ದೇಸಿ ಪ್ರತಿಭೆ

 

ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ  ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ  ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ಡ್ರಮ್ ಅರುಣ್ (ಹಾಗೆನ್ನಬಹುದಾ ?) ಎಂಥ ಅಪರೂಪದ ಪ್ರತಿಭೆ. ಇಂಥವರಿಗೆ ಕೈಗೆ  ಏನು ಸಿಕ್ಕರರು ಅವುಗಳಿಗೆ ಜೀವ ಕೊಡುವ ಶಕ್ತಿ ಬಹುಶಃ ದೇವರು ನೀಡಿರಬೇಕು. ಅವರ ವಾದ್ಯ ಸಂಗಾತಿಗಳು ಸಹ ಪ್ರತಿಭೆಯಲ್ಲಿ ಕಡಿಮೆ ಇಲ್ಲ.ಸಾಮಾನ್ಯವಾಗಿ ಹೊಸತನಕ್ಕಾಗಿ ವೀಕ್ಷಕ   ತುಡಿಯುತ್ತಾನೆ. ಅಂತಹ ಹೊಸತನ ನೀಡುವ ಅಪ್ಪಟ ದೇಸಿ ಪ್ರತಿಭೆ ಇವರು. 
ಈ ಕಾರ್ಯಕ್ರಮದ ಬಹು ಸಂಖ್ಯೆಯ ತೀರ್ಪುಗಾರರಜೊತೆಗೆ ಅವರ ಹೆಸರು ತೋರಿಸಿದರೆ ಒಳಿತು. ನಮ್ಮಂಥ ಅತಿ ಸಾಮಾನ್ಯ ವೀಕ್ಷಕರು ಅಡ್ಡ ಹೆಸರಿಂದ ಕರೆದು ನಮ್ಮ ಪ್ರತಿಭೆ ತೋರಿಸುತ್ತಿರುತ್ತೀವಿ. ಒಂದು ಸಂಗತಿ ಖುಷಿ ಅಂದರೆ ಈ ಮೊದಲು ತೀರ್ಪುಗಾರಾಗಿದ್ದ  ನಂದಿತಾ ಅವರನ್ನು ಮೆಚ್ಚುಗೆ ಗಳಿಸಿ ಗೆದ್ದು  ಅವರ ಜೊತೆ ತೀರ್ಪುಗಾರ್ತಿಯರಾಗಿ ಕುಳಿತುಕೊಳ್ಳುವ೦ತಹ  ಸಾಧನೆ ಮಾಡಿರುವ ಲಕ್ಷ್ಮಿ ನಾಗರಾಜ್ ಮತ್ತು ಇಂದು ನಾಗರಾಜ್ , ಅತಿ ಮಧುರ ಕಂಠ ಸಿರಿಯ ಅನುರಾಧ ಭಟ್ , ಹೇಮಂತ್ ..ಬಹಳಷ್ಟು  ಪ್ರತಿಭೆಗಳ ಹೆಸರು ಗೊತ್ತಿದೆ-ಗೊತ್ತಿಲ್ಲ...!
ಮಾಗಡಿಯಲ್ಲಿ ನಡೆದ ಡ್ರಾಮ ಜೂನಿಯರ್ಸ್ ಮತ್ತು ಸರಿಗಮಪ ಕಾರ್ಯಕ್ರಮದ ಮಿಶ್ರಣದಲ್ಲಿ ಶಿಶುನಾಳ ಷರೀಫ್ ಸಾಹೇಬರ  ಒಂದು ಪುಟ್ಟ ನಾಟಕ ಮತ್ತು ರಚನೆ  ಮನಕ್ಕೆ ಖುಷಿ ನೀಡಿತು. ಅಂದು ತಕ್ಷಣ ನಾನು ಶಿಶುನಾಳರ ಗೀತೆಯನ್ನು ನನ್ನ ಎಫ್ಭಿ ವಾಲ್ ನಲ್ಲಿ ಹಾಕಿ ಖುಷಿಪಟ್ಟೆ. ಈ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ   ದರ್ಶನ್ ವಾಹ್ ಏನ್ ಪ್ರತಿಭೆ..ವಾಹ್ 


ಜಾಕ್ ಪಾಟ್

 


ಸ್ಟಾರ್ ಸುವರ್ಣ ಮನೋರಂಜನಾ ವಾಹಿನಿಯನ್ನು ಬಹಳ ದಿನಗಳ ಬಳಿಕ ನಾನು ಮುಖ್ಯವಾಗಿ ಬಿ ಆರ್ ಛಾಯ ಮೇಡಂ ಮತ್ತು ಪದ್ಮಪಾಣಿ ಸರ್ ಕಾರಣದಿಂದ ವೀಕ್ಷಿಸಿದೆ. ಅದರಲ್ಲಿ ಪ್ರಸಾರ ಆಗುವ ಜಾಕ್ ಪಾಟ್ ಎನ್ನುವ ಕಾರ್ಯಕ್ರಮದಲ್ಲಿ ಈ ದಂಪತಿಗಳಿಗೆ  ಹಾಗೆನ್ನುವುದಕ್ಕಿಂತ ಛಾಯ ಮೇಡಂ ಗೆ ಸನ್ಮಾನ ಆಗುವ ಕಾರ್ಯಕ್ರಮ ಇತ್ತು ಪ್ರೇಮದಿನದ ಸಲುವಾಗಿ... ! 

ಅಲ್ಲಿ ಬಹಳ ದಿನಗಳ ನಂತರ ನಿರೂಪಕಿ ಅನುಪಮಾ ಗೌಡ ರನ್ನು ನೋಡಿ ಖುಷಿ ಆಯ್ತು. ಕನ್ನಡದ ಕೆಲವು ಉತ್ತಮ ನಿರೂಪಕ/ಕಿ ಯಾರ ಸಾಲಿಗೆ ಸೇರಿರುವ ಅನುಪಮಾ ಭಾಷೆ ಹಾಗು ಅವರ ಸುವರ್ತನೆ ಇಷ್ಟ ಆಗುತ್ತದೆ. ಬಿಗ್ ಬಾಸ್ ಗೆ ಎರಡನೇ ಬಾರಿ ಬಂದ ಅನುಪಮಾ ಅನೇಕರೀತಿಯಲ್ಲಿ ತಮ್ಮನ್ನು ಪಾಲಿಶ್ ಮಾಡಿಕೊಂಡಿದ್ದರು. ಅದು ಒಳ್ಳೆಯ ಬೆಳವಣಿಗೆ. ಪದ್ಮಪಾಣಿ ಸರ್ ನನಗೆ ಫೇಸ್ ಬುಕ್ ಮಿತ್ರರು. ನನ್ನ ಪೋಸ್ಟ್ ಗಳಿಗೆ ಲೈಕ್ ಒತ್ತುವ ಮತ್ತು ಕಾಮೆಂಟ್ ಹಾಕುವ ಹೃದಯ ವಿಶಾಲಿಗಳು.. ತಿಳಿಹಾಸ್ಯದ ಮನಸ್ಸು ಇರುವ ಪದ್ಮಪಾಣಿ ಸರ್ ಮತ್ತು ನನ್ನ ಮೆಚ್ಚಿನ ಗಾಯಕಿ ಛಾಯಾ ಮೇಡಂ ಅವರನ್ನು ಜಾಕ್ ಪಾಟ್ ವೇದಿಕೆಯ ಮೂಲಕ ನೋಡಿ ಖುಷಿ ಆಯಿತು. ಈ ಕಾರ್ಯಕ್ರಮದಲ್ಲಿ ತುಂಬಾ ಇಂಪ್ರೆಸ್ ಮಾಡಿದ ಮತ್ತೊಂದು ಸಂಗತಿ ಅಂದರೆ  ವಿವಿಧ ಪ್ರಕಾರಗಳ ಸಂಗೀತ.ಅದು ಗಾಯನ, ವಾದನ.. ಹೀಗೆ ಹತ್ತು ಹಲವಾರು ಇರಬಹುದು. ತುಂಬಾ ಚೆನ್ನಾಗಿತ್ತು.ತಾರಾ ದಂಪತಿಗಳಾದ ಸಿಹಿಕಹಿ ಚಂದ್ರು ಮತ್ತು ಗೀತಾ ಮೇಡಂ ಅವರಿಗೆ ನಡೆದ ಸನ್ಮಾನ ಮತ್ತು ಮಾತುಕತೆ ಚಹಾದ ಅಲ್ಲಲ್ಲ  ಕಾಫಿ ಜೊತೆಯ ಚೂಡಾ ಇದ್ದಂಗೆ ಇತ್ತು.. 

ಲಾಸ್ಟ್ ರೆಸಿಪೀಸ್

 


ಎಪಿಕ್ ಚಾನಲ್ ನಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಲಾಸ್ಟ್ ರೆಸಿಪೀಸ್  ಅಂತ ಅದರ ಹೆಸರು.ಆದಿತ್ಯಬಲ್ ಅದರ ನಿರೂಪಕ. ಈ ಕಾರ್ಯಕ್ರಮದ ವಿಶೇಷ ಅಂದ್ರೆ ಮರೆಯುತ್ತಿರುವ, ಅಥವಾ ಬಹಳ ಹಿಂದೆ ಬಳಸುತ್ತಿದ್ದ ಪಾಕ ವಿಧಾನ. ನಾನು ಆ ಚಾನಲ್ ವೀಕ್ಷಣೆ ಮಾಡುವಾಗ  ನಮ್ ಕರ್ನಾಟಕದ ಹೆಮ್ಮೆಯ ಮಹಾರಾಜ ರಾಜಾಧಿರಾಜ ಶ್ರೀ ಕೃಷ್ಣದೇವ ರಾಯರ ವಂಶಕ್ಕೆ ಸೇರಿದ ರಾಜಮಾತೆ ಮತ್ತು ಅವರ ಸೊಸೆ 500 ವರ್ಷದಷ್ಟು ಹಳೆಯ ರೆಸಿಪಿ ಮಾಡಿ ತೋರಿಸಿದರು. ರಾಜಮಾತೆ ಹೆಸರು ಚಂದ್ರಕಾಂತ ದೇವಿ.  ಮೊಟ್ಟೆ ಯಿಂದ ಮಾಡಿದ  ಒಂದು ಸರಳವಾದ ತಿನಿಸನ್ನು ತೋರಿಸಿಕೊಟ್ಟರು. ನಮ್ಮಲ್ಲಿ ಬಳಸುವ ಮರಾಠಿ ಮೊಗ್ಗು, ಕಲ್ಲುಹೂವನ್ನು ಉಪಯೋಗಿಸಿ ಮಾಡಿದ ಆಹಾರವನ್ನು ಆಂಕರ್ ಚಪ್ಪರಿಸಿಕೊಂಡು ತಿಂದದ್ದು ಬೇರೆ ವಿಷ್ಯ. 

ನಾನು ಸಾಮಾನ್ಯವಾಗಿ   ವೆಜ್ ಅಥವಾ ನಾನ್ವೆಜ್ ಅಡುಗೆ ನೋಡುತ್ತೇನೆ.. ನಾನು ಶಾಕಾಹಾರಿ ಆಗಿದ್ದರು ಸಹ .. ಯಾಕೆಂದ್ರೆ ಯಾವುದೇ ದೇಶ, ಸಂಸ್ಕೃತಿಯವರು ಅಡುಗೆ ಮಾಡುವ ವಿಧಾನ,ಅವರು ಬಳಸುವ ಸಾಂಬಾರ ಪದಾರ್ಥಗಳು ..ನನಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ಅದಕ್ಕಷ್ಟೇ..!

ಫುಡ್ ಫ್ಯಾಕ್ಟರಿ

 



ಡಿಸ್ಕವರಿ ಚಾನಲ್ ನೋಡುವುದು ತುಂಬಾ ಪ್ರತಿಷ್ಠೆ ಸಂಕೇತ ಆಗಿತ್ತು. ಆದರೆ ಈಗ ಬಹಳಷ್ಟು ಚಾನಲ್ ಗಳು, ಒಂದೇ ರೀತಿಯ ಕಾರ್ಯಕ್ರಮಗಳು .. ಎಲ್ಲವು.. ಎಲ್ಲೆಡೆ  ಪ್ರಸಾರ ಆಗುತ್ತಿದೆ. ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಸಹ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಇಂದು ಬಹಳ ಸಮಯದ ನಂತರ ಡಿಸ್ಕವರಿ ಚಾನಲ್ ನೋಡಿದಾಗ ಆಗ ಫುಡ್ ಫ್ಯಾಕ್ಟರಿ  ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಬೃಹತ್ ಯಂತ್ರಗಳು, ಬೃಹತ್ ಚಾಕೊಲೇಟ್ ಜೊತೆಗೆ ಆನಿಯನ್ ರಿಂಗ್ಸ್ ಎನ್ನುವ ಕುರ್ಕುರೆ ಬಗ್ಗೆ ಪ್ರಸಾರ ಮಾಡ್ತಾ ಇದ್ರು .. ಎಷ್ಟು ಪ್ರಮಾಣದಲ್ಲಿ ಈರುಳ್ಳಿ  ರಿಂಗ್ಸ್ ಗಳು ಇರುತ್ತವೆ, ಜೊತೆಗೆ  ಅದನ್ನು ಕರಿಯಲು ಇದ್ದ ಬೃಹತ್ ಎಣ್ಣೆ ಪಾತ್ರೆ.. ಅದರ ಪ್ಯಾಕಿಂಗ್.. ವೆಲ್ ಇದು ವಿದೇಶದ ಪ್ಯಾಕ್ಟ್ರಿ ಕಥೆ.. ಒಟ್ಮೆ ಚನ್ನಾಗಿತ್ತು ಈರುಳ್ಳಿ ಸಂಡಿಗೆ ಅಥವಾ ಕುರ್ಕುರೆ ಅಥ್ವಾ ಆನಿಯನ್ ರಿಂಗ್ಸ್  .....!

ಸಿಗುತ್ತಾ ?!

 


ಕೋವಿಡ್  ಸಮಯದಲ್ಲಿ ವಾರ್ತಾ ವಾಹಿನಿಗಳನ್ನು ಹೆಚ್ಚು ನೋಡ್ತಾ ಇದ್ದೆ. ಸೋಷಿಯಲ್ ಮೀಡಿಯಾದಲ್ಲಿದ್ದ ಅನೇಕ ಸ್ನೇಹಿತರ ಸಾವು, ಪ್ರಪಂಚದಲ್ಲಿ ಆದ ಸಾವುಗಳು ಮನಕ್ಕೆ ಖೇದ ಉಂಟು ಮಾಡಿತ್ತು. ಆದ ಕಾರಣ ಆದಷ್ಟು ಮನಕ್ಕೆ ಬೇಸರ, ನೋವು ಉಂಟಾಗುವ ವಿಷಯಗಳನ್ನು ನಾನು ವೀಕ್ಷಿಸಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೂ ಬಹಳ ಸಮಯದ ನಂತರ ಸಾಮಾನ್ಯವಾಗಿ ವೀಕ್ಷಿಸುವ ವಾರ್ತಾ ವಾಹಿನಿಗಳನ್ನು ಹೊರೆತು ಪಡಿಸಿ ಹಾಗೆ ಪ್ರಜಾ ಮತ್ತು ರಾಜ್ ನ್ಯೂಸ್ ಕಡೆ ಬಂದೆ. ಆಯೋ ಎಂಥ ಅನ್ಯಾಯ .. !!!! ರಾಜ್ ನ್ಯೂಸ್ ನಲ್ಲಿ  beauty   ಟಿಪ್ಸ್ ಅನ್ನುವ ಕಾರ್ಯಕ್ರಮದ ಹೆಡ್ಡಿಂಗ್ ತೋರಿಸ್ತಾ ಇದ್ರೂ.. ಆದರೆ ಅಲ್ಲಿ ಪ್ರಸಾರ ಆಗ್ತಾ ಇದ್ದುದು ನ್ಯೂಸೂ... ಇನ್ನು ಪ್ರಜಾ ದಲ್ಲಿ ಸಾಂತ್ವಾನ ಅನ್ನುವ ಪ್ರೋಗ್ರಾಮ್ ಇತ್ತು ಪಟ್ಟಿಯಲ್ಲಿ ಆದರೆ ಅಲ್ಲೂ ಸಹ ಪ್ರಸಾರ ಆಗ್ತಾ ಇದ್ದುದ್ದು ನ್ಯೂಸು.. ದೇವುಡಾ ನ್ಯೂಸ್ ನೋಡುವುದರಿಂದ  ಸಾಂತ್ವಾನ ಸಿಗುತ್ತಾ ?!