ಅಲಗ್ ಛಿ !


 ಯಾವ ಯಾವ ಪೋಸ್ಟ್ಗೆ ಹೆಚ್ಚು ಗಮನ ಕೊಡ್ತಾರೆ ಅನ್ನುವುದನ್ನು ನಾನು ಪ್ರತಿಬಾರಿ ವೀಕ್ಷಿಸ್ತಾ ಇರ್ತೀನಿ ನನ್ನ ಬ್ಲಾಗ್ ನಲ್ಲಿ ..ಕೆಲವರ ಬಗ್ಗೆ ಬರೆದರೆ ಸಕತ್ ಹಿಟ್ಸ್ ಸಿಗುತ್ತೆ.. ಇರ್ಲಿ ಒಮ್ಮೆ ಹೇಳ್ತೀನಿ ಅವರುಗಳ ಬಗ್ಗೆ.. ಕೆಲವರು ಕೆಲವರ ವಿಷ್ಯ ಇಷ್ಟ ಪಟ್ಟು ಓದುತ್ತಾರೋ, ಕೊಪದಿಂದಾನೋ ಗೊತ್ತಿಲ್ಲ ಆದ್ರೆ ಓದ್  ತೀರ್ತಾರೆ :-) 

ಇತ್ತೀಚಿಗೆ ನಾನು ಕಸ್ತೂರಿ ನ್ಯೂಸ್ನಲ್ಲಿ ಒಂದು ಕಾರ್ಯಕ್ರಮ ವೀಕ್ಷಿಸಿದೆ.. ಮೃತ್ಯುಂಜಯ ಅಂತ ಅದರ ಹೆಸರು. ಚೆನ್ನಾಗಿತ್ತು.. ಮೂವರು ಆಪ್ತ ಮಿತ್ರರು ಮೀನು ಹಿಡಿಯೋಕೆ ಹೋಗಿ ದಾರಿ ತಪ್ಪಿ ಸುಮಾರು ಹದಿಮೂರು ದಿನಗಳ ಕಾಲ ಏನೂ ಇಲ್ಲದೆ ಜೀವಕ್ಕಾಗಿ ಹೋರಾಡಿದ ಸಾಕ್ಷಾಚಿತ್ರ..ಆಂಗ್ಲ ಸಾಕ್ಷಚಿತ್ರ ಕನ್ನಡಕ್ಕೆ ಡಬ್ ಆಗಿತ್ತು. ನಿರೂಪಕ  ವಸಂತ್ ಕುಮಾರ್ ..
ಚೆನ್ನಾಗಿತ್ತು .ಜೀವ ಉಳಿಸಿಕೊಳ್ಳಲು ನಾವು ಅದೆಷ್ಟು ಹೋರಾಟ ನಡೆಸ್ತೀವಿ ಅದ್ಭುತವಾಗಿತ್ತು..ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ..ಹಿನ್ನಲೆ ಧ್ವನಿ ಸಹ ಚನ್ನಾಗಿತ್ತು.

ಜನಶ್ರೀ ವಾಹಿನಿಯಲ್ಲಿ ಪ್ರಸಾರ ಆಗುವ ಅಚ್ಚರಿ ಕಾರ್ಯಕ್ರಮ ಸದಾ ಸರ್ವದಾ ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮ. ಪ್ರತಿಬಾರಿ ಒಂದೊ೦ದು ಸಂಗತಿ. ಇತ್ತೀಚಿಗೆ ಮರುಭೂಮಿ ಹೂ ಅನ್ನೋ ಸಾಕ್ಷಚಿತ್ರ,ಆಸ್ಟ್ರೇಲಿಯ ದೇಶದಲ್ಲಿ ಇರುವ ಜೀವ ಸಂಕುಲದ ಅಸಮತೋಲನ ಸಂಗತಿ ತುಂಬಾ ಇಷ್ಟ ಆಯ್ತು.ಸಿಕ್ಕಿದ್ದೇ ಸಾಕು ಅಂತ ಪ್ರಾಣಿ ಪಕ್ಷಿಗಳನ್ನು ಕೊಂಡರೆ ಅಸಮತೋಲನ  ಆಗುತ್ತೆ..ಆದರೆ ಆಸ್ಟ್ರೇಲಿಯದಲ್ಲಿ ಪ್ರಕೃತಿಯ ಸೃಷ್ಟಿಯಲ್ಲೇ ವಿಚಿತ್ರ ಇದೆ.. ಅಪಾರ ಸಂಖ್ಯೆಯಲ್ಲಿ ಇಲಿಗಳು, ಅವುಗಳ ನಿಯಂತ್ರಣಕ್ಕಾಗಿ ಪರದಾಟ .. ಒಂದೊಂದು ಸಂಗತಿಯು ಆಸಕ್ತಿಕರ .


ಕಲರ್ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮ ನಿಜವಾಗಿ ಅಲಗ್  ಛೆ ..! ಆ  ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಡೆಲ್ನಾಜ್  ಪೌಲ್ ಅನ್ನುವ ಸಂಯಮದ ಹೆಣ್ಣು ಮಗಳಿದ್ದಾಳೆ.ಆಕೆಯ ಮೇಲೆ ನೋಡಿ ಎಲ್ರು ಉರಿದು ಬೀಳೋದು.ಆಕೆ ವಿಚ್ಚೇದನ ನೀಡಿರುವ  ರಾಜೀವ್ ಅನ್ನೋಸ್ಪರ್ಧಿ  ಈಗ ಆಕೆಯ ಮೇಲೆ ಪ್ಯಾರ್ ತೋರಿಸುವ --ನಿಜವಾಗಿಯೂ ಇದೆಯೇನೋ  ಆದರೂ ಆತ  ಒಳ್ಳೆ ನಾಟಕಕಾರ . ಆಕೆ ಈಗ ಎಲಿಮಿನೆಟ್  ಆಗುವ ಹಾದಿಯಲ್ಲಿ ಇದ್ದಾಳೆ.. ಪಾಪ ಹಾಗಾಗ ಬಾರದು. ಹಾಗಾದ್ರೆ ಬಿಗ್ ಬಾಸ್ ಸ್ಟ್ಯಾಂಡರ್ಡ್  ಗೇಂ ಅಲ್ಲ  ಇನ್ನೊಂದು ರೀತಿ ಗೇಂ ಆಡ್ತಾ ಇದೆ ಅನ್ನುವುದು ಸಾಬೀತಾಗುತ್ತೆ.ಆಗ ಇದು ಅಲಗ್  ಛೆ ಅಲ್ಲ ಅಲಗ್ ಛಿ  ! 
ವೆಲ್ ಪ್ರತಿ ಸೀಸನ್ ನಲ್ಲೂ  ಪ್ರಸೆಂಟರ್  ಸಲ್ಮಾನ್  ಖಾನ್ ಸ್ಮಾರ್ಟ್ ಸ್ಮಾರ್ಟ್ ಆಗಿ ಕಾಣ್ತಾನೆ ಇರ್ತಾರೆ..ಅವರ ಆ ವಿಶೇಷತೆ ಇಷ್ಟ ಆಗುತ್ತೆ.. ಸಲ್ಮಾನ್ ಆಲ್ವೇಸ್ boy ಆಗಿರೋದು ಇದೆ ಕಾರಣದಿಂದ ಅಂತ ಕಾಣುತ್ತೆ
ಕಳೆದ ಎಪಿಸೋಡ್ ನಲ್ಲಿ ಸಲ್ಮಾನ್ boy  ಐ ಲವ್ ಯು ಅಂತ ವೀಕ್ಷಕರಿಗೆ ಹೇಳಿದ್ರು.. ಹೆಣ್ಣುಮಕ್ಕಳಿಗೆ ಸಕತ್ ಖುಷಿ ಆಗಿರುತ್ತೆ.. ವಾಟ್ ಯಾ ಸಲ್ಮಾನ್.. ಐ  ಲೈಕ್ ಇಟ್ ಐ ಲೈಕ್ ಇಟ್  




  • Manjunatha KP likes this.
  • Manjunatha KP ನಾನೂ ದಿನಲೂ ಈ ಅಚ್ಚರಿ ಕಾರ್ಯಕ್ರಮ ನೋಡಿತ್ತೇನೆ.. ಕಿರುತೆರೆಯಲ್ಲಿ ಇದೊಂದು ವಿಭಿನ್ನ ಪ್ರಯತ್ನ..ಜನಶ್ರೀಯವರಿಗೆ ಧನ್ಯವಾದಗಳು.




No comments: