ನೀರಿನ ಮಹಿಮೆ !

ಅತ್ಯಂತ ಖೇದಕರ ಅನ್ನಿಸುವುದು ಸಾವಿನ ಸುದ್ದಿ. ಅದಕ್ಕಿಂತಲೂ ಆತ್ಮಹತ್ಯೆಯ ಬಗ್ಗೆ ಪ್ರಸಾರ ಮಾಡುತ್ತಾರಲ್ಲ ಅದು ಮಾತ್ರ ತುಂಬಾ ನೋವನ್ನು ಉಂಟು ಮಾಡುತ್ತದೆ. ಟೀವಿ ನೈನ್ ವಾಹಿನಿಯಲ್ಲಿ ನಿನ್ನೆ ಸಂಜೆ ಐಶ್ವರ್ಯ ಅನ್ನುವ ಹುಡುಗಿ ಬಗ್ಗೆ , ಆಕೆಯ ಆತ್ಮಹತ್ಯೆಯ ಕುರಿತಾದ ಕಾರ್ಯಕ್ರಮ ಪ್ರಸಾರ ಮಾಡ್ತಾ ಇತ್ತು. ಹರೆಯದ ಮುದ್ದಾದ ಮಗು. ಕನಸುಗಳು ರಾಶಿರಾಶಿ . ಅಂತಹವಳ ಸಾವು ಅದೂ ಒಬ್ಬ ಪೀಡಕನಿಂದ ಅನ್ನೋದು ವೀಕ್ಷಿಸಿದಾಗ ಹೆಚ್ಚು ಬೇಸರ ಆಯ್ತು. ಏನೇ ಹೇಳಿ ಹೆಣ್ಣುಮಕ್ಕಳಿಗೆ ರಕ್ಷಣೆ ಕಡಿಮೆ. 
ನಾನು ಮೊದಲು ಕೆಲಸ ಮಾಡುತ್ತಿದ ಕಡೆ ಕೂರ್ಗ್ ಹೆಣ್ಣುಮಗಳು ಸಹ ನನ್ನ ಜೊತೆ ಕೆಲಸ ಮಾಡುತ್ತಿದ್ದಳು. ತುಂಬಾ ಸುಂದರಿ. ನಾನು ಅಲ್ಲಿ ಕೆಲಸಕ್ಕೆ ಸೇರಿದ ಸ್ವಲ್ಪ ದಿನದಲ್ಲೇ ಆಕೆಯ ತಾಯಿ ಮರಣ ಹೊಂದಿದ ವಿಷಯ ತಿಳಿಯಿತು. ಅದು ಅಸ್ವಾಭಾವಿಕ. ಆಕೆ ಊರಿಗೇಂತ ಹೊರಟಿದ್ದರು ಸ್ವಲ್ಪ ಲಂಪಟರು ಆಕೆಯನ್ನು ಅತ್ಯಾಚಾರ ಮಾಡಿ ಸಾಯಿಸಿದ್ದರು. ಆ ವಿಷಯ ಕೇಳಿದ ಬಳಿಕ ದಿಗ್ಭ್ರಾಂತಿ ಆಗಿತ್ತು ನನಗೆ. ಈಗಲೂ ಅದನ್ನು ನೆನಪಿಸಿಕೊಂಡರೆ ಆತಂಕ-ಭಯ ಆಗುತ್ತದೆ.

ಈ ಕಾರ್ಯಕ್ರಮಕ್ಕೆ ಧ್ವನಿ ಕೊಟ್ಟವರು ಸ್ವಾಮಿ ಮುತ್ತೂರು . ರವಿ ಬೆಳಗೆರೆ ಕ್ರೈಂ ಡೈರಿಯಲ್ಲಿ ಈತ ಸಹಾಯಕರಾಗಿದ್ದರು.(ನನ್ನ ಎಣಿಕೆ ಸರಿ ಇರಬಹುದು ಅಂತ ತಿಳೀತಿನಿ ). ಯಾಕೇಂದ್ರೆ ಆ ಲೆಕ್ಕದಲ್ಲಿ ಅಲ್ಪ ದಿನಗಳ ಕಾಲ ಅಂದ್ರೆ ಕೇವಲ ಬೆರಳೆಣಿಕೆಯಷ್ಟು ದಿನಗಳ ಕಾಲ ಇಬ್ಬರೂ  ಕಲೀಗ್ಸ್ ಆಗಿದ್ದೆವು. ಆತ ಕ್ರೈಂ ನ್ಯೂಸ್ ತರಲು ಹೋಗಿ ಬಂದ ಬಳಿಕ ಕೇಸ್ ಗಳ ಲಿಸ್ಟ್ ನನ್ನ ಕೈಲಿ ಬರೆಸುತ್ತಿದ್ದರು. ಅಯ್ಯೋ ನನ್ನ ಸ್ಥಿತಿ ಹೇಗಿದ್ದಿರ ಬಹುದು ! ಸ್ವಾಮಿ ಚೆನ್ನಾಗಿ ನಿರೂಪಣೆ ಮಾಡಿದ್ರು. ಸ್ವಲ್ಪ ರವೀ ಅವರ ಧ್ವನಿಯನ್ನೇ ಇಮಿಟೇಟ್ ಮಾಡ್ತಾ ಇದ್ರು. ಸಮೀನಾ ಈ ಕಾರ್ಯಕ್ರಮ ನಿರೂಪಣೆ ಮಾಡಿದ್ದು.
ಸುವರ್ಣ ವಾಹಿನಿಯಲ್ಲಿ ಅತಿ ಆಸಕ್ತಿ ಅನ್ನಿಸಿದ ಕಾರ್ಯಕ್ರಮ ಮುಂದಿನ 10-15 ವರ್ಷಗಳಲ್ಲಿ ನಮ್ಮ ಬೆಂಗಳೂರು ಯಾರಿಗೂ ಬೇಡ ಆಗುತ್ತೇ ಅನ್ನೋ ಕಾರ್ಯಕ್ರಮ. ಯಾವ ರೀತಿ ಕೆರಗಳು ಲೇಯ್ ಔಟ್ ಗಳಾಗಿವೆ, ನದಿಗಳು ಬತ್ತಿವೆ, ಕೊಳಕು ಕಸಗಳ ಸಾಮ್ರಾಜ್ಯ ಹೀಗೆ ಅನೇಕ ಸಂಗತಿಗಳು. ವೀಕ್ಷಕರು ನೋಡಲೇ ಬೇಕಾದ ಕಾರ್ಯಕ್ರಮ . ಇದನ್ನು ನವಿತಾ ಜೈನ್ ನಿರೂಪಣೆ ಮಾಡಿದ್ದು. ಚಂದನ್ ಶರ್ಮ ವಾಯ್ಸ್ ಓವರ್ ಮಾಡಿದ್ದು ಅಂತ ಅನ್ನಿಸ್ತು. ಇತ್ತೀಚೆಗೆ ನವಿತಾ ಜಾಸ್ತಿ ಕೂಗಿ ಕೂಗಿ ನ್ಯೂಸ್ ಓದೋದಲ್ಲದೇ , ಕೂಗುತ್ತಾ  ನಿರೂಪಣೆ ಮಾಡುವುದಕ್ಕೆ ಗಮನ ನೀಡಿದ್ದಾರೆ. ಮೋಸ್ಟಲಿ ಸುವರ್ಣ ನ್ಯೂಸ್ ಆಫೀಸಿನ ನೀರಿನ ಮಹಿಮೆ ಅಂತ ಕಾಣುತ್ತೇ! 

No comments: