ಥೈಯಂ ಥಾಹಾ.. !..ಥೈಯಂ ಥಾಹಾ.. !



ಇತ್ತೀಚೆಗೆ ಅದ್ಯಾಕೊ ಬ್ಲಾಗ್ ನಲ್ಲಿ ಬರೆಯೋಕೆ ಆಗ್ತಾ ಇಲ್ಲ. ಆದರೆ ಮೊನ್ನೆ ಫೋನ್ ಮಾಡಿದ ಇಬ್ಬರು ವ್ಯಕ್ತಿಗಳು ಬ್ಲಾಗ್ ನೆನಪಿಸಿದರು. ಒಬ್ಬರು ಮಾತಿನ ಮೂಲಕ, ಮತ್ತೊಬ್ಬರು ಏನೂ ಹೇಳದೇ ಇದ್ದರೂ ಮನಸ್ಸಿಗೆ ಬರೆಯುವ ತವಕ ಹುಟ್ಟು ಹಾಕಿದರು. ಅವರು ವಿನಾಯಕ ಜೋಶಿ ಮತ್ತು ರಾಧಿಕ.


ವಿನಾಯಕ ಜೋಶಿ ಈಗ ಜೋಶ್-ಈ-ಲೇ ಡಾಕ್ಯುಮೆಂಟರಿಯಲ್ಲಿ ಬ್ಯುಸಿ. ಆ ಹುಡುಗನ ಸಾಹಸದ ಬಗ್ಗೆ ಪತ್ರಿಕೆಯಲ್ಲಿ ಬರೆದು ಲಿಂಕ್ (ಇಲ್ಲಿ ಕ್ಲಿಕ್ಕಿಸಿ ..http://kannada.webdunia.com/entertainment/regionalcinema/newsgossips/1312/04/1131204006_1.htm ) ಫೇಸ್ ಬುಕ್ ನಲ್ಲಿ ಅಂಟಿಸಿದಾಗ ಹುಡುಗ ಫುಲ್ ಖುಷ್. ನಾನು ಕಂಡಂತೆ  ಪ್ರತಿಭೆಗಳ ಗುಚ್ಛ  ಜೋ.. ಹೊಸ ಸಾಹಸಗಳನ್ನು ಮಾಡುವ ಆತನ ಬಗ್ಗೆ ಹೇಳುವುದು ಬೇಕಾದಷ್ಟಿದೆ. ತನ್ನೆಲ್ಲಾ ಅನುಭಗಳನ್ನು ಅದರಲ್ಲೂ ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಆದ ಘಟನೆ, ಅಲ್ಲಿದ್ದಾಗ ಫೇಸ್ ಮಾಡಿದ ಸಂಗತಿಗಳು ಎಲ್ಲಾ ಎಲ್ಲಾ!


ಅಕ್ಕಾ ಅಂತ ಮಾತಿಗೊಮ್ಮೆ ಹೇಳುತ್ತಾ ಈ ಹುಡುಗ ಸುಮಾರು ಒಂದೂವರೆ ಗಂಟೆಗಳ ಕಾಲ ಹರಟಿದ, ಬೇಜಾರಾದ, ನಕ್ಕ, ವಿನಮ್ರನಾದ, ಕಣ್ಣೀರಾದ ಏನು ಹೇಳಲಿಕ್ಕೆ ಸಾಧ್ಯ ನನಗೆ ಆತನ ಭಾವನೆಗಳ ಬಗ್ಗೆ?
ಆಗ ಮಾತಿನ ನಡುವೆ ಜೋ ಒಬ್ಬರ ಬಗ್ಗೆ ಹೇಳುತ್ತಾ ನಾವು ಮೀಟ್ ಆದಾಗ ನಿಮ್ಮ ಬ್ಲಾಗ್ ಬಗ್ಗೆ ಮಾತಾಡುತ್ತೇವೆ ಅಕ್ಕ ಅಂದ..ಅವರು ಸುವರ್ಣ ನ್ಯೂಸ್ ನ  ವಾರ್ತಾವಾಚಕ ಅರವಿಂದ್. ಈ ವಾರ್ತಾವಾಚಕ ನನ್ನ ಎಫ್ಬಿ ಸ್ನೇಹಿತರು. ತಮ್ಮ ಪತ್ನಿ ಮಗುವಿನ ಪಟ ಹಾಕಿದಾಗ ನಾನು ಲೈಕ್ ಕೊಟ್ಟಿದ್ದೀನಿ  ;-)


