ನಾಳೆ

ಯಾರಿಗೆ ಏನಾಗಿದೆಯೋ ಗೊತ್ತಿಲ್ಲ ಆದರೆ ನಾಳೆ 12-12-12   ದಿನಾಂಕ ಹೆಚ್ಚು ಒದ್ದಾಡುವಂತೆ ಮಾಡಿರೋದು ನಮ್ಮ ವಾಹಿನಿಗಳಿಗೆ. ಏನಾಗುತ್ತೆ ಏನಾಗ ಬಹುದು, ಹೀಗಾಗ ಬಹುದು.. ಅಯ್ಯೋ ನಾಳೆ ತನಕ ಕಾಯ್ರಿ ಅಂತ ವೀಕ್ಷಕರು ಹೇಳ್ತಾ ಇಲ್ಲ, ಯಾಕೆಂದ್ರೆ ಇದು ಇಂದಿನ ಕಾರ್ಯಕ್ರಮ ಸೊ ವಾಚ್ ಮಾಡುವ  ಸಿಂಪ್ಲಿ..ವರಿ ಯಾಕೆ ಮಾಡಬೇಕು.
ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಅರವಿಂದ್  ಹನ್ನೆರಡರ  ಚಿಂತೆಯಲ್ಲಿ  ಇದ್ರೂ. ಸಹಜವಾಗಿ ತಮ್ಮ ಗಾಬರಿ ಹೋಗಲಾಡಿಸಲು ಅವರು ಇಬ್ಬರು ಜ್ಯೋತಿಷಿಗಳ ಮತ್ತು ಒಬ್ಬರು ಸಂಖ್ಯಾ ಶಾಸ್ತ್ರದವರ ಮೊರೆ ಹೋಗಿದ್ರು. ಇಂದು ಬೆಳಗಿನ ಈ ಕಾರ್ಯಕ್ರಮದಲ್ಲಿ ನಾಳೆ ಹುಟ್ಟುವ  ಮಕ್ಕಳು, ಅವರ ಗ್ರಹಚಾರ, ಒಳ್ಳೆಯ ಅಂಶಗಳು ಅದೂ ಇದು ಎಲ್ಲದರ ಬಗ್ಗೆ ಹೇಳ್ತಾ ಇದ್ರೂ.. ಕೆಲವು ಸಂಗತಿಗಳು ನಗು ಬರೆಸಿದರೂ ಒಂದಷ್ಟು ಅಂಶಗಳು ವೆರಿ ಇ೦ಟ್ರೆ ಸ್ಟಿಂಗ್ . ಯಾಕೆ ಅಂದ್ರೆ ಗ್ರಹಚಾರ ಫಲ ಹೇಳುತ್ತಿದ್ದ ನಾಳೆ ಒಳ್ಳೆಯ ದಿನ ಎಂದು ಒಮ್ಮೆ ಹೇಳಿದರೆ (ಹುಟ್ಟುವ ಮಗುವಿಗೆ ).. ಆದರೆ ಸ್ವಲ್ಪ ಕಾಲದ ಬಳಿಕ ಅದಕ್ಕೆ ಗುರು ಬಲ ಇರಲ್ಲ ಅನ್ನುವ ಮಾತು ಹೇಳಿದರು.. ಒಳ್ಳೆಯದು-ಕೆಟ್ಟದ್ದು ಸೃಷ್ಟಿಸಿದ ದೇವನ ಕೈಲಿದೆ ಎಂದು ನಂಬುವ ಜನರಿಗೆ ಯಾವುದನ್ನು ಸ್ವೀಕರಿಸ ಬೇಕು ಎಂದು ತಿಳಿಯದ ಗೊಂದಲ :-)
ಇವರ ಮಾತಿನ ನಡುವೆ ನಿರೂಪಕ ಅರವಿಂದ್ ಖಗೋಳದ ಕೆಲವು ಮಾಹಿತಿಗಳನ್ನು ನೀಡಿದರು ಅವುಗಳು ತುಂಬಾ ಆಸಕ್ತಿಕರವಾಗಿತ್ತು.ಹಾಗೆ ಬಂದ ಅತಿಥಿಗಳ ಎಲ್ಲ ಮಾತುಗಳು ತಿಳಿಸಿದ ಕೆಲವು ಸಂಗತಿಗಳು ಇಷ್ಟ ಆಯ್ತು.. ವಿವೇಕಾನಂದರು ಹುಟ್ಟಿದ್ದು 12.. ಹಾಗೆ ವಿಶ್ವ ವಿಖ್ಯಾತರು ಜನ್ಮಿಸಿದ್ದು ಈ ದಿನಾಂಕದಲ್ಲಿ ಆದ್ದರಿಂದ ಒಳ್ಳೆಯದಾಗುತ್ತದೆ ಎನ್ನುವ ಆಶಯ ಹೊಂದಿ ಎನ್ನುವ ಅಂಶವನ್ನು ಬಂದ ಅತಿಥಿಗಳು ತಿಳಿಸಿದರು.. 
ಸುವರ್ಣ ನೂಸ್ ನಲ್ಲಿ ಅರವಿಂದ್  ಸಹ ಉತ್ತಮ ನಿರೂಪಕ, ಅದೇ ರೀತಿ ಹೆಚ್ಚು ಸ್ಪಷ್ಟವಾಗಿ ಅತಿಯಾದ ಸ್ಪೀಡ್ ಇಲ್ಲದೆ ಮಾತಾಡುವವರು ಹಮೀದ್, ಗೌರೀಶ್..ಅದೇ ರೀತಿ ಟೀವಿ ನೈನ್  ನಲ್ಲಿ ರೆಹಮಾನ್, ಪಬ್ಲಿಕ್ನಲ್ಲಿ ರಂಗಣ್ಣ,ಜನಶ್ರಿ ರಮಾಕಾಂತ್,ವಸಂತ್,ರಾಘವೇಂದ್ರ, ಅನಂತ್ ಚಿನಿವಾರ್ ,..........!

ಒಟ್ಟಾರೆ ನಾಳೆ ನಮ್ಮನ್ನು ತುಂಬಾ ಸತಾಯಿಸ್ತಾ ಇದೆ.. ನಾಳೆ ತನಕ ಕಾದರೆ ಏನಾಗುತ್ತೆ ಅಂತ ಗೊತ್ತಾಗುತ್ತದೆ..

ಸೋನಿ ವಾಹಿನಿಯಲ್ಲಿ ಅನಾಮಿಕ ಅನ್ನೋ ಒಂದು ಧಾರವಾಹಿ ಬರ್ತಾ ಇದೆ. ಸಕತ್ ಆಸಕ್ತಿಯಿಂದ ನೋಡುವಂತಿದೆ ಆ ಸೀರಿಯಲ್ ಯಾಕೆ ಗೊತ್ತ ಅದರಲ್ಲಿ ದೆವ್ವ ಇದೆ ಹಾಗೂ ದೆವ್ವ ಇದೆ ಮತ್ತು ದೆವ್ವ ಇದೆ.
ಅದಕ್ಕಿಂತ ಇಷ್ಟ ಆಗೋ ಸಂಗತಿ ಅಂದ್ರೆ ಆ ಧಾರಾವಾಹಿಯಲ್ಲಿ ಪಂಜಾಬಿ ಫ್ಯಾಮಿಲಿ ಕಥೆ, ಪಂಜಾಬಿ ಭಾಷಿಗರು, ನಾಡಿನವರ ಒಂದು ಗುಣ ಇಷ್ಟ ಆಗುತ್ತೆ, ಇದು ನನ್ನ ಅನುಭವ ಅವರು ಕರ್ನಾಟಕದಲ್ಲಿ ಸೆಟಲ್ ಆದರೆ ಕನ್ನಡ ಕಲೀತಾರೆ.. ಬೇರೆಯವರಂತೆ ಕರ್ನಾಟಕದಲ್ಲಿ ಇದ್ದು ತಮಿಳು, ತೆಲುಗು ಕಲಿಯಲ್ಲ. ಅವರು ಒಂದು ಸಂಗತಿಗೆ ಆದ್ಯತೆ ನೀಡ್ತಾರೆ ನಾವಿರುವ ಜಾಗ, ನಾವುಣ್ಣುವ ನೆಲದ ಗೌರವಿಸುವುದು.
ಈ ವಾಹಿನಿಯಲ್ಲಿ ಶನಿವಾರ ಭಾನುವಾರ ಕ್ರೈಂ ಪ್ರಿಯರಿಗೆ ಮಜಾ ಬೇಜಾನ್ ಮಜಾ ಸಿಗುತ್ತೆ.ಕಕಾರಣ ಇಷ್ಟೇ ಒಂದು ಸೀರಿಯಲ್ ಲಾಯರ್, ಇನ್ನೊಂದು ಸಿ ಐ ಡಿ , ಮತ್ತೊಂದು .. ಒಟ್ಟಲ್ಲಿ ವೀಕ್ಷಕರು ಬೇಜಾರಾಗಲೇ ಬಾರದು ..ಸಿ ಐ ಡಿ  ಸಕತ್ .. ಯಾಕೆ ಗೊತ್ತಾ ನಿಜವಾದ ಕಥೆನೇ ಅಂದ್ರೆ ನಿಜವಾಗಿ ಅಷ್ಟೆಲ್ಲ ಇನ್ವೆಸ್ಟಿ ಗೇಶನ್  ಮಾಡ್ತಾ ಇದ್ದಾರೇನೋ ಅಂತ ಅನ್ನಿಸುತ್ತೆ ..!

ಸ್ಟಾರ್ ವಾಹಿನಿಯಲ್ಲಿ ಒಂದು ಧಾರವಾಹಿ ವೀರ ಅಂತ ಪ್ರಸಾರ ಆಗ್ತಾ ಇದೆ ಅದು ಸಹ ಪಂಜಾಬಿಗಳದು. ಒಂದು ಮಗು ಅದರ ಹೀರೋ .ರಣವೀರ ಏನ್ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾನೆ ಗೊತ್ತ.. ಪುಟ್ಟ ಬಾಲಕ ದೈತ್ಯ ಪ್ರತಿಭೆ.

Comment....

Shivaprasad Shagrithaya I think media should have been more careful in choosing contents ,they should not only look at TRP ratings which will be of shorter gain for the long run it will kill channel for feeding more such nonsense issues ,those they them selves don't believe it.


kannadiga
23:09 (20 hours ago)
to me
kannadiga has left a new comment on your post "ನಾಳೆ":

'ಸ್ವಾಮಿ ವಿವೇಕಾನಂದ ಅವರು ಹುಟ್ಟಿದ್ದು ಜನವರಿ 12' 


ನನ್ನ ಪ್ರತಿಕ್ರಿಯೆ..
ಹೌದು  12 ದಿನಾಂಕದ ಬಗ್ಗೆ ಅವರು ಹೇಳಿದ್ದು ತಿಂಗಳ ಬಗ್ಗೆ ಅಲ್ಲ..

3 comments:

kannadiga said...

'ಸ್ವಾಮಿ ವಿವೇಕಾನಂದ ಅವರು ಹುಟ್ಟಿದ್ದು ಜನವರಿ 12'

Anonymous said...

'ಸ್ವಾಮಿ ವಿವೇಕಾನಂದರು ಹುಟ್ಟಿದ್ದು ಜನವರಿ 12ರಂದು'

Anonymous said...

"ಸ್ವಾಮಿ ವಿವೇಕಾನಂದರು ಹುಟ್ಟಿದ್ದು ಜನವರಿ 12ರಂದು"