ಸಾರಿ ಸಾರಿ....


ಮೊನ್ನೆ ಸಂಜೆ ಚಾನೆಲ್ ನ್ಯೂಸ್ ಏಷ್ಯಾ ದಲ್ಲಿ ಪ್ರಸಾರ ಆಗುತ್ತಿದ್ದ ದ ರಿಯಲ್ ವುಮನ್ ನಾಟ್ ವಿಚ್ ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ನಾನು ಅದರತ್ತ ಹೋಗುವಷ್ಟರಲ್ಲಿ ಆ ಕಾರ್ಯಕ್ರಮ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿತ್ತು. ಪಪುವಾ ನ್ಯೂ ಗಿನಿ ದೇಶದ - ದ್ವೀಪದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ  ಆಗ್ತಾ ಇತ್ತು. ಅದರಲ್ಲಿ ತೊಂದರೆಗೊಳಗಾದ , ಹಿಂಸೆ ಎದುರಿಸಿದ ಓರ್ವ ಹಿರಿಯ ಹೆಣ್ಣುಮಗಳ  ಬಗ್ಗೆ ಕಾರ್ಯಕ್ರಮ ಪ್ರಸಾರವಾಗ್ತಾ ಇತ್ತು. ಹೆಚ್ಚು ತಲೆಗೆ ಹೋಗದೆ ಇದ್ದರು ಸಹಿತ ಅಲ್ಲಿನ ಕಾರ್ಯಕ್ರಮದಿಂದ ಹೆಣ್ಣುಮಕ್ಕಳ ಪರಿಸ್ಥಿತಿ ಅಲ್ಲಿ ಬದಲಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎನ್ನುವುದು ಮತ್ತೇ ಸಾಬೀತು ಮಾಡಿತ್ತು ಕಾರ್ಯಕ್ರಮ. ಹೆಣ್ಣು ಮಕ್ಕಳ   ನಿಸ್ಸಹಾಯಕತೆ ಆ ಕಾರ್ಯಕ್ರಮದಿಂದ ಮಾತ್ರವಲ್ಲ ಒಟ್ಟಾರೆ ಆ ದೇಶದ ಬಗ್ಗೆ ತಿಳಿದವರಿಗೆ ಗೊತ್ತೇ ಇದೆ. ಅತಿ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಮಕ್ಕಳು ಅಲ್ಲಿ ಬದುಕುತ್ತಿದ್ದಾರೆ. ಗಂಡ ಮಾತ್ರವಲ್ಲದೆ, ಸಮೀಪ- ದೂರದ ನೆಂಟರು, ಅಕ್ಕಪಕ್ಕದ, ಅಪರಿಚಿತ ಗಂಡಸರುಗಳು ಸಹ  ಹೆಣ್ಣನ್ನು ದೈಹಿಕವಾಗಿ- ಲೈಂಗಿಕವಾಗಿ ದೌರ್ಜನ್ಯ ಮಾಡ್ತಾ ಇದ್ದಾರೆ. . ಅಲ್ಲದೆ ಆ ದೇಶದಲ್ಲಿ ಹೆಣ್ಣುಮಕ್ಕಳು ಅದೆಷ್ಟರಮಟ್ಟಿಗೆ ಶೋಷಿತರು ಅಂದರೆ ಅಲ್ಲಿರುವ  ಪೊಲೀಸ್  ಸ್ಟೇಶನ್ ಗಳಲ್ಲಿ ದಾಖಲಾಗುವ ಬಹುತೇಕ   ಕೇಸ್ ಗಳು ಪುರುಷರಿಂದ ಒದೆ, ಗಿಂಡಿದ, ಸುಟ್ಟ, ಚಾಕುವಿನಿಂದ ಕತ್ತರಿಸಿಕೊಂಡು ಜೀವ ಉಳಿಸಿಕೊಳ್ಳಲು ಬಂದಂತಹ ಹೆಣ್ಣುಮಕ್ಕಳ ಸಂಖ್ಯೆ ಅಧಿಕ (ಇದರಲ್ಲಿ ಗಂಡನ ಪಾತ್ರ ಹಿರಿದು ). ಲೈಂಗಿಕವಾಗಿ, ದೈಹಿಕವಾಗಿ   ಆಕೆಯ ಶೋಷಣೆ ನಿರಂತರವಾಗಿ ಸಾಗಿದೆ ಆ ಪುಟ್ಟ ದೇಶದಲ್ಲಿ.  848 ಭಾಷೆಗಳನ್ನು ಒಳಗೊಂಡ ಅನೇಕಾನೇಕ ಸಂಸ್ಕೃತಿ ಧರ್ಮಗಳನ್ನೂ ಒಳಗೊಂಡ, ಆರ್ಥಿಕವಾಗಿ ಮುಂದಿರುವ ಆ ದೇಶದಲ್ಲಿ ಎಕನಾಮಿಕಲಿ ಏನೇ ವ್ಯತ್ಯಾಸವಾದರೂ ಸಹಿತ ಅಲ್ಲಿ ಅದರ ಪ್ರಭಾವ ಉಂಟಾಗುವುದಿಲ್ಲವಂತೆ.ಅದಕ್ಕೆ ಕಾರಣ ಅಲ್ಲಿನವರು ತಮ್ಮ ಮೂಲವೃತ್ತಿಯ ಮೂಲಕ ಜೀವನ ನಡೆಸುತ್ತಾ  ಬದುಕುತ್ತಿದ್ದಾರೆ.
ಆದರೆ  ವಿಷಯ ಏನೇ ಇರಲಿ ಬ್ಲಾಕ್ ಮ್ಯಾಜಿಕ್ ನಂತಹವುಗಳನ್ನು ಅಧಿಕ ಪ್ರಮಾಣದಲ್ಲಿ ನಂಬುವ ಮಂದಿ. ಅದರಿಂದ  ಹೆಣ್ಣುಮಕ್ಕಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.  ಈ ಅಂಶದ ಅಡಿಯಲ್ಲಿ ಕಾರ್ಯಕ್ರಮ ಸಿದ್ಧವಾಗಿದೆ .  ಪ್ರಕೃತಿ ಸೌಂದರ್ಯ ಆಹಾ  ಅದ್ಭುತವಾಗಿದೆ. ಈ ಕಾರ್ಯಕ್ರಮ ಮತ್ತೆ ಪ್ರಸಾರ ಆದರೆ, ನನ್ನ ಸಮಯ ಹೊಂದಿಕೆಯಾದರೆ ನೋಡುವ ಇರಾದೆಯಿದೆ.

@ ಹೆಣ್ಣುಮಕ್ಕಳು ಕರುಣಾಶಾಲಿಗಳು   ಕಣ್ರೀ.. ಹೇಗೆ ಅಂತೀರಾ.. ಇತ್ತೀಚಿಗೆ ಡಿಸ್ಕವರಿ  ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ವೀಕ್ಷಣೆ ಮಾಡಿದೆ.. ಅದರಲ್ಲಿ ಮ್ಯಾನ್, ವುಮನ್, ವೈಲ್ಡ್ . ಹೆಸರೇ ಹೇಳುವಂತೆ ಕಾಡಲ್ಲಿ ನಾನು ನೀನು . ಅಲ್ಲಿ ಊಟ, ಪರಿಸರ, ಅಲ್ಲಿ ನೀರು , ಪ್ರಾಣಿ, ಒದ್ದಾಟ, ಚಳಿ, ಕತ್ತಲು, ಭಯ, ಬೆಂಕಿ ಹೀಗೆ ಹತ್ತು ಹಲವಾರು ಅಂಶಗಳ ಬಗ್ಗೆ  ಪ್ರಸಾರವಾಗ್ತಾ ಇತ್ತು. ಆದರೆ ನನಗೆ ಹೆಚ್ಚು ಮಜಾ ಕೊಟ್ಟ ಸಂಗತಿ ಅಂದ್ರೆ ಆ ಕಾರ್ಯಕ್ರಮದ ಕಡೆಯಲ್ಲಿ ಆತ ಮತ್ತು ಆಕೆ ಮೀನು ಹಿಡಿತಾರೆ ಯಾವುದೇ ಪ್ರಾಪರ್ಟಿ ಸಹಾಯ  ಇಲ್ಲದೆ.. ಆಕೆ  ಪ್ರಯತ್ನ  ಮಾಡ್ತಾ ಇದ್ರೂ ಸಹ ಮೀನು ಕೈಯಿಂದ  ಜಾರ್ತಾ ಇತ್ತು.. ಆಕೆ ಪಾಪ ಸಾರಿ ಸಾರಿ ಅಂತ ಹೇಳ್ತಾ ಆ ಮೀನು ಹಿಡಿದೇ ಬಿಟ್ಲು. ಅಲ್ಲದೆ, ಸಾರಿ ಸಾರಿ ಅಂತ ಆ ಮೀನನ್ನು ಸಾಯಿಸಿ , ಸುಟ್ಟು ಸ್ವಾಹಾ  :-).. ಆದರೆ ಆ ಹೆಣ್ಣುಮಗಳು ಯಾರಿಗೋ ಸಾರಿ ಹೇಳಿದ್ದು  ;-)

No comments: