲ್ಲರೂ ನನ್ನ ಮಕ್ಕಳೇ..ಅನ್ನುವ ಮಾತನ್ನು ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅತ್ಯಂತ ವಿಶೇಷವಾದ ಸುರ್ ಕ್ಷೇತ್ರ ಅನ್ನುವ ಸಂಗೀತ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ದೇಶದ ಹಾಡುಗಾರ್ತಿ ನಮ್ಮಂತಹ ಸಂಗೀತ ಪ್ರಿಯರ  ಮೆಚ್ಚಿನ ಹಾಡುಗಾರ್ತಿ ರೂನ ಲೈಲಾ  ಹೇಳಿದ್ದು ಪಾಕಿಸ್ತಾನ್ ಟೀಮ್ ಕ್ಯಾಪ್ಟನ್ ಆತಿಫ್ ಗೆ. ಇಂತಹ ಮಾತು  ಕಲಾಸಕ್ತರ ಮನದ  ಮಾತು. ಸಾಮಾನ್ಯವಾಗಿ ದೇಶದ-ಭಾಷೆಯ ಧರ್ಮದ ವಿಷಯದಲ್ಲಿ ಯಾರೇ ಆಗಲಿ ತುಂಬ ರಿಜಿಡ್  ಆಗಿರುತ್ತಾರೆ. ಆದರೆ ಕಲೆಯ ವಿಷಯಕ್ಕೆ ಬಂದರೆ ಕಲಾಸಕ್ತ ಮಾತ್ರ ಎಲ್ಲವನ್ನು ಮರೆತು ಪ್ರತಿಭೆಗೆ ಬೆಲೆ ಕೊಡ್ತಾನೆ.. ಇದು ಸರಿಯಾದ ನಿಯಮ
ದಮಾದಂ ದಂ ಮಸ್ತ್ ಕಲಂದರ್ :-) ರೂನ ಲೈಲಾ  ಎನರ್ಜಿ ವಾವ್... ಆಕೆಯ ಅಭಿಪ್ರಾಯವೂ ವಾರ್ರೆವಾ ....
ಹಾಗೆ ನೋಡಿದರೆ ಪಾಕಿಸ್ತಾನ್ ಕ್ಯಾಪ್ಟನ್ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ, ಸಂಗೀತ ಸಾಹಿತ್ಯ , ಕ್ರೀಡೆಯನ್ನು ಒಬ್ಬ ಆಸಕ್ತನಂತೆ ಕಂಡರೆ ಚೆನ್ನಾಗಿರುತ್ತದೆ.ದೇಶಗಳ ದ್ವೇಷದಿಂದ ನೋಡಿದರೆ ಮೊಸರಲ್ಲಿ ಕಲ್ಲು ..
ಇದೆ ವಾಹಿನಿಯಲ್ಲಿ ಪ್ರಸಾರ ಆಗುವ ಇಂಡಿಯ's ಗಾಟ್  ಟ್ಯಾಲೆಂಟ್  ಕಾರ್ಯಕ್ರಮದಲ್ಲಿ ಒಂದು ಜೋಡಿ ಮಾಡಿದ ಕಸರತ್ತು..ವಾವ್.. ಸಾನಿಯಾ ಅನ್ನೋ ಹೆಣ್ಣುಮಗಳು ಸರ್ಕಸ್ ನಲ್ಲಿ ಕೆಲಸ ಮಾಡ್ತಾ ಇದ್ದಾಳೆ ತನ್ನ ಸಂಗಾತಿ ಜೊತೆ ತೋರಿದ ಪ್ರದರ್ಶನ …

ಭಟ್ಟರ ಹೆಣ್ಣುಮಕ್ಕಳು

Image
ವಿಶ್ವೇಶ್ವರ್ ಭಟ್ಟರು ಅಂದ್ರೆ ಹಂಗೆ ಕಣ್ರೀ .. ಅವರ ವಿರೋಧಾಭಿಮಾನಿಗಳು ಪರಪರ ಅಂತ  ಕೆರೆದು ಹೃದಯವನ್ನು ಗಾಯ ಮಾಡಿಕೊಂಡರೂ ಅವರ ಲಾಜಿಕ್ ಗೊತ್ತಾಗಲ್ಲ.. ಪರಪರ ಅಂತ ತಲೆ ಕೆರೆದುಕೊಂಡರೂ ಏನೂ ಪ್ರಯೋಜನ ಆಗಲ್ಲಾ..ಚೆನ್ನಾಗಿದೆ ಅಲ್ವ ಮುಂಗಾರು ಮಳೆಯ ಟೈಪಿನ ಡೈಲಾಗ್..! ಪತ್ರಿಕಾರಂಗದಲ್ಲಿ ವಿಶ್ವೇಶ್ವರ್ ಭಟ್ಟರು ಮಾಡಿರುವ ಸಾಧನೆ ಜಾಸ್ತಿನೆ. ಅವರ ಬರಹಗಳು, ತಣ್ಣನೆಯ ನಗು.. ಮಾಡಿ ತೋರಿಸುವ ಛಲಗಾರಿಕೆ  ಬಗ್ಗೆ ತುಂಬಾ ಜನರಿಗೆ ಶಾನೆ ಪ್ರೀತಿ ಇದೆ. 
ಅವರನ್ನು ನಾನು ಮಾಜಿ ರಾಷ್ಟ್ರಪತಿ  ಅಬ್ದುಲ್ ಕಲಾಮ್ ಅವರ ಪುಸ್ತಕ ಬಿಡುಗಡೆ ಆದ ಸ್ವಲ್ಪ ದಿನಗಳ ನಂತರ ವಿಕೆಯಲ್ಲಿ ಮೀಟ್ ಆಗಿದ್ದೆ..ಮಾತಾಡುವ ರೀತಿ ಹೇಗಿತ್ತು ಅಂದ್ರೆ ನನಗೆ ಅವರು ತುಂಬಾ ದಿನಗಳಿಂದ ಪರಿಚಿತರೇನೋ ಅನ್ನುವಂತೆ,, ವೆರಿ ಕೂಲ್ ಹಾಗೂ ಕಂಫರ್ಟ್  ವಾತಾವರಣ. ಅವರು ಕಲಾಮ್ ಅವರ ಪುಸ್ತಕದ ಬಗ್ಗೆ ತುಂಬಾ ಗಟ್ಟಿಯಾಗಿ ವಿಮರ್ಶೆ ಮಾಡಿರಲಿಲ್ಲ .. ಅವರ ಪುಸ್ತಕಕ್ಕೆ ನಾನು ಹ್ಯಾಗಪ್ಪ ವಿಮರ್ಶೆ ಮಾಡೋದು ಅನ್ನುವ ಸಂಕೋಚದಿಂದ..! ಅದ್ಭುತ ಬರಹಗಾರರು..ಪ್ರತಿಗುರುವಾರ ಪ್ರಕಟ ಆಗುವ ಅವರ ಕಾಲಂ ಅಂದ್ರೆ ಸಖತ್ ಇಷ್ಟ ಇಷ್ಟ.. ಲೇಖನಗಳಂತೆ ಅವರ ಅಕ್ಷರಗಳು ತುಂಬಾ ಮುದ್ದು ಮುದ್ದು...  ಪ್ರಿಂಟ್ ನಂತರ ಈಗ ಟೀವಿ ಹೊಣೆ ಹೊತ್ತಿದ್ದಾರೆ.. ದೃಶ್ಯ ಮಾಧ್ಯವನ್ನು ಸಮರ್ಥವಾಗಿ ಆಳುತ್ತಿರುವವರು ಪ್ರಿಂಟ್ ಮಾಧ್ಯಮದ ವೀರರು. ನಾವೇ ವಿಶೇಷ ಅನ್ನುವವರ ಬಲವನ್ನು  ಬಗ್ಗುಬಡಿ ಬೇಕಾದರೆ ನಾಯಕ ಸಮರ್ಥ ಆಗಿರಲೇ ಬೇಕು…

ಕರಿಮಣಿ

Image