ಗೇಮ್ ಪ್ಲೇಯರ್

Image result for pink and blue flowers
ಸಿನಮಾ ಕ್ಷೇತ್ರ .. ಮಾಧ್ಯಮ ಪ್ರಪಂಚದಲ್ಲಿ ಬದುಕು ನಡೆಸಬೇಕು ಅಂತ ಆಸೆ ಹೊತ್ತು ಬಂದವರು, ಅದರಲ್ಲಿ ಗೆದ್ದವರು, ಅದರಲ್ಲಿ ಸೋತವರು..! ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಕೆಲವರಿದ್ದಾರೆ ಗೆದ್ದ ನಟ-ನಟಿ ಸಹಾಯ ಮಾಡಲಿಲ್ಲ, ಸಮಾಜಕ್ಕೇನು ಅವರ ಕೊಡುಗೆ  ಅನ್ನುವುದನ್ನು ದೊಡ್ಡದಾಗಿ ಹೇಳಿ ಅವರ ಬಗ್ಗೆ ಇಲ್ಲಸಲ್ಲದೆ ಪ್ರಚಾರಕ್ಕೆ ತೊಡಗುತ್ತಾರೆ. ಆದರೆ ಆ ಗೆಲುವಿಗಾಗಿ ಕಲಾವಿದರು ,ತಂತ್ರಜ್ಞರು ನಡೆಸಿದ ಹೋರಾಟ ಅವರ ಆಪ್ತರಿಗೆ ಮಾತ್ರ ಗೊತ್ತು.
 ಶಿವಶಂಕರ್ ಅಂತ ಸಿನಿಮಾ ಎಡಿಟರ್. ನನ್ನ ತಮ್ಮನಂತಹ  ಗೆಳೆಯ.. ತುಂಬಾ ದಿನದ ನಂತರ ಫೋನ್ ಮಾಡಿದ ನಾನು ಈ ಕ್ಷೇತ್ರ ಬಿಡ್ತೀನಿ ಕಣಕ್ಕಾ ಅಂದ.. ರಥಾವರದಂತಹ ಸಿನಿಮಾಗಳನ್ನು ಎಡಿಟ್ ಮಾಡಿರುವ ಪ್ರತಿಭಾವಂತ.. ಅವನ ವಿಷಯಗಳನ್ನು, ಸಿನಿಲೋಕದ ದೀಪದ ಕೆಳಗಿನ ಕತ್ತಲ ಬಗೆಗಿನ ವಿಷಯಗಳನ್ನು ಕೇಳುವಾಗ ಈ ಕ್ಷೇತ್ರದಲ್ಲಿ ಗೆದ್ದ ಕಲಾವಿದರ ಕಷ್ಟಗಳು ನೆನಪಿಗೆ ಬಂತು..
ಸುದೀಪಾ ಸಹ ಭಿನ್ನ ಕಲಾವಿದ ಅದಕ್ಕೆ ನನಗೆ ಆತನೆಂದರೆ ಸ್ವಲ್ಪ ಜಾಸ್ತಿ ಇಷ್ಟ.. ಹೊಸದಕ್ಕೆ ಸದಾ ಮೈಯೊಡ್ಡಿ ನಿಲ್ಲವ ಸುದೀಪಾ ಕಳೆದ ವರ್ಷ ಬಳೆಗಳ ವಿಷಯದಲ್ಲಿ ವಿವಾದದಲ್ಲಿ ಸಿಲುಕಿದ್ದರು. ತಮಾಷೆ ಅನ್ನಬೇಕೋ ವಿಷಾದ ಅನ್ನಬೇಕೋ ಗೊತ್ತಿಲ್ಲಾ ಬಳೆ ಒಡೆದು ಕೊಳ್ಳುವುದು, ಬಳೆ ಹಾಕಿಕೊಳ್ಳುವಂತಹ ಡೈಲಾಗ್ ಗಳು ಪ್ರಸಿದ್ಧ ಸೀರಿಯಲ್, ಸಿನಿಮಾಗಳಲ್ಲಿ ಮಾತ್ರವಲ್ಲ ಪ್ರಸಿದ್ಧ ವ್ಯಕ್ತಿಗಳ ಬರಹ- ಬಾಯಲ್ಲಿ ನಲಿಯುತ್ತಿರುತ್ತದೆ. ಆದರೆ ಅಂತಹದೊಂದು ಮಾತಾಡಿ ಮಾತ್ರ  ಸಿಕ್ಕಿಬಿದ್ದಿದ್ದು ದೀಪ್..  ಬಿಗ್ ಬಾಸ್ ಕನ್ನಡದ ಕೊನೆ ಕೊನೆ ಹಂತ .ದಿನನಿತ್ಯ ಪ್ರಸಾರವಾಗುವ ರಿಯಾಲಿಟಿ ಶೋ ಆಗಿರುವುದರಿಂದ ಸೀರಿಯಲ್ ಥರಾನೆ ಇಷ್ಟ ನನಗೆ. ಇದನ್ನು ಹೇಳಿಕೊಳ್ಳಲು  ನನಗೇನೂ ಬೇಸರವಿಲ್ಲ. ಯಾಕೇಂದ್ರೆ ಬಿಗ್ ಬಾಸ್ ವೀಕ್ಷಣೆ ಮಾಡೇ ಮಾಡುವ ಬಹಳಷ್ಟು ಜನರು ಅದರ ಪ್ರತಿಯೊಂದು ಅಂಶದ ಬಗ್ಗೆ ಟೀಕಾ ಪ್ರಹಾರ ಮಾಡ್ತಾ ಇರ್ತಾರೆ. ಅಂದ್ರೆ ಆ ರಿಯಾಲಿಟಿ ಶೋ ರುಚಿ ಹೇಗಿರಬೇಡ ಅವರಿಗೆ..ನಾನು ರೇಡಿಯೋ (ವಿವಿಧ ಭಾರತಿ) ಆಂಕರಿಂಗ್ ಗೆ ಪ್ರಯತ್ನ ಪಟ್ಟಿದ್ದೆ ಅಂತ ಮೊದಲೊಂದು ಪೋಸ್ಟ್ ನಲ್ಲಿ ತಿಳಿಸಿದ್ದೆನಲ್ಲ ಅದರಲ್ಲಿ  ಸೀನಿಯರಮ್ಮನಿಗೆ  ಸುದೀಪಾ ಅಂದ್ರೆ ಇಷ್ಟವಿಲ್ಲ :-) ಅದ್ಯಾಕೋ ನಾಕಾಣೆ.. ನಾನು ಬಿಡಿ ನನ್ನ ಜೊತೆ ಇದ್ದ ಬೇರೆಯ ಬಹಳಷ್ಟು ಮಂದಿಗೆ ನಮ್ ದೋಸ್ತಾ ಸಿನಿಮಾಗಳ ಹಾಡೇ ಇಷ್ಟ.. ಆದ್ರೆ ತಾವು ತಯಾರಿಸಿದ ಲಿಸ್ಟ್ ನಲ್ಲಿ ಇರುತ್ತಿದ್ದ ನಮ್ ಇಷ್ಟ ಹಾಡುಗಳು ಮಾತ್ರ ಮಾಯಮಂಗ ಮಾಯ!ನಾವು ಎಷ್ಟು ಕಷ್ಟ ಪಟ್ಟಿದ್ದೀವಿ ನಿಮಗಾಗಿ ಗೊತ್ತಾಯ್ತಾ ಸುದೀಪಾ..
Image result for pink and blue flowers
ಈ ರಿಯಾಲಿಟಿ ಶೋ ದ ಬಳಿಕ  ನಾನು ನನ್ನಂತಹ ವೀಕ್ಷಕರು ಮಿಸ್ ಮಾಡಿಕೊಳ್ಳುವುದು ಹಿನ್ನೆಲೆ ಧ್ವನಿಯ ಪ್ರದೀಪ್ ಬಡೆಕ್ಕಿಲಾ ವಾಯ್ಸ್..ಮೊದಲೆಲ್ಲಾ ಆಗಾಗ ಫೊನ್ ಮೂಲಕ ಭೇಟಿ ಆಗ್ತಾ ಇದ್ದೆವು ಈಗ ಯಾವಾಗಲಾದರೊಮ್ಮೆ ವಾಟ್ಸ್  ಅಪ್ :-)
 ಬಿಗ್ ಬಾಸ್ ಮನೆಯಲ್ಲಿ ಪ್ರಾಮಾಣಿಕರು ಅಪ್ರಾಮಾಣಿಕರು ಅನ್ನುವ ವಿಷಯದ ಶ್ರೇಣಿ ಬಂದ್ರೆ ಮೊದಲಿನಿಂದ  ಅತ್ಯತ್ತಮ ಗೇಮ್ ಪ್ಲೇಯರ್ ಆಗಿ ಇರೋದು ವಾಸುಕಿ ವೈಭವ್, ನಂತರ ಶೈನ್ . ಹರೀಶ್ ರಾಜ್ ದು ದ್ವಂದ್ವ.. ಭೂಮಿ ಶೆಟ್ಟಿದು ಒಂದು ರೀತಿ ಏನೂ ಮಾಡದ ಸ್ಪರ್ಧಿ.. ಆದರೆ ಪ್ರಿಯಾಂಕದ್ದು ಉಡಾಫೆ..ದೀಪಿಕಾ ಅವರಿಗೆ ಇಷ್ಟ ಆದವರಿದ್ದರೆ.. ಓಕೆ. ಇಲ್ಲದವರಿವೆ ನಾಟ್ ಓಕೆ!ಅವರು ಪಾಪ ಚಂದನ್ ಆಚಾರಿ ಅವರಿಗೆ ಅವಕಾಶ ಕೊಡಲಿಲ್ಲ ಕ್ಯಾಪ್ಟನ್ ಆಗೋಕೆ .. ಹೋಗ್ಲಿ ಬೇರೆ ರೀತಿಯಾದ್ರೂ ಆ ಮನುಷ್ಯ ಜನರ ಮನ ಗೆದ್ರಾ ಉಹುಂ .. ಅವರ ವರ್ತನೆ ಹೇಗಿತ್ತು ಅಂದ್ರೆ ಅನಸ್ತೇಷಿಯಾ ಕೊಟ್ಟು ಲೇಯ್ ಮಗಾ ಇದನ್ನು ಯಾರಾದ್ರೂ ಮೂಗಿಗೆ ಹಿಡಿದು ಜ್ಞಾನ ತಪ್ಪಿಸಿ ಬಾ ಅಂದ್ರೆ ಆತ ಗಾಬರಿಯಲ್ಲಿ ತನ್ನ ಮೂಗಿಗೆ ಒತ್ತಿ ಜ್ಞಾನ ಹೋದ ಪೆದ್ದನಂತೆ ಇತ್ತು.. ಯಾಕೇ ಈಮಾತು ಹೇಳ್ತಾ ಇದ್ದೀನಿ ಅಂದ್ರೆ ಬಿಗ್ ಬಾಸ್ ಅವರಿಗೆ ಅವಕಾಶ ನೀಡಿದಷ್ಟು ಅವರು ಅದನ್ನು ಬಳಸಿಕೊಂಡಿದ್ದು ತುಂಬಾ ಕಡಿಮೆ.ಕುರಿ ಪ್ರತಾಪ್ ಆರಂಭಿಕ ಬಹಳಷ್ಟು ವಾರಗಳಲ್ಲಿ ಅದೃಷ್ಟವಷಾತ್ ಗೆದ್ದ ಗ್ರೂಪ್ ನಲ್ಲಿ ಇರುತ್ತಿದ್ದರು.ಜೊತೆ ಅವರನ್ನು ಹೆಚ್ಚು ಪ್ಲೀಸಿಂಗ್ ಮಾಡುವ ಗುಂಪು ಇದ್ದು ಅದನ್ನೇ ತಮ್ಮ ಪ್ಲಸ್ ಪಾಯಿಂಟ್ ಅಂತ ಅಂದುಕೊಂಡು ಅವರು  ತಾವು ಬದಲಾಗಿಲ್ಲ ಅಂತ ತಿಳಿದಿದ್ದಾರೆ. ಏನೇ ಹೇಳಿ ಸುದೀಪಾ ನನಗನ್ನಿಸಿದ್ದು  ಈ ಮ್ಯಾಚ್ ನ ಪಕ್ಕಾ ಆಟಗಾರರು ಶೈನ್-ವಾಸುಕಿ.

No comments: