Posts

Showing posts from March 4, 2012

ದುನಿಯಾ!

Image
ಹೋಳಿ ಬಣ್ಣಗಳ ಹಬ್ಬ. ಅದು ಜೀವಂತಿಕೆಯ ಸಂಕೇತ. ಇದು ಯಾವುದೇ ಒಂದು ಭಾಷೆ, ಜಾತಿ,ಧರ್ಮ ಹಾಗೂ ಜನಾಂಗದ ಹಬ್ಬವಲ್ಲ. ಎಲ್ಲರ ಪ್ರೀತಿಯ ಸಂಭ್ರಮ. ಎಲ್ಲರ ಬದುಕು ಸುಂದರವಾಗಿರಲಿ ..ಯಶಸ್ವಿ   ಜೀವನ ನಿಮ್ಮದಾಗಲಿ.ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸುವರ್ಣ ಸುದ್ದಿ ವಾಹಿನಿಯಲ್ಲಿ  ಬೆಳಗ್ಗಿನ ಸಮಯದಲ್ಲಿ ದುನಿಯಾ ಅನ್ನುವ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಅದು ಸಾಮಾಜಿಕ  ಪಿಡುಗಿನ,ಸಮಸ್ಯೆಗಳ ಬಗ್ಗೆ ತಿಳಿಸುವ, ಪರಿಹಾರಕ್ಕಾಗಿ ಶ್ರಮಿಸುತ್ತಿರುವವರ ಬಗ್ಗೆ ಪ್ರಸಾರ ಆಗುವ ಕಾರ್ಯಕ್ರಮ. ಸಾಕಷ್ಟು ವೈವಿಧ್ಯತೆಯನ್ನು ಪಡೆದ ಕಾರ್ಯಕ್ರಮ ಇದಾಗಿದೆ. ಮೊನ್ನೆ ಪ್ರಸಾರವಾದ ವಿಷಯ ಲೈಂಗಿಕ ಕಾರ್ಯರ್ತೆಯರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಪ್ರಯತ್ನ ಮಾಡುತ್ತಿರುವ ಸಂಸ್ಥೆಗಳಲ್ಲಿ ಒಂದಾದ ಹಿರೋಸ್  ನ ನಿರ್ದೇಶಕಿಯರಲ್ಲಿ ಒಬ್ಬರಾದ ಶಾರದ ನಾಯಕ್, ನಟಿ ಪೂಜಾ ಗಾಂಧಿ  ಮತ್ತು ಈ ವೃತ್ತಿಯಲ್ಲಿದ್ದ ಒಬ್ಬ ಹೆಣ್ಣುಮಗಳ ಜೊತೆ ಮಾತುಕತೆ ನಡೆಸಿದರು ನಿರೂಪಕ  ಅರವಿಂದ್.  ಯಾವುದೇ ಕಾರ್ಯಕ್ರಮವು ಹೆಚ್ಚು ಜನಪ್ರಿಯ , ಇಲ್ಲವೇ ಗಮನ ಸೆಳೆಯುವುದಕ್ಕೆ ಮುಖ್ಯ ಕಾರಣ ಆಗೋದು ನಿರೂಪಕರ ಮಾತಿನ ಶೈಲಿ. ಅರವಿಂದ್ ಅದನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾರೆ.

 ಶಾರದ ಸಮಾಜಮುಖಿ ವ್ಯಕ್ತಿತ್ವ ನನಗೆ ತುಂಬಾ ಇಂಪ್ರೆಸ್  ಮಾಡಿದೆ. ಆಕೆ ನನ್ನ ಗೆಳತಿ. ನಿಮಗೆ ಗೊತ್ತಿರಬಹುದು (ಇದು ಮಾಧ್ಯಮದವರಲ್ಲದ  ನನ್ನ ಓದುಗರಿಗೆ, ಯಾಕೆಂದ್ರೆ ಮಾಧ್ಯಮದವರಿಗೆ  ಶಾರದ ಗೊತ್ತು  )ಈ ಸಮಾಜಮುಖಿ ಹೆ…