ಪಾತಾಳಮೋಹಿನಿ

ಕೆಲವೊಂದು ಕಾರ್ಯಕ್ರಮಗಳು, ಸೀರಿಯಲ್ ಗಳು ಹೆಚ್ಚು ಗಮನ ಸೆಳೆಯುತ್ತದೆ. ಸಾಮಾನ್ಯವಾಗಿ ನಾನು ಕೆಲವೊಂದನ್ನು ತಪ್ಪದೆ ವೀಕ್ಷಿಸುತ್ತೇನೆ. ಕಳೆದ ಕೆಲವು ದಿನಗಳಿಂದ ಒಂದಷ್ಟು ಎಲ್ಲಾ ಭಾಷೆಯ ಶಾರ್ಟ್ ಫಿಲಂಗಳು, ಹಳೆಯ ಕನ್ನಡ ಸಿನಿಮಾಗಳನ್ನು ವೀಕ್ಷಣೆ ಮಾಡ್ತಾ ಇದ್ದೀನಿ. ಆ ಲಿಸ್ಟ್ನಲ್ಲಿ ಪಾತಾಳಮೋಹಿನಿ ಸಿನಿಮಾವು ಸಹ ಸೇರಿದೆ.ವಿಶೇಷ ಅಂದ್ರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಪಾತಾಳಮೋಹಿನಿ ಸಿನಿಮಾದ ಪ್ರತಿಮಾದೇವಿಯನ್ನು ಮತ್ತೆ ನೋಡುವಂತಾಯಿತು.. ವಿಜಯಲಕ್ಷ್ಮಿ ಸಿಂಗ್ ಅವರನ್ನು ಕಂಡಾಗ ಸಾಮಾನ್ಯವಾಗಿ ಹೆಣ್ಣುಮಕ್ಕಳು ತಾಯಿಯನ್ನು ಹೋಲುತ್ತಾರೆ ಸ್ವಲ್ಪ ವಯಸ್ಸಾದ ಬಳಿಕ! ಆರ್ಯವರ್ಧನ್, ಝೇಂಡೆ, ಅನು,ಮೀರಾ,ಜೋಗತಿ, ಮಾನ್ಸಿ, ಹರ್ಷ, ಪಾತ್ರಧಾರಿಗಳ ಜೊತೆ ಅನು ಸ್ನೇಹಿತೆಯಾಗಿ ನಟಿಸಿರುವ ಹೆಣ್ಣುಮಗಳು ಸಹ ಹೆಚ್ಚು ಗಮನ ಸೆಳೆಯುತ್ತಾರೆ. ಸಧ್ಯಕ್ಕೆ ನಾನು ಸ್ವಲ್ಪ ಜಾಸ್ತಿ ಇಷ್ಟ ಪಟ್ಟು ನೋಡುವ ಧಾರವಾಹಿ ಜೊತೆಜೊತೆಯಲಿ, ಗಟ್ಟಿಮೇಳ , ಅಲ್ಲದೆ ಕನ್ನಡ ಕಲರ್ ವಾಹಿನಿಯಲ್ಲಿ ಪ್ರಸಾರವಾಗುವ ಮೂರುಗಂಟು. ಮೂರುಗಂಟು ಧಾರವಾಹಿಯಲ್ಲಿನ ಹೀರೋಯಿನ್ ಸುಬ್ಬಲಕ್ಷ್ಮಿ ಸಂಸಾರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದರು. ಇಲ್ಲೂ ಅಷ್ಟೇ. ಈ ಧಾರವಾಹಿಯಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗು.. .. ಭಿನ್ನವಾಗಿದೆ..ಸೇತುರಾಂ, ಸೀತಾರಾಮ್ ಅವರುಗಳ ಗರಡಿಯಿಂದ ಬಂದ ಕಲಾವಿದೆಯರು ಈ ಧಾರಾವಾಹಿಯ ಮುಖ್ಯ ಆಕರ್ಷಣೆ..

No comments: