ಅದ್ಭುತ
ಸಾಮಾನ್ಯವಾಗಿ ನಾನು ಕಂಡಂತೆ ಬಹುತೇಕ  ವೀಕ್ಷಕರು  ವಾರದ ಕೊನೆಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೆಚ್ಚು ಕಾತುರರಾಗಿರುತ್ತಾರೆ. ರಿಯಾಲಿಟಿ ಶೋಗಳು ಜನರ ಆಕರ್ಷಣೆಯ ಕೇಂದ್ರ ಬಿಂದುಗಳು ಎಂದರೆ ತಪ್ಪಲ್ಲ. 
ಝಿ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಸರೆಗಮಪ ಅತ್ಯಂತ ಮನಸೆಳೆದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅದರಲ್ಲಿ ಭಾಗವಹಿಸುವ ಮಕ್ಕಳು, ಜ್ಯೂರಿ ಮೆಂಬರ್ ಗಳು, ನೇಹ, ಜಾವಿದ್, ಹಿಮೇಶ್ ರಂತಹ ತ್ರಿಮೂರ್ತಿ ತೀರ್ಪುಗಾರರು, ಜೊತೆಗೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ನಿರೂಪಕ ಆದಿತ್ಯ ನಾರಾಯಣ್ ... ಆವರ ಲವಲವಿಲಿಕೆಯ ನಿರೂಪಣೆ, ಮಾತಿನ ಶೈಲಿ ಎಲ್ಲವೂ ಅತ್ಯಂತ ಇಷ್ಟವಾಗುವ ಅಂಶಗಳು. ದಿನೇದಿನೇ ಕಾರ್ಯಕ್ರಮದ ಸವಿ ಹೆಚ್ಚಾಗುತ್ತಲೇ ಬಂದಿದೆ. ಅದರಲ್ಲೂ ಈಗ ಸೇರ್ಪಡೆಯಾಗಿರುವ ಗಾಯಕ್ವಾಡ್ ಸಿಸ್ಟರ್ಸ್ ಮತ್ತು ದಕ್ಷಿಣ ಭಾರತದ ಹೆಮ್ಮೆ ವೈಷ್ಣವ್ ಗಿರೀಶ್ (ವಿಜಿ)  ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಜಯಸ್  ಮಾತ್ರವಲ್ಲ ಎಲ್ಲಾ ಮಕ್ಕಳೂ ಹೆಚ್ಚು ಇಷ್ಟ ವಾಗುವಂತೆ ತಮ್ಮ ಪ್ರತಿಭೆ ತೋರುತ್ತಿದ್ದಾರೆ.. 
ಈ ಬಾರಿಯ ಕಾರ್ಯಕ್ರಮಗಳಲ್ಲಿ ಜನ್ಮಾಷ್ಟಮಿ ಕುರಿತಾದ ವಿಶೇಷ  ಸಂಚಿಕೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಸಿದ್ಧ ಪಡಿಸಿದ ಸಂಚಿಕೆ ಎರಡೂ ಮನಸೆಳೆಯಿತು. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯದ್ದು ಹೆಚ್ಚು ಇಷ್ಟವಾಯ್ತು.  ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ, ಎಲೆಮರೆಯ ಸಮಾಜಮುಖಿಗಳ ಪರಿಚಯ ಮಾಡಿಕೊಟ್ಟ ರೀತಿ ಎಲ್ಲವೂ ಅದ್ಭುತ.
ಈ ರೀತಿ ಕಾರ್ಯಕ್ರಮ ಸಿದ್ಧ ಪಡಿಸಿ ಜನರ ಕೈಗಿತ್ತ ಸರೆಗಮಪ ಟೀಮ್ ಗೆ ನಲ್ಮೆಯ ವಂದನೆ.. 

No comments: