ಅಜ್ಞಾತ ಕವಿಗಳು

Image result for red and green flower
ನನಗೆ ಮೊದಲಿನಿಂದಲೂ ಕನ್ನಡ ಸ್ವಲ್ಪ ಚೆನ್ನಾಗಿ ಬರೀತಿನಿ ಅನ್ನುವ ಹೆಮ್ಮೆ, ಆತ್ಮವಿಶ್ವಾಸ ಏನ್ ಬೇಕಾದ್ರೂ ತಿಳಿಯ ಬಹುದು. ಆದರೆ ಇಬ್ಬರು ವ್ಯಕ್ತಿಗಳು ನನ್ನ ಈ ನಂಬಿಕೆಯನ್ನು ಸುಳ್ಳು ಮಾಡಿ ಬಿಟ್ಟಿದ್ದಾರೆ. ಮೊದಲನೆಯವರು ಬರಹಗಾರರು . ಅವರು ಒಮ್ಮೆ ನಾನು ಬಳಸಿದ ಪದದ ಬಗ್ಗೆ ತಪ್ಪು ಕಂಡು ಹಿಡಿದರು, ನಾನು ಯಾವುದೋ ಮೂಡ್ ನಲ್ಲಿ ಇದ್ದವಳು ನಾನು ಬರೆದದ್ದು ಸರಿ ಎಂದೇ.. ಆತ ತಕ್ಷಣ  ಕೆಂಡಗಣ್ಣನಾಗಿ ನನ್ನ ಕಡೆ ಬಿಸಿ ಗಾಳಿ ತೋರಿ  ಇನ್ನುಮುಂದೆ ನಿಮ್ಮ ತಪ್ಪು ತಿದ್ದಲ್ಲ ಎಂದು ಬಿಟ್ಟರು. ಆದರೆ ತಮಾಷೆ ಅಂದ್ರೆ  ಆ ಸಂಗತಿಯನ್ನು ಅವರ್ಯಾಕೆ ಅಷ್ಟೊಂದು  ಗಂಭೀರವಾಗಿ ಅದನ್ನು ಪರಿಗಣಿಸಿದರು ಎನ್ನುವ ಬಗ್ಗೆ ಸಾಕಷ್ಟು ದಿನ ಬೇಸರ ನನ್ನನ್ನು ಕಾಡಿತ್ತು. ಅದಾದ ಬಳಿಕ ನಾನು ಅವರ ಪುಸ್ತಕಗಳನ್ನು ಓದುವುದು,  ಅಕ್ಷರಪ್ರಿಯರಿಗೆ ಅದನ್ನು ಕೊಡುವುದನ್ನು ಬಿಟ್ಟೆ. ನಾವು ಸಾಮಾನ್ಯರು ದೊಡ್ಡವರ ಉಸಾಬರಿ ಯಾಕೆ ಅಂತ!


ಕಳೆದ ಎರಡು ಮೂರು ದಿನಗಳಿಂದ ಒಬ್ಬಾತ ನನ್ನ ಕನ್ನಡದ  ಬಗ್ಗೆ ಟೀಕಾಪ್ರಹಾರ ಮಾಡ್ತಾ ಇದ್ದಾನೆ. ಅದರ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ಒಂದಂತೂ  ಮನದಟ್ಟಾಯ್ತು  .. ಜಯಶ್ರೀ ನಿನಗೇನೂ ಬರಲ್ಲ. ಮಿಸ್ಫಿಟ್, ಕನ್ನಡ ಬರುತ್ತೆ ಎನ್ನುವ ನಿನ್ನ ನಂಬಿಕೆ, ಆತ್ಮ ವಿಶ್ವಾಸ ಎಲ್ಲವನ್ನು ಬಿಟ್ಟುಬಿಡು ಎಂದು ಹೇಳಿಕೊಂಡೆ..  ಕನ್ನಡ ಬರದ ನಾನು ತಪ್ಪು ಮಾಡಿದರೆ ದಯಮಾಡಿ ಪ್ರಿಯ ರೀಡರ್ಸ್ ಒಪ್ಪಿಕೊಳ್ಳಿ..ಇದು ನನ್ನ ರಿಕ್ವೆಸ್ಟ್.


@@ ಸಂಗೀತ ಪ್ರಿಯರಿಗೆ, ಭಕ್ತಿ, ದೇವರು ದಿಂಡರು, ಸಂಪ್ರದಾಯ , ಪುರಾತನ ಸಂಗತಿಗಳ ಬಗ್ಗೆ ಆಸ್ಥೆ ಇರುವವರಿಗೆ ಇಷ್ಟ ಆಗುವ ಚಾನೆಲ್ಗಳಲ್ಲಿ   svbc  ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್  ಸಹ ಒಂದು. ಈ ತೆಲುಗು  ಚಾನೆಲ್ ನಲ್ಲಿ ಆಗಾಗ ಕನ್ನಡ ಸಹ ಕೇಳಿ ಬರುತ್ತೆ. ಟಿಟಿಡಿಯ  ಈ ವಾಹಿನಿಯಲ್ಲಿ  (ದೇವರು- ದಿಂಡರು ಅಂತ ನಂಬುವ ನನ್ನಂತಹ ಅತಿ ಸಾಮಾನ್ಯರಿಗೆ )  ಸಾಮಾನ್ಯವಾಗಿ ತಿರುಪತಿಯ ದೇಗುಲ, ಸುತ್ತಮುತ್ತಲ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮ ಪ್ರಸಾರವಾಗುತ್ತದೆ.   ಅಲ್ಲದೆ, ಈ ಚಾನೆಲ್ ನಲ್ಲಿ ಇಷ್ಟ ಆಗುವ ಕಾರ್ಯಕ್ರಮ ಮತ್ತೊಂದಿದೆ. ಅದು ಅಜ್ಞಾತ ವಾಗ್ಗೇಯಕಾರರ  ಕಾರ್ಯಕ್ರಮ. ನಾವು ಸಾಮಾನ್ಯವಾಗಿ ಕೆಲವು ವಾಗ್ಗೇಯಕಾರರ ಬಗ್ಗೆ ಕೇಳಿದ್ದೇವೆ. ಆದರೆ  ಬಹಳಷ್ಟು ಅಜ್ಞಾತ ಕವಿಗಳು ಬಿಟ್ಟು ಹೋಗಿರುವ ಅಪಾರ ಸಂಗೀತ ಸಂಪತ್ತನ್ನು ಆ ವಾಹಿನಿಯವರು ಪ್ರಸಾರ ಮಾಡುತ್ತಿದ್ದಾರೆ. ಸಂಗೀತಪ್ರಿಯರಿಗೆ ಇಷ್ಟ ಆಗುವ ಕಾರ್ಯಕ್ರಮ.. ಸಾಧ್ಯವಾದರೆ ವೀಕ್ಷಿಸಿ ಆನಂದಿಸಿ. (ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತದೆ.)

2 comments:

Vinod Kumar Bangalore said...

ಎಲ್ಲರಿಗೂ ಅವರದೇ ಆದ ಶೈಲಿ ಇರುತ್ತೆ. ನೀವು ಮುಂದುವರಿಸಿ....

Badarinath Palavalli said...

ಯಾರ್ರೀ ಆ ಪ್ರಭುಗಳು? ಕನ್ನಡ ಬರಾಕಿಲ್ವಾ.. ಕನ್ಮಡಕ ಹಾಕೋಲ್ವಾ... ಅಂತ ಛೇಡಿಸಿದವರು!

svbcಯ ಅಜ್ಞಾತ ವಾಗ್ಗೇಯಕಾರರ ಕಾರ್ಯಕ್ರಮ ಖಂಡಿತ ನೋಡುತ್ತೇನೆ.