ಪಂಚ್-ಭಾಬೀಜಿ

Image result for green and orange flowers
ಹಾಸ್ಯ ಧಾರಾವಾಹಿಗಳು ಅದರಲ್ಲೂ ಕನ್ನಡ ವಾಹಿನಿಯಲ್ಲಿ ಫ್ಹಾಸ್ಯ ಧಾರಾವಾಹಿಗಳ ರುಚಿ ತೋರಿಸಿದ್ದು ಸಿಹಿಕಹಿ ಚಂದ್ರು ಗ್ರೂಪ್ . ಆ ಗ್ರೂಪ್ ಅನೇಕ ಉತ್ತಮ ಕಲಾವಿದರಿಗೆ ಜೀವದಾನ ಮಾಡಿದ್ದು ಗೊತ್ತೇ ಇದೆ. ಈಗ ಬೇರೆಯವರು ಹಾಸ್ಯಪ್ರಧಾನ ಧಾರಾವಾಹಿಗಳನ್ನು ಪ್ರಸಾರಿಸುತ್ತಿದ್ದಾರೆ. ಆದರೆ ನಾನು ಸ್ವಲ್ಪ ಆಸಕ್ತಿಯಿಂದ ಆಗಾಗ ನೋಡುವ ಹಾಸ್ಯ ಧಾರವಾಹಿ ಉದಯವಾಹಿನಿಯಲ್ಲಿ   ಪ್ರಸಾರ ಆಗುವ ಪಂಚ್ ಕಜ್ಜಾಯ. ಅದರಲ್ಲಿ ಅತ್ತೆ ಮಾವ, ಲಂಬೂ ಪಾತ್ರಧಾರಿ ವೀಕ್ಷಕರಿಗೆ ಹಳೆಯಮುಖಗಳು. ಉಳಿದ ಪಾತ್ರಧಾರಿಗಳು ಹೊಸಬರಾದರೂ ಇಷ್ಟ ಆಗುವಂತೆ ನಟಿಸುತ್ತಿದ್ದಾರೆ.  ಅತ್ತೆ ಮಾವ ಮಗ ಸೊಸೆ ಮಗಳು ಇರುವ ಒಂದ್ದು ಪುಟ್ಟ ಕುಟುಂಬ.ಅದರಲ್ಲಿ ದಿನಕ್ಕೊಂದು ಕಥೆ.ಪ್ರತಿದಿನವೂ ವೀಕ್ಷಕ ನಗುವಂತೆ ಮಾಡುವ ಕಥೆಯನ್ನು ಹಣೆದಿರುತ್ತಾರೆ ತಂಡದವರು.
ಇಂತಹದ್ದೇ ಸರಳ ಹಾಗೂ ಸಾಧಾರಣ ಕಥಾಹಂದರ ಇದ್ದ  ಹಾಸ್ಯಧಾರಾವಾಹಿ ಸುವರ್ಣ ಪ್ಲಸ್ ವಾಹಿನಿಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಸಾರ ಆಗ್ತಾ ಇತ್ತು. ಅದರ   ಹೆಸರು ಎಸ್ಎಸ್ ಎಲ್ ಸಿ ನನ್ ಮಕ್ಕಳು. ಮಾಸ್ಟರ್ ಆನಂದ್ ಮುಖ್ಯ ಆಕರ್ಷಣೆ ಆಗಿದ್ರೂ ಸಹ ಉಳಿದ ಪಾತ್ರಧಾರಿಗಳು ಸಹಿತ ಅಷ್ಟೇ ಸಮರ್ಥವಾಗಿ  ನಿಭಾಯಿಸಿದ್ದರು. ಈಗ ಪಂಚ್ ಕಜ್ಜಾಯದ ಗ್ರೂಪ್ ಸಹ ಅಷ್ಟೇ ಸಮರ್ಥವಾಗಿ ಕೊಟ್ಟ ಪಾತ್ರವನ್ನು ನಿಭಾಯಿಸ್ತಾ ಇದ್ದಾರೆ.
Image result for green and orange flowers
@ಇಂತಹ ಮಜಾ ಕೊಡುವ ಹಾಸ್ಯಧಾರಾವಾಹಿ ಭಾಬೀಜಿ ಘರ್ ಪರ್  ಹೈ . ಅಂಡ್ ಟಿವಿಯಲ್ಲಿ ಪ್ರಸಾರ ಆಗುವ ಈ ಹಾಸ್ಯಧಾರಾವಾಹಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಪಾತ್ರಗಳು ಅದ್ಭುತ ವಾಗಿದೆ. ಭರಪೂರ ಹಾಸ್ಯ ಇದರ ಮುಖ್ಯ ಆಕರ್ಷಣೆ.ಆ ಧಾರಾವಾಹಿಯಲ್ಲಿ ನಟಿಸಿರುವ ಅಷ್ಟೂ ಪಾತ್ರಧಾರಿಗಳು ತುಂಬಾ ಇಷ್ಟ ಆಗುವಂತೆ ನಟಿಸಿ ಧಾರವಾಹಿ ತಪ್ಪದೆ ನೋಡುವಂತೆ ಮಾಡಿದ್ದಾರೆ. ಈ ಧಾರವಾಹಿ ಗೆಲುವಿಗೆ ನಿರ್ದೇಶಕ-ಕಥೆಗಾರ ಮತ್ತು ತಂಡಕ್ಕೆ ಯಾವ ರೀತಿ ಪ್ರಶಂಸೆ  ತಲುಪಬೇಕೋ ಅಷ್ಟೇ ಪ್ರಶಂಸೆ ಪ್ರತಿಯೊಂದು ಪಾತ್ರಕ್ಕೂ ಸಲ್ಲಬೇಕು..

No comments: