Posts

Showing posts from January 1, 2012

ಇ... ಎದ್ದೇಳುವ ..ಆ ..

Image
ಕಟ್ಟ ಕಡೆಯಲ್ಲಿ...ಇ.. ಕಾಡುವಾ.. ಆ .. ಪ್ರಶ್ನೆ...ಏ... ಹೀಗೂ  ಉ.. ಉಂಟೆ !ಅಬ್ಬ ಹುಶ್ಯೋ   ದೇವ್ರೇ ಅನ್ನುವಂತೆ ಹಿಡಿದಿಡುವ  ಶೈಲಿ. ಟೀವಿನೈನ್ ವಾಹಿನಿ ಯಲ್ಲಿನ ಜನಪ್ರಿಯ, ಅತಿ ಜನರನ್ನು ಪ್ರೀತಿ  ಹಾಗೂ ಭಯದಿಂದ ಗೆದ್ದಿರುವ ಕಾರ್ಯಕ್ರಮ ಹೀಗೂ ಉಂಟೆ. ಅನೇಕ ಸಂಗತಿಗಳ, ಮಾಹಿತಿಗಳ, ವಿಚಾರಧಾರೆಯ ಅಂತಿಮ ಪ್ರಕಟ ರೂಪ ಹೀಗೂ ಉಂಟೆ, ಜನಸಾಮನ್ಯರ, ಅದರಲ್ಲೂ ಸಾಮಾನ್ಯ ವೀಕ್ಷಕರ ಮೆಚ್ಚಿನ ಕಾರ್ಯಕ್ರಮ. ನಾರಾಯಣ ಸ್ವಾಮಿ ಅವರ ಮಾತಿನ ಶೈಲಿ  , ಕೈ ಹಿಡಿದು ಹಿಡಿದು ಎಳೆಯುವ ಪರಿ ( ದೇವರ ದಯೆಯಿಂದ ಆ ಕೈ ಗಳು ಅವರದ್ದೇ ಓನ್  ;-)] ಪ್ರತಿಯೋರ್ವರನ್ನು ಹಾಗೆ ಕಾರ್ಯಕ್ರಮದ ಮುಂದೆ ಕುಳ್ಳರಿಸಿ ಬಿಡುತ್ತದೆ. ಇದು ಒಬ್ಬ ನಿರೂಪಕನ ತಾಕತ್ತು ಅಂತಾನೆ ನಾನು ಹೇಳೋಕೆ ಆಸೆ ಪಡ್ತೀನಿ.  ಆದರೂ ಇಷ್ಟೆಲ್ಲಾ ಜನಪ್ರಿಯತೆ, ಆ ಶೈಲಿಯಲ್ಲಿ  ಬದಲಾವಣೆ ಆಗದೆ ಇರುವುದು, ಹಾಗೂ ಹೀಗೂ ತಪ್ಪದೆ ವೀಕ್ಷಕರು ಆಸಕ್ತಿಯಿಂದ  ವೀಕ್ಷಿಸುವ೦ತೆ ಮಾಡುವ...ಆ.. ನಾರಾಯಣ ಸ್ವಾಮಿ ..ಇ ... ಅವರ ಬಗ್ಗೆ ಅಚ್ಚರಿ ಮೂಡಿಸಿಕೊಂಡು ಮನದಲ್ಲಿ...ಇ... ಎದ್ದೇಳುವ ..ಆ .. ಪ್ರಶ್ನೆ..ಏ.. ಹೀಗೂ ಉಂಟೆ...!

ಹೊಸದಾಗಿ ಎರಡು ಧಾರಾವಾಹಿಗಳು ಆರಂಭಗೊಂಡಿವೆ.. ಉದಯ ವಾಹಿನಿಯಲ್ಲಿ  ಯುಗಾದಿಹಾಗೂ ಈ ಟೀವಿ ಕನ್ನಡ ವಾಹಿನಿಯಲ್ಲಿ ನಿನ್ನೊಲುಮೆಯಿಂದಲೆ...!
ಯುಗಾದಿ ಪಕ್ಕಾ ರಿ ಚ್  ಧಾರವಾಹಿ.. ಒಂದರ್ಥದಲ್ಲಿ ಬಾಲಿವುಡ್ ಸಿನಿಮಾಗಳಂತೆ.. ಸಖತ್ ಕಲರ್ಫುಲ್...ಅವರು ಬಳಕೆ ಮಾಡುವ …

ಗತಿ !

Image
ತುಂಬಾ ದಿನಗಳಿಂದ ಬ್ಲಾಗ್ ಕಡೆ ಕಣ್ ಹಾಕಿಲ್ಲ. ಸ್ವಲ್ಪ ಏಕಾಗ್ರತೆ ಕಡಿಮೆ ಆಗಿದೆ.ಈ ಸ್ಥಿತಿ ಅಲ್ಪ ಕಾಲ ಅಷ್ಟೇ...! ಎಲ್ಲರಿಗೂ ಹ್ಯಾಪಿ ನ್ಯೂ ಇಯರ್. ಹೊಸ ವರ್ಷ ನಿಮ್ಮ ಬದುಕಿನಲ್ಲಿ ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಉತ್ಸಾಹವನ್ನು ತರಲಿ. ಯಶಸ್ವಿ ಬದುಕು ನಿಮ್ಮದಾಗಲಿ ಎನ್ನುವ ಶುಭ ಹಾರೈಕೆ ನನ್ನದು. :-)

ಕಳೆದ ವರ್ಷ ಹಾಗೆನ್ನುವುದಕ್ಕಿಂತ ಕಳೆದ ವಾರ ಟೀವಿ ನೈನ್ ವಾಹಿನಿಯಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಪ್ರಸಾರ ಆಯ್ತು. ಸಾಮಾನ್ಯವಾಗಿ ನಾವು ಇತ್ತೀಚೆಗೆ ಎಲ್ಲಾ ವಾಹಿನಿಗಳಲ್ಲಿ ಹಾಸ್ಯ ಕಲಾವಿದರ ಮಾತುಗಳನ್ನು ಕೇಳಿ ಸಂತೋಷಿಸ್ತಾ ಇರ್ತೀವಿ. ಆದರ ಅವರ ನಿಜ ಬದುಕಿನ ಕಡೆಗೆ ನೋಡುವ ಪ್ರಮೇಯ ಬಂದಿರುವುದಿಲ್ಲ. ಟೀವಿ ನೈನ್ ವಾಹಿನಿ  ಇಂತಹ  ಮಹನೀಯರ ( ಪ್ರಾಣೇಶ್ , ನರಸಿಂಹ  ಜೋಶಿ, ಕೃಷ್ಣೆ ಗೌಡ್ರು, ಬಸವರಾಜ್..) ಮನೆ, ತಾಯಿ , ತಂದೆ,ಹೆಂಡತಿ, ಮಕ್ಕಳು. ಅವರ ಜೀವನ ಶೈಲಿ ಇವುಗಳ ಬಗ್ಗೆ ತಿಳಿಯುವ ಕಾರ್ಯಕ್ರಮ ಏರ್ಪಡಿಸಿತ್ತು. ಕೃಷ್ಣೆ ಗೌಡರು ಹೇಳುವ ಅನೇಕ ಪ್ರಸಂಗ ಪ್ರಾಣೇಶ್, ಪ್ರಾಣೇಶ್ ಅವರು ಹೇಳುವ ಬಹಳ ಸಂಗತಿ ಅವರ ಶಿಷ್ಯರು ರಿಪೀಟ್ ಮಾಡ್ತಾ ನೇ ಇರ್ತಾರೆ ತಮ್ಮದೇ ಆದ ಶೈಲಿಯಲ್ಲಿ. ಆದರೆ ಯಾವ ವೀಕ್ಷಕರಿಗೂ ಅವರು ಹೇಳಿದ್ದು  ಈಗಾಗಲೇ  ಕೇಳಿದ್ದಿವಿ
  ಎನ್ನುವ ಭಾವ ಬರುವುದೇ ಇಲ್ಲ. ಪ್ರಾಯಶಃ ಅದೇ ಆ ಪ್ರತಿಭಾವಂತರ ವಿಶೇಷತೆ. ಕೃಷ್ಣೆ ಗೌಡರ ಅನೇಕ ಬಾರಿ ಸ್ನಾನದ  ವಿಷ್ಯದ ಬಗ್ಗೆ ಹೇಳಿದ್ದಾರೆ. ಪ್ರತಿದಿನ , ವಾ…