ಭಜನ್


Image result for orange color flowers
ಶಾಸ್ತ್ರೀಯ ಸಂಗೀತ ನನಗೆ ಇಷ್ಟ. ಆದರೇ ಹೆಚ್ಚು ಆಲಾಪ್ ಗಳು ಇದ್ದರೆ ಕಷ್ಟ. ನನ್ನಂತಹ ಸಾಮಾನ್ಯರಿಗೆ  ಆಲಾಪಗಳು ಅಂದ್ರೆ ಅರ್ಥ ವಾಗಲ್ಲ. ಅದೇ ದೊಡ್ಡ ಸಮಸ್ಯೆ. ಆ ವಿಷ್ಯ  ಪಕ್ಕಕ್ಕೆಇಡೋಣ. ಹಾಗಂತ ಅಂತಹ ಕಾರ್ಯಕ್ರಮಗಳನ್ನು ವೀಕ್ಷೀಸೋಲ್ಲ ಎಂಬುದು ಇದರ ಅರ್ಥವಲ್ಲ. 
ನಿನ್ನೆ  ಶ್ರೀ ಶಂಕರ ವಾಹಿನಿಯಲ್ಲಿ ಮುಂಬೈಯಲ್ಲಿ  ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಲೈವ್ ನೋಡಿದೆ. ಸಕತ್ ಮನಸೋಲ್ಲಾಸ ಉಂಟಾಯಿತು.ಗಾಯಕರು  ಪ್ರಾಯಶಃ ಇಬ್ಬರು ಸಹೋದರರು ಇರಬೇಕು. ಯಾಕೆಂದರೆ ಆ ಕಾರ್ಯಕ್ರಮ ಸೆರೆ ಹಿಡಿಯುತ್ತಿದ್ದ ಕ್ಯಾಮರ ಟಕ್ನೀಷಿಯನ್ ಬ್ಯಾನರ್ ಮೇಲೆ ಬರೆದಿದ್ದ ಹೆಸರುಗಳನ್ನು  ವೀಕ್ಷಕರಿಗೆ ಹಾಗೂ ಸಂಗೀತಾಸಕ್ತರಿಗೆ ತೋರಿಸುವ ಗೋಜಿಗೆ ಹೋಗಿರಲಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ಆದರಷ್ಟು ಕಲಾವಿದರ ಹೆಸರನ್ನು ಪ್ರಸಾರಿಸಿದರೆ ಹೆಚ್ಚು ಒಳ್ಳೆಯದು.

ಅನೇಕ ವಿಷಯಗಳಿಂದ ಈ ವಾಹಿನಿ ನನ್ನನ್ನು ಹೆಚ್ಚು ಆಕರ್ಷಿಸಿದೆ.ನಾನು ಕೆಲವೊಂದು ಚಾನಲ್ಗಳನ್ನು ಹೆಚ್ಚು ವೀಕ್ಷಿಸುತ್ತೇನೆ. ಅದರಲ್ಲಿ ಶಂಕರ ಸಹಿತ ಒಂದಾಗಿದೆ. ಇದರಲ್ಲಿ ಪ್ರಸಾರವಾಗುವ ಭಜನ್ ಸಾಮ್ರಾಟ್ ತುಂಬಾ ಚನ್ನಾಗಿರುತ್ತದೆ. ದೇವರನ್ನು ಹೆಚ್ಚಾಗಿ ನಂಬುವ,ಭಜನೆಯಂತಹ ಸಂಗೀತ ಪ್ರಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ನನ್ನಂತಹ ಅನೇಕಾನೇಕ ವೀಕ್ಷಕರಿಗೆ ಇದು ಹೆಚ್ಚು ಆಕರ್ಷಿಸಿದೆ.  ಈಗ 5 ನೇ ಸೀಸನ್ ಸಧ್ಯದಲ್ಲೇ ಆರಂಭವಾಗಲಿದೆ.ದಕ್ಷಿಣ ಭಾರತ ರಾಜ್ಯಗಳ, ಅದರಲ್ಲೂ ಮುಖ್ಯವಾಗಿ ಕನ್ನಡ, ತಮಿಳು ಮತ್ತು ತೆಲುಗು ಭಾಷಿಗರು ಇದರಲ್ಲಿ ಹೆಚ್ಚಾಗಿ ಭಾಗವಹಿಸುವುದು.









  

No comments: