Posts

Showing posts from July 15, 2012

ತಾನನ ತನ ತನನಾ..!

Image
ಕೆಲವು ಹಾಡುಗಳನ್ನು ಎಂದಿಗೂ ಮರೆಯೋಕೆ ಆಗಲ್ಲ, ಅದೇ ರೀತಿ ಘಟನೆಗಳು ಸಹ ಮರೆಯಲಾಗದ್ದು ಇರುತ್ತವೆ. ಆದರೆ ರೀತಿ ಸಿನಿಮಾಗಲಂತೂ ಆಹಾ ಅನ್ನುವನೆ ಸದಾ ಜ್ಞಾಪಕಕ್ಕೆ  ಬರ್ತಾನೆ ಇರುತ್ತವೆ. ಎಲ್ಲ ಓಕೆ ಕಣ್ರೀ ಟೀವಿ ವಿಷಯದಲ್ಲಿ ಹಾಗೆ ಇಲ್ಲ ಯಾಕೆ ಅನ್ನುವ ಮಾತಿದೆ. ನಿಜ ಎಲ್ಲ ಕಾರ್ಯಕ್ರಮಗಳು ದಿನಪತ್ರಿಕೆ ರೀತಿ ಅಂದಿನದು ಅಂದು ಓದುವುದಕಷ್ಟೇ ಇಷ್ಟ ಆಗೋದು. ಆ ಪರಿ ಕಾಯುವ ವೀಕ್ಷಕ ಅದೇ ಕಾರ್ಯಕ್ರಮ ಮತ್ತೆ ರಿಪೀಟ್ ಆದ್ರೆ ವ್ಯಾಕ್ ಅಂತ .. ದೂರ ಹೋಗಿ ಬಿಡ್ತಾನೆ.. watta  ಟ್ರಾಜುಡಿ! ಹಾಗಂತ ಎಲ್ಲ ವಿಷಯದಲ್ಲೂ ಇದೆ ರೀತಿಯ ಒಂದು ಪ್ರತಿಕ್ರಿಯೆ ತೋರುತ್ತಾನೆ ಅನ್ನುವ ಮಾತು ಸುಳ್ಳು ಬಿಡಿ. ಯಾಕೆಂದ್ರೆ ಜನಶ್ರೀ ವಾಹಿನಿಯಲ್ಲಿ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ  ಡೇಸ್ ಮತ್ತೆ ಪ್ರಸಾರ ಆಗ್ತಾ ಇದೆ. ಕನ್ನಡದಲ್ಲಿ ನೋಡ್ಕೋ ಬಹುದು ಕನ್ನಡ ಓದೋಕೆ ಬರೋರು. ಏನೇ ಹೇಳಿ ಇಷ್ಟು ವರ್ಷಗಳಾದರೂ ಆ ಧಾರವಾಹಿ ಬಗೆಗಿರುವ ಆಸಕ್ತಿ ಕಡಿಮೆ ಆಗಿಲ್ಲ . ಮಾಲ್ಗುಡಿ ಡೇಸ್  ಧಾರಾವಾಹಿಗೆ ಸಂಬಂಧಿಸಿದಂತೆ ನಡೆ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿದ್ದ ಹಿರಿಯ ಕಲಾವಿದ ರಮೇಶ್ ಭಟ್  ಅವರು ಒಂದು ಮಾತು ಹೇಳಿದ್ರು. ಬೇರೆ ಭಾಷೆಯ ನಿರ್ದೇಶಕರು ನಿರ್ಮಾಪಕರು ರಮೇಶ್ ಭಟ್ ಅನ್ನುವ ಪರಿಚಯ ಮಾಡಿಕೊಂಡಾಗ ನೀಡುತ್ತಿದ್ದ ಹಾಸ್ಪಿಟಾಲಿಟಿ ಗೂ ಅವರು ಮಾಲ್ಗುಡಿ ಟೀಮ್ ನವರು ಅಂದಾಗ ನೀಡುತ್ತಿದ್ದ ಗೌರವಕ್ಕೂ ವ್ಯತ್ಯಾಸ ಇರುತ್ತಿತ್ತಂತೆ -ಇದೆಯಂತೆ ; ಸಖತ್ ಖುಷಿ ಅನ್ನಿಸುತ್ತೆ ಅಲ್…

ರಜನಿಕಾಂತ್ ಮಗಳು-ಕನ್ನಡ

Image
ಉದಯ ವಾಹಿನಿಯಲ್ಲಿ ಭಾನುವಾರ ಸಿಂಗಪೂರ್ ನಲ್ಲಿ ನಡೆದ ಸಿನಿ ಪ್ರಶಸ್ತಿಗಳ ಬಗ್ಗೆ ಪೂರ್ವಭಾವಿ ಕಾರ್ಯಕ್ರಮ ಪ್ರಸಾರ ಮಾಡ್ತಾ ಇದ್ರೂ. ಇಂತಹ ಅವಾರ್ಡ್ ಫಂಕ್ಷನ್ಗಳಿಗಿಂತ ಹೆಚ್ಚು ಖುಷಿ ನೀಡೋದು ಇವೆ. ಅಲ್ಲಿಗೆ ಆಗಮಿಸಿದ್ದ ಅತಿಥಿಗಳನ್ನು ನಿರೂಪಕರು ಪರದಾಡಿಕೊಂದು ಮಾತಾಡ್ತಾ, ಒದ್ದಾಡ್ತಾ.. ಇರುವುದು ಒಂದು ಸಂಗತಿಯಾದರೆ, ಆ ಸಮಯದಲ್ಲಿ ಭಿನ್ನ ರೀತಿಯ ಸಂಗತಿಗಳು ವೀಕ್ಷಕರ ಕಣ್ಣಿಗೆ ಕಾಣುತ್ತದೆ.
ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಸೂಪರ್ ಸ್ಟಾರ್ ರಜನಿಕಾ0ತ್ ಅವರ ಮಗಳು ಐಶ್ವರ್ಯ ಕನ್ನಡದಲ್ಲಿ  ಮಾತಾಡಿದ್ದು. ಆಕೆಯ ಪತಿ -ಕೊಲವರಿ ಬಾಯ್  ಧನುಶ್  ಜೊತೆ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಣ್ಣುಮಗಳು ಕನ್ನಡದಲ್ಲಿ ವಾವ್  :-) .ಯಾಕೆಂದ್ರೆ ಆ ಹೆಣ್ಣುಮಗಳು ಕನ್ನಡ ಕಲಿಯ ಬೇಕಿರಲಿಲ್ಲ, ಅವರ ತಂದೆ ಕನ್ನಡ ಕಲಿಸ ಬೇಕಿರಲಿಲ್ಲ , ನಾನು ಅನೇಕಾನೇಕ ಸೆಲಬಿ ಗಳನ್ನು ಕಂಡಿದ್ದೇನೆ. ಅವರ ಮನೆಯ ವಾತಾವರಣ... ! ಆದ್ರೆ ಈ ರಜನಿ ಈ ವಿಷದಲ್ಲೂ ಸೂಪರ್ ಅಂದ್ರೆ ಸೂಪರ್ ಆದರು..! ಎಪ್ಪಡಿ ....

ಉದಯವಾಹಿನಿಯಲ್ಲಿ  ಎ.ಜಿ. ಶೇಷಾದ್ರಿ ಅವರ ನಿರ್ದೇಶನದಲ್ಲಿ ವಸುಧೈವ ಕುಟುಂಬ ಅನ್ನುವ ಸುಂದರ ಧಾರವಾಹಿ ಪ್ರಸಾರ ಆಗ್ತಾ ಇದೆ. ವಸುಧ=ಭೂಮಿ ಏವ =ಒಂದೇ..! ನಾವೆಲ್ಲರೂ ಒಂದೇ ಜಾತಿ ಒಂದೇ , ಮತ ಒಂದೇಕುಲ ನಾವು ಮನುಜರು ಅನ್ನುವ ಅಂಶದ ಅಡಿಯಲ್ಲಿ ಧಾರವಾಹಿ ಸಿದ್ಧವಾಗಿದೆ. ನಿರ್ದೇಶಕ ಎ.ಜಿ.ಶೇಷಾದ್ರಿ ಅವರು ಪುಣ್ಯಕೋಟಿ ಧಾರವಾಹಿ  ಬಳಿಕ ವಸುಧೆಯತ್ತ ಗಮನ ಕೊ…

ನಿಮ್ ಉತ್ರ ಏನು ಪ್ರತಿಭಾ ಪಟವರ್ಧನ್ ????

Image
ಜೀ ಕನ್ನಡ ವಾಹಿನಿಯಲ್ಲಿ ಲಿ'ಲ್ ಚಾಂಪ್ಸ್ ಆಡಿಶನ್ ಆಗಿರುವ ಕಾರ್ಯಕ್ರಮ ಪ್ರಸಾರ ಮಾಡ್ತಾ ಇದ್ದಾರೆ . ಬೇರೆ ಎಲ್ಲ ಕಾರ್ಯಕ್ರಮಗಳಿಗಿಂತ ಭಿನ್ನ ಆಗಿರುತ್ತದೆ. ಆರಂಭದಲ್ಲಿ  ಇರುವ ಮಜ ಬೇರೆ ತೆರನಾದದ್ದು ಬಿಡಿ. ಗೆದ್ದ ಮಕ್ಕಳ ಸಂತೋಷ ಸೋತ ಮಕ್ಕಳ ದುಃಖ  ಇವೆಲ್ಲಕ್ಕಿಂತ ತಾಯಿತಂದೆಯರ ಒದ್ದಾಟ ವೀಕ್ಷಕರಿಗೆ ಆ ಕಾರ್ಯಕ್ರಮ ಬಿಡದೆ ನೋಡುವಂತೆ ಮಾಡುತ್ತದೆ. ಈ ರಿಯಾಲಿಟಿ ಷೋ ಎಲ್ಲ ಸೀಸನ್ಗಳಲ್ಲು  ಗಳಿಸಿಕೊಂಡಿದೆ. ಈ ಬಾರಿಯೂ ಅದೇ ದಾರಿಯಲ್ಲಿ ನಡೆಯಲಿ ...!

ಜೀಕನ್ನಡ ವಾಹಿನಿಯಲ್ಲೂ ಅಡುಗೆ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಅದರ ಹೆಸರು ಒಗ್ಗರಣೆ  ಡಬ್ಬಿ. ಆ ಒಗ್ಗರಣೆ ಡಬ್ಬಿಯ ಈಗಿನ ನಿರೂಪಕಿ ನವ್ಯ. ಈಕೆ  ಮಾತಿನ ನಡುವೆ ಉಮ್  ಉಮ್  ಅನ್ನೋದು ಕಾಮನ್.. ಈಗ ಅತ್ತೆ ಸೊಸೆಯರ ಸೀಸನ್. ಅತ್ತೆ ಮತ್ತು ಸೊಸೆಯ ನಡುವೆ ಎಲ್ಲ ವಿಷಯದಲ್ಲೂ ಸ್ಪರ್ಧೆ ಇದ್ದೆ ಇದೆ.. ಅಡುಗೆ ಮನೆಯಲ್ಲಿ ಮಾತ್ರ ಅವರು ಸ್ಪರ್ಧೆ  ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರಲ್ಲ. ಅತ್ತೆ ಮನೆ ಅತ್ತೆದು ; ಸೊಸೆ ಮನೆ ಸೊಸೆದು ಆದಾಗ ಮಾತ್ರ ಅಡುಗೆಗೆ ಹೆಚ್ಚು ಗಮನ ಕೊಡ್ತಾರೆ.. ಇದುಅತ್ತೆ ಸೊಸೆಯರ ಅಭಿಪ್ರಾಯ !
ಈ ಕಾರ್ಯಕ್ರಮದಲ್ಲಿ ಒಂದಷ್ಟು  ವಿಷ್ಯಗಳು  ಲೈಕ್ ಆಗಿಲ್ಲ ನನಗೆ ...ನಾನು ಈಗ ಎರಡು ಸಂಗತಿಯನ್ನು  ಮಾತ್ರ ಗಮನಕ್ಕೆ ತರ್ತೀನಿ.
1.ಕಾರ್ಯಕ್ರಮದಲ್ಲಿ ಭಾಗವಸಿದ ಹೆಣ್ಣುಮಗಳು ಉಗುರಿಗೆ ಬಣ್ಣ ಇಲ್ಲವೇ ಬೆರಳುಗಳಿಗೆ ಮೆಹಂದಿ ಹಚ್ಚಿ ಕೊಂಡಿದ್ದರೆ (ವಿನ್ಯಾಸ ) ಓ  ಟೀವಿಯಲ್ಲಿ …

ಸುಬ್ಹಾನಲ್ಲಾಹ್ -ಝಲಕ್ ದಿಕ್ಲಾಜ .

Image
ಸೌಮ್ಯ  ನೇಪಾಳ ಹಾಗು ಭಾರತೀಯ ಮೂಲ ಹೊಂದಿರುವ ಮಗು. ಮೀನ ಕಣ್ಣು, ಹೊಳೆಯುವ ಕೇಶ ರಾಶಿ, ಸುಂದರ ಚರ್ಮ, ಅದ್ಭುತವಾದ ಪ್ರತಿಭೆ..ನಂಗೆ ತುಂಬಾ ಇಂಪ್ರೆಸ್ ಮಾಡಿದ ಮಗು ಇದು. ಈಕೆ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ DID l'll   master 2012 ಸ್ಪರ್ಧಿ .ತುಂಬಾ ಇಷ್ಟ ಆಗುವಂತೆ ಆಕೆಯ ಡ್ಯಾನ್ಸ್ ಇರುತ್ತೆ. ಈ ಮಗುವಿನ ಪಾರ್ಟ್ ನರ್  ರೋಹನ್. ಅವರಿಬ್ಬರು ಸ್ಟೇಜ್ಗೆ ಬಂದಾಗ ಅವರ ಮಾಸ್ಟರ್  ರಾಘವ್  ಹೇಳೋದು ಸ್ಟೇಜ್ ಫಾಡ್ದೆ ! ಆ ಮಕ್ಕಳು ಮಾಡಿರುವ ಒಂದು ಲಿಂಕ್ ಇಲ್ಲಿದೆ ನೋಡಿ ,ಜಡ್ಜ್ಗಳಾದ ಮಾಸ್ಟರ್  ಗೀತ, ಮಾಸ್ಟರ್  ಮರ್ಜಿ, ಗ್ರಾಂಡ್ ಮಾಸ್ಟರ್  ಮಿಥುನ್ ಚಕ್ರವರ್ತಿ  ಮತ್ತು ನಿರೂಪಕ  ಕೂಲ್ ಜಾಯ್   :-) ಅವರ ಅಭಿಪ್ರಾಯ.. ಎಂಜಾಯ್ಮೆಂಟ್ ವಾವ್! ಲಿಂಕ್ ...
http://www.youtube.com/watch?v=GDcNyuTODF8&feature=relmfu

ಈ ಮಗು ಹೆಸರು ತನಯ್ .ಅದೆಷ್ಟು ಮುಗ್ಧ ಮಗು ಅಂದ್ರೆ, ಡ್ಯಾನ್ಸ್ ಜೊತೆ ಈ ಮಗು ಮಾತು ಕೇ ಳೋಕು ಇಷ್ಟ ಆಗುತ್ತೆ. ಅಪ್ಪ ಅಮ್ಮ ಪ್ರೀತಿಯಿಂದ ಮಲ್ಲು ಅಂತ ಕರೀತಾರೆ ಅನ್ನೋದೇ ಈ ಮಗುವಿಗೆ ಇಷ್ಟ ಇಲ್ಲದ ಸಂಗತಿ. ನೀವು ಒಳ್ಳೆಯ ಡ್ಯಾನ್ಸರ್, ಆದ್ರೆ ಬೇಸಿಕ್ ಸಂಗತಿಗಳ ಬಗ್ಗೆ ಇನ್ನು ಗಮನ ಕೊಟ್ರೆ ಹೆಚ್ಚು  ಕಲೀತಾನೆ..
ನಿನ್ನೆ ಎಪಿಸೋಡ್ನಲ್ಲಿ  ಮಿನಿ ಮಾಸ್ಟರ್ ಗಳಾದ ರಾಘವ, ಪ್ರಿನ್ಸ್,  ಕೃತಿ ಅವರ ಪರ್ಫಾರ್ಮೆನ್ಸ್ ಇತ್ತು. ಕೃತಿ ಮತ್ತು ನೀರವ್  ತುಂಬಾ ನಾರ್ಮಲ್ಲಾಗಿದ್ರೆ, ಪ್ರಿನ್ಸ್  ಮತ್ತ…