ಅವರು ನನ್ನ ಬ್ಲಾಗ್ ಓದುತ್ತಾರೆ ಅಂದಾಗ ಖುಷಿ ಆಯ್ತು. ಅದ್ಯಾಕೊ ಗೊತ್ತಿಲ್ಲ ಇತ್ತೀಚಿನ ಕೆಲವು ದಿನಗಳಿಂದ ನಾನು ಯಾರಿಗೂ ಗೊತ್ತಿಲ್ಲ, ಎಲ್ಲರೂ ಮರತೇ ಹೋಗಿದ್ದಾರೆ ಅಂತ ಅನ್ನಿಸುತ್ತಿತ್ತು .. ಅಂತಹುದರಲ್ಲಿ ಈ ಮಾತು ಕೇಳಿದಾಗ!!
ಅದೇ ದಿನ ನನಗೆ ಬಂದ ಇನ್ನೊಂದು ಕರೆ ಅನಿರೀಕ್ಷಿತವಾಗಿತ್ತು. ಅವರು ಟೀವಿ ನೈನ್ ರಾಧಿಕ.ಅವರಿಗೆ ಬೇಕಾಗಿದ್ದ ವ್ಯಕ್ತಿ ನಾನು ಆಗಿರಲಿಲ್ಲ.   ನಾನು ಆಕೆ ಕೇಳಿದ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಸೋ ನಾನಿರುವ ಕಡೆ ಹೇಳಿದೆ.ಅದೆಷ್ಟು ನೆನಪಿದೆಯೊ ಗೊತ್ತಿಲ್ಲ. ರಂಗನಾಥ್ ಭಾರದ್ವಾಜ್ ಎಲ್ಲಿದ್ದಾರೆ ಅಂದಾಗ ಅವರೀಗ ಸಮಯದಲ್ಲಿ ಇರೋದು ಅಂದ್ರು. ಕೋಲಾರದ ಹೆಣ್ಣುಮಗಳ ಮಾತಿನಲ್ಲಿ ನಗೆಯ ಹಾಯಿಗಾಳಿ. ಮಾತಿನ ಮಧ್ಯೆ ನಾವಿಬ್ಬರು ಫ್ರೆಂಡ್ಸ್ ಅಲ್ವ ಜಯಶ್ರೀ ಅವೆಲ್ಲಾ ಯಾಕೆ ಎಂದು ಹೇಳಿದಾಗ ಖುಷಿ!

ನನಗೆ ಸಿಕ್ಕಾಪಟ್ಟೆ ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಜೀ ಹಿಂದಿಯಲ್ಲಿ ಪ್ರಸಾರ ಆಗುವ  ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸಹ ಒಂದು. ಈ ಬಾರಿ ಮಿಥುನ್ ದಾ ಜೊತೆಗೆ ಮೂರು ಕಿರಿಯ ಜಡ್ಜ್‍   ಗಳು. ಮೂವರೂ ಇಷ್ಟವಾಗುತ್ತಾರೆ. ಯಾಕೇಂದ್ರೆ ಇನ್ನೂ ಮೂರೂ ಎಳಸು. ಮಿಥುನ್ ದಾ ಅವರ ಮಾತು, ಅವರ ಇನ್ವಾಲ್ ಮೆಂಟ್ ತುಂಬಾ ಇಷ್ಟ ಪಟ್ಟು ನೋಡುವಂತೆ ಈ ತೀರ್ಪು ಗಾರರ ಮಾತುಗಳು ಸಹ ಲೈಕ್ ಆಗುತ್ತದೆ. ಅದರಲ್ಲೂ ಶೃತಿ ಮರ್ಚೆಂಟ್ ಸಖತ್ ಮಜಾ ಕೊಡ್ತಾರೆ. ಆ ಹೆಣ್ಣುಮಗಳು ತೀರ್ಪು ಹೇಳುವಾಗ ಒಂದು ಕ್ಲಾಸಿಕಲ್ ಡ್ಯಾನ್ಸ್ ನೋಡಿದಂತಹ ಅನುಭವ ಆಗುತ್ತದೆ. ಥೈಯಂ ಥಾಹಾ.. !ಐ ಲೈಕ್ ಇಟ್ ಬೇಬಿ ವೆರಿ ಮಚ್!

No comments: