???!!!

ಸಮಸ್ಯೆಗೆ ಕಾರಣ ಏನು ಅನ್ನುವುದು ಗೊತ್ತಿದ್ರು ಅ ಸಮಸ್ಯೆ ಹೆಚ್ಚು ಬೆಳೆಯುವಂತೆ ಮಾಡುವವರು ನಾವು. ಚುದಾಯಿಸಿದರೆ ತಪ್ಪು ಅನ್ನುವುದು ಗೊತ್ತು, ಆದರೂ ಚುಡಾಯಿಸದೆ  ಬಿಡರು  ಹುಡುಗರು. ಇನ್ನು ಮುಂದೆ ಚುಡಾಯಿಸಿದರೆ  ಮಾರಿ ಹಬ್ಬ ಕಾದಿದೆ ಅನ್ನುವ ಕಾನೂನು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ cnn ibn  ವಾಹಿನಿಯಲ್ಲಿ ವಾರ್ತೆ ಪ್ರಸಾರ ಮಾಡ್ತಾ ಇತ್ತು. ಆ ವಿಷಯವನ್ನು ನೋಡ್ತಾ ಇದ್ದಂಗೆ ದುಃಖ ಆಯ್ತು ಯಾಕೆ ಗೊತ್ತಾ. ಅಲ್ಲಿ ಎರಡು ಪ್ರಸಂಗಗಳನ್ನೂ ಪ್ರಸಾರ ಮಾಡ್ತಾ ಇದ್ರೂ..ಚಂಡೀಗರ್  ಮತ್ತು ಮುಂಬೈ ಅಂದಿನ ಹೈಲೈಟು .. ಚಂಡೀಗರ್ ನಲ್ಲಿ ಹೀಗೆ ರೇಗಿಸಿದ ಮಗಳ ರಕ್ಷಣೆಗೆ ಹೋದ ಅಪ್ಪ ಜೀವ ತೆತ್ತ ಕಥೆ.. ಆತನನ್ನು ಸಾಯಿಸಿದ್ದು ರಾಜಕೀಯ ಹಿನ್ನೆಲೆಯ ಹುಡುಗ..
ಮುಂಬೈ ನಲ್ಲಿ ತನ್ನ ಸೋದರಿಯನ್ನು ರಕ್ಷಿಸಲು ಹೋದ ಹುಡುಗನನ್ನು ಪೊರ್ಕಿ ಗಳು ಕೊಂದು ಹಾಕಿ ಬಿಟ್ರಂತೆ . ಎಂತಹ ದುಃಖದ ವಿಷ್ಯ ಅಲ್ವೇ..ಯಾವುದೇ ಕಾನೂನು ಬರಲಿ ಅಂತಹವರಿಗೆ ಬುದ್ಧಿ ಕಲಿಸ ಬೇಕಾದರೆ ಜನರು ಜಾಗೃತರಾಗ ಬೇಕು.. 
 ಇದೆ ವಾಹಿನಿಯ ಪಾಸಿಟಿವ್ ಇಂಡಿಯ ಕಾರ್ಯಕ್ರಮ ಸಕತ್ ಇಷ್ಟ ಆಯ್ತು ನನಗೆ.. ದೊಡ್ಡ ಫ್ಯಾನ್ ಆಗ್ ಬಿಟ್ಟಿದ್ದೀನಿ ಆ ಕಾರ್ಯಕ್ರಮಕ್ಕೆ..

ರೇಗಿಸಿ  ಚುಡಾಯಿಸಿ  ಮಜಾ ತೆಗೆದು ಕೊಳ್ಳುವವರೇ ನಿಮಗೆ ಕಾದಿದೆ ಕಾನೂನಿನ ಸಲಾಕೆ ಬರೆ ಇಡೋಕೆ ಅಂತ ತಿಳಿಸುವ ಪಬ್ಲಿಕ್ ವಾಹಿನಿ ಕಾರ್ಯಕ್ರಮ ಪೂರಕ ವಾಗಿತ್ತು.. ಕೇವಲ ಒಂದು ಗಂಟೆಯ ಷೋ ಮಾಡಿ ಬಿಡುವುದಕ್ಕಿಂತ ಈ ವಿಷಯ ಎಲ್ಲ ಸಾಮಾನ್ಯರಿಗೆ ತಿಳಿಯುವಂತೆ ವಾತಾವರಣ ಕಲ್ಪಿಸ ಬೇಕು ಹಾಗೆ ಆದೀತಾ?
ಇಷ್ಟು ದಿನಗಳ ಕಾಲ ಪಬ್ಲಿಕ್ ವಾಹಿನಿ ಪ್ರಳಯ ಫಿಕ್ಸ್ ಅಂತ ಒದ್ದಾಡ್ತಾ ಇತ್ತು, ಈಗ ಪ್ರಳಯ ಮಿಸ್ .. ಮುಂದೆ ಪ್ರಳಯ ನೆಕ್ಟ್ ಅಂತಾ ಪ್ರಸಾರ ಆಗುತ್ತಾ ರಂಗ ಸರ್ ?? ನಿವ್ಯಾಕೆ ಹಿಂಗಾದ್ರೀ...???!!!!  

No comments: